ಪರಿಸರ ಸ್ನೇಹಿ ಮತ್ತು ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳನ್ನು ತಯಾರಿಸಿ, ಉಚಿತವಾಗಿ ವಿತರಿಸುತ್ತಿರುವ ಈ ಮಹಿಳೆ
ಪರಿಸರ ಸ್ನೇಹಿ ಮತ್ತು ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳ ತಯಾರಿಕೆಯನ್ನು ಪ್ರಾರಂಭಿಸಲು, ಸಾಮಾಜಿಕ ಕಾರ್ಯಕತೆ ಪರಮ್ ಸೈನಿ ಅವರು ಪ್ಯಾಡ್ ಮ್ಯಾನ್ ಅರುಣಾಚಲಂ ಮುರುಗಾನಂತಂ ಅವರಿಂದ 3.40 ಲಕ್ಷ ರೂ. ಗೆ ಯಂತ್ರೋಪಕರಣಗಳನ್ನು ಖರೀದಿಸಿದ್ದಾರೆ. ಈ ಪ್ಯಾಡ್‌ಗಳನ್ನು ಸರ್ಕಾರಿ ಶಾಲೆಗಳು ಮತ್ತು ಮಹಿಳಾ ಕೈದಿ ಸೇರಿದಂತೆ ಬೇರೆಡೆ ಕೂಡ ಉಚಿತವಾಗಿ ವಿತರಿಸುತ್ತಿದ್ದಾರೆ.
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ಅಗತ್ಯವನ್ನು ತಿಳಿಸಿದರು, ಏಕೆಂದರೆ ಅವು ನಮ್ಮ ನದಿಗಳು ಮತ್ತು ಭೂಮಿಯನ್ನು ಉಸಿರುಗಟ್ಟಿಸುತ್ತವೆ. ಅಂದಿನಿಂದ, ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ನಿಷೇಧವನ್ನು ಜಾರಿಗೆ ತರುವ ಮೂಲಕ ಸರ್ಕಾರವು ಒಂದು ದೊಡ್ಡ ಹೆಜ್ಜೆಯನ್ನು ಇಡಲು ಹೊರಟಿದೆ. 2022 ರ ವೇಳೆಗೆ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ಸರ್ಕಾರದ ಹೊರತಾಗಿ, ಪ್ಲಾಸ್ಟಿಕ್ ಆಧಾರಿತ ಉತ್ಪನ್ನಗಳಿಗೆ ಸುಸ್ಥಿರ ಪರ್ಯಾಯ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ವಿವಿಧ ಎನ್‌ಜಿಒಗಳು ಮತ್ತು ಕಾರ್ಯಕರ್ತರು ಪೂರ್ವಭಾವಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಪಂಜಾಬ್‌ನ ಲುಧಿಯಾನಾದ ಸಾಮಾಜಿಕ ಕಾರ್ಯಕರ್ತೆ ಪರಮ್ ಸೈನಿ ಉಚಿತ ಪರಿಸರ ಸ್ನೇಹಿ ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳನ್ನು ಒದಗಿಸುತ್ತಿದ್ದಾರೆ.
ಲುಧಿಯಾನದ ಕೃಷ್ಣ ನಗರದಲ್ಲಿರುವ ವಸತಿ ಕಟ್ಟಡದ ಮೇಲಿನ ಮಹಡಿಯಲ್ಲಿ ಉತ್ಪಾದನಾ ಘಟಕವಿದೆ. ರಾಜಿಂದರ್ ಕೌರ್ (52) ಮತ್ತು ಶಿಖಾ (28), ಮತ್ತು ಮದನ್ ಪಾಲ್ ವರ್ಮಾ (52) ಎಂಬ ಮೂವರು ಕಾರ್ಮಿಕರು ಇಲ್ಲಿ ಕೆಲಸ ನಿರ್ವಹಿಸುತ್ತಾರೆ. ಒಟ್ಟಿನಲ್ಲಿ, ಪರಮ್ ಸೈನಿ ನೇತೃತ್ವದ ಗುಂಪು ತಿಂಗಳಿಗೆ 20,000 ನೈರ್ಮಲ್ಯ ಪ್ಯಾಡ್ ಗಳನ್ನು ಉತ್ಪಾದಿಸುತ್ತದೆ. ಈ ನೈರ್ಮಲ್ಯ ಪ್ಯಾಡ್‌ಗಳನ್ನು ಮರದ ತಿರುಳು, ಹತ್ತಿ ಮತ್ತು ಸಾವಯವ ನಾರುಗಳಿಂದ ತಯಾರಿಸಲಾಗುತ್ತದೆ ಮತ್ತು ಪ್ರತಿ ಪ್ಯಾಡ್ ಗಳನ್ನು ಬದಲಾವಣೆಗಾಗಿ ಈ ಉಡುಗೊರೆ ಮತ್ತು ಸ್ವಾತಂತ್ರ್ಯದ ಹಾದಿಯಲ್ಲಿ ಹುಡುಗಿಯರು ಎಂಬ ಟಿಪ್ಪಣಿಯೊಂದಿಗೆ ರವಾನಿಸಲಾಗುತ್ತದೆ,.
ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಪರಮ್,
"ನಾವು ಪ್ರಸ್ತುತ ಲುಧಿಯಾನ, ಕಪುರ್ಥಾಲಾ, ಜಲಂಧರ್ ಮತ್ತು ಹಿಮಾಚಲ ಪ್ರದೇಶದ ಪಾಲಂಪುರದಲ್ಲಿರುವ ಕೆಲವು ಶಾಲೆಗಳಲ್ಲಿ ರೋಟರಿ ಕ್ಲಬ್ ಕಾರ್ಯಕರ್ತರ ಮೂಲಕ ಬಾಲಕಿಯರಿಗೆ ಪ್ಯಾಡ್ ಗಳನ್ನು ಪೂರೈಸುತ್ತಿದ್ದೇವೆ. ಅಲ್ಲದೆ, ನಾವು ಅವುಗಳನ್ನು ಕೊಳೆಗೇರಿ ಮತ್ತು ಮಹಿಳೆಯರ ಕಾರಾಗೃಹಗಳಲ್ಲಿ ವಿತರಿಸುತ್ತೇವೆ. ಈ ಪ್ಯಾಡ್ ಗಳನ್ನು ಹಿಂದೆಂದೂ ಬಳಸದ ಮಹಿಳೆಯರು ತಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತಿವೆ ಎಂದು ನಮಗೆ ಹೇಳುತ್ತಾರೆ. ಮೊದಲು ಅವರು ಬಟ್ಟೆಯನ್ನು ಬಳಸುತ್ತಿದ್ದರು ಅವು ರಾಷ್ಯಸಗಳು ಮತ್ತು ಸೋಂಕುಗಳಿಗೆ ಕಾರಣವಾಗುತಿತ್ತು. ಮುಟ್ಟಿನ ನೈರ್ಮಲ್ಯದ ಬಗ್ಗೆ ಹುಡುಗಿಯರಿಗೆ ಶಿಕ್ಷಣ ನೀಡಲು ನಾವು ಸ್ತ್ರೀರೋಗತಜ್ಞರನ್ನು ಶಾಲೆಗಳಿಗೆ ಕರೆದೊಯ್ಯುತ್ತೇವೆ” ಎಂದರು.
ಈ ಉದ್ಯಮವನ್ನು ಪ್ರಾರಂಭಿಸಲು, ಪರಮ್ ಅವರು ಭಾರತದ ಪ್ಯಾಡ್ಮನ್ ಎಂದೂ ಕರೆಯಲ್ಪಡುವ ಅರುಣಾಚಲಂ ಮುರುಗಾನಂತಂ ಅವರಿಂದ 3.40 ಲಕ್ಷ ರೂ. ಗಳಿಗೆ ಯಂತ್ರೋಪಕರಣಗಳನ್ನು ಖರೀದಿಸಿದರೆ, ಸೆಟಪ್ ಮಾಡಲು ಸ್ಥಳವನ್ನು ಉಚಿತವಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸೋದರಳಿಯ ಪ್ರೊಫೆಸರ್ ಜಗಮೋಹನ್ ಸಿಂಗ್ ಒದಗಿಸಿದರು.
ಉದ್ಯಮವು ನವೆಂಬರ್ 2018 ರಲ್ಲಿ ಪ್ರಾರಂಭವಾದಾಗ, ರೋಟರಿ ಕ್ಲಬ್‌ನ ಲುಧಿಯಾನ ಘಟಕವು ಯಂತ್ರೋಪಕರಣಗಳನ್ನು ಖರೀದಿಸುವಲ್ಲಿ ಪರಮ್‌ಗೆ ಬೆಂಬಲ ನೀಡಿತು. ಈಗ, ಪರಮ್ ಮೂರು ಘಟಕಗಳ ಕಾರ್ಮಿಕರ ವೇತನವನ್ನು ಮಾತ್ರ ಪಾವತಿಸಬೇಕಾಗಿದೆ, ಅದು ಅವರು ಪಡೆಯುವ ದೇಣಿಗೆಯಿಂದ ಬರುತ್ತದೆ. ಸಾಕಷ್ಟು ಹಣವಿಲ್ಲದಿದ್ದರೆ, ಪರಮ್ ಕಾರ್ಮಿಕರಿಗೆ ತನ್ನ ಜೇಬಿನಿಂದ ಪಾವತಿಸುತ್ತಾರೆ ಎಂದು ಭಾರತೀಯ ಮಹಿಳಾ ಬ್ಲಾಗ್ ವರದಿ ಮಾಡಿದೆ.
ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ರಾಜಿಂದರ್,
“ಆರೋಗ್ಯಕ್ಕಾಗಿ ಸ್ಯಾನಿಟರಿ ಪ್ಯಾಡ್ ಬಳಸುವುದು ಎಷ್ಟು ಮುಖ್ಯ ಎಂದು ಹುಡುಗಿಯರು ತಿಳಿದಿರಬೇಕು. ನಾನು ವೈಯಕ್ತಿಕವಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದೆ. (ನಾನು ಬಟ್ಟೆಯನ್ನು ಕದ್ದು ಮುಚ್ಚಿ ಬಳಸುತ್ತಿದ್ದೆ). ನಾವು ಎಂದಿಗೂ ಪ್ಯಾಡ್ ಗಳನ್ನು ಬಳಸಲಿಲ್ಲ ಮತ್ತು ಯಾವಾಗಲೂ ಸೋಂಕಿನ ಅಪಾಯದಲ್ಲಿರುತ್ತಿದ್ದೆವು. ಈಗ ನನ್ನ 28 ವರ್ಷದ ಮಗ ಕೂಡ ನಾನು ಇಲ್ಲಿ ಕೆಲಸ ಮಾಡುತ್ತಿರುವುದನ್ನು ಮೆಚ್ಚುತ್ತಾನೆ ಮತ್ತು ಅವನ ಬಿಡುವಿನ ಸಮಯದಲ್ಲಿ ನನಗೆ ಕೆಲಸದಲ್ಲಿ ಮಾಡಲು ಸಹಾಯ ಮಾಡುತ್ತಾನೆ ”ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.