Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

5 ಗಂಟೆಯಲ್ಲಿ ಸೇತುವೆ ನಿರ್ಮಿಸಿ ಹಳ್ಳಿಗರ ಕಷ್ಟಕ್ಕೆ ಅಂತ್ಯ ಹಾಡಿದ ಕೇರಳದ ಯುವಕರು

ಮ್ಲಾಮಲಾ ಹಳ್ಳಿಯನ್ನು ವಂಡಿಪೆರಿಯರ್‌ ಪಟ್ಟಣಕ್ಕೆ ಸಂಪರ್ಕಿಸುವ ಸೇತುವೆಯನ್ನು ಫ್ರೆಂಡ್ಸ್‌ ಆಪ್‌ ಕಟ್ಟಪ್ಪನ್‌ ಎಂಬ ಸ್ಥಳೀಯ ದತ್ತಿ ಸಂಸ್ಥೆ ಮರುನಿರ್ಮಿಸಿದೆ.

5 ಗಂಟೆಯಲ್ಲಿ ಸೇತುವೆ ನಿರ್ಮಿಸಿ ಹಳ್ಳಿಗರ ಕಷ್ಟಕ್ಕೆ ಅಂತ್ಯ ಹಾಡಿದ ಕೇರಳದ ಯುವಕರು

Wednesday August 19, 2020 , 2 min Read

2018 ಭೀಕರ ಪ್ರವಾಹದಲ್ಲಿ ಹಾನಿಗೊಳಗಾದ ಇಡುಕ್ಕಿ ಜಿಲ್ಲೆಯ ಪೆರಿಯರ್‌ ನದಿಗೆ ಅಡ್ಡಲಾಗಿರುವ ಸಾಂಥಿಪಲಂ ಸೇತುವೆಯನ್ನು ಅಲ್ಲಿನ ಸ್ಥಳೀಯರೆ ಸರ್ಕಾರದ ನೆರವಿಗೆ ಕಾಯದೆ ತಾವೆ ನಿರ್ಮಿಸಿದ್ದರು.


ಮ್ಲಾಮಲಾ ಹಳ್ಳಿಯನ್ನು ವಂಡಿಪೆರಿಯರ್‌ ಪಟ್ಟಣಕ್ಕೆ ಸಂಪರ್ಕಿಸುವ ಈ ಸೇತುವೆ 2019 ರ ಮಳೆಗಾಲದಲ್ಲಿ ಮತ್ತೆ ಕೆಟ್ಟು ಹೋಗಿದ್ದು, ಈ ವರ್ಷದ ಮಳೆಯಿಂದಲೂ ಅದರ ಸ್ಥಿತಿ ಇನ್ನೂ ಕೆಟ್ಟದಾಗುತ್ತಾ ಹೋಗುತ್ತಿದೆ.


ಚಿತ್ರಕೃಪೆ: ದಿ ಬೆಟರ್‌ ಇಂಡಿಯಾ


ಈ ಸಮಯದಲ್ಲಿ ಸ್ವಯಂಸೇವಕರ ಸಹಾಯದಿಂದ ಸೇತುವೆಯನ್ನು ಮರುನಿರ್ಮಿಸಲು ಫ್ರೆಂಡ್ಸ್‌ ಆಪ್‌ ಕಟ್ಟಪ್ಪನ್‌ ಎಂಬ ಸ್ಥಳೀಯ ದತ್ತಿ ಸಂಸ್ಥೆ ಮುಂದಾಯಿತು.


“ಮ್ಲಮಲಾನಲ್ಲಿ ವಾಸವಿರುವ ಬಹುತೇಕರು ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಅವರ ಜೀವನ ಈ ಸೇತುವೆಯ ಮೇಲೆ ಅವಲಂಬಿಸಿದೆ. ವಯಸ್ಕರು ಟೀ ಎಸ್ಟೆಟ್‌ನ ಸಣ್ಣ ಸಣ್ಣ ಕಿರುದಾರಿಗಳನ್ನು ಹಿಡಿದೋ ಅಥವಾ ಇಜಿಕೊಂಡು ಹೋಗುತ್ತಾರೆ ಆದರೆ ವಿಶೇಷವಾಗಿ ಮಕ್ಕಳಿಗೆ ಇದು ಕಷ್ಟವಾಗಿ ಪರಿಣಮಿಸಿದೆ,” ಎಂದು ಫ್ರೆಂಡ್ಸ್‌ ಆಪ್‌ ಕಟ್ಟಪ್ಪನ್‌ ಸಂಸ್ಥೆಯ ಅಧ್ಯಕ್ಷರಾದ ಜೋಷಿ ಮನಿಮಾಲಾ ದಿ ಬೆಟರ್‌ ಇಂಡಿಯಾ ಗೆ ಹೇಳಿದರು.


“ಟೀ ಎಸ್ಟೆಟ್‌ನ ಚಿಕ್ಕ ಕಿರುದಾರಿಗಳು ಅಷ್ಟೊಂದು ಸುರಕ್ಷಿತವಾಗಿಲ್ಲದಿರುವುದರಿಂದ ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಈ ವರ್ಷದ ಮಳೆಯಿಂದ ಭಾರೀ ತೊಂದರೆ ಉಂಟಾಗಿದ್ದು, ಮ್ಲಮಲಾ ದ್ವೀಪದಂತಾಗಿ ಸಂಪರ್ಕವೆ ಕಡಿದು ಹೋಗಿದೆ. ಈ ಸಮಸ್ಯೆಗಳೆ ನಮ್ಮನ್ನು ಸೇತುವೆ ನಿರ್ಮಿಸುವಂತೆ ಪ್ರೇರೆಪಿಸಿದವು,” ಎಂದು ಅವರು ತಿಳಿಸಿದರು.


1000 ಕ್ಕೂ ಅಧಿಕ ವಿನಂತಿ ಪತ್ರಗಳನ್ನು ಕಳುಹಿಸಿದ ಫಾತಿಮಾ ಪ್ರೌಢ ಶಾಲೆಯ ನಿರಂತರ ಪ್ರಯತ್ನದ ಹೊರತಯಾಗಿಯೂ ಸರ್ಕಾರ ಯಾವುದೇ ರೀತಿಯ ಕ್ರಿಯಾತ್ನಕ ಹೆಜ್ಜೆಯನ್ನಿಡದೆ, ಸೇತುವೆ ದುರಸ್ತಿಗೊಳಿಸುವ ಭರವಸೆಯನ್ನು ಹುಸಿಗೊಳಿಸಿದೆ.


ಇನ್ನೂ ತಡಮಾಡಲಾಗದು ಎಂದು ತಂಡವು ತಮ್ಮ ಪ್ರಾಣದ ಹಂಗನ್ನು ತೊರೆದು ಕೇವಲ ಒಂದೆ ದಿನದಲ್ಲಿ ಸೇತುವೆ ನಿರ್ಮಿಸಿತು. ಈ ಕೆಲಸದಲ್ಲಿ ಭಾಗಿಯಾದ ಯಾರಿಗೂ ಸೇತುವೆ ನಿರ್ಮಿಸಿದ ಅನುಭವವಿರಲಿಲ್ಲ, ಆದರೆ ಮ್ಲಮಲಾ ಊರಿನ ಕಷ್ಟಕ್ಕೆ ಮುಕ್ತಿ ನೀಡುವ ಮನಸ್ಸಿತ್ತು.


ಸ್ವಯಂಸೇವಕರು ಅವಶೇಷಗಳು, ಕಲ್ಲುಗಳು ಮತ್ತು ಮರಗಳನ್ನು ಕೈಯಿಂದ ತೆಗೆದುಹಾಕುವುದರಿಂದ ಹಿಡಿದು ಸೇತುವೆಯನ್ನು ರಚಿಸಲು ಅವುಗಳನ್ನು ಅಂತರದಲ್ಲಿ ಜೋಡಿಸುವವರೆಗೂ ಎಲ್ಲವನ್ನೂ ಮಾಡಿದರು. ಹೆಚ್ಚುವರಿ ಅಂತರವನ್ನು ಮಣ್ಣಿನಿಂದ ತುಂಬಿಸಲಾಯಿತು ಮತ್ತು ನೆಲಕರಗದಿಂದ ಸಮಗೊಳಿಸಲಾಯಿತು. ಈಗ ಸೇತುವೆಯ ಮೇಲೆ ಮೊಟಾರ್‌ ಗಾಡಿಗಳನ್ನು ಓಡಿಸಬಹುದಾಗಿದೆ.


ಸೇತುವೆ ನಿರ್ಮಿಸಿದ ತಂಡ (ಚಿತ್ರಕೃಪೆ: ದಿ ಬೆಟರ್‌ ಇಂಡಿಯಾ)


“ಪ್ರಾರಂಭದಲ್ಲಿ ಬರೀ 25 ಜನರಿದ್ದೇವು. ಫೇಸ್‌ಬುಕ್‌ ಲೈವ್‌ನಂತರ ಓಸಿವೈಎಮ್‌ ಮತ್ತು ಕಟ್ಟಪ್ಪನ್‌ ಆಫ್‌ ರೋಡ್‌ ಕ್ಲಬ್‌ ನಂತಹ ಸಂಸ್ಥೆಗಳು ಸೇರಿದವು. ಮಧ್ಯಾಹ್ನದ ವೇಳೆಗೆ 150 ಜನರಾದೆವು. ಎಲ್ಲರೂ ತಮ್ಮ ಸ್ವ ಮನಸ್ಸಿನಿಂದ ಬಂದವರೆ. ಕೊನೆಗೆ ಸೇತುವೆ ಮೇಲೆ ಗಾಡಿ ಓಡಿಸಿ ಹಳ್ಳಿಯವರ ಖುಷಿಯಲ್ಲಿ ಭಾಗವಹಿಸಿದೆವು,” ಎಂದು ಜೋಷಿಯವರು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.


ಜೋಷಿಯವರು ಹೇಳುವಂತೆ ಸೇತುವೆ ಕೆಲಸ ಮುಗಿದ ನಂತರ ಸಂತೋಷದಲ್ಲಿ ಹಳ್ಳಿಗರ ಕಣ್ಣು ತೇವವಾಗಿದ್ದವು.


ಉತ್ತರ ಮತ್ತು ಮಧ್ಯ ಕೇರಳದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಇಡುಕ್ಕಿ ಮತ್ತು ವಯನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಿದೆ.