ಯೂಟ್ಯೂಬ್ ಬಾಣಸಿಗ ತಾತ ದಿವಂಗತರಾದರೂ ನಿಲ್ಲಲಿಲ್ಲ ಅನಾಥರಿಗೆ ಉಚಿತವಾಗಿ ಆಹಾರ ನೀಡುವ ಸೇವೆ
ತಮ್ಮ ಯೂಟ್ಯೂಬ್ ಚಾನೆಲ್ ಆದ ಗ್ರ್ಯಾಂಡ್ ಪಾ ಕಿಚನ್ ಮೂಲಕ ಜನಪ್ರಿಯರಾದ ನಾರಾಯಣ ರೆಡ್ಡಿ ಅವರು ಇತ್ತೀಚೆಗೆ ನಿಧನರಾದರು. ಆದರೆ, ಬಡವರು ಮತ್ತು ಮನೆಯಿಲ್ಲದವರಿಗೆ ಆಹಾರವನ್ನು ನೀಡುವ ಅವರ ಪರಂಪರೆಯನ್ನು ಮುಂದುವರೆಸಲು ಅವರ ಕುಟುಂಬದವರು ತಮ್ಮ ಉದ್ಯೋಗವನ್ನು ತೊರೆದು ರೆಡ್ಡಿಯವರ ಮಾರ್ಗದಲ್ಲೆ ನಡೆಯುತ್ತಿದ್ದಾರೆ.
ತೆಲಂಗಾಣ ಮೂಲದ ನಾರಾಯಣ ರೆಡ್ಡಿ ಅವರು ಅನಾಥ ಮಕ್ಕಳಿಗೆ ಉಚಿತವಾಗಿ ಆಹಾರವನ್ನು ಒದಗಿಸುವುದರಿಂದ ಹೆಸರುವಾಸಿಯಾಗಿದ್ದರು. ಅವರು ಹೆಚ್ಚಿನ ಪ್ರಮಾಣದಲ್ಲಿ ಆಹಾರವನ್ನು ತಯಾರಿಸಿ ನಂತರ ಅದನ್ನು ಅನಾಥಾಶ್ರಮಗಳಲ್ಲಿ ವಿತರಿಸುತ್ತಿದ್ದರು ಮತ್ತು ಇದರಿಂದ ಭಾರಿ ಜನಪ್ರಿಯತೆ ಗಳಿಸಿದ್ದರು. ಇಂದು, ಅವರ ಚಾನಲ್ ವಿಶ್ವಾದ್ಯಂತ ಆರು ಮಿಲಿಯನ್ ಗ್ರಾಹಕರನ್ನು ಹೊಂದಿದೆ.
ರೆಡ್ಡಿ ಯವರು ಮರಣ ಹೊಂದಿದ್ದರು, ಅವರ ಪರಂಪರೆಯನ್ನು ಅವರ ಕುಟುಂಬ ಮುಂದುವರಿಸಿದೆ. ಅವರ ಉದಾತ್ತ ಕೆಲಸವನ್ನು ಮುಂದುವರಿಸಲು ಇವರೆಲ್ಲರೂ ತಮ್ಮ ಪೂರ್ಣ ಸಮಯದ ಉದ್ಯೋಗವನ್ನು ತೊರೆದಿದ್ದಾರೆ ಎಂದು ಅವರು ಇತ್ತೀಚೆಗೆ ಒಂದು ವೀಡಿಯೊವನ್ನು ಪೋಸ್ಟ್ ನಲ್ಲಿ ಹೇಳಿದ್ದಾರೆ.
ಸಿಎನ್‌ಎನ್‌ನೊಂದಿಗಿನ ಮಾತುಕತೆಯಲ್ಲಿ, ನಾರಾಯಣ ರೆಡ್ಡಿ ಅವರ ಮೊಮ್ಮಗ ಶ್ರೀಕಾಂತ್ ರೆಡ್ಡಿ ಕೂಡ ಇದನ್ನು ದೃಢಪಡಿಸಿದ್ದಾರೆ.
“ನಾವು ಅವರ ಕೆಲಸವನ್ನು ಮುಂದುವರಿಸುತ್ತೇವೆ. ಅವರ ವೀಡಿಯೊಗಳಿಗೆ ಬರುತ್ತಿದ್ದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ನೋಡಿದಾಗ ನನ್ನ ಚಿಕ್ಕಪ್ಪ ಯಾವಾಗಲೂ ಸಂತೋಷಪಡುತ್ತಿದ್ದರು," ಎಂದು ಅವರು ಹೇಳುತ್ತಾರೆ.
ಮಾನವೀಯತೆಯ ಸಂಕೇತ
ಈ ಅಜ್ಜನ ಹೆಚ್ಚಿನ ವೀಡಿಯೊಗಳು ಅವರು ಆಹ್ಲಾದಕರ ಮತ್ತು ಹಸಿರು ಪ್ರದೇಶಗಳಲ್ಲಿ ಅಡುಗೆ ಮಾಡುವುದನ್ನು ಒಳಗೊಂಡಿದ್ದವು. ಮ್ಯಾಗಿಯನ್ನು ತಯಾರಿಸುವುದರಿಂದ ಹಿಡಿದು ಕೆಎಫ್‌ಸಿ ಶೈಲಿಯ ಚಿಕನ್, ಅಮೇರಿಕನ್ ಲಸಾಂಜ ಮತ್ತು ಓರಿಯೊ ಪುಡಿಂಗ್‌ಗಳವರೆಗೆ ಎಲ್ಲವನ್ನು ಅವರು ತಯಾರಿಸುತ್ತಿದ್ದರು. ತನ್ನ ನೆರೆಹೊರೆಯಲ್ಲಿರುವ ಹಸಿದ ಮಕ್ಕಳನ್ನು ತೃಪ್ತಿಪಡಿಸುವ ಸಲುವಾಗಿ ಎಲ್ಲವನ್ನೂ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲಾಗುತ್ತಿತ್ತು.
ಅಜ್ಜನ ಕಿಚನ್‌ನ ಖಾತೆಯಲ್ಲಿನ ಬಯೋ ಹೀಗಿದೆ, “ನಾವು ಅಡುಗೆ ಮಾಡುವ ಮೂಲಕ ಜನರನ್ನು ರಂಜಿಸುತ್ತೇವೆ ಮತ್ತು ಆದಾಯವನ್ನು ದತ್ತಿಗಳಿಗೆ ದಾನ ಮಾಡುತ್ತೇವೆ. ಅನಾಥರಿಗೆ ಆಹಾರ, ಬಟ್ಟೆ, ಶಾಲಾ ಸಾಮಗ್ರಿಗಳು ಮತ್ತು ಹುಟ್ಟುಹಬ್ಬದ ಉಡುಗೊರೆಗಳಂತಹ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದು ನಮ್ಮ ಗುರಿಯಾಗಿದೆ.”
ನಾರಾಯಣ ರೆಡ್ಡಿ ಅವರ ಮೊದಲ ವೀಡಿಯೊವನ್ನು ಆಗಸ್ಟ್ 2017 ರಲ್ಲಿ ಅಪ್‌ಲೋಡ್ ಮಾಡಲಾಗಿತ್ತು ಮತ್ತು ಅದಕ್ಕೆ ‘ಕಿಂಗ್ ಆಫ್ 2000 ಎಗ್ಸ್’ ಎಂದು ಹೆಸರಿಡಲಾಯಿತು. ಆ ವೀಡಿಯೊದಲ್ಲಿ ಅವರು ಬಿಳಿ ಉಡುಪನ್ನು ಧರಿಸಿ ಮೊಟ್ಟೆಗಳನ್ನು ಬಳಸಿ ಖಾದ್ಯವನ್ನು ತಯಾರಿಸುತ್ತಿರುವುದನ್ನು ತೋರಿಸಲಾಗಿತ್ತು. ಅದನ್ನು ಅವರ ಮೊಮ್ಮಕ್ಕಳು ಬೇರೆ ಬೇರೆಯಾಗಿ ವಿಂಗಡಿಸಿ, ಹತ್ತಿರದ ಪಟ್ಟಣದಲ್ಲಿರುವ ಮನೆಯಿಲ್ಲದ ಜನರಿಗೆ ಪ್ಯಾಕ್ ಮಾಡಿ ತಲುಪಿಸಿದರು. ವೀಡಿಯೊವನ್ನು 2.6 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ, ರೆಡ್ಡಿ 260 ಕ್ಕೂ ಹೆಚ್ಚು ವೀಡಿಯೊಗಳನ್ನು ಮಾಡಿದ್ದಾರೆ. ಅವರ ಅಸಾಮಾನ್ಯ ಅಡುಗೆ ಕೌಶಲ್ಯಕ್ಕಾಗಿ ಮಾತ್ರವಲ್ಲದೆ ಅವರ ಮಾನವೀಯ ಕಾರ್ಯಗಳಿಗೂ ಅವರು ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ.
ಈಗ, ಅವರ ಕುಟುಂಬ ಸದಸ್ಯರು ಮೊದಲಿನಂತೆಯೇ ಹೊಸ ವೀಡಿಯೊ ಅಪ್‌ಲೋಡ್ ಮಾಡುವ ಮೂಲಕ ಚಾನಲ್ ಅನ್ನು ನಿರ್ವಹಿಸುತ್ತಿದ್ದಾರೆ, ವರದಿ ರಿಪಬ್ಲಿಕ್ ವರ್ಲ್ಡ್.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.