ದಕ್ಷಿಣ ಅಮೇರಿಕದ ಎತ್ತರದ ಪರ್ವತವನ್ನೇರಿದ ಮುಂಬೈನ 12 ವರ್ಷದ ಬಾಲಕಿ
ಕಾಮ್ಯಾ ಕಾರ್ತಿಕೇಯನ್ ಏಷ್ಯಾದ ಆಚೆಗಿರುವ ಅತೀ ಎತ್ತರದ ಮೌಂಟ್ ಅಕೊನಗುವಾ ಪರ್ವತವನ್ನೇರಿದ್ದಾಳೆ. ಅಷ್ಟೇ ಅಲ್ಲದೆ ಅವಳು ಆಫ್ರೀಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದ ಹಲವು ಶಿಖಗಳನ್ನು ಏರಿದ್ದಾಳೆ.
12 ವರ್ಷದ ಕಾಮ್ಯಾ ಕಾರ್ತಿಕೇಯನ್ ದಕ್ಷಿಣ ಅಮೇರಿಕಾದ ಮೌಂಟ್ ಅಕೊನಗುವಾ ಪರ್ವತವನ್ನೇರಿದ ಅತ್ಯಂತ ಕಿರಿಯ ಹುಡುಗಿಯಾಗಿದ್ದಾಳೆ. ನೇವಿ ಚಿಲ್ಡ್ರನ್ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಯಾದ ಇವಳು, ಫೆಬ್ರುವರಿ 1 ರಂದು 6962 ಮೀಟರ್ನ ಪರ್ವತವನ್ನೇರಿ ಭಾರತದ ಧ್ವಜವನ್ನು ಹಾರಿಸಿದ್ದಾಳೆ.
ಭಾರತೀಯ ನೌಕಾ ಪಡೆಯ ಕಮಾಂಡರ್ ಎಸ್ ಕಾರ್ತಿಕೇಯನ್ ಅವರ ಪುತ್ರಿ ಕಾಮ್ಯಾ ತಂದೆಯ ಮಾರ್ಗದರ್ಶನದಲ್ಲಿ ಪರ್ವತವೇರುವ ಕೌಶಲ್ಯಗಳನ್ನು ಕಲಿತಿದ್ದಾರೆ. ಕಾಮ್ಯಾ ಹಲವಾರು ಪರವತಳನ್ನೆರಿದ್ದಾಳೆ, ಅದರಲ್ಲಿ ಆಫ್ರೀಕಾದ ಅತೀ ಎತ್ತರದ ಪರ್ವತ ಮೌಂಟ್ ಕಿಲಿಮಂಜಾರೋ (5,895 ಮೀ), ಯುರೋಪ್ನ ಅತೀ ಎತ್ತರದ ಶಿಖರ ಮೌಂಟ್ ಎಲಬ್ರುಸ್ (5,642 ಮೀ) ಮತ್ತು ಆಸ್ಟ್ರೇಲಿಯಾದ ಅತೀ ಎತ್ತರದ ಪರ್ವತ ಮೌಂಟ್ ಕೊಸ್ಕಿಜ್ಕೊ (2,228 ಮೀ) ಸಹ ಸೇರಿವೆ. ಅಷ್ಟೇ ಅಲ್ಲದೆ ಸಮುದ್ರ ಮಟ್ಟದಿಂದ 6,000 ಮೀ ಗಿಂತಲೂ ಎತ್ತರವಿರುವ ಇನ್ನು ಎರಡು ಶಿಖರಗಳನ್ನು ಹತ್ತಿದ್ದಾಳೆ ಕಾಮ್ಯಾ.
ಈ ಚಾರಣದ ಹವ್ಯಾಸವನ್ನು ಅವಳ ತಂದೆ ಹಿಮಾಲಯ ಪರ್ವತವನ್ನೇರಿದ್ದನ್ನು ನೋಡಿ ಬೆಳೆಸಿಕೊಂಡಿದ್ದಾಳೆ. 3 ವರ್ಷದವಳಿದ್ದಾಳ ಪುಣೆಯ ಲೋನಾವಾಲಾ ದಲ್ಲಿ ಶುರುವಾದ ಚಾರಣದ ಹವ್ಯಾಸ 9 ನೇ ವಯಸ್ಸಿಗೆ ಬರುವುದರ ಒಳಗೆ ಹಲವಾರು ಎತ್ತರದ ಚಾರಣವನ್ನು ಮಾಡುವಷ್ಟು ಬೆಳೆಯಿತು, ಆ ವಯಸ್ಸಿನಲ್ಲೆ ತನ್ನ ಪಾಲಕರೊಂದಿಗೆ ಉತ್ತರಾಖಂಡದ ರೂಪಕುಂಡ (5,020 ಮೀ) ಪರ್ವತವನ್ನು ಏರಿದ್ದಳು.
ಒಂದು ವರ್ಷದ ನಂತರ ನೇಪಾಲ್ ನ ಎವರೆಸ್ಟ್ ಬೇಸ್ ಕ್ಯಾಂಪ್ (5,346 ಮೀ) ಅನ್ನು ತಲುಪಿದ ಕಾಮ್ಯಾ, ಲಡಾಖ್ನ ಮೌಂಟ್ ಸ್ಟೋಕ್ ಕಂಗ್ರಿ (6,153 ಮೀ) ಯನ್ನೇರಿದ ಅತೀ ಕಿರಿಯಳಾದಳು. ಅಗಸ್ಟ್ 2019 ರ ಅತೀಯಾದ ಚಳಿಯ ಸಂದರ್ಭದಲ್ಲಿಯೂ 6,262 ಮೀ ಎತ್ತರದಲ್ಲಿರುವ ಮೌಂಟ್ ಮೆಂಟೊಕ್ ಕಂಗ್ರಿ-2 ಅನ್ನು ಏರಿದಳು.
ನೌಕಾ ಅಧಿಕಾರಿಗಳ ಪ್ರಕಾರ ಕಾಮ್ಯಾ ಇಷ್ಟೆಲ್ಲ ಸಾಧನೆಗಳನ್ನು ವರ್ಷಗಳ ದೈಹಿಕ ಮತ್ತು ಮಾನಸಿಕ ತಯಾರಿಯಿಂದ ಮಾಡಿದ್ದಾಳೆ. ಈ ಉತ್ತುಂಗಕ್ಕೆ ಬರಲು ಅವಳು ಹಲವಾರು ಆಡಳಿತಾತ್ಮಕ ಸಮಸ್ಯೆಗಳನ್ನು ಮತ್ತು ತೀವ್ರವಾದ ಚಾರಣದ ಸಂದರ್ಭಗಳನ್ನು ಎದುರಿಸಿದ್ದಾಳೆ. ಅವಳು ನಿಯಮಿತವಾಗಿ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು, ತಪ್ಪದೇ ಅಚ್ಚುಕಟ್ಟಾಗಿ ದೂರದ ಸೈಕ್ಲಿಂಗ್, ಓಡುವುದು ಮತ್ತು ಸಾಮರ್ಥ್ಯ ಮತ್ತು ಸಹನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವಾರಾಂತ್ಯದಲ್ಲಿ ಅರ್ಧ ದಿನ ಚಾರಣ ಮಾಡುವುದನ್ನು ಪಾಲಿಸುತ್ತಿದ್ದಳು.
2021 ರಲ್ಲಿ ಕಾಮ್ಯಾ ‘ಎಕ್ಸ್ಪ್ಲೋರರ್ಸ್ ಗ್ರ್ಯಾಂಡ್ ಸ್ಲ್ಯಾಮ್ʼಅನ್ನು ಪೂರ್ಣಗೊಳಿಸುವ ಯೋಚನೆಯಲ್ಲಿದ್ದಾಳೆ. ‘ಎಕ್ಸ್ಪ್ಲೋರರ್ಸ್ ಗ್ರ್ಯಾಂಡ್ ಸ್ಲ್ಯಾಮ್ʼ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಎಲ್ಲ ಖಂಡದ ಎತ್ತರದ ಪರ್ವತಗಳನ್ನು ಏರುತ್ತಾರೆ, ಅದರಲ್ಲಿ ಉತ್ತರ ಮತ್ತು ದಕ್ಷಿಣ ಧ್ರುವಗಳು ಸೇರಿವೆ.