ಕಬ್ಬನ್ ಪಾರ್ಕ್ನಲ್ಲೊಂದು ರಾಕ್ ಗಾರ್ಡನ್..!
ಈಶಾನಾ ಪಾಲ್ತಾಡಿ
ಕಾಂಕ್ರೀಟ್ ಕಾಡು, ಸಿಲಿಕಾನ್ ಸಿಟಿ ಬೆಂಗಳೂರಿನ ಕೇಂದ್ರ ಭಾಗದಲ್ಲಿರೋ ಕಬ್ಬನ್ ಪಾರ್ಕ್ ನ ಹಚ್ಚಹಸುರಿನ ಪ್ರಕೃತಿ ಸೌಂದರ್ಯ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಕಬ್ಬನ್ ಪಾರ್ಕ್ ಅಂದಾಕ್ಷಣ ನೆನಪಾಗೋದೇ ಬಾಲ ಭವನ, ಬ್ಯಾಂಡ್ ಸ್ಟ್ಯಾಂಡ್, ಕಾರಂಜಿ ಹಾಗೂ ನೂರಾರು ಪಾರಿವಾಳಗಳು. ಆದ್ರೆ ಇನ್ಮೇಲೆ ಇಲ್ಲಿನ ಕಲ್ಲುಗಳೂ ತಮ್ಮ ಕಲೆಗಳ ಮೂಲಕ ಪ್ರವಾಸಿಗರನ್ನ ಆಕರ್ಷಿಸಲಿವೆ.
ಒಂದು ಕಡೆ ಮಗುವನ್ನು ಎದೆಗೆ ಅಪ್ಪಿಕೊಂಡಿರೋ ತಾಯಿಯ ಆಕೃತಿ, ಗ್ರಾನೈಟ್ ನಿಂದ ಮೂಡಿ ಬಂದ ಕಪ್ಪೆಯ ಶಿಲ್ಪ ಹೀಗೆ ಗ್ರಾನೈಟ್ ನಿಂದ ಮೂಡಿ ಬಂದಿರೋ ವಿವಿಧ ಕಲ್ಲಿನ ಆಕೃತಿಗಳು ಕಬ್ಬನ್ ಪಾರ್ಕ್ ನಲ್ಲೀಗ ಪ್ರಮುಖ ಆಕರ್ಷಣೆ. ಹೀಗೆ ಕಬ್ಬನ್ ಪಾರ್ಕ್ ನಲ್ಲಿ ನಿರ್ಮಾಣವಾಗಿರೋ ರಾಕ್ ಗಾರ್ಡನ್ ಎಲ್ಲರ ಆರ್ಷಣೆಯಾಗಿದೆ.
ಕೆಲ ವರ್ಷಗಳ ಹಿಂದೆ ಕಬ್ಬನ್ ಪಾರ್ಕ್ ನಲ್ಲಿ ಗ್ರಾನೈಟ್ ಮೇಳ ನಡೆದಿತ್ತು. ಮೇಳ ಮುಗಿಸಿ ಹೋದಾಗ ಅದೆಷ್ಟೋ ಗ್ರಾನೈಟ್ ಗಳನ್ನು ಇಲ್ಲೇ ಬಿಟ್ಟು ಹೋಗಿದ್ರು. ಕಸದಂತೆ ಮೂಲೆಯಲ್ಲಿ ರಾಶಿ ಬಿದ್ದಿದ್ದ ಗ್ರಾನೈಟ್ ಗಳಿಂದ ಸುಂದರ ಆಕೃತಿಗಳು ತಲೆ ಎತ್ತಿವೆ. ಇತ್ತೀಚೆಗೆ ಕಬ್ಬನ್ ಪಾರ್ಕ್ ನಲ್ಲಿ ನಡೆದ ಕಾಷ್ಟ ಶಿಲ್ಪ ಶಿಬಿರಕ್ಕೆ ಕ್ರೇನ್ ಬಳಕೆ ಮಾಡಲಾಗಿತ್ತು. ಕೆಲಸದ ಬಳಿಕ ಕ್ರೇನ್ ಅನ್ನ ಬಳಸಿಕೊಂದು ಒಂದು ಗಂಟೆಯಲ್ಲಿ ಈ ಆಕರ್ಷಕ ರಾಕ್ ಗಾರ್ಡನ್ ನಿರ್ಮಿಸಲಾಗಿದೆ. ಪರಿಸರ ಪ್ರೇಮಿಗಳು ಈ ವಿಶಿಷ್ಟ ಕಲೆಯನ್ನ ಕಂಡು ಬೇರಗಾಗಿರೋದ್ರಲ್ಲಿ ಸಂಶಯವಿಲ್ಲ.
ಹಾಗಂತ ಇವುಗಳೇನೂ ಸುಮ್ಮನೆ ಜೋಡಿಸಿರಿ ಕಲ್ಲುಗಳಲ್ಲ. ಶಿಲ್ಪ ಕಲಾ ಅಕಾಡೆಮಿ ವಿದ್ಯಾರ್ಥಿಗಳು ಚಕ್ರಕಾರದಲ್ಲಿ ಜೋಡಿಸಿದ್ದಾರೆ. ಈ ಜೋಡಣೆ ಸಕಾರಾತ್ಮಕ ತರಂಗ ಹಾಗೂ ಪಾಸಿಟಿವ್ ವೆಬ್ಸ್ಟರ್ ನಿರ್ಮಾಣ ಮಾಡುತ್ತದೆ. ಇದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುತ್ತದೆ.
ಒಟ್ಟಿನಲ್ಲಿ ಯಾವುದರಿಂದಲೂ ಕಲೆಯನ್ನು ಹುಟ್ಟು ಹಾಕಬಹುದು ಅನ್ನೋದಕ್ಕೆ ರಾಕ್ ಗಾರ್ಡನ್ ಸಾಕ್ಷಿ. ಸುಮ್ಮನೆ ಪಾಳು ಬೀಳುತ್ತಿದ್ದ ಕಲ್ಲುಗಳು ಸುಂದರ ಶಿಲ್ಪವಾಗಿ ತಲೆ ಎತ್ತಿರೋದು ಅದ್ಭುತ. ತೋಟಗಾರಿಕಾ ಇಲಾಖೆಯ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.