ಗಾರ್ಮೆಂಟ್ಸ್​ಗೆ ಎಂಟ್ರಿಕೊಡುತ್ತಿದೆ "ಪತಂಜಲಿ"- ವಿದೇಶಿ ಬ್ರಾಂಡ್​ಗಳಿಗೆ ತಿಲಾಂಜಲಿ..!

ಟೀಮ್​ ವೈ.ಎಸ್​. ಕನ್ನಡ

ಗಾರ್ಮೆಂಟ್ಸ್​ಗೆ ಎಂಟ್ರಿಕೊಡುತ್ತಿದೆ  "ಪತಂಜಲಿ"- ವಿದೇಶಿ ಬ್ರಾಂಡ್​ಗಳಿಗೆ ತಿಲಾಂಜಲಿ..!

Friday September 16, 2016,

2 min Read

ಯೋಗ ಗುರು ರಾಮ್ ದೇವ್ ಅವರ ಪತಂಜಲಿ ಸಂಸ್ಥೆ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದೆ. ಈಗಾಗಲೇ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ವಿಯಾಗಿರುವ ಪತಂಜಲಿ ಸಂಸ್ಥೆ ಈಗಾಗಲೇ ದೊಡ್ಡ-ದೊಡ್ಡ ಕಂಪನಿಗಳಿಗೆ ಭರ್ಜರಿ ಪೈಪೋಟಿ ನಿಡುತ್ತಿದ್ದು, ದೇಶದಲ್ಲಿ ತನ್ನದೆಯಾದ ಸ್ಥಾನಮಾನ ಹೊಂದಿದ್ದು, ಈಗ ಪತಂಜಲಿ ಜೀನ್ಸ್ ತಯಾರಿಸಿ ಮಾರುಕಟ್ಟೆಗೆ ಬಿಡಲು ಪತಂಜಲಿ ಸಂಸ್ಥೆ ಮುಂದಾಗಿದೆ.

image


ಪತಂಜಲಿ ಕೇವಲ ಭಾರತವನ್ನು ಟಾರ್ಗೆಟ್ ಮಾಡಿಕೊಂಡಿಲ್ಲ. ಫಾಸ್ಟ್-ಮೂವಿಂಗ್ ಕನ್ಸ್ಯೂಮರ್ ಉತ್ಪನ್ನಗಳ ಮೂಲಕ ಪಾಕಿಸ್ತಾನ, ಅಫ್ಘಾನಿಸ್ತಾನದ ಮಾರುಕಟ್ಟೆಗಳನ್ನೂ ಪ್ರವೇಶಿಸುವ ಉದ್ದೇಶ ಹೊಂದಿದೆ. ಹಾಗಾಗಿ ಈಗಾಗಲೇ ತನ್ನ ಉತ್ಕೃಷ್ಟ ಗುಣಮಟ್ಟದಿಂದ ವಿದೇಶಿ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುವ ಮೂಲಕ ಹೆಚ್ಚು ಮಾರುಕಟ್ಟೆಯನ್ನು ಆವರಿಸಿರುವ ಪತಂಜಲಿ, ಗ್ರಾಹಕರ ವಿಶ್ವಾಸಗಳಿಸುವಲ್ಲೂ ಸಫಲವಾಗಿದೆ.

image


ದೇಶದಲ್ಲಿ ಜೀನ್ಸ್ ಪ್ಯಾಂಟ್ ಮಾರಾಟ ಹೆಚ್ಚಿದೆ. ಅನೇಕ ಬ್ರ್ಯಾಂಡೆಡ್ ಕಂಪನಿಗಳು ಜೀನ್ಸ್ ಪ್ಯಾಂಟ್ ಮಾರಾಟ ಮಾಡುತ್ತಿದೆ. ಅನೇಕ ವಿದೇಶಿ ಕಂಪನಿಗಳು ಜೀನ್ಸ್ ಮಾರಾಟ ಮಾಡುವ ಮೂಲಕ ಹೆಚ್ಚು ಲಾಭ ಪಡೆಯುತ್ತಿವೆ. ಈಗ ಅದನ್ನೆ ಟಾರ್ಗೆಟ್ ಮಾಡಿರುವ ಪತಂಜಲಿ ಸಂಸ್ಥೆ ಜೀನ್ಸ್ ಪ್ಯಾಂಟ್ ತಯಾರಿಗೂ ಮುಂದಾಗಿದೆ.

ಇದನ್ನು ಓದಿ: ಮನೆ ಮನೆಗೆ ಡಿಟರ್ಜೆಂಟ್ ಮಾರುತ್ತಿದ್ದ ''ಎಲ್ಲರ ನೆಚ್ಚಿನ ನಿರ್ಮಾ''ದ ಸೃಷ್ಟಿಕರ್ತ

ಈ ಬಗ್ಗೆ ಮಾತನಾಡಿರುವ ಪತಂಜಲಿ ಸಂಸ್ಥೆಯ ಸ್ಥಾಪಕ ಬಾಬಾ ರಾಮ್ ದೇವ್, ಈಗಾಗಲೇ ನೇಪಾಳ ಹಾಗೂ ಬಾಂಗ್ಲಾದೇಶಗಳನ್ನು ಪತಂಜಲಿ ಘಟಕಗಳನ್ನು ಸ್ಥಾಪಿಸಲಾಗಿದ್ದು ನಮ್ಮ ಉತ್ಪನ್ನಗಳು ಮಧ್ಯಪ್ರಾಚ್ಯ ದೇಶಗಳಿಗೂ ರವಾನೆಯಾಗುತ್ತಿದ್ದು ಅಲ್ಲಿಯೂ ಜನಪ್ರಿಯತೆ ಗಳಿಸಿದೆ. ಇದೇ ವೇಳೆ ಗಾರ್ಮೆಂಟ್ಸ್ ಕ್ಷೇತ್ರದಲ್ಲೂ ಪತಂಜಲಿ ಬ್ರಾಂಡ್​ನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದಿರುವ ಬಾಬಾ ರಾಮ್ ದೇವ್, ಸ್ವದೇಶಿ ಜೀನ್ಸ್​ನ್ನು ಮುಂದಿನ ವರ್ಷದ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದ್ದಾರೆ.

image


ಯುವಕ-ಯುವತಿಯರಿಂದ ಜೀನ್ಸ್​ಗೆ ಹೆಚ್ಚಿನ ಬೇಡಿಕೆ ಇದ್ದು, ಜೀನ್ಸ್​ನ್ನು ಭಾರತೀಕರಣಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ವಿದೇಶಿ ಬ್ರಾಂಡ್​ಗಳಿಗೆ ಪೈಪೋಟಿ ನೀಡಲಿದ್ದೇವೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. ಹಾಗಾಗಿ ಪತಂಜಲಿ ಸಂಸ್ಥೆ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯಲ್ಲಿ ಅದ್ಬುತ ಜೀನ್ಸ್ ತಯಾರಿಸುವ ಯೋಜನೆ ಹೊಂದಿದ್ದು. ಈ ಮೂಲಕ ಹಲವರಿಗೆ ಉದ್ಯೋಗ ನೀಡುವುದರ ಜೊತೆಗೆ. ಹೊಸ ಕ್ರಾಂತಿಗೆ ಬಾಬಾ ರಾಮ್ದೇವ್ ಮುಂದಾಗಿದ್ದಾರೆ. ಒಟ್ಟಿನಲ್ಲಿ ಪತಂಜಲಿಯ ಮ್ಯಾಜಿಕ್​ ಗಾರ್ಮೆಂಟ್ಸ್​ ಕ್ಷೇತ್ರಕ್ಕೂ ವಿಸ್ತರಿಸಿದೆ ಅನ್ನೋದು ಖುಷಿಯ ವಿಚಾರ.

ಇದನ್ನು ಓದಿ:

1. "ಚಪಾತಿ ಮನೆ"ಯ ಆದರ್ಶ ದಂಪತಿ

2. ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಗೆರ್ರಿ ಮಾರ್ಟಿನ್

3. ವೀಕೆಂಡ್​ಗೂ ಒಂದೇ ದರ, ವೀಕ್​ಡೇಸ್​ನಲ್ಲೂ ಅದೇ ರೇಟ್​​..!