ಅಮ್ಮನ ಪ್ರೀತಿಯನ್ನು ಸಾರುವ ಲಂಚ್ ಬಾಕ್ಸ್- "ವಾಯಾ ಬಾಕ್ಸ್"​ನಲ್ಲಿದೆ ವಿಶೇಷ ಗಮ್ಮತ್ತು

ಟೀಮ್​ ವೈ.ಎಸ್​. ಕನ್ನಡ

ಅಮ್ಮನ ಪ್ರೀತಿಯನ್ನು ಸಾರುವ ಲಂಚ್ ಬಾಕ್ಸ್- "ವಾಯಾ ಬಾಕ್ಸ್"​ನಲ್ಲಿದೆ ವಿಶೇಷ ಗಮ್ಮತ್ತು

Sunday April 23, 2017,

5 min Read

ಟಿಫನ್ ಬಾಕ್ಸ್ ಅಂದ್ರೆ ಸಾಕು, ನೆನಪುಗಳು ಹಿಂದಕ್ಕೆ ಹಾರಿ ಹೋಗುತ್ತವೆ. ಪ್ಲಾಷ್ ಬ್ಯಾಕ್​ನಲ್ಲಿ ಶಾಲೆಗೆ ಹೋಗುತ್ತಿದ್ದ ದಿನಗಳು ನೆನಪಿಗೆ ಬರುತ್ತವೆ. ಅಮ್ಮ ಕಟ್ಟಿಕೊಡುತ್ತಿದ್ದ “ಸ್ಟೀಲ್” ಡಬ್ಬಾ, ಅದರೊಳಗೆ ಇವತ್ತಿನ ತಿಂಡಿ ಏನು ಅನ್ನುವ ಕುತೂಹಲ, ಅಜ್ಜಿ ಮನೆಯಿಂದ ತಂದ ಉಪ್ಪಿನ ಕಾಯಿ ರುಚಿ ಎಲ್ಲವೂ ನೆನಪಿಗೆ ಬರುತ್ತದೆ. ಇದ್ರ ಜೊತೆಗೆ ಅಮ್ಮನ ಪ್ರೀತಿಯ ನೆನಪು ಕೂಡ ಆಗದೆ ಇರದು. ಟಿಫನ್ ಬಾಕ್ಸ್ ನೆಪದಲ್ಲಿ ಹಳೆಯ ಎಲ್ಲಾ ನೆನಪುಗಳು ಒಂದು ಬಾರಿ ಸುಮ್ಮನೆ ಬಂದು ಹೋಗುತ್ತವೆ. ಆದ್ರೆ ಇವತ್ತು ಸ್ಟೀಲ್ ಡಬ್ಬಾ ಬದಲಾಗಿ ಬಿಟ್ಟಿದೆ. ಸ್ಟೀಲ್ ಬದಲು ಫೈಬರ್ ಹಾಗೂ ಇತರೆ ರೀತಿಯ ವಿಭಿನ್ನ ಟಿಫನ್ ಬಾಕ್ಸ್​ಗಳು ಮಾರುಕಟ್ಟೆಯಲ್ಲಿವೆ. ಬೆಳಗ್ಗಿನ ದೋಸೆಯನ್ನು ಬಿಸಿ ಆರದಂತೆ ಇಡುವ ಬಾಕ್ಸ್​ಗಳು ಕೂಡ ನಮ್ಮಲ್ಲಿವೆ. ಇವತ್ತಿನ ಟಿಫನ್ ಬಾಕ್ಸ್​ಗಳು ಎಷ್ಟೇ ಆಧುನಿಕತೆಯ ಟಚ್ ಪಡೆದಿದ್ರೂ, ಅಮ್ಮ ಕಟ್ಟಿಕೊಟ್ಟ ಟಿಫನ್ ಬಾಕ್ಸ್ ನೆನಪು ಯಾವತ್ತಿದ್ರೂ ಶಾಶ್ವತ. ಅಮ್ಮನ ಪ್ರೀತಿ ಅನ್ನುವುದು ಯಾವುದಕ್ಕೂ ಸಾಟಿ ಆಗುವುದಿಲ್ಲ.

image


ಟಿಫಿನ್ ಬಾಕ್ಸ್ ಈಗ ಉದ್ಯಮವಲಯದಲ್ಲಿ ಸದ್ದು ಮಾಡುತ್ತಿದೆ. ಚೆನ್ನೈ ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಟಿಫಿನ್ ಬಾಕ್ಸ್ ಮೂಲಕ ಉದ್ಯಮ ವಲಯದಲ್ಲಿ ಸಾಕಷ್ಟು ಹೊಸತವನ್ನು ಹುಟ್ಟಿಹಾಕಿದೆ. ಟಿಫಿನ್ ಬಾಕ್ಸ್​ಗೆ ಮಾಡರ್ನ್ ಟಚ್ ಸಿಕ್ಕಿದ್ರೂ ಅದ್ರಲ್ಲಿ ಭಾರತೀಯ ಸಂಸ್ಕೃತಿ ಅಡಗಿದೆ. ಅಂದಹಾಗೇ ಚೆನ್ನೈನಲ್ಲಿ ತಯಾರಾಗುವ ಈ ಟಿಫಿನ್ ಬಾಕ್ಸ್ ಅಮೆರಿಕಾದಲ್ಲಿ ಸಾಕಷ್ಟು ಫೇಮಸ್ ಆಗಿದೆ. ಚೆನ್ನೈನಲ್ಲಿ ಡಿಸೈನ್ ಮತ್ತು ರಿಜಸ್ಟರ್ ಆಗಿರುವ "ವಾಯಾ ಲಂಚ್ ಬಾಕ್ಸ್" ಅಮೆರಿಕನ್ನರ ಮನ ಗೆದ್ದಿದೆ. ಅಷ್ಟೇ ಅಲ್ಲ ತಿಂಗಳೊಂದಕ್ಕೆ ಸರಾಸರಿ 10,000 ಬಾಕ್ಸ್ ಪೀಸ್​ಗಳು ಮಾರಾಟವಾಗುತ್ತಿದೆ.

“ವಾಯಾ” ಟಿಫಿನ್ ಬಾಕ್ಸ್ ಯಶಸ್ಸಿನ ಹಿಂದೆ ಸಾಕಷ್ಟು ಹೊಸತನದ ಟಚ್ ಇದೆ. ಈ ಟಿಫಿನ್ ಬಾಕ್ಸ್​ಗಳು ಕೇವಲ ಪ್ಲಾಸ್ಟಿಕ್​ನಿಂದ ತಯಾರಾಗಿಲ್ಲ. ಬದಲಾಗಿ ನಮ್ಮ ಶಾಲಾ ದಿನಗಳಲ್ಲಿದ್ದ ಬಾಕ್ಸ್​ಗಳಂತೆ ಸ್ಟೈನ್ ಲೆಸ್ ಸ್ಟೀಲ್ ಇದೆ. ಆಹಾರ ಹಾಳಾಗದಂತೆ ಇಡಲು ಕಾಪರ್ ಫಿನಿಷ್ಡ್ ಕಂಪಾರ್ಟ್​ಮೆಂಟ್​ಗಳಿವೆ. ಹೀಗಾಗಿ ಈ ಟಿಫಿನ್ ಬಾಕ್ಸ್​ಗಳು ಎಲ್ಲರ ಮನ ಗೆಲ್ಲುತ್ತಿವೆ.

“ವಾಯಾ” ಟಿಫಿನ್ ಬಾಕ್ಸ್ ನಿರ್ಮಾತೃ ವಶಿಷ್ಟ್ ವಸಂತ್ ಕುಮಾರ್. 32 ವರ್ಷದ ಈ ಉದ್ಯಮಿ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದರು. ಕೈತುಂಬಾ ಸಂಬಳ ಬರ್ತಾ ಇದ್ರೂ ಸಮಾಧಾನ ಇರಲಿಲ್ಲ. ಆದ್ರೆ ಅಮೆರಿಕಾದಲ್ಲಿದ್ದಾಗ ಭಾರತದ ಟಿಫಿನ್ ಬಾಕ್ಸ್​ಗಳಿಗೆ ಇದ್ದ ಬೇಡಿಕೆಯನ್ನು ವಶಿಷ್ಟ್ ಗಮನಿಸಿದ್ದರು. ಹೀಗಾಗಿ ಕೆಲಸ ಬಿಟ್ಟು ಚೆನ್ನೈಗೆ ಬಂದ ಮೇಲೆ ವಶಿಷ್ಟ್ ಲಂಚ್ ಬಾಕ್ಸ್ ತಯಾರು ಮಾಡುವ ಉದ್ಯಮ ಆರಂಭಿಸಲು ಶುರು ಮಾಡಿದಾಗ ಹಲವರು ಮನಸ್ಸಿಗೆ ಬಂದ ಹಾಗೇ ಆಡಿಕೊಂಡಿದ್ದರು. ಆ್ಯಪಲ್ ಇನ್​ಕಾರ್ಪೋರೇಷನ್​ನಂತಹ ಪ್ರತಿಷ್ಟಿತ ಕಂಪನಿಯಲ್ಲಿ ದಶಕಗಳ ಕಾಲ ಕೆಲಸ ಮಾಡಿ, ಅದನ್ನು ಬಿಟ್ಟು ಲಂಚ್ ಬಾಕ್ಸ್ ತಯಾರಿಸುತ್ತಿರುವ ಕಂಪನಿ ಸ್ಥಾಪಿಸಿದ ವಶಿಷ್ಟ್ ರನ್ನು ಹುಚ್ಚ ಅಂತ ಹೀಗೆಳೆದ್ರು. ಆದ್ರೆ ಅದ್ಯಾವುದಕ್ಕೂ ವಶಿಷ್ಟ್ ತಲೆಕೆಡಿಸಿಕೊಳ್ಳಲಿಲ್ಲ. ಅಷ್ಟೇ ಅಲ್ಲ ಅವರ ಯೋಚನೆಗಳನ್ನು ಈಗ ತಪ್ಪು ಅಂತ ತನ್ನ ಸಾಧನೆ ಮೂಲಕ ಮಾಡಿ ತೋರಿಸಿದ್ದಾರೆ.

“ ಭಾರತಕ್ಕೆ ಉತ್ತಮ ಪ್ರಾಡಕ್ಟ್ ಮತ್ತು ಡಿಸೈನ್​ಗಳ ಅವಶ್ಯಕತೆ ಇದೆ. ನೈಕ್ ಅಥವಾ ಟೊಯೋಟಾದಂತಹ ಪ್ರಾಡಕ್ಟ್​ಗಳು ನಮ್ಮಲ್ಲಿ ಯಾಕಿಲ್ಲ..? ನಮ್ಮಲ್ಲಿ ಎಲ್ಲವೂ ಇದೆ. ಆದ್ರೆ ಅದನ್ನು ನಾವು ಅಭಿವೃದ್ಧಿಗೊಳಿಸಿಲ್ಲ. ಟಿಫಿನ್ ಬಾಕ್ಸ್ ನಮ್ಮಲ್ಲಿ ಅದೆಷ್ಟೋ ವರ್ಷಗಳಿಂದ ಇತ್ತು. ಈಗ ಅದನ್ನೇ ನಾನು ಈ ಕಾಲಕ್ಕೆ ಬೇಕಾದಂತೆ ಪರಿವರ್ತಿಸಿದ್ದೇನೆ. ”
- ವಶಿಷ್ಟ್, ವಯಾ ಲೈಫ್ ಸಂಸ್ಥಾಪಕ

ವಯಾ ಲೈಫ್ ಕಂಪನಿ 2016ರ ಮಧ್ಯಭಾಗದಲ್ಲಿ ಆರಂಭವಾಗಿತ್ತು. ದಿನನಿತ್ಯದ ಆಹಾರಗಳನ್ನು, ಮನೆ ತಿನಿಸುಗಳನ್ನು ಫ್ರೆಶ್ ಆಗಿ ಇರಿಸುವ ಉತ್ಪನ್ನ ತಯಾರಿಸುವುದು ಈ ಸಂಸ್ಥೆಯ ಮೊದಲ ಉದ್ದೇಶವಾಗಿತ್ತು. ಇದರ ಜೊತೆಗೆ ನಮ್ಮಲ್ಲೇ ಇರುವ ಡಿಸೈನ್​ಗಳಿಗೆ ಗ್ಲೋಬಲೈಸೇಷನ್ ಟಚ್ ಕೊಡುವ ಕನಸಿತ್ತು. ಈ ಮಧ್ಯೆ ಚೀನಾದ ಪ್ಲಾಸ್ಟಿಕ್ ಲಂಚ್ ಬಾಕ್ಸ್​ಗಳು ಅತ್ಯಂತ ಕಡಿಮೆ ದರದಲ್ಲಿ ಮಾರುಕಟ್ಟೆ ಪ್ರವೇಶಸಿದ್ದರಿಂದ ಅದಕ್ಕೆ ಬೇಡಿಕೆ ಸಹಜವಾಗೇ ಹೆಚ್ಚಿತ್ತು. ಇದಕ್ಕೆ ಕಡಿವಾಣ ಹಾಕಲು ವಯಾ ಲೈಫ್ ನಿರ್ಧಾರ ಮಾಡಿತ್ತು. ವಯಾ ಲೈಫ್ ಟಿಪನ್ ಬಾಕ್ಸ್​ಗಳ ಕಾನ್ಸೆಪ್ಟ್ ಬದಲಿಸಲು ನಿರ್ಧರಿಸಿತ್ತು. ಅಷ್ಟೇ ಅಲ್ಲ ಡಿಸೈನ್ ಜೊತೆಗೆ ಲಂಚ್ ಬಾಕ್ಸ್​ಗಳಲ್ಲಿ ಆಹಾರ ಕೆಡದಂತೆ ಮಾಡಲು ವಿವಿಧ ರೀತಿಯ ತಾಂತ್ರಿಕತೆ ಬಳಸಲು ನಿರ್ಧರಿಸಿತ್ತು. ಲಂಚ್ ಬಾಕ್ಸ್ ತಯಾರಿಕೆ ಆರಂಭಿಸುವ ಮೊದಲು ಜರ್ಮನಿ, ಜಪಾನ್, ಯು.ಎಸ್. ಮತ್ತು ಭಾರತದ ತಜ್ಞರ ಜೊತೆ ಸಮಾಲೋಚಿಸಿ ಐಡಿಯಾಗಳನ್ನು ಪಡೆದುಕೊಂಡಿತ್ತು. ಕೊನೆಗೆ ಸ್ಟೀಲ್ ಟಿಫನ್ ಬಾಕ್ಸ್​ಗೆ ಮಾಡರ್ನ್ ಟಚ್ ನೀಡಿ ಹೊಸ ಅಲೆಯನ್ನು ಸೃಷ್ಟಿಸಿತು.

ಇದನ್ನು ಓದಿ: ವೃದ್ಧರ ಹಸಿವು ನೀಗಿಸುವ ಡಾಕ್ಟರ್- ವಯೋವೃದ್ಧರ ಪಾಲಿಗೆ ಅನ್ನದಾತ ಈ ಮೋದಿ..!

ಕಳೆದ ಆರು ತಿಂಗಳಿನಿಂದ ವಯಾ ಲಂಚ್ ಬಾಕ್ಸ್​ಗೆ ಸಖತ್ ಡಿಮ್ಯಾಂಡ್ ಬರುತ್ತಿದೆ. ಪ್ರತಿ ತಿಂಗಳು ಸುಮಾರು 10,000ಕ್ಕೂ ಅಧಿಕ ಬಾಕ್ಸ್​ಗಳು ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ 2020ರ ಹೊತ್ತಿಗೆ 400 ಕೋಟಿ ವಹಿವಾಟು ನಡೆಸುವ ಕನಸು ಮತ್ತು ಗುರಿಯನ್ನು ಹೊಂದಿದೆ.

image


ಟಾರ್ಗೆಟ್ 400ಕೋಟಿ..!

ವಶಿಷ್ಟ್ 2016ರಲ್ಲಿ ಅಮೆರಿಕದಿಂದ ಭಾರಕ್ಕೆ ವಾಪಾಸಾಗಿದ್ದರು. ಆದ್ರೆ ಈಗಾಗಲೇ ಭಾರತದ ಉತ್ಪನ್ನಗಳನ್ನು ವಿಶ್ವದಾದ್ಯಂತ ಪರಿಚಯಿಸುವ ಬಗ್ಗೆ ವಶಿಷ್ಟ್ ಅಧ್ಯಯನ ನಡೆಸಿದ್ದಾರೆ. ಅಷ್ಟೇ ಅಲ್ಲ ತನ್ನ ಕಂಪನಿ ತಯಾರಿಸುವ ಲಂಚ್ ಬಾಕ್ಸ್ ಕ್ವಾಲಿಟಿಯನ್ನು ಸ್ವತಃ ತಾನೇ ಪರಿಶೀಲನೆ ಮಾಡಿದ್ದಾರೆ. ಲಂಚ್ ಬಾಕ್ಸ್​ಗೆ ತುಂಬುವ ಯಾವುದೇ ತಿನಿಸುಗಳು ಕೂಡ ಹಾಳಗಾದಂತೆ ಇಡುವ ಟೆಕ್ನಾಲಜಿಯನ್ನು ಉಪಯೋಗಿಸಿದ್ದಾರೆ.

ವಶಿಷ್ಟ್ ಉದ್ಯಮಕ್ಕೆ ಕಾಲಿಡುವ ಮೊದಲು ಆ್ಯಪಲ್ ಐ-ಫೋನ್ ನಲ್ಲಿ ಕಿರಿಯ ಡೈರೆಕ್ಟರ್ ಆಗಿದ್ದ ಹೆಗ್ಗಳಿಕೆಯನ್ನು ಪಡೆದಿದ್ದರು. ಮೊಬೈಲ್ ಫೋನ್ ಕಂಪನಿಯಲ್ಲಿ ಕೆಲಸ ಮಾಡುತ್ತಾ ಬೇಡಿಕೆ ಮತ್ತು ಅದನ್ನು ಪೂರೈಸುವ ಬಗ್ಗೆ ಸಾಕಷ್ಟು ಕಲಿತುಕೊಂಡಿದ್ದರು. ಅಷ್ಟೇ ಅಲ್ಲ ಉತ್ಪನ್ನದ ಡಿಸೈನ್​ಗಳಿಗೆ ಎಷ್ಟು ಪ್ರಾಮುಖ್ಯತೆ ಇದೆ ಅನ್ನುವುದನ್ನು ಅರ್ಥಮಾಡಿಕೊಂಡಿದ್ದರು. ಆ್ಯಪಲ್​ನಿಂದಾಗಿ ಉತ್ಪನ್ನದ ಡಿಸೈನ್,ಗ್ರಾಹಕರ ಯೋಚನೆಗಳು ಮತ್ತು ಸರಬರಾಜುಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರು. ವಶಿಷ್ಟ್ ಅಮೆರಿಕಾದಿಂದ ಭಾರತಕ್ಕೆ ವಾಪಾಸಾದ ಮೇಲೆ ಸುಮಾರು 35 ಕೋಟಿ ರೂಪಾಯಿಗಳನ್ನು ತನ್ನ ಕುಟುಂಬ ಮತ್ತು ಗೆಳೆಯರಿಂದ ಸಂಗ್ರಹಿಸಿ ಕಂಪನಿ ಆರಂಭಿಸಿದ್ದಾರೆ.

“ ಭಾರತದಲ್ಲೇ ತಯಾರಾದ ಬ್ರಾಂಡ್​ಗಳಿಗೆ ಸಾಕಷ್ಟು ಬೇಡಿಕೆ ಬರುವ ದಿನಗಳು ಹತ್ತಿರದಲ್ಲಿವೆ. ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್​ನಿಂದ ಹಿಡಿದು ಇಂಡಸ್ಟ್ರೀಯಲ್ ಡಿಸೈನ್ ತನಕ ಎಲ್ಲದಕ್ಕೂ ಬೇಡಿಕೆ ಹೆಚ್ಚಾಗಲಿದೆ. ಯುವ ಉದ್ಯಮಿಗಳು ಈ ಬದಲಾವಣೆಗೆ ಕಾರಣಕರ್ತರು ಅನ್ನುವುದನ್ನು ಹೇಳಲು ಖುಷಿಯಾಗುತ್ತಿದೆ.”
ಹರ್ಮಿಂದರ್ ಸಹ್ನಿ, ವಝೀರ್ ಅಡ್ವೈಸರ್ ಸಂಸ್ಥಾಪಕ, ಚಿಲ್ಲರೆ ವ್ಯಾಪಾರದ ಸಲಹೆಗಾರ

ಉತ್ಪನ್ನ ತಯಾರಿಸುವ ಮೊದಲು ವಯಾಲೈಫ್ ಮಾರುಕಟ್ಟೆಯಲ್ಲಿದ್ದ ಲಂಚ್ ಬಾಕ್ಸ್​ಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿತ್ತು. ಅಷ್ಟೇ ಅಲ್ಲ ಲಂಚ್ ಬಾಕ್ಸ್​ಗಳು ಅತೀ ಕಳಪೆ ಡಿಸೈನ್, ಅದರ ಸಾಮರ್ಥ್ಯ ಮತ್ತು ಅದರ ಉಪಯೋಗಗಳು ಗ್ರಾಹಕರು ಇಷ್ಟಪಡಿವ ಮಟ್ಟಿಗಿಲ್ಲ ಅನ್ನುವುದನ್ನು ಅರಿತುಕೊಂಡ್ರು. 6 ತಿಂಗಳ ಕಾಲ 3ಡಿ ಪ್ರಿಂಟಿಂಗ್ ಮತ್ತು ಇತರೆ ಮೆಟಲ್​ಗಳನ್ನು ಉಪಯೋಗಿಸಿಕೊಂಡು, ಬಾಕ್ಸ್ ಹೇಗಿರಬೇಕು ಅನ್ನುವುದರ ಬಗ್ಗೆ ಬ್ಲೂ ಪ್ರಿಂಟ್ ತಯಾರು ಮಾಡಿಕೊಂಡಿತ್ತು. ಅಂದುಕೊಂಡ ಡಿಸೈನ್ ಮತ್ತು ಅದರ ಉಪಯೋಗ ಶೇಕಡಾ 100ರಷ್ಟು ಪೂರ್ಣಗೊಂಡ ಮೇಲೆಯೇ ಲಂಚ್ ಬಾಕ್ಸ್ ತಯಾರಿಕೆಯನ್ನು ಆರಂಭಿಸಿತ್ತು. ಆರಂಭದಲ್ಲಿ ಕೆಲವು ಅಡೆತಡೆಗಳು ಎದುರಾದರೂ ಅದನ್ನು ಶೀಘ್ರದಲ್ಲೇ ಬಗೆಹರಿಸಿಕೊಂಡು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿತು.

“ಆರಂಭದಲ್ಲಿ ನಾವು ಕೆಲವು ವಸ್ತುಗಳನ್ನು ಔಟ್​ಸೋರ್ಸಿಂಗ್ ಮೂಲಕ ಪಡೆದುಕೊಳ್ಳುತ್ತಿದ್ದೆವು. ಆದ್ರೆ ಅವುಗಳು ನಮ್ಮ ಕ್ವಾಲಿಟಿಗೆ ಹೊಂದಿಕೆ ಆಗಲಿಲ್ಲ. ಹೀಗಾಗಿ ನಾವೇ ಅಗತ್ಯವಸ್ತುಗಳನ್ನು ಕ್ರೋಢಿಕರಿಸಿ, ನಮ್ಮಲ್ಲೇ ಲಂಚ್ ಬಾಕ್ಸ್​ಗಳನ್ನು ತಯಾರು ಮಾಡುವ ನಿರ್ಧಾರ ಮಾಡಿದೆವು. ಇದು ನಮ್ಮ ಉತ್ಪನ್ನದ ಗುಣಮಟ್ಟ ಹೆಚ್ಚುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ”
- ವಶಿಷ್ಟ್, ವಯಾ ಲೈಫ್ ಸಂಸ್ಥಾಪಕ

ವಯಾಲೈಫ್ ದಿನವೊಂದಕ್ಕೆ ಸುಮಾರು 1000 ಲಂಚ್ ಬಾಕ್ಸ್​ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಚೀನಾದಲ್ಲಿ ತಯಾರಾಗುವ ಕಂಪನಿಯೊಂದರ ಜೊತೆ ಗುತ್ತಿಗೆ ಒಪ್ಪಂದವನ್ನು ಕೂಡ ಹೊಂದಿದೆ. ಭಾರತದಲ್ಲಿ ಉತ್ಪನ್ನ ತಯಾರಾದ್ರೂ, ವಿಶ್ವದ ಎಲ್ಲಾ ಕಡೆಯಲ್ಲೂ ಈ ಉತ್ಪನ್ನ ಲಭ್ಯವಿದೆ.

ಚಿಲ್ಲರೆ ವ್ಯಾಪಾರಕ್ಕಾಗಿ ಆನ್​ಲೈನ್

ವಯಾ ಲೈಫ್ ತಯಾರು ಮಾಡುವ ಉತ್ಪನ್ನಗಳು ಆನ್​ಲೈನ್ ನಲ್ಲಿ ಮಾತ್ರ ಲಭ್ಯವಿದೆ. ವೆಬ್​ಸೈಟ್ ಮತ್ತು ಇ-ಕಾಮರ್ಸ್ ಸೈಟ್​ಗಳಾದ ಅಮೆಜ್ಹಾನ್ ಸೇರಿದಂತೆ ಹಲವು ವಿವಿಧ ಸೈಟ್​ಗಳಲ್ಲಿ ಲಭ್ಯವಿದೆ. ಚಿಲ್ರೆ ವ್ಯಾಪಾರವನ್ನು ಮಾಡುವ ಉದ್ದೇಶವಿದ್ದರೂ ಗ್ರಾಹಕರ ಕೈ ತಲುಪುವ ಹೊತ್ತಿಗೆ ಅದು ಲಾಭವನ್ನು ತಿಂದು ಹಾಕುವ ಭಯ ಇರುವುದರಿಂದ ಸದ್ಯಕ್ಕೆ ಆನ್ ಲೈನ್ ಮಾರುಕಟ್ಟೆ ಮೇಲೆ ಮಾತ್ರ ಕಣ್ಣಿಟ್ಟಿದೆ.

“ನಾವು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಅಭ್ಯಾಸ ನಡೆಸಿದ್ದೇವೆ. ನಮ್ಮ ಉತ್ಪನ್ನಗಳು ಹಳೆಯ ಮಾದರಿಗಳ ಜೊತೆ ಹೊಸ ಟಚ್ ಅನ್ನು ಪಡೆದುಕೊಂಡಿವೆ. ಹೀಗಾಗಿ ಲಂಚ್ ಬಾಕ್ಸ್​ಗಳಲ್ಲಿ ಆಹಾರ ಕೆಡುವುದಿಲ್ಲ ಮತ್ತು ಅವುಗಳ ಕ್ಲೀನಿಂಗ್ ಕಾರ್ಯ ಸುಲಭವಾಗಿದೆ. ”
- ವಶಿಷ್ಟ್, ವಯಾ ಲೈಫ್ ಸಂಸ್ಥಾಪಕ

ವಯಾ ಲೈಫ್ ಈ ವರ್ಷ ವಿವಿಧ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. 1000 ಎಂ.ಎಲ್ ಮತ್ತು 600 ಎಂ.ಎಲ್.ಗಳ ಬಾಕ್ಸ್​ಗಳನ್ನು ತಯಾರು ಮಾಡಿ ಮಕ್ಕಳು, ಕಾರ್ಪೋರೇಟ್ ಉದ್ಯೋಗಿಗಳು ಮತ್ತು ಎಕ್ಸಿಕ್ಯುಟಿವ್​ಗಳ ಮನ ಗೆಲ್ಲುವ ಸಾಹಸ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಪ್ಲಾಸ್ಟಿಕ್ ಬಳಕೆ ಇಲ್ಲದೆ ವೈಕ್ರೋವೇವ್​ಗಳಲ್ಲಿ ಬಾಕ್ಸ್​ಗಳನ್ನು ಇಡುವಂತಹ ತಾಂತ್ರಿಕ ಅಂಶದ ಬಗ್ಗೆಯೂ ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ. ಈ ಮೂಲಕ ಆಹಾರವನ್ನು ಬಾಕ್ಸ್​ಗೆ ಹಾಕಿದ ಮೇಲೂ ಸುಮಾರು 6 ರಿಂದ 7 ಗಂಟೆಗಳ ನಂತರ ಫ್ರೆಶ್ ಆಗಿ ಇಡಲು ಇದು ಸಹಕಾರಿ ಆಡಗಬಲ್ಲದು.

ವಯಾ ಲೈಫ್​ನ ಡಿಸೈನ್ ತಂಡ ಟೊಕಿಯೋದಲ್ಲಿ ಕೆಲಸ ಮಾಡುತ್ತಿದ್ದರೆ, ಎಂಜಿನಿಯರಿಂಗ್, ಆಪರೇಷನ್ಸ್ , ಮಾರ್ಕೆಟಿಂಗ್, ಕಸ್ಟಮರ್ ಕೇರ್ ಮತ್ತು ಸೇಲ್ಸ್ ಟೀಮ್ ಚೆನ್ನೈ ಯನ್ನು ಮೂಲವನ್ನಾಗಿ ಇಟ್ಟುಕೊಂಡಿದೆ. ಅಮೆರಿಕ, ಮಲೇಷಿಯಾ ಮತ್ತು ಸಿಂಗಪೂರಗಳಲ್ಲಿ ವಯಾ ಲೈಫ್​ನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಆ ಪ್ರದೇಶಗಳಲ್ಲಿ ಅಗ್ರೆಸ್ಸಿವ್ ಮಾರ್ಕೆಟಿಂಗ್ ಟ್ರಿಕ್ಗಳನ್ನು ಉಪಯೋಗಿಸಿಕೊಳ್ಳುತ್ತಿವೆ.

ವಯಾ ಟಿಫನ್ ಬಾಕ್ಸ್ ಈಗ 3 ಕಂಟೈನರ್ ವಾಕ್ಯುಮ್ ಇನ್ಸುಲೇಟೆಡ್ ಸಿಸ್ಟಮ್​ನಲ್ಲಿ ಲಭ್ಯವಿದೆ. ಇದು ಸುಮಾರು 1000 ಎಂ.ಎಲ್. ಸಾಮರ್ಥ್ಯವನ್ನು ಹೊಂದಿದೆ. ಗ್ರಾಫೈಟ್, ಮ್ಯಾಪಲ್ ಮತ್ತು ವೂಲ್ ಅನ್ನುವ ಮೂರು ಕೆಟಗರಿಗಳಲ್ಲಿ ಈ ಪ್ರಾಡಕ್ಟ್ ಲಭ್ಯವಿದ್ದು ಸುಮಾರು 2,999 ರೂಪಾಯಿಗಳಿಗೆ ವಯಾ ಲೈಫ್ ಬಾಕ್ಸ್​ಗಳು ಲಭ್ಯವಿದೆ. ವಯಾ ಲಂಚ್ ಬಾಕ್ಸ್​ಗಳಲ್ಲಿ ಆಹಾರಗಳು ಸುಮಾರು 6 ಗಂಟೆಗಿಂತಲೂ ಹೆಚ್ಚು ಕಾಲ ಬಿಸಿಯಾಗಿರುವ ಜೊತೆಗೆ ಫ್ರೆಶ್ ಆಗಿರುತ್ತದೆ. ಹೀಗಾಗಿ ಗ್ರಾಹಕರು ನೆಮ್ಮದಿಯಾಗಿ ಆಹಾರಗಳನ್ನು ಸೇವನೆ ಮಾಡಬಹುದು.

ಭಾರತ ಈಗಾಗಲೇ ಮೇಕ್ ಇನ್ ಇಂಡಿಯಾ ಪ್ರಾಡಕ್ಟ್​ಗಳ ಮೂಲಕ ಸಾಕಷ್ಟು ಗಮನ ಸೆಳೆಯುತ್ತಿದೆ. ಈಗ ವಶಿಷ್ಟ್ ವಸಂತ್ ಕುಮಾರ್ ಅಮ್ಮನ ಪ್ರೀತಿಯನ್ನು ಸಾರುವ ಲಂಚ್ ಬಾಕ್ಸ್ ಮೂಲಕ ವಶಿಷ್ಟ್ ಭಾರತದ ಉದ್ಯಮ ಕ್ಷೇತ್ರವನ್ನು ಮೇಲಕ್ಕೇರಿಸಿದ್ದಾರೆ. 

ಇದನ್ನು ಓದಿ:

1. ನಿರಾಶ್ರಿತರ ಪಾಲಿಗೆ ಸಂಜೀವಿನಿ- 5 ಲಕ್ಷಕ್ಕೂ ಅಧಿಕ ಜನರ ಹಸಿವು ತಣಿಸಿದ "ಯಂಗೀಸ್ತಾನ್"

2. ಅಂಕಿಅಂಶದ ಕಡೆಗೆ ಗಮನ- ಪಕ್ಕಾ ಲೆಕ್ಕ ಕೊಡ್ತಾರೆ ರೇಣುಕಾ ಮತ್ತು ಅರ್ಚನಾ..!

3. ಫೋಟೋಗಳೇ ಮಾತಾಗಿ ಕಥೆ ಹೇಳುತ್ತವೆ..!