ಭಾರತೀಯ ಸ್ಟಾರ್ಟ್ಅಪ್ ಲೋಕದ ವೇದವಾಕ್ಯಗಳು..!
ಟೀಮ್ ವೈ.ಎಸ್. ಕನ್ನಡ
ಭಾರತದ ಉದ್ಯಮದಲ್ಲಿ ತಾಂತ್ರಿಕತೆಯಿಂದ ವಿಶ್ವಾಸದ ತನಕ ಹಲವು ಕಥೆಗಳಿವೆ. ಉದ್ಯಮಿಗಳ ಹೇಳಿಕೆಗಳು ಸಾಕಷ್ಟು ಪ್ರಭಾವಗಳನ್ನು ಬೀರಿವೆ. ಅಭಿವೃದ್ಧಿಯ ಕಡೆಗೆ ವೇಗವಾಗಿ ಓಡುವ ಭಾರತೀಯ ಸ್ಟಾರ್ಟ್ ಅಪ್ ಲೋಕದಲ್ಲಿ ಸ್ಪೂರ್ತಿದಾಯಕವೆನಿಸು ಅತ್ಯುತ್ತಮ ಹೇಳಿಕೆಗಳ ಬಗ್ಗೆ ಕಣ್ಣಾಡಿಸಿ ನೋಡಿ.
1. ಭಾರತ ಸ್ಟಾರ್ಟ್ ಅಪ್ ದೇಶ ಅಂತ ಕರೆಸಿಕೊಂಡಿದೆ. ಆದ್ರೆ ಇದನ್ನು ಪ್ರಮಾಣೀಕರಿಸಲು ಸಾಧ್ಯವಿಲ್ಲದ ರಾಷ್ಟ್ರವಾಗಿದೆ.
- ಸಂಜೀವ್ ಅಗರ್ವಾಲ್, ಫಂಡಮೆಂಟಮ್ ಪಾರ್ಟ್ನರ್ಶಿಪ್
2. ಗಾತ್ರ ಮತ್ತು ಫಲಿತಾಂಶಗಳ ಗೀಳು ನಮ್ಮಲ್ಲಿ ಭಯ ಹುಟ್ಟಿಸುತ್ತವೆ. - ಸಮರ್ ಸಿಂಗ್ಲ, ಜಗ್ನೂ
3. ಸರಿಯಾದ ರೂಪುರೇಷೆಗಳು ಮತ್ತು ಕೌಶಲ್ಯಗಳು ಬಡತನದ ಚಕ್ರವನ್ನು ಮುರಿಯಲು ಸಾಮರ್ಥ್ಯವನ್ನು ನೀಡುತ್ತದೆ. – ಶಹವಾನಾಜ್ ಶೇಖ್, ರೆಡ್ ಬಾಯ್ಸ್ ಫೌಂಡೇಷನ್
ಇದನ್ನು ಓದಿ: 8ನೇ ವರ್ಷಕ್ಕೆ ಮದುವೆಯಾದ್ರೂ ಹಠ ಬಿಡಲಿಲ್ಲ- ಡಾಕ್ಟರ್ ಆಗಲು ಸಿದ್ಧರಾಗಿದ್ದಾರೆ ರೂಪಾ..!
4. ನಾವು ಈಜುಕೊಳದ ಆಳವಿಲ್ಲದ ತುದಿಯಲ್ಲಿ ಈಜುತ್ತಿದ್ದೇವೆ, ಆದರೆ ಇಸ್ರೇಲಿಗಳು ಆಳವಾದ ತುದಿಯಲ್ಲಿ ಈಜುತ್ತಿದ್ದಾರೆ. –ಅನಂದ್ ಮದನ್ಗೋಪಾಲ್, ಕಾರ್ಡಿಯಾಕ್ ಡಿಸೈನ್ ಲ್ಯಾಬ್ಸ್
5. ಮುಂದಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಹೈನುಗಾರಿಕೆ ಹೆಚ್ಚು ಬೆಲೆ ಪಡೆದುಕೊಳ್ಳಲಿದೆ. ಮೌಲ್ಯ-ವರ್ಧಿತ ಡೈರಿ ಮಾರುಕಟ್ಟೆಯು ಎರಡು ಅಂಕೆಗಳಲ್ಲಿ ಬೆಳೆಯುವ ಸಾಧ್ಯತೆ ಇದೆ. - ಪ್ರಶಾಂತ್ ಛಾಯಾ
6. ಎರಡು ಸ್ಟಾರ್ಟ್ಅಪ್ ಪ್ರಯಾಣಗಳು ಒಂದೇ ತರವಾಗಿರಲು ಸಾಧ್ಯವಿಲ್ಲ. - ಸಟೇಜ್, ರಾಕೆಟಿಯಮ್
7. 2020ರ ಹೊತ್ತಿಗೆ ಭಾರತದಲ್ಲಿ ತಾಂತ್ರಿಕತೆಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳು ಸುಮಾರು 4ರಿಂದ 5 ಬಿಲಿಯನ್ ತಲುಪುವುದು ಗ್ಯಾರೆಂಟಿ. - ವೆಂಕಟೇಶ್ ಪೆಡ್ಡಿ, ಐಡಿಜಿ ವೆಂಚರ್ಸ್
8. ಭಾರತದಲ್ಲಿ ಶೇಕಡಾ 98ರಷ್ಟು ಆಹಾರ ಮತ್ತು ದಿನಸಿ ಸಾಮಾಗ್ರಿಗಳ ವಹಿವಾಟು ಕಿರಾಣಿ ಅಂಗಡಿಗಳಲ್ಲೇ ನಡೆಯುತ್ತದೆ. – ಬಾಲಾ ಶ್ರೀನಿವಾಸ, ಕಲಾರಿ ಕ್ಯಾಪಿಟಲ್
9. ಭಾರತವು ದೊಡ್ಡ-ಪ್ರಮಾಣದ ಸಮಸ್ಯೆಗಳನ್ನು ಹೊಂದಿದೆ, ಅದು ಸಮರ್ಥವಾದ ಪರಿಹಾರಗಳನ್ನು ಕಂಡುಹಿಡಿಯಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ದೊಡ್ಡ ಡೇಟಾದ ಶಕ್ತಿಯನ್ನು ಬೇಡುತ್ತದೆ. - ಪ್ರವೀಣ್ ಭಡಾಡ, ಝಿನ್ನೋವ್
10. ಭಾರತದಲ್ಲಿ ಶೇಕಡಾ 90ರಷ್ಟು ಅಪಘಾತಗಳು ಮನುಷ್ಯನ ತಪ್ಪಿನಿಂದಲೇ ನಡೆಯುತ್ತದೆ. ಡ್ರೈವರ್ ರಹಿತ ಹಾಗೂ ಆಟೋಮೇಟೆಡ್ ಕಾರುಗಳು, ಆರ್ಟಿಫಿಷಲ್ ಇಂಟೆಲಿಜೆನ್ಸ್ ಅಪಘಾತದ ಪ್ರಮಾಣಗಳನ್ನು ತಗ್ಗಿಸಲಿದೆ. - ರಾಲ್ಫ್ ಬುಲಂಡರ್, ರಾಬರ್ಟ್ ಬಾಷ್
11. ದುರ್ಗಾ ಮಾನಸಿಕ ಕೋಟೆ- ಇದರ ಮೂಲಕ ನಾವು ಕಾರ್ಪೋರೇಟ್ ಜಗತ್ತನ್ನು ನಿಭಾಯಿಸಬಹುದು. - ದೇವದತ್ ಪಟ್ನಾಯಕ್
12. ಇಲ್ಲಿ ತನಕ ರಿಯಲ್ ಎಸ್ಟೇಟ್ ಕ್ಷೇತ್ರವು ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಮತ್ತು ಸೇವೆಗಳಿಗಾಗಿ ಇ-ಕಾಮರ್ಸ್ ಪಡೆದ ಯಶಸ್ಸನ್ನು ಅನುಕರಿಸಲು ಸಾಧ್ಯವಾಗಲಿಲ್ಲ. - ಅನುಜ್ ಪುರಿ, ANAROCK
13. ಪ್ರತಿಯೊಂದು ವಾಟ್ಸ್ ಆ್ಯಪ್ ಗ್ರೂಪ್ ಒಂದು ರೀತಿಯಲ್ಲಿ ಕುಟುಂಬ ಇದ್ದಂತೆ- ಎಲ್ಲಾ ಕಟುಂಬಗಳಂತೆ ಇದು ಕೂಡ ಸಂತೋಷ ಹಾಗೂ ದು:ಖಗಳನ್ನು ನೀಡಬಹುದು. - ಸಂತೋಷ್ ಸೇಸಾಯಿ, ಫ್ಯೂಚರ್ ಬ್ರಾಂಡ್ಸ್
14. ಈ ತಲೆಮಾರಿನಲ್ಲಿ ಸೆಲ್ಪಿಗಳು ಮತ್ತು ಸೆಲ್ಫಿಸ್ಟಿಕ್ಗಳು ದೊಡ್ಡ ಶಾಪವಾಗಿದೆ. ಯಾಕಂದರೆ ನಿರ್ಧಾರಗಳನ್ನು ನಾವು ಹೇಗೆ ಕಾಣಿಸುತ್ತೇವೆ ಅನ್ನುವುದರ ಮೂಲಕ ಮಾಡಲಾಗುತ್ತದೆ, ನಮ್ಮ ತನಕ್ಕೆ ಬೆಲೆ ಅನ್ನುವುದೇ ಇಲ್ಲ. - ಆರ್ಕುಟ್ ಬಯುಕ್ಕೊಟೆನ್
15. ನಂಬಿ ಬಿಟ್ಟುಬಿಡಿ, ಹಣ ಉದ್ಯಮ ಮತ್ತು ಬದುಕಿನ ಭಾಗ. - ವರ್ತಿಕ, ಮನಸ್ವಿ, ಐ.ಮಿ.ಯು
16. ಫಿನ್ ಟೆಕ್ ಸ್ಟಾರ್ಟ್ ಅಪ್ ಗಳು ದೊಡ್ಡ ದೊಡ್ಡ ಹಣಕಾಸು ಸಂಸ್ಥೆಗಳ ಜೊತೆ ಸ್ಪರ್ಧೆಗಿಳಿಯುವ ಬದಲು ಪಾರ್ಟ್ ನರ್ ಶಿಪ್ ಗಳು ಮತ್ತು ಸಿನರ್ಜಿಗಳನ್ನು ಪಡೆಯುವ ಬಗ್ಗೆ ಗಮನ ಕೊಡಬೇಕು. - ಅಪರಾಜಿತ್ ಭಂಡಾರ್ಕರ್, ISME ACE
17. ಎಲ್ಲಾ ಮಹಿಳೆಯರು ತಾಯಿಗೆ ಸಮಾನ ಮತ್ತು ಅವರಿಗೆ ಸಲ್ಲುವ ಗೌರವಗಳು ಸಲ್ಲಬೇಕು- ಪ್ಯಾರಬಾ
18. ಲಿಂಗತಾರತಮ್ಯ ನಮ್ಮ ಸಮಾಜದಲ್ಲಿದೆ, ಇದು ಬಾಲಕಿ, ಹುಡುಗಿ, ಮಹಿಳೆಯರ ಬದುಕಿನಲ್ಲಿ ಸಾಕಷ್ಟು ದುಷ್ಪರಿಣಾಮಗಳನ್ನು ಬೀರುತ್ತಿದೆ. - ಶೆಲ್ಲಿ ಮಿತ್ತಲ್, ಶೆಲ್
19. ನಾವು ಪ್ರತಿಯೊಂದು ಹನಿ ನೀರನ್ನು ಕೂಡ ನ್ಯಾಯಬದ್ಧವಾಗಿ ಬಳಸಿಕೊಳ್ಳಬೇಕು. - ಎ.ಆರ್. ಶಿವಕುಮಾರ್, ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ
20. ಮಾಧ್ಯಮದಲ್ಲಿ ಅತೀ ದೊಡ್ಡ ಸಮಸ್ಯೆ ಅಂದರೆ ಇದು ತುಂಬಾ ಚಿಕ್ಕದು. ಸಮಸ್ಯೆಗಳು ತುಂಬಾ ಕಡಿಮೆ ವರದಿಯಾಗುತ್ತವೆ. - ಟಿಮ್ ಡಾಸನ್, ನ್ಯಾಷನಲ್ ಯೂನಿಯನ್ ಆಫ್ ಜರ್ನಲಿಸ್ಟ್ಸ್
21. ನಾಯಿಗಳಿಗೆ ಮತ್ತು ನಾಯಿ ಮರಿಗಳಿಗೆ ಸರಿಯಾದ ತರಬೇತಿ ನೀಡಿದರೆ, ಅವುಗಳು ಕೂಡ ಒಳ್ಳೆಯ ಥೆರಪಿಸ್ಟ್ ಗಳಾಗಬಹುದು. ಆದ್ರೆ ಜನರು ಇದನ್ನು ಅರ್ಥೈಸಿಕೊಳ್ಳುವುದಿಲ್ಲ. - ಸೃಷ್ಠಿ ಶರ್ಮಾ, ಫರ್ ಬಾಲ್
22. ಸೃಜನಶೀಲತೆ ಅಂತರ್ ನಿರ್ಮಿತ. - ಕೊಟೆಗಡ್ಡೆ ರವಿ, ಫಿಡಿಲಿಟಸ್ ಗ್ಯಾಲರಿ
ಒಂದುಂತೂ ಸತ್ಯ. ಭಾರತದಲ್ಲಿ ಸ್ಟಾರ್ಟ್ ಅಪ್ ಉದ್ಯಮ ಸೃಷ್ಟಿ ಮಾಡಿರುವ ಹವಾದ ನಡುವೆ ಅಭಿವೃದ್ಧಿಯ ಕನಸು ನನಸಾಗುವ ದಿನ ದೂರವಿಲ್ಲ ಅನ್ನುವುದು ಸ್ಪಷ್ಟ
1. ನಡೆದಾಡಲು ಕಷ್ಟಪಡುತ್ತಿದ್ದ ಅಪರ್ಣಾ, ಮೌಂಟ್ ಎವರೆಸ್ಟ್ ಏರಿದ ಕಥೆಯಿದು..!
2. ಭಾರತದ 6 ಸುಪ್ರಸಿದ್ಧ ಉದ್ಯಮಿಗಳು ಇವರು..!
3. ಏರ್ಫೋರ್ಸ್ ಸೇರಲು ಬಹು ರಾಷ್ಟ್ರೀಯ ಕಂಪನಿಯ ಕೆಲಸ ಕೈಬಿಟ್ಟ ಮಹಿಳಾಮಣಿ..!