ರಂಜಾನ್ ತಿಂಗಳಲ್ಲೊಂದು ಪವಿತ್ರ ಕೆಲಸ- ಅರಬ್ ದೇಶಗಳಲ್ಲಿ ಸುಮಯ್ಯ ಹೊಸ ಸಾಹಸ

ಟೀಮ್​ ವೈ.ಎಸ್​.ಕನ್ನಡ

ರಂಜಾನ್ ತಿಂಗಳಲ್ಲೊಂದು ಪವಿತ್ರ ಕೆಲಸ- ಅರಬ್ ದೇಶಗಳಲ್ಲಿ ಸುಮಯ್ಯ ಹೊಸ ಸಾಹಸ

Friday June 24, 2016,

2 min Read

ರಂಜಾನ್ ಮುಸಲ್ಮಾನ ಸಮಾಜ ಬಾಂಧವರಿಗೆ ಪವಿತ್ರವಾದ ತಿಂಗಳು. ಈ ಸಮದಲ್ಲಿ ಉಪವಾಸ ಕೈಗೊಂಡ್ರೆ ದೇವರ ಆಶೀರ್ವಾದಕ್ಕೆ ಹತ್ತಿರವಾಗುತ್ತೇವೆ ಅನ್ನೋ ನಂಬಿಕೆ ಇದೆ. ಹೀಗಾಗಿ ಪ್ರತಿಯೊಬ್ಬರು ಕೂಡ ರಂಜಾನ್ ಸಮಯದಲ್ಲಿ ಉಪವಾಸ ಕೈಗೊಳ್ಳುವುದು ಸಾಮಾನ್ಯ. ಭಾರತದಂತಹ ದೇಶಗಳಲ್ಲಿ ಉಪವಾಸ ಕೈಗೊಂಡ್ರೆ ವಾತಾವರಣದ ಸಹಕಾರ ಕೂಡ ಇರುತ್ತದೆ. ಈ ಸಮಯದಲ್ಲಿ ಬಿಸಿಲಿನ ತಾಪಮಾನ ಕೂಡ ಕಡಿಮೆ ಇರುತ್ತದೆ. ಆದ್ರೆ ಅರಬ್ ದೇಶಗಳಲ್ಲಿ, ದುಬೈ ಮತ್ತು ಶಾರ್ಜಾದಂತಹ ಮರುಭೂಮಿಗಳಲ್ಲಿ ರಂಜಾನ್ ಉಪವಾಸವನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ. ಮುರುಭೂಮಿಯಲ್ಲಿ ಬೀಸುವ ಬಿಸಿಗಾಳಿ ಮತ್ತು ತಾಪಮಾನದ ಏರಿಕೆ ರಂಜಾನ್ ಉಪವಾಸ ಕೈಗೊಳ್ಳುವವರನ್ನು ಸಾಕಷ್ಟು ಕಂಗಾಲು ಮಾಡುತ್ತದೆ.

image


ಸಿರಿವಂತರು ಮನೆಯಲ್ಲೇ ಕೂತು ಉಪವಾಸ ಮುಗಿಸಿ ಬಿಡುತ್ತಾರೆ. ಆದ್ರೆ ಕೆಲಕ್ಕೆ ತೆರಳುವ ಕಾರ್ಮಿಕರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಅವರ ಕಷ್ಟಗಳಿಗೆ ಸ್ಪಂಧಿಸುವವರು ಕೂಡ ಸಿಗುವುದಿಲ್ಲ. ಆದ್ರೆ 29 ವರ್ಷದ ಆಸ್ಟ್ರೇಲಿಯಾ ಮೂಲದ, ದುಬೈನಲ್ಲಿ ನೆಲೆಸಿರುವ ಸುಮಯ್ಯ ಸೈಯಿದ್ ಐಡಿಯಾಗಳೇ ವಿಭಿನ್ನ. ರಂಜಾನ್​ನ ಪವಿತ್ರ ತಿಂಗಳಿನಲ್ಲಿ ಉತ್ತಮ ಕೆಲಸ ಮಾಡಬೇಕು ಅಂತ ನಿರ್ಧಾರ ಮಾಡಿ ಆಹಾರ ಮತ್ತು ನೀರಿನ ಪದಾರ್ಥಗಳನ್ನು ಶೇಖರಿಸುವ ಫ್ರಿಡ್ಜ್, ರೆಫ್ರಿಜರೇಟರ್​ಗಳನ್ನು ಹಲವು ಸ್ಥಳಗಳಲ್ಲಿ ಅಳವಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ರಂಜಾನ್ ಉಪವಾಸ ಕೈಗೊಂಡ ಹಲವು ಬಡವರಿಗೆ ಈ ರೆಫ್ರಿಜರೇಟರ್​ಗಳು ಸಾಕಷ್ಟು ನೆರವು ನೀಡಿವೆ.

ಇದನ್ನು ಓದಿ: ರಾಜಧಾನಿಯಲ್ಲೇ ಕತ್ತಲು - ಬೆಂಗಳೂರಿನ 33,000 ಮನೆಗಳಿಗಿಲ್ಲ ವಿದ್ಯುತ್ ಸಂಪರ್ಕ

ಸುಮಯ್ಯ ಈ ರೆಫ್ರಿಜರೇಟರ್​​ಗಳನ್ನು ಬಡ ಕಾರ್ಮಿಕರು ಮತ್ತು ಆರ್ಥಿಕವಾಗಿ ಅಶಕ್ತವಾಗಿರುವವರು ನೆಲೆಸಿರುವ ಸ್ಥಳಗಳನ್ನು ಹುಡುಕಿ ಮಾನವೀಯತೆ ಮೆರೆದಿದ್ದಾರೆ. ಸುಮಯ್ಯ ಪ್ಲಾನ್​​ಗಳಿಂದ ಉಪವಾಸ ಕೈಬಿಡುವ ಸಮಯದಲ್ಲಿ, ಉಪವಾಸ ಕೈಗೊಂಡವರಿಗೆ ತಂಪಾದ ಪಾನೀಯದ ಸಿಂಚನ ಸಿಗುವಂತಾಗಿದೆ.

“ಹಲವು ಕೆಲಸಗಾರರು ಹೊರಗಿನ ವಾತಾವರಣದ ಬಿಸಿಯಲ್ಲಿ ರಂಜಾನ್ ಉಪವಾಸ ಮಾಡಿಕೊಂಡು ಕೆಲಸ ಮಾಡುತ್ತಿರುವುದನ್ನು ನೋಡಿ ನನಗೆ ಆಘಾತವಾಯಿತು. ಅವರಿಗೇನಾದ್ರೂ, ಯಾವುದಾದರೂ ಒಂದು ರೂಪದಲ್ಲಿ ಸಹಾಯ ಮಾಡಬೇಕು ಅಂತ ನಿರ್ಧಾರ ಮಾಡಿದೆ. ಆದ್ರೆ ಇದು ಚಿಕ್ಕ ಮಾತಾಗಿರಲಿಲ್ಲ. ಗಾರ್ಡನ್ ಕೆಲಸಗಾರರು, ಗಾರೆ ಕೆಲಸ ಅಥವಾ ಕನ್ಸ್ಟ್ರಕ್ಷನ್ ಫೀಲ್ಡ್​​ನಲ್ಲಿ ಇದ್ದವರು ಸಮಾನ್ಯವಾಗಿ 100 ಡಿಗ್ರಿ ಫ್ಯಾರೆನ್​ಹೀಟ್​ನಲ್ಲಿ ಕೆಲಸ ಮಾಡುವುದು ಸಾಮಾನ್ಯ. ಹೀಗಾಗಿ ಅವರಿಗೆ ಉಪವಾಸ ಕೈ ಬಿಡುವ ಸಮಯದಲ್ಲಿ ತಂಪು ಪಾನೀಯ ಮತ್ತು ತಂಪಾದ ಹಣ್ಣುಗಳ ಅವಶ್ಯಕತೆ ಇರುತ್ತದೆ. ಇದನ್ನು ಮನಗಂಡು ನಾನು ರಿಫ್ರಿಜರೇಟರ್​ಗಳನ್ನು ನನ್ನ ಸಂಪೂರ್ಣ ಖರ್ಚಿನಲ್ಲಿ ಕೆಲವು ಸ್ಥಳಗಳಲ್ಲಿ ಅಳವಡಿಸಲು ಯೋಚಿಸಿದೆ. ನಮ್ಮ ಸಮಾಜ ಬಾಂಧವರು, ಅದ್ರಲ್ಲೂ ಇಂತಹ ಕಠಿಣ ಸಮಯದಲ್ಲಿ ಕೆಲಸ ಮಾಡುವವರು ನನ್ನ ಐಡಿಯಾಗಳಿಗೆ ಉತ್ತಮ ಪ್ರತಿಕ್ರಿಯೆ ನೀಡಿದರು.”
             - ಸುಮಯ್ಯ, ಸಮಾಜ ಸೇವಕಿ

ಸುಮಯ್ಯ ಪ್ರಾಜೆಕ್ಟ್​​ಗಳು ಈಗ ಅರಬ್ ದೇಶದಾದ್ಯಂತ ಮನೆಮಾತಾಗಿದೆ. ಅಷ್ಟೇ ಅಲ್ಲ ಹಲವರು ಸುಮಯ್ಯ ಕಾರ್ಯಗಳಿಂದ ಪ್ರೋತ್ಸಾಹ ಪಡೆದು ತಾವು ಕೂಡ ಇಂತಹ ಕೆಲಸ ಮಾಡಲು ಮುಂದಾಗಿದ್ದಾರೆ. ಶಾರ್ಜಾ ಮತ್ತು ದುಬೈಗಳಲ್ಲಿ ಸುಮಯ್ಯ ಮಾಡಿದ ಈ ಕೆಲಸ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಫ್ರಿಡ್ಜ್ ಇಡುವ ಕಾರ್ಯ ಎಷ್ಟು ಪ್ರಸಿದ್ಧಿ ಪಡೆದಿದೆ ಅಂದ್ರೆ ಶಾರ್ಜಾದಲ್ಲಿ 70 ಹಾಗೂ ದುಬೈನಲ್ಲಿ ಸುಮಾರು 50 ಫ್ರಿಡ್ಜ್​ಗಳು ಈಗ ಬಡವರ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುತ್ತಿವೆ.

ಒಂದು ಅಂದಾಜಿನ ಪ್ರಕಾರ ಯುಎಇನಲ್ಲಿ ಸುಮಾರು 5 ಮಿಲಿಯನ್​ಗಿಂಗತಲೂ ಹೆಚ್ಚು, ಕಡಿಮೆ ಆದಾಯ ಹೊಂದಿರುವ ಕಾರ್ಮಿಕರು ನೆಲೆಸಿದ್ದಾರೆ. ಅವರಲ್ಲಿ ಹೆಚ್ಚಿನವರು ಸೌತ್ ಏಷ್ಯನ್ ದೇಶದವರೇ. ಇದೆಲ್ಲವನ್ನು ಗಮನಿಸಿದ್ದ ಸುಮಯ್ಯ ಬದಲಾವಣೆಗೆ ಮನಸ್ಸು ಮಾಡಿ ಈ ಯೋಜನೆಗಳನ್ನು ರೂಪಿಸಿದ್ದರು. ಸುಮಯ್ಯ ಕಾರ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡು ಹಲವರಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ. 

ಇದನ್ನು ಓದಿ:

1. ಭಾರತೀಯ ರೈಲ್ವೇಗೂ ಬಂತೂ ಬದಲಾವಣೆಯ ಕಾಲ..!

2. ಬ್ರಿಟಿಷ್ ಕಾಲದ ತಂತ್ರಜ್ಞಾನಕ್ಕೆ ಗುಡ್‍ಬೈ - ಬರ್ತಿದೆ ಹಮಾಮಾನ ಮುನ್ಸೂಚನೆ ನೀಡುವ ಸೂಪರ್ ಕಂಪ್ಯೂಟರ್

3. ಕಲಾವಿದನೊಳಗೊಬ್ಬ ಕೃಷಿಕ - ತವರಿನ ರೈರಿಗಾಗಿ ನೀರಾವರಿ ವಿಧಾನ ಆಮದು ಮಾಡಿಕೊಂಡ ನವಾಜುದ್ದೀನ್ ಸಿದ್ದಿಕಿ