ಆವೃತ್ತಿಗಳು
Kannada

31 ವರ್ಷಗಳ ಬಳಿಕ ತಂದೆ ಸಾವಿಗೆ ಸಿಕ್ತು ನ್ಯಾಯ – ಎಲ್ಲರಿಗೂ ಮಾದರಿ ಐಎಎಸ್ ಅಧಿಕಾರಿಯ ಈ ಹೋರಾಟ

ಟೀಮ್ ವೈ.ಎಸ್.ಕನ್ನಡ 

YourStory Kannada
2nd Mar 2017
Add to
Shares
0
Comments
Share This
Add to
Shares
0
Comments
Share

ದೇಶದ ಬಹುತೇಕ ಕಡೆಗಳಲ್ಲಿ ನಡೆಯುವ ನಕಲಿ ಎನ್ಕೌಂಟರ್​ಗಳು ನಮ್ಮನ್ನು ನಡುಗಿಸುವ ಕಹಿ ಸತ್ಯ. ಈ ಎನ್ಕೌಂಟರ್​ಗಳಲ್ಲಿ ಮುಗ್ಧರು ಬಲಿಯಾಗ್ತಾರೆ, ಅದರಲ್ಲಿ ಶಾಮೀಲಾಗಿರುವ ತಂಡ ಮಾತ್ರ ಕೃತ್ಯವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಿಬಿಡುತ್ತದೆ. 35 ವರ್ಷಗಳ ಹಿಂದೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲೂ ಅಂಥದ್ದೊಂದು ನಕಲಿ ಎನ್ಕೌಂಟರ್ ನಡೆದಿತ್ತು. ಆ ದಿನ 13 ಮಂದಿ ಸಾವನ್ನಪ್ಪಿದ್ರು, ಅರ್ಥಾತ್ ಕೊಲೆಯಾಗಿ ಹೋಗಿದ್ರು. ಅವರಲ್ಲೊಬ್ಬರು ಡಿಎಸ್ಪಿ ಕೆ.ಪಿ.ಸಿಂಗ್. ಸರಳುಗಳ ಹಿಂದೆ ಪ್ರಾಣಕಳೆದುಕೊಂಡ ನಿರಪರಾಧಿ ತಂದೆಯ ಸಾವಿಗೆ ಸೇಡು ತೀರಿಸಿಕೊಳ್ಳಲೇಬೇಕೆಂದು ಪುತ್ರಿ ಕಿಂಜಲ್ ಸಿಂಗ್ ಪಣತೊಟ್ಟಿದ್ಲು.

image


ತನ್ನ ವಯಸ್ಸಿನ ಮಕ್ಕಳೆಲ್ಲ ಆಟ-ಪಾಠ ಅಂತಾ ಮಜವಾಗಿದ್ರೆ, ಕಿಂಜಲ್ ಮಾತ್ರ ತನ್ನ ತಾಯಿ ವಿಭಾ ಜೊತೆಗೆ ಉತ್ತರಪ್ರದೇಶದ ಚಿಕ್ಕ ಹಳ್ಳಿಯಿಂದ ದೆಹಲಿಯ ಸುಪ್ರೀಂ ಕೋರ್ಟ್​ಗೆ ಅಲೆಯುತ್ತಿದ್ಲು. ಇಬ್ಬರು ಹೆಣ್ಣು ಮಕ್ಕಳಿಗೆ ತಂದೆ ತಾಯಿ ಇಬ್ಬರೂ ಆಗಿ ಬೆಳೆಸುವ ಜವಾಬ್ಧಾರಿ ವಿಭಾ ಮೇಲಿತ್ತು. ವಾರಣಾಸಿಯಲ್ಲಿ ವಿಭಾಗೆ ಉದ್ಯೋಗ ದೊರೆತಿತ್ತು. ಮಕ್ಕಳಾದ ಕಿಂಜಲ್ ಹಾಗೂ ಪ್ರಾಂಜಲ್​ಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಮೃತ ಪತಿಯ ಸಾವಿಗೆ ನ್ಯಾಯ ಪಡೆಯಲು ವಿಭಾ ಹೋರಾಟ ನಡೆಸಿದ್ಲು. 31 ವರ್ಷಗಳ ಈ ಹೋರಾಟಕ್ಕೆ ಕೊನೆಗೂ ಗೆಲುವು ಸಿಕ್ಕಿದೆ.

ಡಿಎಸ್ಪಿ ಕೆ.ಪಿ.ಸಿಂಗ್ ಅವರನ್ನು ಸಹೋದ್ಯೋಗಿಗಳೇ ನಕಲಿ ಎನ್ಕೌಂಟರ್​ನಲ್ಲಿ ಹತ್ಯೆ ಮಾಡಿದ್ದರು. ಭ್ರಷ್ಟಾಚಾರ ಮತ್ತು ಲಂಚದ ಆರೋಪ ಎದುರಿಸ್ತಾ ಇದ್ದ ಸರೋಜ್ ಎಂಬಾತ ಅವರನ್ನು ಹತ್ಯೆ ಮಾಡಿದ್ದ. ಮಾಧವಪುರದಲ್ಲಿ ಕ್ರಿಮಿನಲ್ ಗಳ ಹಾವಳಿ ಹೆಚ್ಚಿದೆ ಅಂತಾ ಹೇಳಿ ಸಿಂಗ್​ರನ್ನು ಅಲ್ಲಿಗೆ ಕರೆಸಿಕೊಂಡಿದ್ದ. ಕ್ರಿಮಿನಲ್​ಗಳಾದ ರಾಮ್ ಭುಲಾವನ್ ಮತ್ತು ಅರ್ಜುನ್ ಪಸಿ ಅಲ್ಲಿ ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಇಬ್ಬರೂ ಅಧಿಕಾರಿಗಳು ಅಲ್ಲಿಗೆ ಬಂದಿದ್ರು. ಅಲ್ಲಿ ಯಾರ ಸುಳಿವೂ ಇರಲಿಲ್ಲ ಬಾಗಿಲು ತಟ್ಟಿದ ಸಿಂಗ್ ಹಿಂತಿರುಗಿ ನೋಡುವಷ್ಟರಲ್ಲಿ ಅವರ ಎದೆಗೆ ಸರೋಜ್ ಗುಂಡು ಹಾರಿಸಿದ್ದ. ಅದೇ ದಿನ ನಕಲಿ ಎನ್ಕೌಂಟರ್​ನಲ್ಲಿ ಇನ್ನೂ 12 ಗ್ರಾಮಸ್ಥರನ್ನು ಹತ್ಯೆ ಮಾಡಲಾಗಿದೆ.

ಕೋರ್ಟ್ ನಲ್ಲಿ ಹೋರಾಟ ಮುಂದುವರಿಸುತ್ತಲೇ ಕಿಂಜಲ್ ಕಷ್ಟಪಟ್ಟು ಓದಿದ್ದಾಳೆ. ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಕಿಂಜಲ್ ಗೆ ಸೀಟು ಸಿಕ್ಕಿತ್ತು. ಅಷ್ಟರಲ್ಲಾಗ್ಲೇ ಈ ಕುಟುಂಬಕ್ಕೆ ಬರಸಿಡಿಲು ಬಡಿದಿತ್ತು, ತಾಯಿ ವಿಭಾ ಕ್ಯಾನ್ಸರ್ ಪೀಡಿತೆ ಅನ್ನೋದು ಗೊತ್ತಾಗಿತ್ತು. ಕ್ಯಾನ್ಸರ್​ ಜೊತೆಗೆ ಹೋರಾಡುತ್ತಲೇ ತನ್ನ ಇಬ್ಬರು ಹೆಣ್ಣುಮಕ್ಕಳು ಐಎಎಸ್ ಅಧಿಕಾರಿಯಾಗುತ್ತಾರೆ ಎಂಬ ವಿಶ್ವಾಸದೊಂದಿಗೆ ವಿಭಾ ಕೊನೆಯುಸಿರೆಳೆದ್ರು.

''ನನ್ನ ತಂದೆ ಒಬ್ಬ ಪ್ರಾಮಾಣಿಕ ಅಧಿಕಾರಿ, ಅವರ ಬಗ್ಗೆ ನನಗೆ ಹೆಮ್ಮೆಯಿದೆ. ನನ್ನ ತಾಯಿ ಕೂಡ ಕಷ್ಟಪಟ್ಟು ಹೋರಾಟ ಮಾಡಿ ನಮ್ಮನ್ನು ಬೆಳೆಸಿದ್ದಾರೆ. ತನ್ನ ಪತಿಗಾದ ಅನ್ಯಾಯದ ವಿರುದ್ಧ ಹೋರಾಡಿದ ಗಟ್ಟಿಗಿತ್ತಿ'' ಎನ್ನುತ್ತಾಳೆ ಕಿಂಜಲ್. ಐಎಎಸ್ ಅಧಿಕಾರಿಯಾಗಬೇಕು ಎಂಬ ಕೆ.ಪಿ.ಸಿಂಗ್ ರ ಕನಸನ್ನು ಅವರ ಹೆಣ್ಣುಮಕ್ಕಳು ಈಡೇರಿಸಿದ್ದಾರೆ. ತಾಯಿಯ ನಿಧನದ ನಂತರ ಕಿಂಜಲ್ ಪದವಿಯ ಅಂತಿಮ ಪರೀಕ್ಷೆ ಬರೆದ್ಲು. ಪದವಿ ಬಳಿಕ ಸಹೋದರಿ ಪ್ರಾಂಜಲ್ ಸಿಂಗ್ ಳನ್ನು ಕೂಡ ಕಿಂಜಲ್ ದೆಹಲಿಗೆ ಕರೆತಂದ್ಲು. ಇಬ್ಬರೂ ಜೊತೆಯಾಗಿ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದ್ರು. 2007ರಲ್ಲಿ ಇಬ್ಬರೂ ಪರೀಕ್ಷೆ ಪಾಸು ಮಾಡಿದ್ದಾರೆ. ಕಿಂಜಲ್ 25ನೇ ರ್ಯಾಂಕ್ ಪಡೆದ್ರೆ, ಪ್ರಾಂಜಲ್ 252ನೇ ರ್ಯಾಂಕ್ ಪಡೆದಿದ್ದಾಳೆ.

ತಮ್ಮ ತಂದೆಯ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಅನ್ನೋದೇ ಈ ಸಹೋದರಿಯರ ಬದುಕಿನ ಗುರಿಯಾಗಿತ್ತು. ಅವರ ಶ್ರಮದ ಫಲವಾಗಿ ತಂದೆಯ ಸಾವಿಗೆ ನ್ಯಾಯ ದೊರೆತಿದೆ. 31 ವರ್ಷಗಳ ಹೋರಾಟದ ಬಳಿಕ 2013ರಲ್ಲಿ ಲಖ್ನೋ ಸಿಬಿಐ ಸ್ಪೆಷಲ್ ಕೋರ್ಟ್, ಕೆಪಿ ಸಿಂಗ್ ಹತ್ಯೆಯ ಎಲ್ಲಾ 18 ಆರೋಪಿಗಳನ್ನು ದಂಡನೆಗೆ ಗುರಿಮಾಡಿದೆ.

''ನನ್ನ ತಂದೆ ಹತ್ಯೆಯಾದಾಗ ನಾನಿನ್ನೂ ಎರಡೂವರೆ ತಿಂಗಳ ಪುಟ್ಟ ಮಗು. ಅವರ ಸಾವಿಗೆ ನ್ಯಾಯ ದೊರಕಿಸಲು ನನ್ನ ತಾಯಿ ಪಟ್ಟ ಶ್ರಮ ಇನ್ನೂ ನೆಪಿದೆ. 2004ರಲ್ಲಿ ಅವರೂ ಕ್ಯಾನ್ಸರ್ ಗೆ ಬಲಿಯಾಗಬೇಕಾಯ್ತು. ಈಗಲೂ ಅವರ ಆತ್ಮ ನಮ್ಮೊಂದಿಗೆ, ನಮ್ಮನ್ನು ನೋಡಿ ಅಮ್ಮ ಖುಷಿಪಡುತ್ತಿದ್ದಾರೆ'' ಎನ್ನುತ್ತಾರೆ ಕಿಂಜಲ್.

ಪ್ರಾಮಾಣಿಕ ಐಎಎಸ್ ಅಧಿಕಾರಿ ಕಿಂಜಲ್ ಸಿಂಗ್ ಅವರ ಹೋರಾಟ ನಿಜಕ್ಕೂ ಮಾದರಿಯಾಗುವಂಥದ್ದು. ಅವರ ಬದುಕು ಇತರರಿಗೆ ಪ್ರೇರಣೆ. 

ಇದನ್ನೂ ಓದಿ.. 

ಕನ್ನಡ ಶಾಲೆಗಳಿಗೆ "ಶ್ರೀನಿವಾಸ"ಕೃಪೆ..!

ರಂಗಭೂಮಿಯಲ್ಲಿ ಪ್ರಯೋಗದ ಕಿಕ್​​- "ವಿ ಮೂವ್"​ನಿಂದ ಹೊಸತನದ ಟಚ್​

Add to
Shares
0
Comments
Share This
Add to
Shares
0
Comments
Share
Report an issue
Authors

Related Tags