ನೀವೆಲ್ಲೋ.. ಅವರೆಲ್ಲೋ..! ಆದ್ರೆ ಇಬ್ಬರ ನಡುವೆ ಗ್ಯಾಪ್ ಅನ್ನೋದೇ ಇಲ್ಲ..!
ರವಿ
ಕರ್ನಾಟಕ ಅವಿಷ್ಕಾರಗಳ ತವರು. ಯಾವಾಗಾಲು ಏನಾದ್ರು ಹೊಸತನ್ನು ಮಾಡಬೇಕು ಎಂಬ ತವಕ ಎಲ್ಲರಲ್ಲಿಯೂ ಇರುತ್ತೇ. ಅನೇಕರು ಕೂಡ ಇಂತಹ ಅವಿಷ್ಕಾರದಿಂದಲೇ ಇಂದು ಇಂದು ಕರ್ನಾಟಕ ವಿಶ್ವಮಟ್ಟದಲ್ಲಿ ಎಲ್ಲರ ಗಮನಸೆಳೆಯುವಲ್ಲಿ ಸಫಲವಾಗಿದೆ. ಇಂತಹ ಮತ್ತೊಂದು ಸಾಧನೆಯನ್ನು ಮಾಡುವ ಹರ್ಷ ಕಿಕ್ಕೇರಿ ಈಗ ವಿಶ್ವದ ಗಮನಸೆಳೆದಿದ್ದಾರೆ.
ಯಾವುದೇ ಒಂದು ಸಿನಿಮಾ ಆರಂಭವಾಗುವ ಮೊದಲು ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರ, ಸನ್ನಿವೇಶಗಳು ಕೇವಲ ಸಾಂಧರ್ಭಿಕ ಮತ್ತು ಕಾಲ್ಪನಿಕ ಎಂಬ ಎಂಬ ಒಂದು ಹಿನ್ನಲೆ ಧ್ವನಿ ಬರುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಯಂತ್ರ ನಿಮ್ಮನ್ನು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯುತ್ತದೆ. ಮಕ್ಕಳು ಎಲ್ಲೋ ಇರ್ತಾರೆ.. ಪೋಷಕರು ಎಲ್ಲೋ ಇರ್ತಾರೆ.. ಮುಖಾಮುಖಿ ಭೇಟಿಯಾಗೋದೇ ಅಪರೂಪದಲ್ಲಿ ಅಪರೂಪ. ಆದ್ರೆ ಇಂಥ ಸಮಸ್ಯೆಯನ್ನು ತೊಡೆದುಹಾಕಲು ಇಲ್ಲೊಂದು ಯಂತ್ರ ಬಂದಿದೆ. ಅದು ನಿಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯುತ್ತೆ..
ನನಸಾಯ್ತು ಕನಸು...ಬ್ಲಾಗ್‍ನಿಂದ ಬ್ಯುಸಿನೆಸ್‍ವರೆಗೆ..!
ಕ್ಷಣಮಾತ್ರದಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ಯಂತ್ರವೇ ಬೀಮ್ ಪ್ರೊ ರೋಬೋ. ಇದೊಂದು ರೋಬಾಟಿಕ್ ಕ್ಷೇತ್ರದ ಹೊಸ ಆವಿಷ್ಕಾರ. ಅಮೆರಿಕದ ಸೂಟಬಲ್ ಟೆಕ್ನಾಲಜೀಸ್ ಇದರ ತಯಾರಕ ಸಂಸ್ಥೆ. ಈ ಕಂಪೆನಿಯ ರೀಸರ್ಚ್ ಅಂಡ್ ಡೆವೆಲಪ್ಮೆಂಟ್ ವಿಭಾಗದ ನಿರ್ದೇಶಕ ಕನ್ನಡಿಗ ಹರ್ಷ ಕಿಕ್ಕೇರಿ. ಇವ್ರು ಕಿಕ್ಕೇರಿಯವರು. ಮೊನ್ನೆ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಈ ಯಂತ್ರವನ್ನು ಮೊದಲು ಪರಿಚಯಿಸಿ ಪ್ರದರ್ಶನಕ್ಕಿಟ್ಟಿದ್ರು. ಇನ್ನೊಂದು ವಿಶೇಷ ಅಂದ್ರೆ ಬೀಮ್ ಪ್ರೊ ರೋಬೋಟ್ ಬಳಸ್ತಿರುವ ಬೆಂಗಳೂರಿನ ಮೊದಲ ಮನೆ ಎಂಬ ಹೆಗ್ಗಳಿಕೆಗೆ ಕಿಕ್ಕೇರಿಯವರ ಮಾವ ರಾಮ್ಕುಮಾರ್ರ ಮನೆ ಪಾತ್ರವಾಗಿದೆ. ಬೆಂಗಳೂರಿನ ತಮ್ಮ ಮನೆಯಲ್ಲೇ ಕೂತು ಅಳಿಯ-ಮಗಳು ಹಾಗೂ ಮೊಮ್ಮಕ್ಕಳ ಕುಶಲೋಪರಿ ವಿಚಾರಿಸಿಕೊಳ್ತಾರಂತೆ.
"ನನ್ನ ಮನೆಯಲ್ಲಿಯೇ ಕುಳಿತು ನನ್ನ ಅಳಿಯ ಹಾಗೂ ಮಗಳೊಂದಿಗೆ ಫೇಸ್ ಟು ಫೇಸ್ ಮಾತನಾಡುತ್ತೇನೆ. ಅವರು ನಮ್ಮಿಂದ ದೂರಯಿದ್ದರು ನನ್ನ ಹತ್ತಿರವೇ ಇದ್ದಾರೆನೋ ಎಂಬ ಅನುಭವ ನನಗಾಗುತ್ತದೆ. ಅಷ್ಟು ಪ್ರಯೋಜನಕಾರಿ ಈ ಯಂತ್ರ. ಸರಿಯಾದ ಸಮಯಕ್ಕೆ ನಮ್ಮಗೆ ಬೇಕಾದವರ ಕುಶಲೋಪರಿ ವಿಚಾರಿಸುವ ಅದ್ಭುತ ಶಕ್ತಿ ಈ ರೋಬೋಗಿದೆ ಅಂತಾರೆ. ಬೀಮ್ ಪ್ರೊ ಬಳಕೆದಾರರಾ ರಾಮ್ಕುಮಾರ್’.
ಇದರಲ್ಲಿರುವ ಗಾಲಿಗಳು, ಸೆನ್ಸಾರ್ ಸಿಸ್ಟಂ ಹಾಗೂ ಎರಡು ಕ್ಯಾಮೆರಾಗಳು ನಿಮಗೆ ಕೂತಲ್ಲಿಂದಲೇ ಜಗತ್ತು ತೋರಿಸುತ್ತವೆ. ಕೈಕಾಲು ಸ್ವಾಧೀನ ಇಲ್ಲದವರ ಪಾಲಿಗೆ ಬೀಮ್ ಪ್ರೊ ಆಶಾಕಿರಣ ಅಂತಾರೆ ಹರ್ಷ". ವಿಶೇಷ ಅಂದ್ರೆ ಅಮೆರಿಕದಿದಂಲೇ ಬೀಮ್ ಪ್ರೊ ಹೇಗೆ ಕಾರ್ಯನಿರ್ವಹಿಸುತ್ತದೆಂದು ವಿವರಿಸಿದ್ದಾರೆ. ನಿಜಕ್ಕೂ ಇದೊಂದು ಅದ್ಭುತ ಯಂತ್ರವಾಗಿದ್ದು, ಭವಿಷ್ಯದಲ್ಲಿ ಹೆಚ್ಚು ಬಳಕೆಯಾಗಲಿದೆ. ಜಾಗತೀಕರಣದ ಈ ಕಾಲಕ್ಕೆ ಈ ರೋಬೋ ಅವಶ್ಯಕತೆಯಿದ್ದು, ಹೆಚ್ಚು ಮಹತ್ವದ ಯಂತ್ರ ಇದಾಗಿದೆ.
ಈ ಯಂತ್ರವನ್ನು 2011 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ತಯಾರಿಸಲಾಯ್ತು. ಈ ಯಂತ್ರದ ಬೆಲೆ 19,990 ಡಾಲರ್ ಅಂದ್ರೆ ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂಪಾಯಿ. ದರ ಕೊಂಚ ಹೆಚ್ಚಾದ್ರೂ ಇದೊಂದು ಬಹುಪಯೋಗಿ ಯಂತ್ರ. ಹಾಗಾಗಿ ಈ ಯಂತ್ರ ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ತನ್ನದೆಯಾದ ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.
1. ತಮ್ಮನ ಸ್ಥಿತಿ ಕಂಡು ಮರುಗಿದ ಅಕ್ಕಂದಿರಿಂದ ವಿಶೇಷ ಮಕ್ಕಳಿಗಾಗಿ ಆರಂಭವಾಯಿತು ಐ ಸಪೋರ್ಟ್ ಫೌಂಡೇಶನ್