ಸಿರಿಯಾದಲ್ಲಿ ಐಸಿಸ್ ದಮನಕ್ಕೆ ಸಜ್ಜಾದ ದಾಂಡಿಗ
ಟೀಮ್ ವೈ.ಎಸ್.ಕನ್ನಡ
ಇವರ ನಿಜವಾದ ಹೆಸರು ಸಾಜದ್ ಗರೀಬಿ. ಆದ್ರೆ ಇರಾನಿನ ದಾಂಡಿಗ ಎಂದೇ ಪ್ರಸಿದ್ಧಿ. 24ರ ಹರೆಯದ ಈ ಯುವಕ ಅದ್ಭುತ ವೇಯ್ಟ್ ಲಿಫ್ಟರ್. ಈತನ ತೂಕ ಎಷ್ಟು ಗೊತ್ತಾ? ಬರೋಬ್ಬರಿ 330 ಪೌಂಡ್. 386 ಪೌಂಡ್ಗೂ ಅಧಿಕ ಭಾರ ಎತ್ತಬಲ್ಲ ಸಾಮರ್ಥ್ಯ ಸಾಜದ್ ಗರೀಬಿಗಿದೆ. ಇದೀಗ ಈ ಯುವಕ ಐಸಿಸ್ ರಕ್ಕಸರ ಹೆಡೆಮುರಿ ಕಟ್ಟಲು ಸಿದ್ಧತೆ ಮಾಡಿಕೊಳ್ತಿದ್ದಾನೆ. ಸಿರಿಯಾದಲ್ಲಿ ರಕ್ತದ ಕೋಡಿ ಹರಿಸುತ್ತಿರುವ ಐಎಸ್ಐಎಸ್ ಉಗ್ರರ ವಿರುದ್ಧ ಹೋರಾಡಲು ಸಜ್ಜಾಗಿರುವ ಸಾಜದ್ ಗರೀಬಿ, ಇರಾನ್ ಸೇನೆಗೆ ಸೇರ್ಪಡೆಯಾಗುತ್ತಿರುವುದಾಗಿ ಬಿಬಿಸಿ ವಾಹಿನಿ ವರದಿ ಮಾಡಿದೆ. ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಶಿಯಾ ಮುಸಲ್ಮಾನರ ವಿರುದ್ಧ ಬಂಡೆದಿದ್ದಾರೆ. ಶಿಯಾ ಮುಸ್ಲಿಂರಿಗೆ ಬೆಂಬಲ ಸೂಚಿಸಿರುವ ಸಾಜದ್ ಗರೀಬಿ, ಉಗ್ರರ ವಿರುದ್ಧ ಹೋರಾಡುವುದಾಗಿ ಘೋಷಿಸಿದ್ದಾರೆ.
ದೃಢಕಾಯನಾಗಿರುವ ಸಾಜದ್ ಘಟಾನುಘಟಿಗಳ ಹೆಡೆಮುರಿ ಕಟ್ಟಬಲ್ಲ ಶಕ್ತಿವಂತ. ಅವರ ಮಾಂಸಖಂಡಗಳ ತೂಕ 24 ಕಲ್ಲುಗಳಿಗೆ ಸರಿಸಮನಾಗಿದೆ. ಮುಖದಲ್ಲಿ ತೀವ್ರ ಭಾವನೆಗಳುಳ್ಳ ಅಸುರ ವ್ಯಕ್ತಿ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಸಾಜದ್ ಗರೀಬಿಗೆ 59,000 ಮಂದಿ ಪಾಲೋವರ್ಸ್ ಇದ್ದಾರೆ. ಭಾರ ಎತ್ತುವ ಸ್ಪರ್ಧೆಗಳಲ್ಲಿನ ತಮ್ಮ ಅತ್ಯುತ್ತಮ ಪ್ರದರ್ಶನದ ಚಿತ್ರಗಳನ್ನೆಲ್ಲ ಸಾಜದ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದ್ರೆ ಸಾಜದ್ ಕಟ್ಟುಮಸ್ತಾದ ದೇಹ ಬೆಳೆಸಲು ಯಾವ ರೀತಿಯ ಆಹಾರ ಸೇವಿಸ್ತಾರೆ, ಯಾವ ಬಗೆಯ ದೈಹಿಕ ಕಸರತ್ತು ಮಾಡ್ತಾರೆ ಎಂಬ ಬಗ್ಗೆ ಅಲ್ಲಿ ಹೆಚ್ಚಿನ ವಿವರಗಳಿಲ್ಲ. ಅದರ ಬದಲಾಗಿ ಆಡಂಬರವಿಲ್ಲದ ಅವರ ಸರಳ ಬದುಕಿನ ಫೋಟೋಗಳಿವೆ.
ತಮ್ಮ ಭಾರೀ ಗಾತ್ರದ ದೇಹ ಮತ್ತು ಬಲವಾದ ಮಾಂಸಖಂಡಗಳಿಂದಾಗಿಯೇ ಸಾಜದ್ ಗರೀಬಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರನ್ನು ಅಭಿಮಾನಿಗಳು ಹರ್ಕ್ಯುಲಸ್ ಅಂತಾನೂ ಕರೆಯುತ್ತಾರೆ. ಪವರ್ ಲಿಫ್ಟಿಂಗ್ ವಿಭಾಗದ ಸ್ಪರ್ಧೆಗಳಲ್ಲಿ ಸಾಜದ್ ಭಾಗವಹಿಸುತ್ತಾರೆ. ಅಷ್ಟೇ ಅಲ್ಲ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ತಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದಂತೆ ಈ ಪರ್ಷಿಯನ್ ಹರ್ಕ್ಯುಲಸ್ ಹೊಸ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಸಾಜದ್ ಗರೀಬಿ ಅವರ ಭಾರೀ ಗಾತ್ರದ ದೇಹದ ಬಗ್ಗೆ ಚರ್ಚೆಯಾಗ್ತಾ ಇದೆ. ಅವರೊಬ್ಬ ಪರ್ಷಿಯಾದ ಶಕ್ತಿಮಾನ್ ಅನ್ನೋದ್ರಲ್ಲಿ ಅನುಮಾನವಿಲ್ಲ.
ಬಿಡುವಿನ ಸಮಯದಲ್ಲಿ ತಬ್ಬ ಭಾರೀ ದೇಹದ ಬಗೆ ಬಗೆಯ ಫೋಟೋಗಳನ್ನು ತೆಗೆದುಕೊಳ್ಳುವುದು ಸಾಜದ್ ಅವರ ನೆಚ್ಚಿನ ಹವ್ಯಾಸಗಳಲ್ಲೊಂದು. ಎಲ್ಲರಿಗಿಂತ ನಾಲ್ಕು ಪಟ್ಟು ದೊಡ್ಡದಾಗಿ ಕಾಣಿಸುವುದರಿಂದ ಸಾಜದ್ ಅವರ ಬಗ್ಗೆ ಯುವಕರಿಗೆ ಕ್ರೇಝ್ ಹೆಚ್ಚಿದೆ. ಅವರಂತೆ ದೇಹಸಿರಿ ಬೆಳೆಸಿಕೊಳ್ಳಬೇಕೆಂಬ ಆಸೆಯಿದೆ. ಒಟ್ಟಿನಲ್ಲಿ ಸಾಜದ್ ಅವರ ಶಕ್ತಿ ಉಗ್ರರ ದಮನಕ್ಕೂ ಬಳಕೆಯಾಗುತ್ತಿರುವುದು ಸಂತಸದ ಸಂಗತಿ.
ಇದನ್ನೂ ಓದಿ..
ಸವಿ ನೆನಪುಗಳಿಗೆ ಪುಸ್ತಕ ರೂಪ ನೀಡುವ ಆನ್ಲೈನ್ ಸೇವೆ..!
ಪೆಟ್ರೋಲ್, ಡಿಸೇಲ್ ಬಳಕೆಗೆ ಬೈಬೈ- ಬಯೋ ಡಿಸೇಲ್ಗೆ ಹಾಯ್ ಹಾಯ್..!