Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಬೆಂಗಳೂರಿನ ಗೃಹಿಣಿಯರು ವಾಣಿ ಮೂರ್ತಿಯವರಂತೆ ಯೋಚಿಸಿ...

ವಿಶ್ವಾಸ್​ ಭಾರಾಧ್ವಾಜ್​​

ಬೆಂಗಳೂರಿನ ಗೃಹಿಣಿಯರು ವಾಣಿ ಮೂರ್ತಿಯವರಂತೆ ಯೋಚಿಸಿ...

Sunday March 06, 2016 , 2 min Read

‘ಊಟ ಫ್ರಮ್ ದಿ ತೋಟ’ ಅಥವಾ ‘ಊಟ ಫ್ರಮ್ ದಿ ಕಸ’.. ಈ ವಿಚಿತ್ರ ಕ್ಯಾಪ್ಷನ್ ನೋಡಿ ನೀವು ಅಚ್ಚರಿಗೊಳ್ಳೋದು ಸಹಜವೇ.. ತೋಟದಿಂದ ಊಟ ಗಳಿಸಿಕೊಳ್ಳಬಹುದು ಆದರೆ ಕಸದಿಂದ ಊಟ ಸಿಗಲು ಹೇಗೆಸಾಧ್ಯ ಅಂತ ನೀವು ಶಾಕ್ ಪಡುತ್ತಿದ್ದೀರಾ? ನಿಮ್ಮ ಅಚ್ಚರಿಗೆ ಕಾರಣ ಇಲ್ಲಿದೆ. ಕಸದಿಂದ ಹೇಗೆ ಊಟ ಸಿಗುತ್ತೆ ಅನ್ನೋ ನಿಮ್ಮ ಕನ್‍ಫ್ಯೂಷನ್ ಅನ್ನು ದೂರ ಮಾಡುತ್ತಾರೆ ವಾಣಿ ಮೂರ್ತಿ. ಕಳೆದ ಕೆಲವು ವರ್ಷಗಳಿಂದ ವಾಣಿ ಮೂರ್ತಿಯವರು ನಿರಂತರವಾಗಿ ಚಿಂತಿಸಿ ತಮ್ಮ ವಿಭಿನ್ನ ಆಲೋಚನೆಗೆ ಅಂತಿಮ ಫಿನಿಶಿಂಗ್ ನೀಡಿದ್ದಾರೆ. ಅಷ್ಟೇ ಅಲ್ಲ ಅವರ ಈ ಆಲೋಚನೆ ಸಮಾಜಮುಖಿಯಾಗುವ ಜೊತೆ ಸಾಕಷ್ಟು ಆರ್ಥಿಕ ಲಾಭವನ್ನು ತಂದುಕೊಡುತ್ತಿದೆ.

image


ಉದ್ಯಾನನಗರಿ ಬೆಂಗಳೂರಿನ ಪಕ್ಕಾ ಸಾಂಪ್ರದಾಯಿಕ ಏರಿಯಾ ಮಲ್ಲೇಶ್ವರದಲ್ಲಿರುವ ಗೃಹಿಣಿ ವಾಣಿ ಮೂರ್ತಿ.. ಅನುಪಯುಕ್ತ ಕಸದಿಂದ ಗೊಬ್ಬರ ತಯಾರಿಸಿ ಮನೆಯ ಒಳಗೆ ಹಾಗೂ ಹೊರಗೆ ಸಣ್ಣ ತೋಟ ನಿರ್ಮಿಸಿಕೊಂಡಿದ್ದಾರೆ ವಾಣಿ. ಅವರು ಇಲ್ಲಿ ಬೆಳೆಯೋ ತರಕಾರಿ-ಹಣ್ಣುಗಳನ್ನೇ ತಮ್ಮ ಮನೆಯ ಬಳಕೆಗೆ ಬಳಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಹೊರಗೆ ಮಾರುಕಟ್ಟೆಯಿಂದ ಯಾವುದೇ ಭಗೆಯ ಸೊಪ್ಪು ತರಕಾರಿಗಳನ್ನು ಇವರು ಖರೀದಿಸುದಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಮಾಡುವ ಬದಲು ಅದೇತ್ಯಾಜ್ಯವನ್ನು ಸಂಸ್ಕರಿಸಿ ಸಾವಯವ ಗೊಬ್ಬರ ತಯಾರಿಸಬಹುದು ಅನ್ನುವುದು ವಾಣಿಯವರ ಯಶಸ್ವಿ ಪ್ರಯೋಗ.

ಇದನ್ನು ಓದಿ: ಏನನ್ನೂ ಮಾಡದೇ ಒಂದೇ ದಿನದಲ್ಲಿ 6 ಕೋಟಿ ಗಳಿಸೋದು ಹೇಗೆ?

ಅವರ ಸಣ್ಣ ತೋಟದಲ್ಲಿ ಸುತ್ತಲೂ ಬಗೆಬಗೆಯ ತರಕಾರಿಗಳು ಹಾಗೂ ವಿವಿಧ ಹಣ್ಣಿನ ಗಿಡಗಳಿವೆ. ಹಾಗಂತ ಇದ್ಯಾವುದೋ ಪ್ರತ್ಯೇಕ ಸ್ಥಳವೂ ಅಲ್ಲ. ಅನುಪಯುಕ್ತ ಕಸ ಎಂದು ಹೊರಗೆಸೆಯುವ ಕೊಳೆಯುವ ತ್ಯಾಜ್ಯದ ಗೊಬ್ಬರವೇ ಈ ಬೆಳೆಗಳ ಸಮೃದ್ಧತೆಯ ಮಾನದಂಡ.

ತಾವೇ ಖುದ್ದಾಗಿ ತಾಜಾ ತರಕಾರಿಗಳನ್ನ ಬೆಳೆಯುವ ಮೂಲಕ ಸಮಾಜದ ಕ್ರಿಯಾಶೀಲ ಗೃಹಿಣಿಯರಿಗೆ ವಾಣಿ ಮೂರ್ತಿ ಮಾದರಿಯಾಗಿದ್ದಾರೆ. ಜೊತೆಗೆ ಈ ಕುರಿತಾಗಿ ಎಲ್ಲೆಡೆ ಜಾಗೃತಿ ಮೂಡಿಸಬೇಕು ಅನ್ನುವ ಕಾರಣದಿಂದ “ಸಾಲಿಡ್ ವೇಸ್ಟ್ ಮ್ಯಾನೇಜ್‍ಮೆಂಟ್ ರೌಂಡ್ ಟೇಬಲ್” ಅನ್ನೋ ಸಂಸ್ಥೆಯನ್ನು ಹುಟ್ಟುಹಾಕಿ ಜಾಗೃತಿ ಹಾಗೂ ವೃತ್ತಿಪರತೆ ಮೆರೆಯುತ್ತಿದ್ದಾರೆ.

ವಾಣಿಮೂರ್ತಿಯವ್ರ ಅಪರೂಪದ ಈ ಕಾರ್ಯಕ್ಕೆ 2015ರಲ್ಲಿ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರೇ ಹೇಳುವಂತೆ ಈವರೆಗೆ ಮನೆಯಲ್ಲಿನ ಯಾವುದೇ ಕಸವನ್ನ ಅವರು ಹೊರಗೆ ಎಸೆದವರಲ್ಲವಂತೆ. ಮರದಿಂದ ಉದುರೋ ಒಂದೇ ಒಂದು ಎಲೆಯನ್ನೂ ಒಂದು ರೂಪಾಯಿ ನಾಣ್ಯದಂತೆ ಹೆಕ್ಕಿ ಅದರಲ್ಲಿ ಗೊಬ್ಬರ ತಯಾರಿಸುತ್ತಾರಂತೆÉ. ಕೈತೋಟ ನಿರ್ವಹಣೆ, ಟೆರೇಸ್ ಗಾರ್ಡನಿಂಗ್ ಮುಂತಾದ ಸೃಜಾನತ್ಮಕ ಕಾರ್ಯಗಳ ಕುರಿತು ಜಾಗೃತಿ ಮೂಡಿಸಲು ನಿರಂತರವಾಗಿ ಇವರ ಸಂಸ್ಥೆ ಹತ್ತು ಹಲವು ಕಾರ್ಯಗಾರಗಳನ್ನ ಹಮ್ಮಿಕೊಳ್ಳುತ್ತಿದೆ.

image


ಕಸದಿಂದ ರಸ ತಯಾರಿಕೆ ಸಾಧ್ಯ ಅನ್ನೋದನ್ನ ವಾಣಿಮೂರ್ತಿ ನಿಜವಾಗಿಸಿದ್ದಾರೆ. ಪ್ರತಿ ಮನೆಯಲ್ಲೂ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಕೆಲ್ಸ ನಡೆದರೆ ಬೆಂಗಳೂರಿನ ಅತಿ ದೊಡ್ಡ ಸಮಸ್ಯೆಯಾದ ಗಾರ್ಬೆಜ್ ಕ್ರೈಸಿಸ್ ಸಂಪೂರ್ಣ ಇಲ್ಲವಾಗುತ್ತದೆ ಅನ್ನೋದು ವಾಣಿ ಮೂರ್ತಿಯವರ ಸ್ಪಷ್ಟ ಅಭಿಪ್ರಾಯ.

ದಿನನಿತ್ಯದ ಕೆಲಸ ಕಾರ್ಯದ ಮಧ್ಯೆ ಬಿಡುವು ಮಾಡಿಕೊಂಡು ಹೀಗೊಂದು ಪ್ರಯತ್ನವನ್ನು ಪ್ರತಿಯೊಬ್ಬ ಗೃಹಿಣಿಯೂ ತಮ್ಮ ತಮ್ಮ ಮನೆಯಲ್ಲಿ ಮಾಡಬಹುದು ಅನ್ನುವುದನ್ನು ಸ್ವತಃ ಸಾಧಿಸಿ ತೋರಿಸಿದ್ದಾರೆ ವೀಣಾ ಮೂರ್ತಿ. ಅನುಪಯುಕ್ತ ತ್ಯಾಜ್ಯವನ್ನು ಹೊರಗೆಸೆದು ನಗರದ ಮಾಲಿನ್ಯಕ್ಕೆ ಕಾರಣವಾಗುವ ಬದಲು, ಮನೆಗಳಲ್ಲೇ ಅಚ್ಚುಕಟ್ಟಾಗಿ ಕೃಷಿ ಮಾಡಬಹುದು. ಇದರಿಂದ ಸಮಾಜದ ಆರೋಗ್ಯ ಕಾಪಾಡಿದಂತಾಗುತ್ತದೆ ಹಾಗೂ ಮನೆಯ ಆಯವ್ಯಯಗಳಲ್ಲೂ ಸುಧಾರಣೆ ತಂದು ಆರ್ಥಿಕ ಕ್ರಾಂತಿ ಮಾಡಬಹುದು ಅನ್ನುವುದು ವಾಣಿ ಮೂರ್ತಿಯವರ ಅಭಿಪ್ರಾಯ.

ಇದನ್ನು ಓದಿ

1. ಕನ್ನಡಕ್ಕೊಬ್ಬರೇ ಲೇಡಿ ಕೊರಿಯೋಗ್ರಾಫರ್..!

2. ಜಪಮಾಲೆಗೆ ಫ್ಯಾಷನ್ ಟಚ್ –ಕಾಶಿ ಗ್ರಾಮಗಳಲ್ಲಿ ಮೋದಿ ಸ್ಟಾರ್ಟ್ ಅಪ್ ಇಂಡಿಯಾ ಕನಸು ನನಸು

3. ಒನ್ ಡೇ ರೆಸ್ಟೋರೆಂಟ್‍ನಲ್ಲಿ ವಿಕೆಂಡ್ ಮಸ್ತಿ