ಕನ್ನಡಕ್ಕೊಬ್ಬರೇ ಲೇಡಿ ಕೊರಿಯೋಗ್ರಾಫರ್..!
ಆರಭಿ ಭಟ್ಟಾಚಾರ್ಯ
ಕೆಲವರು ಹೆಸರು ಗಳಿಸೋದಕ್ಕಾಗಿ ಕೆಲಸ ಮಾಡ್ತಾರೆ. ಇನ್ನು ಕೆಲವರು ಸದಾ ಎಲೆಮರೆಕಾಯಿಯಂತಿದ್ದು, ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇದ್ದು ಬಿಡ್ತಾರೆ. ಮೇಲ್ನೋಟಕ್ಕೆ ಸಾಧಾರಣವಾಗಿದ್ರು, ಅವರುಗಳು ಮಾಡಿರೋ ಸಾಧನೆ ಮಾತ್ರ ಹೇಳತೀರದು. ಇಂತಹ ಸಾಲಿಗೆ ನಿಲ್ಲೋ ದಿಟ್ಟ ಹೆಣ್ಣುಮಗಳು ಮದನ್ ಹರಿಣಿ .
ಇದನ್ನು ಓದಿ: ''ಶಕ್ತಿ - ವುಮೆನ್ ಸ್ಟಾರ್ಟ್ಅಪ್ ಇಂಡಿಯಾ'' - ಮಹಿಳೆಯರ ಯಶಸ್ಸಿನ ಸಂಭ್ರಮಾಚರಣೆ
ಮದನ್ ಅಂದ್ರೆ ಹರಿಣಿ. ಹರಿಣಿ ಅಂದ್ರೆ ಮದನ್. ಇವ್ರಿಬ್ರ ಹೆಸರು ಬಾಳ ಬದುಕಿನ ಬಂಡಿ ಎಳೆಯೋದ್ರಲ್ಲಿ ಮಾತ್ರವಲ್ಲದೆ ಸಾಧನೆಯ ಹಾದಿಯಲ್ಲೂ ಜೊತೆ ಜೊತೆಯಾಗಿಯೇ ಬೆಸೆದುಕೊಂಡಿದೆ. 28 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲುತ್ತಿರೋ ಹರಿಣಿ ಕನ್ನಡ ಸಿನಿಮಾರಂಗದಲ್ಲಿ ಅತ್ಯದ್ಬುತ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಮದುವೆ ನಂತ್ರ ತನ್ನ ಕೆಲಸವನ್ನ ಶುರು ಮಾಡಿದ ಹರಿಣಿ ಸ್ಯಾಂಡಲ್ವುಡ್ನಲ್ಲಿ ಏಕೈಕ ಲೇಡಿ ಕೋರಿಯೋಗ್ರಾಪರ್.
ವಿಷ್ಣುಗೂ ಹೆಜ್ಜೆ ಹಾಕಿಸಿದ ಹರಿಣಿ..!
ಚಿಕ್ಕ ಪುಟ್ಟವ್ರಿಂದ ಹಿಡಿದು ವಿಷ್ಣುವರ್ಧನ್ ವರೆಗೂ ಆ್ಯಕ್ಷನ್ ಕಟ್ ಹೇಳಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿಸಿರೋ ನೃತ್ಯ ನಿರ್ದೇಶಕಿ ಇವ್ರು. ವಿಷ್ಣು ಕೈನಲ್ಲಿ ಗರನೆಗರನೇಅಂತ ಹೇಳಿಸಿದ್ದು ಇವ್ರೇ. ಅಷ್ಟೇ ಅಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಯಲ್ಲಿ ಮಿಂಚಾಗಿ ನೀನು ಬರಲು ಅಂತ ಪ್ರೇಕ್ಷಕರನ್ನ ಬೇರೆಯದ್ದೇ ಲೋಕಕ್ಕೆ ಕರೆದೊಯ್ದದ್ದು ಇವ್ರೇ. ಹಳೆಯ ಹಾಡುಗಳು ಅಂತ ಅಂದ ತಕ್ಷಣ ಹಿಟ್ ಲೀಸ್ಟ್ ನಲ್ಲಿ ಮೊದಲಿಗೆ ನಿಲ್ಲೋ ನೂರುಜನ್ಮಕೂ ನೂರಾರುಜನ್ಮಕೂ ಅಂತ ಎಲ್ಲರ ಮನಸ್ಸಿನಲ್ಲಿ ಸದಾ ಗುನುಗೋ ಹಾಡಿಗೆ ಹೆಜ್ಜೆ ಹಾಕಿಸಿದ ಹೆಮ್ಮೆ ಹರಿಣಿಯವ್ರದ್ದು….
ಹೆಚ್ಚು ಡ್ಯಾನ್ಸರ್ ಬಳಸಿದ ಮೊದಲಿಗರು ಹರಿಣಿ..!
ಅಮೆರಿಕಾ ಅಮೆರಿಕಾ ಸಿನಿಮಾದ ನೂರುಜನ್ಮಕೂ ಹಾಡಿನಲ್ಲಿ ಆ ಕಾಲದಲ್ಲಿಅತೀ ಹೆಚ್ಚು ಡ್ಯಾನ್ಸರ್ ಅನ್ನ ಬಳಸಿ ನೃತ್ಯ ನಿರ್ದೇಶನ ಮಾಡಿದ ಹೆಗ್ಗಳಿಕೆ ಹರಿಣಿ ಅವ್ರಿಗೆ ಸಲ್ಲುತ್ತೆ. ಅಷ್ಟೇ ಅಲ್ಲದೆ ಶ್ರೀಗಂಧ ಸಿನಿಮಾದ ಶ್ರೀಗಂಧ ಶ್ರೀಗಂಧ ಹಾಡಿನಲ್ಲಿ ಕನ್ನಡದೇ 30ಕ್ಕೂ ಹೆಚ್ಚು ಡ್ಯಾನ್ಸರ್ಗಳನ್ನು ಬಳಸಿ ನೃತ್ಯ ನಿರ್ದೇಶನ ಮಾಡಿದ್ರು. ಆತ್ಮವಿಶ್ವಾಸ, ಕೆಲಸದಲ್ಲಿ ನಿಷ್ಠೆ ಇದ್ರೆ ಸಾಕು ಎಲ್ಲಿ ಬೇಕಾದ್ರು ಜಯಿಸಬಹುದು ಅನ್ನೋದು ಹರಿಣಿ ಅವ್ರ ಅಭಿಪ್ರಾಯ. ಚಿತ್ರರಂಗದಲ್ಲಿ 29 ವರ್ಷದಿಂದ ಸಕ್ಸಸ್ಫುಲ್ ಕೋರಿಯೋಗ್ರಾಫರ್ ಆಗಿ ಉಳಿದುಕೊಳ್ಳಲು ಇದೇ ಕಾರಣ ಅಂತಾರೆ.
ಪ್ರತಿ ಹಾಡಿನಲ್ಲೂ ವಿಭಿನ್ನತೆ..
ಚಿತ್ರರಂಗದಲ್ಲಿ ಮತ್ತು ಹಲವಾರು ನೃತ್ಯ ನಿರ್ದೇಶಕರ ಸಾಲಿನಲ್ಲಿ ಹರಿಣಿ ವಿಭಿನ್ನವಾಗಿ ನಿಲ್ತಾರೆ. ಕಾರಣ ಹರಿಣಿ ಮತ್ತು ಮದನ್ ಸೇರಿ ಸಂಯೋಜನೆ ಮಾಡೋ ನೃತ್ಯ ಸದಾ ವಿಭಿನ್ನವಾಗಿರುತ್ತೆ. ಸದ್ಯ 600 ಹಾಡುಗಳ ಗಡಿದಾಟಿ ಹೋಗುತ್ತಿರೋ ಇವ್ರು ಪ್ರತಿ ಹಾಡನ್ನ ನಮ್ಮ ಮೊದಲ ನೃತ್ಯ ಸಂಯೋಜನೆ ಹಾಡುಎಂದು ಪರಿಗಣನೆ ಮಾಡೋದು. ಇನ್ನೂ ವಿಶೇಷ ಅಂದ್ರೆ ಹಾಡನ್ನ ಕೊರಿಯೋಗ್ರಾಫ್ ಮಾಡೋ ಮುಂಚೆ ನಿರ್ದೇಶಕರ ಜೊತೆ ಹಾಗೂ ಸಿನಿಮಾ ತಂಡದ ಜೊತೆ ಕೂತು ಮಾತನಾಡ್ತಾರೆ. ಎಷ್ಟು ವಿಭಿನ್ನವಾಗಿ ಮಾಡಬಹುದುಅನ್ನೋದನ್ನ ನಿರ್ಧಾರ ಮಾಡಿಕೊಳ್ತಾರೆ. ಹರಿಣಿ ಕೊರಿಯೋಗ್ರಾಫ್ ಮಾಡೋ ಹಾಡಿನಲ್ಲಿ ಪ್ರಾಪರ್ಟಿಗಳು ಕೂಡ ವಿಶೇಷವಾಗಿರುತ್ತೆ. ಸಾಮಾನ್ಯ ವಸ್ತುಗಳನ್ನ ಬಿಟ್ಟು ವಿಶಿಷ್ಠ ಅನ್ನಿಸೋ ಸೆಟ್ ಹಾಗೂ ಪ್ರಾಪರ್ಟಿಗಳನ್ನ ಬಳಸಿ ಪ್ರೇಕ್ಷಕರಗಮನವನ್ನ ಸೆಳೆಯುತ್ತಾರೆ…
ಯಶಸ್ಸಿನ ಹಿಂದೆ ಇದ್ದಾರೆ ಮದನ್
ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದೇ ಇರುತ್ತಾಳೆ ಅನ್ನೋ ಮಾತಿದೆ. ಅದೇ ರೀತಿಯಲ್ಲಿ ಈ ಯಶಸ್ವಿ ಮಹಿಳೆ ಹಿಂದೆ ಮದನ್ ಎಂಬ ಸ್ನೇಹಿತ,ಪತಿ, ವೆಲ್ವಿಷರ್ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ. ಮದನ್, ಹರಿಣಿ ಅವ್ರನ್ನ ಮದುವೆ ಆದ ನಂತ್ರದ ದಿನದಿಂದ ಇಲ್ಲಿಯ ತನಕ ಸಖತ್ ಸಪೋರ್ಟಿವ್ ಆಗಿ ಬೆಂಬಲ ನೀಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಹರಿಣಿ ಅವ್ರ ತಂದೆ ತಾಯಿ ಕೂಡ ಪ್ರತಿ ಹೆಜ್ಜೆಯಲ್ಲೂ ಹಾರೈಸುತ್ತಾ ಬಂದಿದ್ದಾರೆ. ಇನ್ನೂ ಮಗಳೂ ಹಿಮಾ ಕೂಡ ಅಮ್ಮನ ಕೆಲಸಕ್ಕೆ ಸಖತ್ ಸಾಥ್ ನೀಡ್ತಾರಂತೆ…ಒಟ್ಟಿನಲ್ಲಿ ಮನೆ ಸಪೋರ್ಟ್ ಇಂಡಷ್ಟ್ರಿಯ ಬೆಂಬಲದಿಂದಾಗಿಎಂಟು ಭಾಷೆಯಲ್ಲಿ ನೃತ್ಯಸಂಯೋಜನೆ ಮಾಡಿ ಸೈ ಅನ್ನಿಸಿಕೊಂಡಿದ್ದಾರೆ ಹರಿಣಿ ಅವ್ರಇಂತಹ ಸಾಧನೆ ಮೆಚ್ಚಲೇಬೇಕಾದದ್ದು.
1. ಜಪಮಾಲೆಗೆ ಫ್ಯಾಷನ್ ಟಚ್ –ಕಾಶಿ ಗ್ರಾಮಗಳಲ್ಲಿ ಮೋದಿ ಸ್ಟಾರ್ಟ್ ಅಪ್ ಇಂಡಿಯಾ ಕನಸು ನನಸು