ಆವೃತ್ತಿಗಳು
Kannada

ಕನ್ನಡ ಪುಸ್ತಕಗಳಿಗೊಂದು ಶಾಪಿಂಗ್ ಸೈಟ್

ಕೃತಿಕಾ

KRITHIKA
13th Dec 2015
Add to
Shares
1
Comments
Share This
Add to
Shares
1
Comments
Share

ಪುಸ್ತಕಗಳಿಗಾಗಿ ಅಂಗಡಿ ಅಂಗಡಿಗಳನ್ನು ಸುತ್ತೋ ಕೆಲಸ ಈಗಿಲ್ಲ. ನಿಮಗೆ ಹಳೆಯ ಕನ್ನಡ ಪುಸ್ತಕಗಳು ಬೇಕಂದ್ರೆ ಅವೆನ್ಯೂ ರಸ್ತೆಯ ಪುಟ್ ಪಾತ್ ನಲ್ಲಿ ಹುಡುಕಬೇಕಿತ್ತು. ಆದ್ರೆ ಈಗ ಹೊಸ ಪುಸ್ತಕಗಳ ಜೊತೆಗೆ ಹಳೆಯ ಅಪರೂಪದ ಪುಸ್ತಕಗಳೂ ಕೂಡ ಆನ್ ಲೈನ್ ನಲ್ಲೇ ಸಿಗುತ್ತವೆ. a4dable.in ಎಂಬ ವೆಬ್ ಸೈಟ್ ಗೆ ಹೋದರೆ ಸಾಕು ನಿಮಗೆ ಬೇಕಾದ ಕನ್ನಡ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಬಹುದು.

image


ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಕಾರ್ಯಕರ್ತ ಸುನೀಲ್ ಎಸ್. ಪಾಟೀಲ್ ಹಾಗೂ ಬೆಂಗಳೂರಿನ ಸಚಿನ್ ಕುಡ್ತುರಕರ್ ಇಬ್ವರು ಸೇರಿ ಕನ್ನಡದ ಹಳೆಯ ಮತ್ತು ಹೊಸ ಪುಸ್ತಕ ಮಾರಾಟಕ್ಕಾಗಿ ಒಂದು ವೆಬ್ ಸೈಟ್ ರೂಪಿಸಿದ್ದಾರೆ. ಅಫೋರ್ಡಬಲ್(a4dable.in) ಎಂಬ ಹೆಸರಿನ ವೆಬ್ ಸೈಟ್ ಆರಂಭಿಸಿದ ಇಬ್ಬರು ಕನ್ನಡ ಪ್ರೇಮಿಗಳು ಈಗ ಮೊಬೈಲ್ ಮೂಲಕ ಪುಸ್ತಕ ಖರೀದಿಯ ಹೊಸ ಸೌಲಭ್ಯವನ್ನು ಸಾಧ್ಯವಾಗಿಸಿದ್ದಾರೆ. ಇಂಗ್ಲೀಷ್ ನ ಹಳೆಯ ಮತ್ತು ಹೊಸ ಪುಸ್ತಕ ಖರೀದಿ ಸಾಕಷ್ಟು ವೆಬ್ ತಾಣಗಳಿವೆ. ಕನ್ನಡದಲ್ಲೂ ಟೋಟಲ್ ಕನ್ನಡ, ಸಪ್ನ, ಅಕೃತಿ ಬುಕ್ ಹೌಸ್, ಕನ್ನಡ ಸ್ಟೋರ್, ಬುಕ್ಸ್ ಫಾರ್ ಯೂ ಅಲ್ಲದೆ ಫ್ಲಿಪ್ ಕಾರ್ಟ್, ಅಮೆಜಾನ್ ಮುಂತಾದ ಆನ್ ಲೈನ್ ಶಾಪಿಂಗ್ ಪೋರ್ಟಲ್ ಗಳು ಕನ್ನಡ ಪುಸ್ತಕಗಳನ್ನು ಆನ್ ಲೈನ್ ಮೂಲಕ ಖರೀದಿಸುವ ಸೌಲಭ್ಯ ಒದಗಿಸಿವೆ. ಆದ್ರೆ ಇವೆಲ್ಲವುಗಳಿಗಿಂತ ಅಫೋರ್ಡಬಲ್.ಇನ್ ಬಹಳ ವಿಭಿನ್ನ..

ಎಸ್ ಎಲ್ ಭೈರಪ್ಪ, ಯು ಆರ್ ಅನಂತ ಮೂರ್ತಿ, ಪೂರ್ಣ ಚಂದ್ರ ತೇಜಸ್ವಿ ಯವರ ಎಲ್ಲಾ ಪುಸ್ತಕಗಳು ಅನ್ ಲೈನ್ ಮೂಲಕ ಲಭ್ಯವಿದೆ. ಬೆಂಗಳೂರಿನವರಿಗೆ cash on delivery ಸೌಲಭ್ಯವನ್ನೂ ಒದಗಿಸಲಾಗಿದೆ. ಇನ್ನು ಹಳೆಯ ಪುಸ್ತಕಗಳ ವಿಚಾರಕ್ಕೆ ಬಂದ್ರೆ ಬಹುತೇಕ ಎಲ್ಲ ಸಾಹಿತಿಗಳ ಪುಸ್ತಕಗಳನ್ನು ನಾವು ಆನ್ ಲೈನ್ ಮೂಲಕ ಮಾರಾಟ ಮಾಡುತ್ತೇವೆ. ಹಳೆಯ ಪುಸ್ತಕಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದ್ರೆ ನಾವು ಅದನ್ನು ಸುಲಭವಾಗಿ ಓದುಗರ ಮನೆಗೆ ತಲುಪಿಸುತ್ತೇವೆ ಅಂತಾರೆ ಸುನೀಲ್ ಎಸ್ ಪಾಟೀಲ್.

image


ಪುಸ್ತಕಗಳನ್ನು ಆನ್ ಲೈನ್ ಮೂಲಕ ಖರೀದಿ ಮಾಡಿದವರಿಗೆ ಕೇವಲ 48 ಗಂಟೆಗಳಲ್ಲಿ ಅವು ನಿಮ್ಮ.ಮನೆ ಬಾಗಿಲು ತಲುಪಲಿವೆ. ಸದ್ಯ ಬೆಂಗಳೂರಿಗರಿಗೆ ಮಾತ್ರ ಕ್ಯಾಶ್ ಆನ್ ಡಿಲೆವರಿ ಸೌಲಭ್ಯವಿದೆ. ಉಳಿದ ಕಡೆಯ ಓದುಗರು ಆನ್ ಲೈನ್ ಮೂಲಕ ಹಣ ಪಾವತಿಸಿ ಪುಸ್ತಕಗಳನ್ನು ಕೊಳ್ಳಬಹುದು. ಕೇವಲ ಆನ್ ಲೈನ್ ನಲ್ಲಷ್ಟೇ ಅಲ್ಲ 08553133393 ಈ ನಂಬರ್ ಗರ ಕರೆ ಮಾಡಿ ಬೇಕಾದ ಪುಸ್ತಕ ಬುಕ್ ಮಾಡಿ ಬ್ಯಾಂಕಿಗೆ ದುಡ್ಡು ಪಾವತಿ ಮಾಡಿಯೂ ಕೂಡ ಪುಸ್ತಕಗಳನ್ನು ಮನೆ ವಾಗಿಲಿಗೆ ತರಿಸಿಕೊಳ್ಳಬಹುದು.

ಜ್ಞಾನ ಎಂಬುದು ನಿಂತ ನೀರಾಗಬಾರದು. ಅದು ನಿರಂತರವಾಗಿ ಹರಿಯಬೇಕು. ನಾವು ನಮ್ಮ ಕಾಲೇಜು ದಿನಗಳಲ್ಲಿ ಹಳೆ ಪುಸ್ತಕಗಳನ್ನು ನಮ್ಮನಮ್ಮಲ್ಲೇ ಹಂಚಿಕೊಳ್ಳುತ್ತಿದ್ದೆವು. ಜ್ಞಾನ ನಿರಂತರವಾಗಿ ಹರಿಯುವಂತಾಗಲು ಹಳೆಯ ಪುಸ್ತಕಗಳು, ಅಪರೂಪದ ಪುಸ್ತಕಗಳು ಓದುಗರಿಗೆ ಲಭ್ಯವಾಗಬೇಕು. ಕೆಲವು ಹಿರಿಯ ಸಾಹಿತಿಗಳ ಪ್ರಖ್ಯಾತ ಕೃತಿಗಳು ಮರು ಮುದ್ರಣವಾಗಿಲ್ಲ. ಅಂತಹ ಪುಸ್ತಕಗಳನ್ನು ನಾವು ಮಾರಾಟ ಮಾಡುತ್ತೇವೆ ಅಂತಾರೆ ಸಚಿನ್ ಕುಡ್ತುರಕರ್.

image


ಎಸ್ ಎಲ್ ಭೈರಪ್ಪ, ಯು ಆರ್ ಅನಂತ ಮೂರ್ತಿ, ದ.ರಾ. ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಕನ್ನಡದ ಹಲವು ದಿಗ್ಗಜ ಕವಿಗಳ ಹಳೆಯ ಮತ್ತು ಹೊಸ ಪುಸ್ತಕಗಳು ಲಭ್ಯವಿದೆ. ಇದರ ಜೊತೆಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳೂ ಅಪೋರ್ಡಬಲ್.ಇನ್ ನಲ್ಲಿ ಲಭ್ಯವಿದೆ.

ದೇಶಪಾಂಡೆ ಪ್ರತಿಷ್ಠಾನ ಹಳೆಯ ಪುಸ್ತಕಗಳನ್ನು ದೇಣಿಗೆಯ ರೂಪದಲ್ಲಿಯೂ ಸ್ವೀಕರಿಸುತ್ತದೆ. ಇದರ ಜೊತೆಗೆ ಶಿಕ್ಷಣ ಸಂಸ್ಥೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವ ಮೂಲಕ ಜ್ಞಾನ ಪಸರಿಸುವ ಅಪೂರ್ವ ಕೆಲಸ ಮಾಡುತ್ತಿದೆ.

ವೆಬ್ ಸೈಟ್- a4dable.in

Facebook page- a4dable.in

Add to
Shares
1
Comments
Share This
Add to
Shares
1
Comments
Share
Report an issue
Authors

Related Tags