ತನ್ನ ಸ್ವಂತ ಖರ್ಚಿನಲ್ಲಿ 300 ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತಿರುವ 16ರ ಯುವಕ
ಹದಿನಾರರ ಬಾಣಸಿಗ ರೋಹನ್ ಸುರೇಶ್ ಇಟ್ಟಿಗೆ ಗೂಡು ಕೆಲಸಗಾರರು, ಪಾದಚಾರಿ ನಿವಾಸಿಗಳು ಮತ್ತು ಮುಂತಾದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿರುವ ಚೆನ್ನೈನ ಸಿರಗು ಮಾಂಟೆಸ್ಸರಿ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾನಗಳಲ್ಲಿ ಮುಳುಗಿ ತಮ್ಮ ಇಡೀ ಸಮಯವನ್ನ ಅದರಲ್ಲೇ ಕಳೆಯುವ, ಅಡುಗೆ ಮನೆಯೆಂದರೆ ದೂರ ಓಡುವ ಹದಿನೈದು-ಹದಿನಾರರ ವಯಸ್ಸಿನ ಹುಡುಗ-ಹುಡುಗಿಯರ ಮಧ್ಯೆ, ಅಡುಗೆಯನ್ನು ಕಲಿತು, ಅದರ ಸಂಬಂಧಿತ ಕೋರ್ಸ್ ಪಡೆದು, ಸಮಾಜದ ಒಂದು ವರ್ಗದ ಜನರಿಗೆ ತನ್ನ ಖರ್ಚಿನಲ್ಲಿ ಅಡುಗೆ ಮಾಡಿ ಬಡಿಸುತ್ತಿದ್ದಾನೆ ಈ ತಮಿಳುನಾಡು ಮೂಲದ ಸಿಂಗಾಪುರ್ ವಾಸಿ ಯುವಕ ರೋಹನ್ ಸುರೇಶ್.
ಹದಿನಾರರ ಬಾಣಸಿಗ ರೋಹನ್ ಸುರೇಶ್, ಚೆನ್ನೈನ ಸಿರಗು ಮಾಂಟೆಸ್ಸರಿ ಶಾಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ, ಈ ಸಿರಗು ಮಾಂಟೆಸ್ಸರಿ ಶಾಲೆ 2003 ರಿಂದ ಇಟ್ಟಿಗೆ ಗೂಡು ಕೆಲಸಗಾರರು, ಪಾದಚಾರಿ ನಿವಾಸಿಗಳು ಮತ್ತು ಮುಂತಾದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಆ ಶಾಲೆಯಲ್ಲಿ ಸುಮಾರು 300 ಮಕ್ಕಳಿದ್ದು, ಅವರೆಲ್ಲರಿಗೂ ರೋಹನ್ ಅಡುಗೆ ಮಾಡಿ ಉಣಬಡಿಸಿದ್ದಾರೆ, ವರದಿ ದಿ ನ್ಯೂಸ್ ಮಿನಿಟ್.
ರೋಹನ್ ಅವರಿಗೆ ಅಡುಗೆಯಲ್ಲಿ ಆಸಕ್ತಿ ಬಂದದ್ದು, ತಮ್ಮ ಶಾಲಾ ದಿನಗಳಲ್ಲಿ ಓದುತ್ತಿದ್ದ ಆಹಾರ ಹಾಗೂ ಪೌಷ್ಟಿಕಾಂಶದ ಕುರಿತ ಜೀವಶಾಸ್ತ್ರದ ಪಠ್ಯಗಳಿಂದ ಅವರಿಗೆ ಸ್ಪೂರ್ತಿಯಾದವರು, ಗಾರ್ಡನ್ ರಾಮ್ಸೆ. ಅವರಿಗೆ ಅಡುಗೆ ತಯಾರಿಸುವ ಆಸ್ಥೆ ಎಷ್ಟಿತ್ತೆಂದರೆ, ಅವರು ತಮ್ಮದೇ ಆದ ರೆಸಿಪಿಗಳನ್ನು ತಯಾರಿಸಲು ಶುರು ಮಾಡಿದರು.
ಆಗಸ್ಟ್ 2019 ರಲ್ಲಿ ರೋಹನ್‌ಚೆಫೋಲೊಜಿ ಎಂಬ ಜಾಲತಾಣವನ್ನ ಆರಂಭಿಸಿದ ರೋಹನ್, ಅದರ ಮೂಲಕ ತಾವು ನೀಡುವ ಸೇವೆಗಳ ಕುರಿತ ಮಾಹಿತಿಯನ್ನು ಒದಗಿಸುತ್ತಿದ್ದಾರೆ. ಜನರು ಅವರನ್ನು ಸಂಪರ್ಕಿಸಿದರೆ, ಅವರ ಮನೆಗಳಿಗೆ ತೆರಳಿ ತಮ್ಮ ಪಾಕ ಪ್ರವೀಣತೆಯನ್ನು ಮನೆಯ ಸದಸ್ಯರಿಗೆ ಉಣಬಡಿಸುತ್ತಾರೆ.
ಈ ಕುರಿತು ಟಿಎನ್‌ಪಿ ಜೊತೆ ಮಾತನಾಡಿದ ರೋಹನ್,
“ಜನರು ನನ್ನ ಸೇವೆಗಳನ್ನು ಕಾಯ್ದಿರಿಸಬಹುದು. ನಾನು ಅವರ ಮನೆಗೆ ಹೋಗಿ ಅವರಿಗೆ ಮೂರು ಹೊತ್ತಿನ ಆಹಾರವನ್ನು ತಯಾರಿಸುತ್ತೇನೆ. ನಾನು ಪ್ರತಿ ವ್ಯಕ್ತಿಗೆ ಅತ್ಯಲ್ಪ ಮೊತ್ತವನ್ನು ವಿಧಿಸುತ್ತೇನೆ. ಬಜೆಟ್‌ನಲ್ಲಿ ಉಳಿಯುವುದು ನನಗೆ ಬಹಳ ಮುಖ್ಯ. ನಾನು ಪಡೆಯುವ ಮೊತ್ತದಲ್ಲಿ 70% ಹಣವನ್ನು ಆಹಾರ ಸಂಬಂಧಿತ ಕಾರಣಗಳಿಗಾಗಿ ಖರ್ಚು ಮಾಡುತ್ತಿದ್ದೇನೆ,” ಎಂದರು.
ನವೆಂಬರ್ 2019 ರಲ್ಲಿ ಅವರು 30 ಜನ ವಲಸೆ ಕಾರ್ಮಿಕರಿಗೆ ಮನೆಯಲ್ಲಿ ಊಟ ತಯಾರಿಸಿದರು, ಅವರಲ್ಲಿ ಹೆಚ್ಚಿನವರು ತಮಿಳುನಾಡಿನವರು, ಸಿಂಗಾಪುರದಲ್ಲಿ ಸಾಮೂಹಿಕ ಕ್ಷಿಪ್ರ ಸಾರಿಗೆ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ತಂದೆ ಸುರೇಶ್ ಮತ್ತು ತಾಯಿ ಶಶಿ ಅವರ ಪ್ರಯತ್ನಗಳಿಗೆ ಬಹಳ ಬೆಂಬಲ ನೀಡಿದ್ದಾರೆ.
ಇತ್ತೀಚಿಗೆ ಅವರು ಶಾಲೆಯೊಂದರಲ್ಲಿ 300 ಮಕ್ಕಳಿಗೆ ಆಹಾರ ತಯಾರಿಸಿದ್ದರು. ಆ ಶಾಲೆಗೆ ರೋಹನ್‌ರ ತಾಯಿ ಮುಂಚಿನಿಂದಲೂ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಲೇ ಬಂದಿದ್ದಾರೆ. ಅದನ್ನು ತಿಳಿದ ರೋಹನ್ ತಾವೂ ಏನಾದರು ಮಾಡಬೇಕು ಎಂಬ ಮನಸ್ಸು ಮಾಡಿದರು. ಅದರ ಕುರಿತು ಮಾತನಾಡುತ್ತ,
"ಗಿವ್ ಇಂಡಿಯಾದಲ್ಲಿ ನಾನು ನಿಧಿಸಂಗ್ರಹಣೆ ಅಭಿಯಾನವನ್ನು ಆರಂಭಿಸಿದ್ದೇನೆ, ಇದರಿಂದ ಜನರು ನಾವು ನಡೆಸುತ್ತಿರುವ ಉತ್ತಮ ಉದ್ದೇಶಕ್ಕಾಗಿ ಕೊಡುಗೆ ನೀಡಬಹುದು. ಏಕೆಂದರೆ ಸಿರಗು ಸಂಸ್ಥೆ ಉಚಿತ ಶಿಕ್ಷಣವನ್ನು ನೀಡುತ್ತಿದೆ ಮತ್ತು ಬಡತನದ ಸುಳಿಯಿಂದ ಹೊರಬರಲು ಮಕ್ಕಳಿಗೆ ಸಹಾಯ ಮಾಡುತ್ತಿದೆ,” ಎಂದರು.
ಸಿರಗುದಲ್ಲಿ ರೋಹನ್ ತಯಾರಿಸಿದ್ದ ಅಡುಗೆ ರುಚಿಕರವಾಗಿತ್ತೆಂದು 1 ನೇ ತರಗತಿಯಲ್ಲಿ ಓದುತ್ತಿರುವ ಸ್ಥಳೀಯ ಹಳ್ಳಿಯ ಬಾಲಕಿಯಿಂದ ಹಿಡಿದು 9 ನೇ ತರಗತಿಯಲ್ಲಿ ವಾಸಿಸುವ ವಿದ್ಯಾರ್ಥಿನಿಯವರೆಗೆ, ಮಕ್ಕಳು ಆಹಾರವನ್ನು ಮೆಚ್ಚಿದರು. ಸಿಹಿಭಕ್ಷವನ್ನು ಎರಡನೇ ಬಾರಿಗೆ ನೀಡುವಂತೆ ಬಹಳ ಚಿಕ್ಕ ಮಗು ಸಂಕೋಚದಿಂದ ಅವರ ಬಳಿಗೆ ಬಂದಾಗ, ಅವರು ಮಗುವನ್ನು ಮೇಲಕ್ಕೆತ್ತಿಕೊಂಡು ಆಹಾರ ಬಡಿಸಿದರು.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.