ಭಾರತೀಯ ಮಹಿಳೆಯೊಬ್ಬರು ಆಸ್ಟ್ರೇಲಿಯಾದ ಕಾಡ್ಗಿಚ್ಚಿಗೆ ಬಲಿಯಾದ ಸಂತ್ರಸ್ತರಿಗೆ ಆಹಾರ ನೀಡುವುದಕ್ಕಾಗಿ ತಾಯ್ನಾಡಿಗೆ ಹಿಂದಿರುಗುವ ತಮ್ಮ ಪ್ರವಾಸವನ್ನೆ ರದ್ದುಗೊಳಿಸಿದ್ದಾರೆ
ಕಾಡ್ಗಿಚ್ಚಿಗೆ ಬಲಿಯಾದ ಸಂತ್ರಸ್ತರಿಗಾಗಿ ದಿನಕ್ಕೆ 1,000 ಜನರಿಗೆ ಉಣಬಡಿಸಲು ಸುಖ್ವಿಂದರ್ ಕೌರ್ ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಅವರು ಕೋಮಾದಲ್ಲಿದ್ದ ತನ್ನ ಸಹೋದರಿಯನ್ನು ಭೇಟಿ ಮಾಡಲು ಹೋರಟಿದ್ದ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕೆರಳಿದ ಕಾಡ್ಗಿಚ್ಚು ಪ್ರಾಣಿಗಳು ಮತ್ತು ಅನೇಕ ಜನರನ್ನು ಬಲಿತೆಗೆದುಕೊಳ್ಳುತ್ತಿದೆ. ಇವರನ್ನು ಉಳಿಸಲು ಅನೇಕ ಗುಂಪುಗಳು ಮತ್ತು ವ್ಯಕ್ತಿಗಳು ಮುಂಚೂಣಿಗೆ ಬಂದಿದ್ದಾರೆ. ಜನರು ಆಶ್ರಯ, ಆಹಾರ ಮತ್ತು ವೈದ್ಯಕೀಯ ನೆರವು ನೀಡಲು ತಮ್ಮ ಸಮಯ ಮತ್ತು ಹಣದಿಂದ ವಿಶಾಲಮನೋಭಾವದಿಂದ ನೀಡುತ್ತಿದ್ದಾರೆ.
ಪೂರ್ವ ಗಿಪ್ಸ್‌ಲ್ಯಾಂಡ್ ಪ್ರದೇಶದಲ್ಲಿ ನೆಲೆಸಿರುವ ಮೂವತ್ತೈದು ವರ್ಷದ ಸುಖ್ವಿಂದರ್ ಕೌರ್, ಕಾಡ್ಗಿಚ್ಚಿಗೆ ಬಲಿಯಾದವರಿಗೆ ಸಹಾಯ ಮಾಡಲು ಕೋಮಾದಲ್ಲಿದ್ದ ತನ್ನ ಸಹೋದರಿಯನ್ನು ಭೇಟಿ ಮಾಡಲು ಹೋರಟಿದ್ದ ಭಾರತ ಪ್ರವಾಸವನ್ನು ರದ್ದುಗೊಳಿಸಿದರು. ಅವರು ಒಂದು ದಶಕದಲ್ಲಿ ಎಂದು ತಮ್ಮ ಮನೆಗೆ ಹೋಗಿರಲಿಲ್ಲ.
ಎಸ್‌ಬಿಎಸ್ ಪಂಜಾಬಿಯೊಂದಿಗಿನ ಸಂಭಾಷಣೆಯಲ್ಲಿ ಅವರು,
“ನನ್ನ ಮೊದಲ ಕರ್ತವ್ಯ ಇಲ್ಲಿನ ಸಮುದಾಯದ ಕಡೆಗೆ ಎಂದು ನಾನು ಅರಿತುಕೊಂಡೆ. ಇಲ್ಲಿ ನಾನು ಇಷ್ಟು ದಿನ ವಾಸಿಸುತ್ತಿದ್ದೇನೆ. ಇಂತಹ ಕಷ್ಟದ ಇಲ್ಲಿರುವ ಜನರನ್ನು ಬಿಟ್ಟು ಹೋದರೆ, ನನ್ನನ್ನು ಓರ್ವ ಒಳ್ಳೆಯ ಮನುಷ್ಯ ಎಂದು ಕರೆಯಬಹುದೆಂದು ನಾನು ಭಾವಿಸುವುದಿಲ್ಲ,” ಎಂದರು.
ಸುಖ್ವಿಂದರ್ ಸಿಖ್ ಸ್ವಯಂಸೇವಕರ ಆಸ್ಟ್ರೇಲಿಯಾ ತಂಡದೊಂದಿಗೆ ಆಹಾರವನ್ನು ವಿತರಿಸಲು ಕೆಲಸ ಮಾಡುತ್ತಿದ್ದಾರೆ. ಡೈಲಿ ಮೇಲ್ ಪ್ರಕಾರ, ಸುಖ್ವಿಂದರ್ ಅವರ ದಿನಚರಿ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 11 ಗಂಟೆಗೆ ಕೊನೆಗೊಳ್ಳುತ್ತದೆ.
ಸಂತ್ರಸ್ತರಿಗೆ ಸಹಾಯ ಮಾಡುವ ತನ್ನ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ ಸುಖ್ವಿಂದರ್,
“ಆರಂಭದಲ್ಲಿ, ನಮ್ಮ ಆಹಾರದ ವ್ಯಾನ್‌ಗೆ ನೂರು ಜನರು ಬರುತ್ತಿದ್ದರು, ಆದರೆ ಕಳೆದ ಮೂರು-ನಾಲ್ಕು ದಿನಗಳಲ್ಲಿ, ಮನೆಗಳು ಸ್ಥಳಾಂತರಿಸಲ್ಪಟ್ಟ ಕಾರಣ ಇನ್ನೂ ಅನೇಕ ಜನರು ಬರುತ್ತಿದ್ದಾರೆ. ಆದ್ದರಿಂದ, ಈ ದಿನಗಳಲ್ಲಿ, ನಾವು ಪ್ರತಿದಿನ ಒಂದು ಸಾವಿರ ಊಟವನ್ನು ತಯಾರಿಸುತ್ತಿದ್ದೇವೆ,” ಎಂದರು, ವರದಿ ಎಸ್‌ಬಿಎಸ್ ಪಂಜಾಬಿ.
ಡಿಸೆಂಬರ್ 30 ರಿಂದ ಬೈರ್ನ್ಸ್‌ಡೇಲ್ ಓವಲ್‌ನಲ್ಲಿ ಸುಖ್ವಿಂದರ್ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ. ಇಲ್ಲಿ, ಅಧಿಕಾರಿಗಳು ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಆಶ್ರಯವನ್ನು ರಚಿಸಿದ್ದಾರೆ.
ಅವರ ಸಮರ್ಪಣೆ ಮತ್ತು ಬದ್ಧತೆಯನ್ನು ನೋಡುತ್ತಾ, ವಿಕ್ಟೋರಿಯನ್ ಪ್ರೀಮಿಯರ್ ಡೇನಿಯಲ್ ಆಂಡ್ರ್ಯೂಸ್, ತಮ್ಮ ಟ್ವಿಟ್ಟರ್ ಖಾತೆಯಲ್ಲು ಅವರ ಮತ್ತು ಸ್ವಯಂಸೇವಕರ ಪ್ರಯತ್ನವನ್ನು ಶ್ಲಾಘಿಸಿದರು.
ಸುಖ್ವಿಂದರ್ ಮುಂದುವರೆದು ಮಾತನಾಡುತ್ತಾ,
“ಬಹಳಷ್ಟು ಜನರು ಆಹಾರವನ್ನು ಇಷ್ಟಪಟ್ಟೆವು ಎನ್ನುತ್ತಿದ್ದಾರೆ, ಸಂತ್ರಸ್ತರಿಗೆ ಸೇವೆ ಮಾಡಲು ನನಗೆ ಅವಕಾಶ ನೀಡಲಾಗಿದೆ ಎಂದು ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ಯಾವುದೇ ಆಹಾರ ವ್ಯರ್ಥವಾಗುವುದಿಲ್ಲ ಮತ್ತು ಅದನ್ನೆಲ್ಲ ಸಮುದಾಯದಲ್ಲಿ ಬಳಸಿಕೊಳ್ಳುವುದನ್ನು ನೋಡಿದಾಗ ನನಗೆ ವಿಶೇಷವಾಗಿ ಸಂತೋಷವಾಗುತ್ತದೆ,” ಎಂದರು.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.