ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟ ಸ್ಕಿನ್ಬ್ಯಾಂಕ್.
ಟೀಮ್ ವೈ.ಎಸ್. ಕನ್ನಡ
ಯಾವುದೋ ಕಾರಣಕ್ಕೆ ಚರ್ಮದ ಅಂದವನ್ನು ಕಳೆದುಕೊಂಡು, ತಮ್ಮ ಬಾಳನ್ನ ಕತ್ತಲಲ್ಲಿ ಕಳೆದುಕೊಂಡಿದ್ದ ಮನಸ್ಸುಗಳಿಗೆ ಬೆಳಕಾಗಿ ಬಂದ ಯೋಜನೆ ಚರ್ಮದಾನ. ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಕಿನ್ ಬ್ಯಾಂಕ್ ಸ್ಥಾಪನೆಯಾಗಿದ್ದು, ಮೊದಲ ಚರ್ಮದಾನ ನಿಧಿ ಎಂಬ ಹೆಗ್ಗಳಿಕೆ ವಿಕ್ಟೋರಿಯಾ ಆಸ್ಪತ್ರೆ ಪಾತ್ರವಾಗಿದೆ. ನೇತ್ರದಾನ, ರಕ್ತದಾನದಂತೆ ಈಗ ಹೊಸದಾಗಿ ಸೇರ್ಪಡೆಗೊಂಡಿರೋದು ಚರ್ಮದಾನ. ಆ್ಯಸಿಡ್ ದಾಳಿ, ಬೆಂಕಿ ಆಕಸ್ಮಿಕಗಳಲ್ಲಿ ಚರ್ಮ ಸುಟ್ಟು ರೂಪ ಕಳೆದುಕೊಂಡಿರೋ ವ್ಯಕ್ತಿಗಳಿಗೆ ಹೊಸ ರೂಪ ನೀಡುವ ಉದ್ದೇಶದಿಂದ ಸ್ಕಿನ್ ಬ್ಯಾಂಕ್ ಅನ್ನು ಸ್ಥಾಪನೆ ಮಾಡಲಾಗಿದೆ.
ಸಾರ್ವಜನಿಕರಿಂದಲೇ ಅರಿವು ಕಾರ್ಯಕ್ರಮ..
ಇನ್ನು ಸಾರ್ವಜನಿಕರೇ ಸೇರಿ ಚರ್ಮದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗಳಿಗೆ ಹೋಗಿ ಕರಪತ್ರಗಳನ್ನು ಹಂಚುವುದು, ಚರ್ಮದಾನದ ಬಗ್ಗೆ ತಿಳಿ ಹೇಳುವುದು, ಚರ್ಮದಾನಕ್ಕೆ ಅರ್ಹ ಅಭ್ಯರ್ಥಿಗಳು ಯಾರು, ಚರ್ಮದ ಕೊಡುಗೆಯ ಪ್ರಯೋಜನಗಳು ಏನು..?, ವಿಧಾನಗಳು ಹೇಗೆ ಎಂಬುದನ್ನು ಹೇಳುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಕೆಲ ಸಂಘಟನೆಗಳು ಸೇರಿ ನೋಂದಣಿ ಅರ್ಜಿಯನ್ನು ವಿಸ್ತರಿಸುತ್ತಿದ್ದಾರೆ. ಈಗಾಗಲೇ ಚರ್ಮದಾನ ಮಾಡಲು ನೋಂದಣಿ ಪ್ರಕ್ರಿಯೆ ಜೋರಾಗಿಯೇ ಇದೆ. ಮುಂದಿನ ದಿನಗಳಲ್ಲಿ ಇದ್ರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಚರ್ಮದಾನದ ಮೂಲಕ ಅನೇಕ ಕಾರಣಗಳಿಂದ ಚರ್ಮದ ಅಂದ ಕಳೆದುಕೊಂಡವರ ಬಾಳಿಗೆ ಹೊಸ ಬೆಳಕು ನೀಡಿದಂತಾಗುತ್ತದೆ.
ಇದನ್ನು ಓದಿ: ಪ್ರಯೋಗಕ್ಕೆ ಮುನ್ನುಡಿ ಬರೆದ "ಬೊಂಬೆಯಾಟ"
ಸಂಘಟನೆಗಳ ಪ್ರಚಾರ..
ಇನ್ನು ಚರ್ಮದಾನ ನಿಧಿಗೆ ಸಂಘಟನೆಗಳು ಸೇರಿ ಪ್ರಚಾರಕ್ಕೆ ಮುಂದಾಗಿವೆ. ಕನ್ನಡ ಸಂಘಗಳು ಮನೆ ಮನೆಗಳಿಗೆ ತೆರಳಿ ದಾನಗಳ ಬಗ್ಗೆ ತಿಳುವಳಿಕೆ ಹೇಳುತ್ತಿದ್ದಾರೆ. ನಾನು ಅಂಗಾಂಗದಾನಕ್ಕೆ ಸಂಕಲ್ಪಿಸಿದ್ದೇನೆ ನೀವು?? ಅಂಗಾಂಗದಾನ ಅಭಿಯಾನ ನಿಮ್ಮ ಬೆಂಬಲ ನೀಡಿ ಎಂದು ಪ್ರಚಾರಕ್ಕೆ ಇಳಿದಿದ್ದಾರೆ. ಮರಣಾ ನಂತರ ನನ್ನ ದೇಹದ ಚರ್ಮ ವನ್ನು ವೈದ್ಯಕೀಯ ಉಪಯೋಗಕ್ಕಾಗಿ ದಾನ ಮಾಡಲು ಸಂಕಲ್ಪಿಸಿದ್ದೇವೆ. ನೀವು ಎಂಬ ಅಡಿಬರಹದ ಮೂಲಕ ಜನರನ್ನು ಆಕರ್ಷಿಸುತ್ತಿದ್ದಾರೆ.
"ನಮ್ಮಲ್ಲಿ ಈಗಾಗಲೇ 2 ಸ್ಕಿನ್ಬ್ಯಾಂಕ್ಗಳಿದ್ದು, ಬೆಂಗಳೂರಿನಲ್ಲಿ ಸ್ಥಾಪನೆಗೊಳ್ಳುತ್ತಿರುವುದು ಮೂರನೆಯದ್ದು. ಒಂದು ಮುಂಬೈನ ರಾಷ್ಟ್ರೀಯ ಸುಟ್ಟಗಾಯಗಳ ಕೇಂದ್ರ, ಇನ್ನೊಂದು ಚೆನ್ನೈನ ರೈಟ್ಸ್ ಆಸ್ಪತ್ರೆ. ಸ್ಕಿನ್ಬ್ಯಾಂಕ್ ನಿರ್ವಹಣೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಮೂವರು ವೈದ್ಯರು ಮುಂಬೈನಲ್ಲಿ ತರಬೇತಿ ಪಡೆದಿದ್ದಾರೆ. ಚರ್ಮನಿಧಿಗಳಿಗೆ ಬೇಕಾದ ಯಂತ್ರಗಳನ್ನು ಜರ್ಮನಿಯಿಂದ ತರಿಸಲಾಗಿದೆ."
- ರಮೇಶ್ ಕೆ. ಎಂ, ವೈದ್ಯರು
ಚರ್ಮನಿಧಿ ಸ್ಥಾಪನೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯೊಂದಿಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ರೋಟರಿ ಕ್ಲಬ್ ಹಾಗೂ ಆಶೀರ್ವಾದ್ ಸೈಸ್ ಸಂಸ್ಥೆಗಳು ಕೈಜೋಡಿಸಿವೆ. ವಿಕ್ಟೋರಿಯಾ ಆಸ್ಪತ್ರೆ, ಜನರಲ್ಲಿ ಚರ್ಮನಿಧಿ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಚರ್ಮ ದಾನ ಮಾಡಲು ನೋಂದಣಿ ಪ್ರಕ್ರಿಯೆಯೂ ನಡೆಯುತ್ತಿದೆ. ಚರ್ಮದ ಕಸಿ ಚಿಕಿತ್ಸೆ ಪಡೆಯ ಬಯಸುವವರಿಗೆ ಸ್ಕಿನ್ಬ್ಯಾಂಕ್ ನೆರವಾಗಲಿದೆ.
1. ಅವಿವಾಹಿತರಿಗೆ ಇನ್ನು ಮುಂದೆ ಯಾರ ಕಾಟವೂ ಇಲ್ಲ..!
2. ಟ್ರೇಲರ್ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..
3. ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!