ಮಹಿಳೆಯರ ನೆರವಿಗೆ ನಿಂತು ಉದ್ಯಮದಲ್ಲಿ ಯಶಸ್ಸು ಸಾಧಿಸಿ ಸುಮನ್ ಕಥೆ ಕೇಳಿ..!
ಟೀಮ್ ವೈ.ಎಸ್. ಕನ್ನಡ
ಎಲ್ಲರಿಗೂ ಅಭಿವೃದ್ಧಿಯಾಗುವ ಕನಸಿದೆ. ಉದ್ಯಮ ಮಾಡಬೇಕು ಅನ್ನುವ ಮನಸ್ಸು ಕೂಡ ಇರುತ್ತದೆ. ಆದ್ರೆ ಬಂಡವಾಳದಿಂದ ಹಿಡಿದು, ಎಲ್ಲಾ ಕೊರತೆಗಳೇ ಮುಂದೆ ಬರುತ್ತವೆ. ಸಹಾಯಕ್ಕೆ ನಿಲ್ಲುವವರ ಸಂಖ್ಯೆ ತುಂಬಾ ಕಡಿಮೆ. ಆದ್ರೆ ಸುಮನ್ ಸೊಂಥಾಲಿಯಾ ಉಳಿದವರಿಗಿಂತ ವಿಭಿನ್ನ. ಯಶಸ್ವಿ ಉದ್ಯಮಿಗಳ ಪೈಕಿ ಸುಮನ್ ಸೊಂತಾಲಿಯಾಗೆ ಅವರದ್ದೇ ಆದ ಸ್ಥಾನವಿದೆ. ಉದ್ಯಮದಲ್ಲಿ ಸುಮನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದ್ರೆ ಯಶಸ್ಸಿನ ಹಾದಿಯ ಕಡೆಗಿನ ಪಯಣವನ್ನು ಮಾತ್ರ ಯಾವತ್ತೂ ಬಿಟ್ಟಿಲ್ಲ. ಪ್ರತಿಭೆ ಇದ್ದರು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕಠಿಣ ಪರಿಶ್ರಮ ಮಾಡಬೇಕು. ಇದೇ ನೀತಿಯಿಂದ ಸುಮನ್ ಸೊಂಥಾಲಿಯಾ ಯಶಸ್ಸು ಸಾಧಿಸಿದ್ದಾರೆ. ಸಾಹಿಬಾಬಾದ್ ಮೂಲದ ಆಕೃತಿ ಕ್ರೀಯೇಷನ್ಸ್ ಸಂಸ್ಥಾಪಕಿಯಾಗಿರುವ ಸುಮನ್, ತನ್ನ ಸಂಸ್ಥೆ ಮೂಲಕ ಮಹಿಳೆಯರ ಸಹಾಯಕ್ಕೆ ನಿಂತಿದ್ದಾರೆ. ಈ ಮೂಲಕ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸುಮನ್ ಸಹಕರಿಸುತ್ತಿದ್ದಾರೆ.
ಸುಮನ್ ಆಕೃತಿ ಆರ್ಟ್ ಕ್ರಿಯೇಷನ್ ಅನ್ನು ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದಲೇ ಆರಂಭಿಸಿದ್ದರು. ಶೋಷಿತ ಮತ್ತು ಕಷ್ಟದಲ್ಲಿರುವ ಮಹಿಳೆಯರನ್ನು ಹುಡುಕಲು ಸುಮನ್ ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಮನೆಗೆಲಸ ಮಾಡುತ್ತಿದ್ದ ಮಹಿಳೆಯರು, ಶುಶ್ರೂಷಕಿಯಾಗಿ ಕೆಲಸ ಮಾಡ್ತಿದ್ದವರನ್ನು ಸುಮನ್ ಆರಂಭದಲ್ಲಿ ಆಯ್ಕೆ ಮಾಡಿಕೊಂಡು ಅವರಿಗೆ ಕೆಲಸ ಮಾಡಿದ್ದರು. ಈ ಮೂಲಕ ಸುಮನ್ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ತನ್ನದೇ ಆದ ರೀತಿಯಲ್ಲಿ ಬೆಂಬಲವಾಗಿ ನಿಂತ್ರು.
ಇದನ್ನು ಓದಿ: ಸಿನಿಮಾಗಳ ಬಣ್ಣದಜಗತ್ತಿನ ಹಿಂದೆ ಜಗ್ಗಿಕರಾಮತ್ತು..!
ಸುಮನ್ ಹುಟ್ಟಿದ್ದು, ಕೊಲ್ಕತ್ತಾದ ಅಪ್ಪಟ ಮಾರ್ವಾಡಿ ಕುಟುಂಬದಲ್ಲಿ.ಸಾಮಾನ್ಯವಾಗಿ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಹೆಣ್ಣುಮಕ್ಕಳು ತಮ್ಮ ಕನಸುಗಳನ್ನು ಅನಿವಾರ್ಯವಾಗಿ ಕೈಬಿಡಬೇಕಾಗುತ್ತದೆ. ಸುಮನ್ ಇದರಿಂದ ದೂರವಾಗಿದ್ದರು. ಆದರೆ ಅವಕಾಶಗಳು ಬರುವ ತನಕ ತನ್ನ ಶ್ರಮವನ್ನು ಕೈಬಿಡಲಿಲ್ಲ. ಕಲಾಕೃತಿಗಳ ಮೂಲಕ ತನ್ನ ಶ್ರಮವನ್ನು ಸಾಯಲು ಬಿಡಲಿಲ್ಲ. ಬಿ.ಬಿ. ಸೊಂಥಾಲಿಯಾ ಅನ್ನುವ ಕಬ್ಬಿಣದ ವ್ಯಾಪಾರಿಯನ್ನು ಮದುವೆ ಆಗಿದ್ದೇ ತಡ, ಸುಮನ್ ಅದೃಷ್ಟ ಖುಲಾಯಿಸಿತು. ತನ್ನಲ್ಲಿದ್ದ ಕಲೆ ಹೊರಬರಲು ಪ್ರೇರಣೆ ಸಿಕ್ಕಿತ್ತು.
“ಆರಂಭದಲ್ಲಿ ಆಕೃತಿ ಕ್ರಿಯೇಷನ್ ನಲ್ಲಿ ಪೈಂಟಿಂಗ್ ಅನ್ನು ವಿವಿಧ ಕಾಟೆಜ್ ಸ್ಟೋರ್ ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ನನ್ನ ಪತಿ ಬಿ.ಬಿ. ಸೊಂಥಾಲಿಯಾ ಇದ್ರಲ್ಲಿ ಹೆಚ್ಚು ಆಸಕ್ತಿವಹಿಸಿದ್ರು. ನನಗೆ ಗುರಿ ಮುಟ್ಟುವ ದಾರಿಯನ್ನು ಹೇಳಿಕೊಟ್ಟು ಸ್ಪೂರ್ತಿಯಾದರು ”
- ಸುಮನ್ ಸೊಂಥಾಲಿಯಾ, ಆಕೃತಿ ಕ್ರಿಯೇಷನ್ಸ್ ಸಂಸ್ಥಾಪಕಿ
ಸುಮನ್ ಸ್ಕಿಲ್ ಇಂಡಿಯಾ ಟ್ರೈನಿಂಗ್ ಸೆಂಟರ್ ಅನ್ನು ಸಾಹಿಬಾಬಾದ್ನಲ್ಲಿ ಆರಂಭಿಸಿದ್ದಾರೆ. ಇಲ್ಲಿ ತಯಾರಾಗುವ ವಿಭಿನ್ನ ಕಲಾಕೃತಿಗಳಿಗೆ ವಿಶ್ವಾದಾದ್ಯಂತ ಬೇಡಿಕೆ ಇದೆ. ಇಲ್ಲಿರುವ ಡಿಸೈನರ್ಗಳ ಪೈಕಿ ಹೆಚ್ಚಿನವರು ಮಹಿಳೆಯರಾಗಿದ್ದು,ದೃಷ್ಟಿ ವಿಕಲಚೇತನರು ಕೂಡ ಇಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ಸುಮನ್ ಕರಕುಶಲ ಉದ್ಯಮ ಆರಂಭಿಸುವ ಮೊದಲು ತನ್ನ ತಂಡದಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳೆಯರನ್ನೇ ಆಯ್ಕೆ ಮಾಡಿಕೊಂಡಿದ್ದು, ಸುಮನ್ ದೂರ ದೃಷ್ಟಿಗೆ ಉದಾಹರಣೆಯಷ್ಟೆ.
ಸುಮನ್ ತನ್ನ ತಂಡವನ್ನು ವಿಭಿನ್ನವಾಗಿ ಆಯ್ಕೆ ಮಾಡಿಕೊಂಡಿದ್ದರು. ತನ್ನಂತೆಯೇ ಮನೆಯಿಂದ ಹೊರಗಡೆ ಬಂದು, ವಿಶಾಲ ಪ್ರಪಂಚದಲ್ಲಿ ಯಶಸ್ಸು ಸಾಧಿಸುವ ಕನಸಿನಲ್ಲಿರುವ ಹಲವು ಮಹಿಳೆಯರಿಗೆ ನೆರವು ನೀಡಬೇಕು ಅನ್ನುವುದು ಸುಮನ್ ಆಶಯವಾಗಿತ್ತು. ಒಂದು ಬಾರಿ ಈ ನಿರ್ಧಾರ ಮಾಡಿದ ಮೇಲೆ ಸುಮನ್, ತನ್ನ ಆಯ್ಕೆಯಲ್ಲಿ ತುಂಬಾ ಜಾಗೃತೆವಹಿಸಿದ್ದರು. ಇದು ಆಕೆಯ ಯಶಸ್ಸಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು.
ಸದ್ಯ ಸುಮನ್ ಆರಂಭಿಸಿರುವ ಆಕೃತಿ ಕ್ರಿಯೇಷನ್ಸ್ ನಲ್ಲಿ ಸುಮಾರು 250 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 10 ಮಹಿಳೆಯರು ದೃಷ್ಟಿ ವಿಕಲಚೇತನರಾಗಿದ್ದಾರೆ. ಇವತ್ತು ಸುಮನ್ ಸಂಸ್ಥೆಯಲ್ಲಿ ತಯಾರಾದ ಕಲಾಕೃತಿಗಳು ವಿಶ್ವದೆಲ್ಲೆಡೆ ಸುದ್ದಿ ಮಾಡುತ್ತಿವೆ. ರಾಷ್ಟ್ರಪತಿ ಭವನದಲ್ಲೂ ಆಕೃತಿ ಕ್ರಿಯೇಷನ್ಸ್ನ ಮೋಡಿ ಇದೆ.
ಸುಮನ್ ಸೊಂಥಾಲಿಯಾ ಇವತ್ತು ಯಶಸ್ವಿ ಉದ್ಯಮಿಯಾಗಿದ್ದಾರೆ ಅಂದರೆ ಅದರ ಹಿಂದೆ ಪರಿಶ್ರಮ ಮತ್ತು ದೃಢ ಸಂಕಲ್ಪವಿದೆ. ಸುಮನ್ ಯಶಸ್ಸಿನ ಕಥೆ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿ ಅನ್ನುವುದರಲ್ಲಿ ಎರಡು ಮಾತಿಲ್ಲ.
1. ಭಾರತೀಯ ಸ್ಟಾರ್ಟ್ಅಪ್ ಲೋಕದ ವೇದವಾಕ್ಯಗಳು..!
2. ನಿರಾಶ್ರಿತರ ಪಾಲಿಗೆ ಸಂಜೀವಿನಿ- 5 ಲಕ್ಷಕ್ಕೂ ಅಧಿಕ ಜನರ ಹಸಿವು ತಣಿಸಿದ "ಯಂಗೀಸ್ತಾನ್"
3. ನಡೆದಾಡಲು ಕಷ್ಟಪಡುತ್ತಿದ್ದ ಅಪರ್ಣಾ, ಮೌಂಟ್ ಎವರೆಸ್ಟ್ ಏರಿದ ಕಥೆಯಿದು..!