ಪಾಚಿ ಆಧಾರಿತ ಈ ವಾಯು ಶುದ್ಧೀಕರಣವು 98 ಪ್ರತಿಶತದಷ್ಟು ಹಾನಿಕಾರಕ ಅನಿಲಗಳನ್ನು ತಟಸ್ಥಗೊಳಿಸಿ, ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಎಜುಕೇಶನ್ ಅಂಡ್ ರಿಸರ್ಚ್ (ಐಐಎಸ್ಇಆರ್) ಅಭಿವೃದ್ಧಿಪಡಿಸಿದ ಪಾಚಿ ಆಧಾರಿತ ವಾಯು ಶುದ್ಧೀಕರಣವು 98 ಪ್ರತಿಶತದಷ್ಟು ಹಾನಿಕಾರಕ ಅನಿಲಗಳನ್ನು ತಟಸ್ಥಗೊಳಿಸಲು ಮತ್ತು ಗಾಳಿಯಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಲು ಸಮರ್ಥವಾಗಿದೆ.
ವರದಿಗಳ ಪ್ರಕಾರ ವಿಶ್ವದ ಅತ್ಯಂತ ಕಲುಷಿತ 10 ನಗರಗಳಲ್ಲಿ ಏಳು ನಗರಗಳು ಭಾರತದಲ್ಲಿವೆ. ಗುರುಗ್ರಾಮ್ ಮೊದಲ ಸ್ಥಾನದಲ್ಲಿದ್ದರೆ, ಘಜಿಯಾಬಾದ್ ನಂತರದ ಸ್ಥಾನದಲ್ಲಿದೆ. ಈ ಆತಂಕಕಾರಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲು ಸರ್ಕಾರವು ಹಸಿರು ನಿರ್ಮಾಣ (ಗಿಡ-ಮರಗಳನ್ನು ನೆಡುವುದು), ರೈಲ್ವೆಗಳನ್ನು ವಿದ್ಯುದ್ದೀಕರಿಸುದರ ಮೂಲಕ ವಾಯುಮಾಲಿನ್ಯವನ್ನು ನಿರ್ಮೂಲನೆ ಮಾಡುವಂತಹ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಎಜುಕೇಶನ್ ಅಂಡ್ ರಿಸರ್ಚ್ (ಐಐಎಸ್ಇಆರ್) ಅಭಿವೃದ್ಧಿಪಡಿಸಿದ ಪಾಚಿ ಆಧಾರಿತ ವಾಯು ಶುದ್ಧೀಕರಣವು 98 ಪ್ರತಿಶತದಷ್ಟು ಹಾನಿಕಾರಕ ಅನಿಲಗಳನ್ನು ತಟಸ್ಥಗೊಳಿಸಲು ಮತ್ತು ಗಾಳಿಯಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಲು ಸಮರ್ಥವಾಗಿದೆ.
ಈ ವಾಯು ಶುದ್ಧೀಕರಣ ಉಪಕರಣವು ಗಾಳಿಯಲ್ಲಿನ 98 ಪ್ರತಿಶತದಷ್ಟು ಹಾನಿಕಾರಕ ಅನಿಲಗಳು ಮತ್ತು ಕಣಗಳನ್ನು ತಟಸ್ಥಗೊಳಿಸುವುದಲ್ಲದೆ, ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಒಳಾಂಗಣದಲ್ಲಿ ಆರಾಮಾಗಿ ಉಸಿರಾಡುವಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ ಪಾಚಿಗಳಲ್ಲಿನ ಸೂಕ್ಷ್ಮಜೀವಿಗಳು ದ್ಯುತಿಸಂಶ್ಲೇಷಣೆಯನ್ನು ನಡೆಸುತ್ತವೆ ಮತ್ತು ಸೂರ್ಯನ ಬೆಳಕು, ನೀರು ಮತ್ತು ಇಂಗಾಲದ ಡೈಆಕ್ಸೈಡ್ ಅನ್ನು ಬಳಸುವುದರಿಂದ ಆಮ್ಲಜನಕವನ್ನು ಉತ್ಪಾದಿಸುತ್ತದೆ.
ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಸ್ಟಾರ್ಟ್ಅಪ್ ವಿಭಾಗದ ಮುಖ್ಯಸ್ಥ ನವೀನ್ ಲುಥ್ರಾ ಅವರು ಮಾತನಾಡಿ,
"ಹಲವಾರು ಏರ್ ಪ್ಯೂರಿಫೈಯರ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅವೆಲ್ಲವೂ ಒಂದೇ ತತ್ವದ ಮೇಲೆ ಕಾರ್ಯನಿರ್ವಹಿಸುತ್ತವೆ. ಅದರಲ್ಲಿ ಇಂಗಾಲ ಮತ್ತು ಹೆಚ್‌ಇಪಿಎ ಫಿಲ್ಟರ್‌ಗಳೊಂದಿಗೆ ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡುವುದರ ಮೇಲೆ. ನಮ್ಮ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ಕ್ರಮವು ಪರ್ಯಾಯ ವಿಧಾನವನ್ನು ಹೊಂದಿದೆ. ಉತ್ಪನ್ನವು ವಾಣಿಜ್ಯೀಕರಣದ ಹಾದಿಯಲ್ಲಿದೆ ಮತ್ತು ಇದರ ಬಗ್ಗೆ ತುಂಬಾ ಹೆಮ್ಮೆಯಿದೆ,” ಎಂದರು.
ಮಾರುಕಟ್ಟೆಯಲ್ಲಿನ ಸಾಂಪ್ರದಾಯಿಕ ವಾಯು ಶುದ್ಧೀಕರಣ ಸಾಧನಗಳಿಗಿಂತ ಭಿನ್ನವಾಗಿ ಈ ಸಾಧನವು ಸಮುದ್ರ ಪಾಚಿಗಳಿಂದ ತುಂಬಿದ ಅಂತರನಿರ್ಮಿತ ಧಾರಕವನ್ನು ಬಳಸುತ್ತದೆ. ಇದು ಒಳಾಂಗಣ ಗಾಳಿಯನ್ನು ಶುದ್ಧಗೊಳಿಸುತ್ತದೆ ಮತ್ತು ಕಾರ್ಬನ್ ಮೊನಾಕ್ಸೈಡ್, ಸಾರಜನಕ ಆಕ್ಸೈಡ್‌ಗಳು ಮತ್ತು ಸಲ್ಫರ್ ಆಕ್ಸೈಡ್‌ಗಳಂತಹ ವಿಷಕಾರಿ ಕೈಗಾರಿಕಾ ಅನಿಲಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಇದರ ಯಶಸ್ಸಿನ ಪ್ರಮಾಣವು ಶೇಕಡಾ 98 ಕ್ಕಿಂತ ಹೆಚ್ಚಿದೆ ಮತ್ತು ಫಿಲ್ಟರ್ ಮಾಡಿದ ಗಾಳಿಯಲ್ಲಿ ಆಮ್ಲಜನಕವನ್ನು ಮತ್ತಷ್ಟು ತುಂಬಿಸುತ್ತದೆ.
ಇದು ಬಯೋ ಮಾಸ್ ಅನ್ನು ಉಪಉತ್ಪನ್ನವಾಗಿ ನೀಡುತ್ತದೆ. ಇದನ್ನು ಜೈವಿಕ ಅಭಿವೃದ್ಧಿ ಉತ್ಪನ್ನಗಳು, ಎಫ್‌ಎಂಸಿಜಿ ಮತ್ತು ಔಷಧಿಗಳಂತಹ ಕೈಗಾರಿಕೆಗಳಿಗೆ ಪ್ರತಿ ಕಿ.ಗ್ರಾಂ ಗೆ 800 ರೂ.ಕ್ಕೆ ಮಾರಾಟ ಮಾಡಲಾಗುತ್ತದೆ.
ಪಾಚಿಗಳ ಮೂಲಕ ಬಾಹ್ಯಾಕಾಶದಲ್ಲಿ ಆಮ್ಲಜನಕವನ್ನು ಉತ್ಪಾದಿಸಲು ನಡೆಯುತ್ತಿರುವ ಬಾಹ್ಯಾಕಾಶ ಸಂಶೋಧನೆಯಿಂದ ಈ ತಂಡವು ಸ್ಫೂರ್ತಿ ಪಡೆದಿದೆ. ಉತ್ಪನ್ನದ ಕೆಲಸದ ಮೂಲಮಾದರಿಯನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ ಮತ್ತು ಯಶಸ್ವಿ ಪ್ರಯೋಗಗಳನ್ನು ನಡೆಸಲಾಗಿದೆ.
ಪೇಟೆಂಟ್ ಸಲ್ಲಿಸಲಾಗಿದ್ದು ವಾಣಿಜ್ಯ ಬಳಕೆಗಾಗಿ ಉದ್ಯಮ ತಜ್ಞರೊಂದಿಗೆ ಚರ್ಚೆಗಳು ನಡೆಯುತ್ತಿವೆ. ಉತ್ಪನ್ನ ಒಎಕ್ಸ್-ಸಿ, ಮತ್ತು ಒಎಕ್ಸ್-ಸಿ 2.0, ಸೆಪ್ಟೆಂಬರ್ 2020 ರೊಳಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅವುಗಳ ಬೆಲೆ ಸುಮಾರು 18,000 ಮತ್ತು 25,000 ರೂ. ಗಳಾಗಬಹುದು.
ತಂಡವು ಈಗ ಪಾಚಿ ಆಧಾರಿತ ಫೇಸ್ ಮಾಸ್ಕ್ ತಯಾರಿಸುವ ಕಾರ್ಯನಿರ್ವಹಿಸುತ್ತಿದ್ದು, ಇದು 2020 ರ ಮಧ್ಯಭಾಗದಲ್ಲಿ ಅಭಿವೃದ್ಧಿ ಹೊಂದಬಹುದು.
ಎಲ್‌ಪಿಯುನಲ್ಲಿ ಬಿಟೆಕ್ ಮೂರನೇ ವರ್ಷದ ವಿದ್ಯಾರ್ಥಿಗಳಾದ ಅನಂತ್ ಕುಮಾರ್ ರಜಪೂತ್ ಮತ್ತು ದೀಪಕ್ ದೇಬ್ ಮತ್ತು ಐಐಎಸ್ಇಆರ್ ಮೊಹಾಲಿಯ ಪಿಎಚ್‌ಡಿ ಸ್ಕಾಲರ್ ರವ್ನೀತ್ ಯಾದವ್ ಈ ಸಂಶೋಧನೆಯನ್ನು ನಡೆಸಿದ್ದಾರೆ. ಅವರಿಗೆ ನವೀನ್ ಲುಥ್ರಾ, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮೈಕ್ರೋಬಯಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಜಸ್ಟಿನ್ ಹಾಗೂ ಐಐಎಸ್ಇಆರ್ ಮೊಹಾಲಿಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಎ. ಸುನೀಲಾ ಪಾಟೀಲ್ ಮಾರ್ಗದರ್ಶನ ಮಾಡಿದ್ದಾರೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.