ಸಮುದ್ರದ ನೀರಿನಿಂದ ಜಲಜನಕ ಇಂಧನವನ್ನು ಉತ್ಪಾದಿಸಲು ಪರಿಸರ ಸ್ನೇಹಿ ಮಾರ್ಗವನ್ನು ಅಭಿವೃದ್ಧಿಪಡಿಸಿದ ಐಐಟಿ-ಎಂ

ಜಾಗತಿಕವಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡ, ಸಂಶೋಧಕರು ಸಮುದ್ರದ ನೀರಿನಿಂದ ಜಲಜನಕ ಶಕ್ತಿಯನ್ನು ಬಳಸಿಕೊಂಡು ಕಾರುಗಳು ಮತ್ತು ಬೈಕುಗಳನ್ನು ಚಲಾಯಿಸುವ ಗುರಿಯನ್ನಿಟ್ಟುಕೊಂಡಿದ್ದಾರೆ.

ಸಮುದ್ರದ ನೀರಿನಿಂದ ಜಲಜನಕ ಇಂಧನವನ್ನು ಉತ್ಪಾದಿಸಲು ಪರಿಸರ ಸ್ನೇಹಿ ಮಾರ್ಗವನ್ನು ಅಭಿವೃದ್ಧಿಪಡಿಸಿದ ಐಐಟಿ-ಎಂ

Friday January 17, 2020,

2 min Read

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನ ಸಂಶೋಧಕರು ಸಮುದ್ರದ ನೀರಿನಿಂದ ಜಲಜನಕ ಇಂಧನವನ್ನು ಉತ್ಪಾದಿಸಲು ಬಳಸಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ ಭವಿಷ್ಯದ ಪರಿಶುದ್ಧ ಇಂಧನಗಳಿಗೆ ಇದು ಮುನ್ನುಡಿಯಾಗಬಹುದು.


ಎಸಿಎಸ್ ಸಸ್ಟೈನಬಲ್ ಕೆಮಿಸ್ಟ್ರಿ & ಎಂಜಿನಿಯರಿಂಗ್ ಜರ್ನಲ್ನಲ್ಲಿ ವಿವರಿಸಿರುವ ಈ ತಂತ್ರಜ್ಞಾನವನ್ನು ಬಳಸಿಕೊಂಡು, ಅವಶ್ಯಕತೆಯಿದ್ದಾಗ ಮಾತ್ರ ಜಲಜನಕವನ್ನು ಬೇಡಿಕೆಯ ಅನುಸಾರ ಉತ್ಪಾದಿಸಬಹುದು ಮತ್ತು ಆದ್ದರಿಂದ ಇದನ್ನು ಸಂಗ್ರಹಿಸುವ ಪ್ರಶ್ನೆಯೇ ಉದ್ಬವಿಸುವದಿಲ್ಲ.


ಇದು ಜಲಜನಕಕ್ಕೆ ಸಂಬಂಧಿಸಿದ ಶೇಖರಣಾ-ಸಂಬಂಧಿತ ಸವಾಲುಗಳಾದ ಸುಲಭವಾಗಿ-ಹೊತ್ತಿಕೊಳ್ಳುವ ಮತ್ತು ಸ್ಫೋಟಕ್ಕೆ ಕಾರಣವಾಗುವ ಸಂಭಾವನೆಗಳನ್ನು ದೂರ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.




ಜಲಜನಕ ಭವಿಷ್ಯಕ್ಕಾಗಿ ಉತ್ತಮ ಶಕ್ತಿಯ ಮೂಲವಾಗಿದೆ. ಜಲಜನಕದ ದಹನವು ಪಳೆಯುಳಿಕೆ ಇಂಧನಗಳಿಗಿಂತ ಭಿನ್ನವಾಗಿದ್ದು ಇಂಗಾಲದ ಡೈಆಕ್ಸೈಡ್ ಅನ್ನು ಉತ್ಪಾದಿಸುವುದಿಲ್ಲ, ಇದು 'ಶುದ್ಧ' ಶಕ್ತಿಯ ಮೂಲವಾಗಿದೆ ಎಂದು ಅವರು ಹೇಳಿದರು.


ಜಾಗತಿಕವಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡ, ಸಂಶೋಧಕರು ಸಮುದ್ರದ ನೀರಿನಿಂದ ಜಲಜನಕ ಶಕ್ತಿಯನ್ನು ಬಳಸಿಕೊಂಡು ಕಾರುಗಳು ಮತ್ತು ಬೈಕುಗಳನ್ನು ಚಲಾಯಿಸುವ ಗುರಿಯನ್ನಿಟ್ಟುಕೊಂಡಿದ್ದಾರೆ.


"ಬೇಡಿಕೆಯ ಅನುಸಾರ ಜಲಜನಕ ಉತ್ಪಾದನೆಯಾಗುವುದರಿಂದ, ಅದರ ಸಂಗ್ರಹಣೆ ಮತ್ತು ಸಾಗಣೆಗೆ ಸಂಬಂಧಿಸಿದ ಸುರಕ್ಷತಾ ಸಮಸ್ಯೆಗಳನ್ನು ಎದುರಿಸಬೇಕಾಗುವದಿಲ್ಲ," ಎಂದು ಐಐಟಿ ಮದ್ರಾಸ್‌ನ ರಸಾಯನಶಾಸ್ತ್ರ ವಿಭಾಗದ ಅಬ್ದುಲ್ ಮಾಲೆಕ್ ಹೇಳಿದರು.


"ಘನ ಆರಂಭಿಕ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಹಳ ಅನುಕೂಲಕರವಾಗಿ ಸಾಗಿಸಬಹುದು. ಇದು ಜಲಜನಕ ವಲಯಕ್ಕೆ ಸಂಬಂಧಿಸಿದ ಸಾರಿಗೆ ಅಡಚಣೆಯನ್ನು ತಪ್ಪಿಸುತ್ತದೆ," ಎಂದು ಮಾಲೆಕ್ ಪಿಟಿಐಗೆ ತಿಳಿಸಿದರು.


ಜಲಜನಕವನ್ನು ಶಾಖ, ವಿದ್ಯುತ್ ಅಥವಾ ಸೂರ್ಯನ ಬೆಳಕು ಇಲ್ಲದೆ ಸುಲಭವಾಗಿ ಉತ್ಪಾದಿಸಬಹುದು ಎಂದು ಸಂಶೋಧಕರು ಗಮನಿಸಿದ್ದಾರೆ. ಪ್ರಾರಂಭಿಕ ವಸ್ತುಗಳೆಲ್ಲ ಪರಿಸರ ಸ್ನೇಹಿಯಾಗಿವೆ.


ಈ ಪ್ರಕ್ರಿಯೆಯು ಜಲಜನಕದ ಆರ್ಥಿಕತೆಗೆ ಸಂಬಂಧಿಸಿದ ಎಲ್ಲಾ ಉತ್ಪಾದನಾ ಮಾಪನಗಳನ್ನೂ ಹೊಂದಿದೆ- ಆದ್ದರಿಂದ ಆಟೋಮೋಟಿವ್, ವಾಯುಯಾನ ಇತ್ಯಾದಿ ಕ್ಷೇತ್ರಗಳು ಈ ತಂತ್ರಜ್ಞಾನದಿಂದ ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದರು.


"ಜಲಜನಕ ಭವಿಷ್ಯದ ಇಂಧನವಾಗಿದ್ದು. ನಾವು ಅದನ್ನು ‘ವರ್ತಮಾನ'ಕ್ಕಾಗಿ ಸಂಯೋಜಿಸಲು ಬಯಸುತ್ತೇವೆ. ನಮ್ಮ ಆವಿಷ್ಕಾರವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಕೆಟ್‌ಗಳಿಗೆ ಅಥವಾ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಕ್ಷಿಪಣಿಗಳಿಗೆ ಇಂಧನ ನೀಡುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ," ಎಂದು ಮಾಲೆಕ್ ಹೇಳಿದರು.


ಐಐಟಿ ಮದ್ರಾಸ್‌ನ ಸಹಾಯಕ ಪ್ರಾಧ್ಯಾಪಕ ಟಿಜು ಥಾಮಸ್ ಸೇರಿದಂತೆ ಸಂಶೋಧಕರು ವಾಹನಗಳಿಗೆ ಸರಿಯಾದ ಜಲಜನಕ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವ ಹಾದಿಯಲ್ಲಿದ್ದಾರೆ ಎಂದು ಹೇಳಿದರು.


"ಜಾಗತಿಕ ಇಂಧನ ಕ್ಷೇತ್ರಕ್ಕೆ ಪರಿಹಾರಗಳನ್ನು ನೀಡಲು ನಾವು ಎದುರು ನೋಡುತ್ತಿದ್ದೇವೆ," ಎಂದು ಮಾಲೆಕ್ ಹೇಳಿದರು.


ಯಾವುದೇ ನೀರಿನ ಮೂಲದಿಂದ ಜಲಜನಕ ಉತ್ಪಾದಿಸಲು ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಆದರೆ, ಸಮುದ್ರದ ನೀರು ಭೂಮಿಯ ಮೇಲ್ಮೈಯ ಮೂರನೇ ಎರಡರಷ್ಟು ಭಾಗವನ್ನು ಆವರಿಸುವುದರಿಂದ, ಸಂಶೋಧಕರು ಅದನ್ನು ಬಳಸಿಕೊಳ್ಳಲು ಉತ್ಸುಕರಾಗಿದ್ದಾರೆ.


ಒಂದು ಗುಂಡಿಯನ್ನು ಒತ್ತುವ ಮೂಲಕ ಇಂಧನವನ್ನು ಉತ್ಪಾದಿಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ, ಇದು ಒಂದು ವಿಭಾಗದಿಂದ ಇನ್ನೊಂದಕ್ಕೆ ನೀರನ್ನು ಸೇರಿಸುತ್ತದೆ.


"ನೀರಿನ ಸೇರ್ಪಡೆ ದರದಿಂದ ಜಲಜನಕ ಮತ್ತು ಅದರ ಉತ್ಪಾದನೆಗೆ ಕಾರಣವಾಗುವ ಹರಿವನ್ನು ನಿಯಂತ್ರಿಸಬಹುದು ಮತ್ತು ತಾಂತ್ರಿಕ ವಿವರಗಳನ್ನು ಪೇಟೆಂಟ್ ಮೂಲಕ ರಕ್ಷಿಸಲಾಗಿದೆ," ಎಂದು ಮಾಲೆಕ್ ಹೇಳಿದರು.


"ಪ್ರಕ್ರಿಯೆಯನ್ನು ಸುಲಭವಾಗಿ ಅಳಿಯಬಹುದಾಗಿದೆ, ಮತ್ತು ಅಗತ್ಯಕ್ಕೆ ಅನುಗುಣವಾಗಿ ಇಂಧನವನ್ನು ಉತ್ಪಾದಿಸಬಹುದು. ಆದ್ದರಿಂದ ಕಾರುಗಳಂತಹ ಸಾರಿಗೆ ವ್ಯವಸ್ಥೆಗಳಿಗೆ ಜಲಜನಕ ಇಂಧನವನ್ನು ಸರಿಯಾದ ವಿನ್ಯಾಸದ ಮೂಲಕ ಬಳಸಲು ಸಾಧ್ಯ," ಎಂದು ಅವರು ಹೇಳಿದರು.


ವಾಣಿಜ್ಯಮಯ ವಿಧಾನಕ್ಕೆ ಸುಮಾರು 1,000 ಡಿಗ್ರಿ ಸೆಲ್ಸಿಯಸ್ ಮತ್ತು ಸುಮಾರು 25 ಬಾರ್ ಒತ್ತಡದ ಅಗತ್ಯವಿರುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ.


ಆದಾಗ್ಯೂ, ಹೊಸ ಪ್ರಕ್ರಿಯೆಯು ಕೋಣೆಯ ಉಷ್ಣಾಂಶದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವಾತಾವರಣದ ಒತ್ತಡವು 1 ಬಾರ್ ಆಗಿದೆ ಎಂದು ಅವರು ಹೇಳಿದರು.


"ನಮ್ಮ ಪ್ರಸ್ತುತ ಅಂದಾಜುಗಳ ಪ್ರಕಾರ ಲಭ್ಯವಿರುವ ಬೆಲೆಗಳಿಗೆ ಹೋಲಿಕೆಯಾಗುತ್ತದೆ -ಬೆಲೆಯು ಪ್ರಮಾಣದೊಂದಿಗೆ ಬದಲಾಗಬಹುದು. ಆದರೆ, ಪ್ರಮುಖ ಮಾರಾಟಕರ ಅಂಶವು ಸುರಕ್ಷತೆಯಾಗಿದ್ದು ಮತ್ತು ಪಾಯಿಂಟ್-ಆಫ್-ಯೂಸ್ ಪರಿಸರ ಮಾಲಿನ್ಯವನ್ನು ತೆಗೆದುಹಾಕುತ್ತದೆ," ಎಂದು ಮಾಲೆಕ್ ಹೇಳಿದರು.