Brands
YSTV
Discover
Events
Newsletter
More

Follow Us

twitterfacebookinstagramyoutube
Kannada

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

Videos

ಚರ್ಮೋದ್ಯಮಕ್ಕೊಂದು ಪರ್ಯಾಯ: ಕಳ್ಳಿ ಗಿಡದ ಎಲೆಗಳಿಂದ ಕೃತಕ ಚರ್ಮ ತಯಾರಿಸಿದ ಮೆಕ್ಸಿಕೋದ ನವೋದ್ಯಮಿಗಳು

ಮೆಕ್ಸಿಕೋದ ಆಡ್ರಿಯನ್ ಲೋಪೆಜ್ ವೆಲಾರ್ಡೆ ಮತ್ತು ಮಾರ್ಟೆ ಕ್ಯಾಜರೆಜ್ ಅವರು ಪ್ರಾಣಿಗಳ ಚರ್ಮಕ್ಕೆ ಕ್ರೌರ್ಯ-ಮುಕ್ತ ಪರ್ಯಾಯವನ್ನು ನೀಡಲು ಡೆಸರ್ಟೊವನ್ನು ಪ್ರಾರಂಭಿಸಿದರು.

ಚರ್ಮೋದ್ಯಮಕ್ಕೊಂದು ಪರ್ಯಾಯ: ಕಳ್ಳಿ ಗಿಡದ ಎಲೆಗಳಿಂದ ಕೃತಕ ಚರ್ಮ ತಯಾರಿಸಿದ ಮೆಕ್ಸಿಕೋದ ನವೋದ್ಯಮಿಗಳು

Monday March 02, 2020,

2 min Read

ನಾವು ಧರಿಸುವ ಚಪ್ಪಲಿ, ಮಹಿಳೆಯರ ವ್ಯಾನಿಟಿ ಬ್ಯಾಗ, ಪರ್ಸ್‌, ವ್ಯಾಲೆಟ್‌, ಜ್ಯಾಕೆಟ್‌ಗಳೆಲ್ಲವೂ ತಯಾರಾಗುವುದು ಪ್ರಾಣಿಗಳ ಚರ್ಮದಿಂದ. ಪ್ರತಿ ಮನುಷ್ಯನೂ ತನ್ನ ಮಾವೀಯತೆಯನ್ನು ಮರೆತು, ಕ್ರೂರಿಯಾಗಿದ್ದಾನೆ. ಇದಕ್ಕೆ ಯಾರೂ ಹೊರತಾಗಿಲ್ಲ. ಚರ್ಮವನ್ನು ಒಂದು ಔದ್ಯೋಗಿಕ ವಸ್ತುವಾಗಿಸಿಕೊಂಡು ಕೋಟ್ಯಾನುಕೋಟಿ ಪ್ರಾಣಿಗಳನ್ನು ಪ್ರತೀ ವರ್ಷ ಚರ್ಮೋದ್ಯಮಕ್ಕಾಗಿ ಕೊಲ್ಲಲಾಗುತ್ತದೆ. ಇದಕ್ಕೆ ಒಂದು ನೈಸರ್ಗಿಕ, ಪ್ರಾಕೃತಿಕ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವ ಹಲವು ಪ್ರಯತ್ನಗಳನ್ನು ಪ್ರಪಂಚದ ವಿವಿಧ ಸಂಸ್ಥೆಗಳು ಮಾಡಿವೆ. ಸಸ್ಯ ಆಧಾರಿತ ಚರ್ಮದ ಪರ್ಯಾಯಗಳು ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು, ಪರಿಸರ ಸ್ನೇಹಿ ವಸ್ತುಗಳನ್ನು ಉತ್ಪಾದಿಸಲು ನಾವೀನ್ಯಕಾರರು ಅನಾನಸ್, ಆಲಿವ್ ಮತ್ತು ತೆಂಗಿನಕಾಯಿಗಳತ್ತ ಮುಖಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಹೈ-ಸ್ಟ್ರೀಟ್ ರೀಟೇಲ್‌ ವ್ಯಾಪಾರಿ ಎಚ್ ಹಾಗೂ ಎಂ ಅನಾನಸ್ ಚರ್ಮದಿಂದ ತಯಾರಿಸಿದ ಜಾಕೆಟ್ ಅನ್ನು ಅನಾವರಣಗೊಳಿಸಿದರೆ, ಜರ್ಮನ್ ಪಾದರಕ್ಷೆಗಳ ಬ್ರಾಂಡ್ ಥೀಸ್ ಆಲಿವ್ ಎಲೆಗಳಿಂದ ತಯಾರಿಸಿದ ಚರ್ಮದ ಬೂಟುಗಳನ್ನು ಬಿಡುಗಡೆ ಮಾಡಿತು.


ನಮ್ಮ ದೇಶದಲ್ಲೇ, ಕೇರಳ ಮೂಲದ ಬ್ರಾಂಡ್ ಮಲೈ ತೆಂಗಿನಕಾಯಿಗಳಿಂದ ವಸ್ತ್ರೋದ್ಯಮ ಬಳಸಬಲ್ಲ ಕೃತಕ ಲೆದರ್ ಮತ್ತು ಅಗತ್ಯ ಬಿಡಿಭಾಗಗಳನ್ನು ತಯಾರಿಸುತ್ತದೆ.


q

ಪಾಪಸುಕಳ್ಳಿಯಿಂದ ತಯಾರಾದ ಕೃತಕ ಚರ್ಮ (ಚಿತ್ರ ಕೃಪೆ : ಮಾಡರ್ನ್‌ ಫಾರ್ಮರ್‌)


ಮೆಕ್ಸಿಕೋದ ಇಬ್ಬರು ನವೋದ್ಯಮಿಗಳು, ಪಾಪಸು ಕಳ್ಳಿ ಗಿಡದ ಎಲೆಗಳಿಂದ, ಕೃತಕ ಚರ್ಮ ತಯಾರಿಸಿದ್ದಾರೆ. ಆಡ್ರಿಯನ್ ಲೋಪೆಜ್ ವೆಲಾರ್ಡೆ ಮತ್ತು ಮಾರ್ಟೆ ಕ್ಯಾಜರೆಜ್ ಅವರು ಪ್ರಾಣಿಗಳ ಚರ್ಮಕ್ಕೆ ಕ್ರೌರ್ಯ-ಮುಕ್ತ ಪರ್ಯಾಯವನ್ನು ರಚಿಸಲು ಒಗ್ಗೂಡಿದರು, ಮತ್ತು ಕಳೆದ ತಿಂಗಳು, ಅವರು ಡೆಸರ್ಟೊವನ್ನು ಪ್ರಾರಂಭಿಸಿದರು, ಇದು ಕೃತಕ ಚರ್ಮವನ್ನು ಸಂಪೂರ್ಣವಾಗಿ ನೊಪಾಲ್ ಅಥವಾ ಮುಳ್ಳು-ಪಿಯರ್ ಕಳ್ಳಿಗಳಿಂದ ತಯಾರಿಸುತ್ತದೆ ವರದಿ, ಫ್ಯಾಷನ್‌ ಯುನೈಟೆಡ್‌ ಯುಕೆ.


ಲೋಪೆಜ್ ವೆಲಾರ್ಡೆ ಪೀಠೋಪಕರಣ ಮತ್ತು ಆಟೋಮೋಟಿವ್ ವಲಯದಲ್ಲಿ ಹಾಗೂ ಸೆಜರೆಜ್ ಫ್ಯಾಷನ್‌ನಲ್ಲಿ ಕೆಲಸ ಮಾಡಿದ ಅನುಭವವಿರುವವರು. ತಮ್ಮ ಬುದ್ಧಿಶಕ್ತಿಯನ್ನು ಅತಿದೊಡ್ಡ ಗ್ರಾಹಕ ಕೈಗಾರಿಕೆಗಳಲ್ಲಿ ಒಂದಾಗಿರುವ ಫ್ಯಾಷನ್ ಜಗತ್ತಿನಲ್ಲಿ ಪ್ರಭಾವ ಬೀರಲು ನಿರ್ಧರಿಸಿದರು.


ಹತ್ತಿ ಉತ್ಪಾದನೆಯ ಮೂಲಕ ಬಟ್ಟೆಗಳನ್ನು ತಯಾರಿಸಲು ಬಳಸುವ ರಸಗೊಬ್ಬರಗಳ ಅತಿಯಾದ ಬಳಕೆ, ಹಾಗೆಯೇ 80 ಪ್ರತಿಶತದಷ್ಟು ಬಟ್ಟೆ ತ್ಯಾಜ್ಯವು ಸುಟ್ಟುಹೋಗುತ್ತದೆ ಎಂಬಂತಹ ಕೆಲವು ಸಮಸ್ಯೆಗಳಿವೆ ಎಂದು ಲೋಪೆಜ್ ವೆಲಾರ್ಡೆ ಮಾಡರ್ನ್‌ ಫಾರ್ಮರ್‌ ಗೆ ತಿಳಿಸಿದ್ದಾರೆ.


ಮಾಡರ್ನ್‌ ಫಾರ್ಮರ್‌ ಜೊತೆಗೆ ಮಾತನಾಡುತ್ತ,


"ಭೂಮಿಯ ನೈಸರ್ಗಿಕ ಸಂಪನ್ಮೂಲಗಳು ಒತ್ತಡದಲ್ಲಿವೆ, ಮತ್ತು ಫ್ಯಾಷನ್ ಉದ್ಯಮವು ಹೆಚ್ಚು ಸ್ಪಷ್ಟವಾಗಿ ಕೊಡುಗೆ ನೀಡದಿದ್ದರೂ, ಪರಿಸರದ ಮೇಲೆ ಅದರ ವ್ಯತಿರಿಕ್ತ ಪರಿನಾವು ಗಣನೀಯವಾಗಿದೆ," ಎಂದು ಲೋಪೆಜ್ ವೆಲಾರ್ಡೆ ಹೇಳುತ್ತಾರೆ. "ನಾವೆಲ್ಲರೂ ಎದುರಿಸುತ್ತಿರುವ ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸಿದ ರೇಖೆಯನ್ನು ರೂಪಿಸುವುದು ನಮಗೆ ಮುಖ್ಯವಾಗಿದೆ," ಎಂದರು.


ಫ್ಯಾಷನ್‌ ಯುನೈಟೆಡ್‌ ಯುಕೆಯೊಂದಿಗಿನ ಸಂದರ್ಶನದಲ್ಲಿ, "ಎರಡು ವರ್ಷಗಳ ಸಂಶೋಧನೆ ಮತ್ತು ಅಭಿವೃದ್ಧಿಯ ನಂತರ, ಪ್ರಾಣಿ ಮತ್ತು ಸಂಶ್ಲೇಷಿತ ಚರ್ಮವನ್ನು ಬಳಸುವ ಕೈಗಾರಿಕೆಗಳಿಗೆ ಅಗತ್ಯವಿರುವ ವೈಶಿಷ್ಟ್ಯಗಳು ಮತ್ತು ತಾಂತ್ರಿಕ/ಯಾಂತ್ರಿಕ ವಿಶೇಷಣಗಳಿಗೆ ಅನುಗುಣವಾದ ಸೂಕ್ತವಾದ ವಸ್ತುವನ್ನು ನಾವು ಉತ್ಪಾದಿಸುವಲ್ಲಿ ಯಶಸ್ವಿಯಾಗಿದ್ದೇವೆ," ಎಂದು ಲೋಪೆಜ್ ಹೇಳಿದ್ದಾರೆ.


ಅಕ್ಟೋಬರ್‌ನಲ್ಲಿ ಮಿಲನ್‌ನ ಅಂತರರಾಷ್ಟ್ರೀಯ ಚರ್ಮದ ಮೇಳದಲ್ಲಿ ಇವರಿಬ್ಬರು ತಮ್ಮ ಉತ್ಪನ್ನವನ್ನು ಪರಿಚಯಿಸಿದರು. ಡೆಸರ್ಟೊ ಎಂದು ಕರೆಯಲ್ಪಡುವ ಕೃತಕ, ಪರ್ಯಾಯ ಚರ್ಮವು 50 ಪ್ರತಿಶತದಷ್ಟು ಜೈವಿಕ ವಿಘಟನೀಯ ಮತ್ತು ಸಾವಯವವಾಗಿದೆ ಎಂದು ಲೋಪೆಜ್ ವೆಲಾರ್ಡೆ ಹೇಳುತ್ತಾರೆ.


ಲೋಪೆಜ್ ವೆಲಾರ್ಡೆ ಮತ್ತು ಸೆಜರೆಜ್ ಅವರು ತಮ್ಮ ರಾಜ್ಯದಲ್ಲಿ ಉತ್ಪನ್ನವನ್ನು ಕೊಯ್ಲು ಮಾಡುವ 27 ರೈತರಿಂದ ತಮ್ಮ ಕಳ್ಳಿಯನ್ನು ಪಡೆಯುತ್ತಾರೆ. ಉತ್ಪನ್ನವನ್ನು ತಯಾರಿಸಲು, ಕಂಪನಿಯು ಸಸ್ಯದ ಬಲಿತ ಎಲೆಗಳನ್ನು ಮಾತ್ರ ಬಳಸುತ್ತದೆ, ಈ ವಿಧಾನವು ಪಾಪಾಸುಕಳ್ಳಿಯನ್ನು ಸಂರಕ್ಷಿಸುತ್ತದೆ ಮತ್ತು ಪ್ರತಿ ಆರರಿಂದ ಎಂಟು ತಿಂಗಳಿಗೊಮ್ಮೆ ಹೊಸ ಸುಗ್ಗಿಯನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಲೋಪೆಜ್ ವೆಲಾರ್ಡೆ ಹೇಳುತ್ತಾರೆ. ಎಲೆಗಳನ್ನು ಕತ್ತರಿಸಿದ ನಂತರ, ಅವುಗಳನ್ನು ಮೂರು ದಿನಗಳ ಕಾಲ ಸೂರ್ಯನ ಕೆಳಗೆ ಒಣಗಿಸಿ ಸಂಸ್ಕರಿಸಲಾಗುತ್ತದೆ. ನಂತರ ಅವನ್ನು ಕೃತಕ ಚರ್ಮವನ್ನಾಗಿ ಮಾರ್ಪಾಡು ಮಾಡಲಾಗುತ್ತದೆ.