ಅರುಣಾಚಲ ಪ್ರದೇಶದಲ್ಲಿರುವ ಈ ಸಮುದಾಯ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿದೆ.
ತ್ಯಾಜ್ಯ ನಿರ್ವಹಣೆ, ಸಾವಯವ ಕೃಷಿಯಿಂದ ಹಿಡಿದು ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸುವವರೆಗೆ 'ಜಾಮ್ಟ್ಸೆ ಗಟ್ಸಲ್' ಸಮುದಾಯದ 'ಲೋಬ್ಸಾಂಗ್ ಪುಂಟ್ಸೊಕ್' ಅವರು ಪರಿಸರ ಸಂರಕ್ಷಣೆಯ ಮೌಲ್ಯಗಳನ್ನು ಅರಿಯಲು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.
ಶಿಕ್ಷಣವು ಹಕ್ಕೊ ಅಥವಾ ಸವಲತ್ತೋ ಎಂಬುದು ಅತ್ಯಂತ ಚರ್ಚಾಸ್ಪದ ವಿಷಯವಾಗಿದೆ.
ಯುನೆಸ್ಕೋದ ಒಂದು ವರದಿಯ ಪ್ರಕಾರ, ಜಾಗತಿಕವಾಗಿ ಸುಮಾರು 900 ಮಿಲಿಯನ್ ಜನರಿಗೆ ಓದಲು ಮತ್ತು ಬರೆಯಲು ಸಾಧ್ಯವಿಲ್ಲ. ಆ ಜನಸಂಖ್ಯೆಯ 287 ಮಿಲಿಯನ್ ಅಥವಾ 37% ಜನರಿಗೆ ಶಿಕ್ಷಣವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದರೂ, ದೇಶದ ಹೆಚ್ಚಿನ ಜನಸಂಖ್ಯೆಯು ಮೂಲಭೂತ ಶಿಕ್ಷಣ ಹೊಂದಿಲ್ಲ ಎಂದು ಈ ವರದಿಯು ತೋರಿಸುತ್ತದೆ.
ಈ ಸಮಸ್ಯೆಯನ್ನು ಪರಿಹರಿಸಲು ನಾವು ಪರಿಹಾರಗಳ ಬಗ್ಗೆ ಯೋಚಿಸುತ್ತಿರುವಾಗಲೇ, ಅರುಣಾಚಲ ಪ್ರದೇಶದಲ್ಲಿರುವ ದೂರದ ಹಳ್ಳಿಯಾದ ಮಾಗೋದಲ್ಲಿ ಗ್ಯಾಟ್ಸಲ್ ಸಮುದಾಯವು ಮಕ್ಕಳಿಗಾಗಿ ಸಮಗ್ರ ವಾತಾವರಣವನ್ನು ಸೃಷ್ಟಿಸುತ್ತಿದೆ.
2006ರಲ್ಲಿ ಲೋಬ್ಸಾಂಗ್ ಪುಂಟ್ಸೊಕ್ ಅವರು ಸ್ಥಾಪಿಸಿದ ಈ ಸಮುದಾಯವು ಮಕ್ಕಳಲ್ಲಿ ಮಾನವೀಯತೆಯ ಮೌಲ್ಯಗಳನ್ನು ಪರಿಚಯಿಸುವುದರೊಂದಿಗೆ ಅವರಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ.
ಈ ಸಮುದಾಯವು ಪ್ರಾಜೆಕ್ಟ್ ಅರ್ಥ್ ನಂತಹ ವಿವಿಧ ಯೋಜನೆಗಳನ್ನು ಹೊಂದಿದೆ. ಸುತ್ತಲಿನ ಪ್ರದೇಶದಲ್ಲಿ ಶೂನ್ಯ ತ್ಯಾಜ್ಯವನ್ನು ಸಾಧಿಸಲು 6 ರಿಂದ12ನೇ ತರಗತಿಯ ವಿದ್ಯಾರ್ಥಿಗಳು ಕೈಗೊಂಡಿದ್ದಾರೆ. ಎಫರ್ಟ್ಸ್ ಫಾರ್ ಗುಡ್ ಪ್ರಕಾರ, ಸದಸ್ಯರು ಒಗ್ಗೂಡಿಕೊಂಡು ತಾವೇ ಒಂದೊಂದೇ ಗುಂಪಾಗಿ ವಿಭಜನೆಗೊಳ್ಳುತ್ತಾರೆ.
ಈ ಗುಂಪುಗಳು 4 ಆರ್ ( ರಿಕವರ, ರಿಯೂಸ್, ರೇಡುಸ್, ಮತ್ತು ರಿಸೈಕಲ್) ಅಂದರೆ ಎತ್ತಿಕೊಳ್ಳಿ, ಮರುಬಳಕೆ ಮಾಡಿ, ಕಡಿಮೆ ಮಾಡಿ, ಮತ್ತೆ ಮರುಬಳಕೆ ಮಾಡಿ ಎಂಬ ವಿಧಾನವನ್ನು ಅನುಸರಿಸುವ ಮೂಲಕ ತಮ್ಮ ಸುತ್ತ-ಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುತ್ತವೆ. ಈ ಯೋಜನೆಯು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸುಡುವ ಮೂಲಕ ಹೊರ ಹಾಕುತ್ತಿದ್ದ ತ್ಯಾಜ್ಯದ ಪ್ರಮಾಣವನ್ನು ತಗ್ಗಿಸುವ ಗುರಿಯನ್ನು ಹೊಂದಿದೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಈ ಸಮುದಾಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ಉತ್ಸಾಹ ಮತ್ತು ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.
"ಪ್ರೀತಿ ಮತ್ತು ಸಹಾನೂಭೂತಿಯ ಉದ್ಯಾನ" ಎಂದೂ ಕರೆಯಲ್ಪಡುವ ಝಾಮ್ಟ್ಸೆ ಗ್ಯಾಟ್ಸಲ್ ಭೇಟಿ ನೀಡುವುದು ಬಹಳ ಸಂತೋಷವಾಗಿದೆ, ಮಕ್ಕಳನ್ನು ಉತ್ತಮ ಮಾನವರಾಗಿ ಕಲಿಸುವ ಇದು ಭಾರತದಲ್ಲಿ ಮೊದಲನೆಯದಾಗಿದೆ" ಎಂದು ಅರುಣಾಚಲ 24 ವರದಿ ಮಾಡಿದೆ.
ಭಾರತದಾದ್ಯಂತದ ಶಾಲೆಗಳಿಗಿಂತ ಭಿನ್ನವಾಗಿ, ಈ ಸಮುದಾಯವು ತನ್ನದೇ ಆದ ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದೆ. ಇದು ವ್ಯತ್ಯಾಸ, ಬಹು ಬುದ್ಧಿವಂತಿಕೆ, ಮೈಂಡ್ ಮ್ಯಾಪಿಂಗ್, ಪರಸ್ಪರ ಓದುವಿಕೆ, ಪ್ರಸ್ತುತಿಯಂತಹ ವಿನ್ಯಾಸ ಚಿಂತನೆಯಂತಹ ಅಭ್ಯಾಸಗಳನ್ನು ಪ್ರೋತ್ಸಾಹಿಸುತ್ತದೆ.
ಅಲ್ಲದೇ ಶಿಕ್ಷಣದ ಜೊತೆಗೆ ಸಮುದಾಯವು ತನ್ನ ವಿದ್ಯಾರ್ಥಿಗಳ ಆರೋಗ್ಯ ಮತ್ತು ಪೋಷಣೆಯ ಕಡೆಗೂ ಗಮನ ಹರಿಸುತ್ತದೆ. ಅದಕ್ಕಾಗಿ ತರಕಾರಿಗಳನ್ನು ಬೆಳೆಯಲು ಈ ಸಮುದಾಯವು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತದೆ.
ಈಗ ಈ ಸಮುದಾಯವು ಮಣ್ಣು, ಜೊಂಡು ಮತ್ತು ಒಣಹುಲ್ಲಿನಿಂದ ಮಾಡಿದ ಪರಿಸರಸ್ನೇಹಿ ಮನೆಗಳ ನಿರ್ಮಾಣವನ್ನು ಪ್ರಾರಂಭಿಸಿದೆ. ಈಗ ಇದು ಎರಡು ಜೊಂಡಿನ(ಕಾಬ್) ಮನೆಗಳನ್ನು ನಿರ್ಮಿಸಿದೆ ಮತ್ತು ಮಳೆನೀರು ಕೊಯ್ಲುನ್ನು ಅಳವಡಿಸಿದೆ. ಇದು ಮಳೆಯನ್ನು ಬಳಸಿಕೊಂಡು ತಡೆರಹಿತವಾಗಿ ನೀರು ಸರಬರಾಜು ಮಾಡುತ್ತದೆ. ಅಲ್ಲದೇ ಶುದ್ಧ ಹಾಗೂ ನವೀಕರಿಸಬಹುದಾದಂತಹ ಶಕ್ತಿಯನ್ನು ಬಳಸುವ ಮೂಲಕ, ಸಮುದಾಯವು ತನ್ನ ಶೇಕಡಾ 80ರಷ್ಟು ಶಕ್ತಿಯ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತದೆ.