ಅಲಂಕಾರಿಕ ಉಡುಗೊರೆಗಳ ಬದಲಾಗಿ ಹಳೆಯ ಬಟ್ಟೆ ಹಾಗೂ ಪುಸ್ತಕಗಳನ್ನು ನೀಡುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಈ ಜೋಡಿ
ಈ ಅಸ್ಸಾಮೀ ಜೋಡಿಯ ಮದುವೆಗೆ ಬಂದ ಅತಿಥಿಗಳಿಗೆ ಉಡುಗೊರೆಯಾಗಿ ಡಿಯೋಡಾರ್ ಸಿಡರ್, ಸ್ಥಳೀಯವಾಗಿ ದೇವದಾರು ಎಂದು ಕರೆಯಲಾಗುವ ಸಸಿಗಳನ್ನು ನೀಡಲಾಗಿದೆ.
ಇತ್ತೀಚೆಗೆ ಮದುವೆಯಾಗುತ್ತಿರುವ ಜೋಡಿಗಳು ವಿಶಿಷ್ಟ ಜಾಗಗಳಲ್ಲಿ, ಅಲಂಕಾರಿಕ ಫೋಟೋಶೂಟ್‌ನೊಂದಿಗೆ ಮದುವೆಯಾಗ ಬಯಸುತ್ತಾರೆ. ಆದರೆ ಈ ಅಸ್ಸಾಮೀ ಜೋಡಿ ವಿಶಿಷ್ಠವಾದ ವಿಭಿನ್ನ ರೀತಿಯಲ್ಲಿ ಮದುವೆಯಾಗಿ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ.
ಭೂಪೆನ್ ರಭಾ ಮತ್ತು ಬಬಿತಾ ಬೊರೊ ದಂಪತಿಗಳು ತಮ್ಮ ಮದುವೆಯಲ್ಲಿ ಯಾವುದೇ ಅಲಂಕಾರಿಕ ಉಡುಗೊರೆಗಳನ್ನು ಸ್ವೀಕರಿಸದಿರಲು ನಿರ್ಧರಿಸಿದರು. ಫೆಬ್ರುವರಿ ಒಂದರಂದು ಅಸ್ಸಾಂನ ಬಕ್ಸಾ ಜಿಲ್ಲೆಯ ಮುಷಲ್ಪುರದ ನಂ 2 ಕಟಲಿಗಾಂವ್ನಲ್ಲಿ ನಡೆದ ಸಮಾರಂಭದಲ್ಲಿ ಅವರು, ಸಂವೇದನಾಶೀಲ ವಿಧಾನವನ್ನು ಅನುಸರಿಸಿದರು.
ತಮ್ಮ ಮದುವೆಯ ಆಮಂತ್ರಣ ಪತ್ರದಲ್ಲಿ ‘ಮನುಕುಲಕ್ಕೆ ಸೇವೆ' ಎಂಬ ಸಂದೇಶ ಸೇರಿಸಿದ್ದರು, ಅತಿಥಿಗಳಿಗೆ ಹಳೆಯ ಬಟ್ಟೆಗಳನ್ನು ಅಥವಾ ಪುಸ್ತಕಗಳನ್ನು ತರುವಂತೆ ಕೋರಿ ಸಂದೇಶವನ್ನು ಪ್ರಕಟಿಸಲಾಗಿತ್ತು.
ಅವರು ಹಳೆಯ ಬಟ್ಟೆಗಳನ್ನು ನಿರ್ಗತಿಕರಿಗೆ ಹಾಗೂ ಪುಸ್ತಕಗಳನ್ನು ಹಳ್ಳಿಯ ತೆರೆದ ಗ್ರಂಥಾಲಯಕ್ಕೆ ವಿತರಿಸಲಾಗುತ್ತದೆ.
ಇದರ ಬಗ್ಗೆ ಮುಶಲ್‌ಪುರದ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ರಭಾ ಮಾತನಾಡುತ್ತಾ,
"ನಾವು ಮದುವೆಯ ಬಗ್ಗೆ ಮಾತನಾಡಿದೆವು ಅಂದರೆ ಅದು ಸ್ವಾಭಾವಿಕವಾಗಿ ಊಟ, ಜನ ಹಾಗೂ ಉಡುಗೊರೆಯ ಬಗ್ಗೆಯಾಗಿರುತ್ತದೆ. ಸುಮಾರು 3,000 ಸಾವಿರ ಹತ್ತಿರದ ಹಾಗೂ ದೂರದ ಬಂಧುಗಳು ಬರುವರೆಂದು ಭಾವಿಸಿದ ನಾನು ಮದುವೆ ಆಮಂತ್ರಣ ಪತ್ರಿಕೆಯ ಹಿಂದೆ ಒಂದು ಸಂದೇಶ ಪ್ರಕಟಿಸಿದೆ. ನಮ್ಮ ಹಳ್ಳಿಯಿಂದ ಜನರು ಇದೊಂದು ಜಾಗೃತಿಗಾಗಿ ತೆಗೆದುಕೊಂಡ ಉದಾಹರಣೆ ಎಂದು ತಿಳಿಯಬಹುದು ಎಂದು ನ್ಯೂಸ್ 18 ವರದಿ ಮಾಡಿದೆ.
ಪ್ರತಿಉಡುಗೊರೆಯಾಗಿ ದೇವದಾರು ಸಸಿ.
ಪ್ರತಿಯಾಗಿ, ಅತಿಥಿಗಳಿಗೆ ದೇವದಾರು ಸಸಿಗಳನ್ನು ನೀಡಲಾಯಿತು. ಈ ಉಡುಗೊರೆಗಳನ್ನು ಜನರಿಗೆ ಗಿಡನೆಡಲು ಪ್ರೋತ್ಸಾಹ ನೀಡಲು ಅಸ್ಸಾಮಿನ ಅರಣ್ಯ ಇಲಾಖೆಯ ವತಿಯಿಂದ ಪ್ರಾಯೋಜಿಸಲಾಗಿತ್ತು.
ರಭಾ ಇದು ಮೌಲ್ಯಯುತ ಶಿಕ್ಷಣ ನೀಡುವ ಸಲುವಾಗಿ ಜನರಿಗೆ ಸ್ಪೂರ್ತಿ ನೀಡಲು ದೊಡ್ಡ ಹೆಜ್ಜೆಯಾಗಿದೆ ಎಂದರು, ಸಿಎನ್‌ಬಿಸಿ 18 ವರದಿ.
ಅವಳು ನಮಗೆ ತುಂಬಾ ಬೆಂಬಲ ನೀಡಿದ್ದಾಳೆ. ನಮ್ಮ ಯೋಜನೆ ಇಷ್ಟು ದೊಡ್ಡ ಯಶಸ್ಸನ್ನು ಪಡೆಯುತ್ತದೆ ಎಂದು ನಾವು ಎಂದೂ ಭಾವಿಸಿರಲಿಲ್ಲ. ನಾವು ಪ್ರೀತಿಸಿ ಮದುವೆಯಾದೆವು, ಬಬಿತಾಳನ್ನು ನನ್ನ ಜೀವನ ಸಂಗಾತಿಯನ್ನಾಗಿ ಪಡೆಯಲು ನಾನು ದೇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
ಕೇವಲ ರಭಾ ಅಲ್ಲ, ಅವರ ಹಳ್ಳಿಯ ಜನರು ಸಹ ಈ ಯಶಸ್ಸಿನ ಹಿಂದಿದ್ದಾರೆ.
ಮೊದಲು, ಬಸ್ಕಾ ಜಿಲ್ಲೆಯಲ್ಲಿ ನಂ.2 ಕಟಲಿಗಾವ್ ಅತ್ಯಂತ ಸ್ವಚ್ಚ ಊರಾಗಿತ್ತು. ಇಂದಿಗೂ ಕೂಡ ಹಳ್ಳಿಯ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾನರ್‌ನ ಮೇಲೆ ಪರಿಸರ ಸಂರಕ್ಷಣೆಯ ಹಾಗೂ ಸಾಮಾಜಿಕ ಕಾನೂನಿನ ಸಂದೇಶಗಳಿವೆ. ಅಂತಹ ಒಂದು ಬ್ಯಾನರ್‌ಅನ್ನು ರಭಾರ ಮನೆಯ ಮೇಲೂ ಕಾಣಬಹುದಾಗಿದೆ.
ಗ್ರಾಮ ಸಂಘಗಳ ಬಗ್ಗೆ ಮಾತನಾಡುತ್ತಾ, ರಭಾ,
"ನಮ್ಮಲ್ಲಿ ಮೂರು ಸಂಘಗಳಿದ್ದು, ಎಲ್ಲರಿಗೂ ವಿವಿಧ ಭಾಗಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸಮವಾಗಿ ನೀಡಲಾಗಿದೆ. ಈ ಸಂಘಗಳು ಸಗಣಿ ಬಾಚುವುದರಿಂದ ಹಿಡಿದು - ಯಾರಾದರೂ ಕಾನೂನನ್ನು ಉಲ್ಲಂಘಿಸುತ್ತಾರಾ ಎಂದು ನೋಡುವವರೆಗೂ ಕೆಲಸ ಮಾಡುತ್ತದೆ. ನಾವು ಬುಡಕಟ್ಟು ಜನಾಂಗದವರಾದರೂ, ಮದ್ಯ ಮಾರಾಟವನ್ನು ನಿಷೇಧಿಸಿದ್ದೇವೆ. ಯಾರಾದರೂ ಮದ್ಯ ಸೇವನೆ ಮಾಡುತ್ತಿರುವುದು ಕಂಡಬಂದಲ್ಲಿ 10,000 ಸಾವಿರ ದಂಡವನ್ನು ಪಾವತಿಸಬೇಕಾಗುತ್ತದೆ.”