ಹಿರೇಗೌಡರ ಮಂಡ್ಯ ಟು ಇಂಟರ್​ನ್ಯಾಷನಲ್​ ಸ್ಟೋರಿ

ಟೀಮ್​ ವೈ.ಎಸ್​. ಕನ್ನಡ

22nd May 2016
  • +0
Share on
close
  • +0
Share on
close
Share on
close

ಮನಸ್ಸಿದ್ದರೆ ಮಾರ್ಗ. ಏನನ್ನಾದರು ಸಾಧಿಸಬೇಕಾದ್ರೆ ಮನಸ್ಸಿನಲ್ಲಿ ಹಠ ಮತ್ತು ಛಲ ಇರಬೇಕಷ್ಟೆ ಅನ್ನೋದನ್ನ ಅದೆಷ್ಟೋ ಜನರು ಹೇಳುತ್ತಲೇ ಬಂದಿದ್ದಾರೆ. ಈ ಮಾತನ್ನ ಗಂಭಿರವಾಗಿ ತೆಗೆದುಕೊಂಡವರು ಯಶಸ್ಸಿನ ಸಾವಿರಾರು ಮೆಟ್ಟಿಲುಗಳನ್ನ ಏರುತ್ತಾ ಜೀವನದಲ್ಲಿ ಸಾಧನೆ ಮಾಡುತ್ತಾ ಮುಂದೆ ಹೋಗುತ್ತಿದ್ದಾರೆ. ಇಂತಹ ಮಾತಿಗೆ ಇಂದಿಗೆ ಉತ್ತಮ ಉದಾಹರಣೆ ಮಂಡ್ಯದ ಹೀರೇಗೌಡ.

image


ಸೆಕ್ಯೂರಿಟಿ ಗಾರ್ಡ್ ಮಾಡಿದ ವಿಶ್ವ ಮಟ್ಟದಲ್ಲಿ ಸಾಧನೆ

ಹೀರೆಗೌಡ ಮೂಲತಃ ಮಂಡ್ಯದ ನೋದೆಕೊಪ್ಪಲು ಗ್ರಾಮದವರು. ಚಿಕ್ಕಂದಿನಿಂದಲೇ ಮನೆಯ ಜವಬ್ದಾರಿ ಇದ್ದಿದ್ದರಿಂದ ಹೀರೇಗೌಡರಿಗೆ ಎಸ್.ಎಸ್.ಎಲ್. ಸಿ.ಯಿಂದ ಮುಂದಕ್ಕೆ ಓದಲು ಸಾಧ್ಯವಾಗಲಿಲ್ಲ. ಮನೆಯ ನಿರ್ವಹಣೆಗಾಗಿ ಮೈಸೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ಸಿಗುತ್ತಿದ್ದ ಸಂಬಳ ಮನೆ ನಿರ್ವಹಣೆ ಮತ್ತು ಜೀವನಕ್ಕೆ ಸಾಲದ ಕಾರಣ ಸ್ನೇಹಿತರ ಮಾತಿನಂತೆ ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದ್ರು. ಅಂದೆ ಹೀರೇಗೌಡ ಸಾಧನೆಯ ಮೊದಲನೆ ಮೆಟ್ಟಿಲು ಹತ್ತಿದ್ದು. ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಅರಸಿ ಬಂದಿದ್ದು, ಮೊದಲಿಗೆ ತಿಥಿ ಸಿನಿಮಾದ ನಿರ್ದೇಶಕ ರಾಮರೆಡ್ಡಿ ಅವರ ಮನೆಗೆ. ರಾಮರೆಡ್ಡಿ ಅವರ ಮನೆಯಲ್ಲಿ ಕೆಲಸ ಮಾಡೋ ಸಮಯದಲ್ಲಿ ಹೀರೇಗೌಡ ಅವರಿಗೆ ರಾಮರೆಡ್ಡಿ ಅವರ ಪರಿಚಯವಾಗುತ್ತೆ. ಚಿಕ್ಕಂದಿನಿಂದಲೇ ಒಟ್ಟೊಟ್ಟಿಗೆ ಬೆಳೆದ ರಾಮ್ ಮತ್ತು ಹೀರೆಗೌಡರ ಬಾಂಧವ್ಯ ತುಂಬಾ ಗಟ್ಟಿ ಆಗುತ್ತಾ ಬಂತು. ಮೂರು ವರ್ಷದ ನಂತರ ತಾಯಿಯನ್ನ ಕಳೆದುಕೊಂಡ ಹೀರೇಗೌಡರು ಮನೆಗೆ ಹಿಂತಿರುಗೋ ಆಲೋಚನೆ ಮಾಡುತ್ತಾರೆ. ಆದ್ರೆ ರಾಮ್​ ಅವರ ಸ್ನೇಹ ಮತ್ತು ರಾಮ್ ಅವರ ಮನೆಯವರ ಪ್ರೀತಿ ಹೀರೇಗೌಡರನ್ನ ರಾಮ್ ರೆಡ್ಡಿ ಅವ್ರ ಮನೆಯಲ್ಲಿ ಒಬ್ಬರನ್ನಾಗಿ ಮಾಡಿ ಬಿಡುತ್ತೆ. 

image


ಸೆಕ್ಯೂರಿಟಿ ಕೆಲಸಕ್ಕೆ ವಿದಾಯ ಸಮಾಜ ಸೇವೆಗೆ ನಾಂದಿ

ಸೆಕ್ಯೂರಿಟಿ ಕೆಲಸ ಸಾಕಾಗಿದ್ದ ಹೀರೇಗೌಡರು ರಾಮ್ ರೆಡ್ಡಿ ಅವ್ರ ತಾಯಿ ಅನಿತಾ ರೆಡ್ಡಿ ಅವ್ರ ಬಳಿ ಆಫೀಸ್ ಬಾಯ್ ಆಗಿ ಸೇರಿಕೊಂಡು ಅನಿತಾ ಅವ್ರ ಜೊತೆ ಜೊತೆಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಜೀವನ ಮುಂದಿವರೆಯುತ್ತಾ ಏನಾದ್ರು ಸಾಧನೆ ಮಾಡಬೇಕು ಅನ್ನೋ ಇಂಗಿತ ಮಾತ್ರ ಹೀರೇಗೌಡ ಅವ್ರಿಗೆ ಎಂದಿಗೂ ಕಡಿಮೆ ಆಗಲಿಲ್ಲ. ಅನಿತಾ ರೆಡ್ಡಿ ಅವ್ರ ಜೊತೆ ಕಾರ್ಯಕ್ರಮಗಳಿಗೆ ಹೋದಾಗ ಕ್ಯಾಮೆರಾ ವರ್ಕ್ ಮಾಡೋದನ್ನ ಅಭ್ಯಾಸ ಮಾಡಿಕೊಳ್ತಾರೆ. ಅಷ್ಟರ ಹೊತ್ತಿಗೆ ಸ್ನೇಹಿತ ರಾಮ್ ಕೂಡ ವಿದೇಶದಿಂದ ತಮ್ಮ ಪದವಿ ವ್ಯಾಸಂಗವನ್ನ ಮುಗಿಸಿಕೊಂಡು ಬರುತ್ತಾರೆ. ಇಬ್ಬರು ಸ್ನೇಹಿತರು ಸೇರಿ ನಾವ್ಯಾಕೆ ಸಿನಿಮಾ ಮಾಡಬಾರದು ಅನ್ನೋ ನಿರ್ಧಾರಕ್ಕೆ ಬರುತ್ತಾರೆ. ಅದರಂತೆ ಒಂದು ಕಿರುಚಿತ್ರ ಮಾಡಿ ಅದರಿಂದ ಜನರ ಮೆಚ್ಚುಗೆಯನ್ನ ಪಡೆಯುತ್ತಾರೆ. ನಂತ್ರ ಶುರುವಾಗುತ್ತೆ ತಿಥಿ ಸಿನಿಮಾ ತಯಾರಿ.

image


ನೋದೆಕೊಪ್ಪಲಿನಲ್ಲಿ ಹುಟ್ಟಿತ್ತು ತಿಥಿ

ಸಿನಿಮಾ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದಾಗ ರಾಮ್ ಮತ್ತು ಹೀರೇಗೌಡ ಇಬ್ಬರು ನೋದೆಕೊಪ್ಪಲಿಗೆ ಬೇಟಿ ನೀಡುತ್ತಾರೆ. ಆಗ ಅಲ್ಲಿಯ ಸುಡಿನ ಕತೆಯನ್ನ ಏಕೆ ಮಾಡಬಾರದು ಅಂತ ತೀರ್ಮಾನಿಸಿ ಸಿನಿಮಾ ತಯಾರಿ ಮಾಡಿಕೊಳ್ತಾರೆ ಐದು ವರ್ಷದ ಪರಿಶ್ರಮದಿಂದ ಈಗ ತಿಥಿ ಸಿನಿಮಾ ತೆರೆ ಮೇಲೆ ಮೂಡಿ ಬಂದಿದೆ. ಚಿತ್ರ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಮೆಚ್ಚುಗೆ ಪಡೆದುಕೊಂಡಿದೆ. ಇನ್ನೂ ವಿಶೇಷ ಅಂದ್ರೆ ತನ್ನದೇ ನೆಲದಲ್ಲಿ ಹೀರೇಗೌಡರ ಪ್ರತಿಭೆಯನ್ನ ಗುರುತಿಸಿ ಚಿತ್ರಕ್ಕೆ ಹೀರೇಗೌಡ ಅವರು ಬರೆದಿರೋ ಸಂಭಾಷಣೆಗೆ ಅತ್ಯುತ್ತಮ ಸಂಭಾಷಣೆ ರಾಜ್ಯ ಪ್ರಶಸ್ತಿಯನ್ನ ನೀಡಲಾಗಿದೆ. ಇಷ್ಟು ವರ್ಷದ ಶ್ರಮದ ಫಲವಾಗಿ ಜನರಿಂದ ಒಳ್ಳೆ ಪ್ರಶಂಸೆ ಸಿಕ್ಕಿರೋದು ಹೀರೇಗೌಡರ ಸಾಧನೆಗೆ ಮತ್ತಷ್ಟು ಸ್ಪೂರ್ತಿಯಾಗಿದೆ. ಓಟ್ಟಾರೆ ನಮ್ಮ ದೇಸಿ ಸೊಗಡನ್ನ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುವಂತೆ ಮಾಡಿದ ಈ ಯುವಕನ ಬಗ್ಗೆ ನಾವೆಲ್ಲರು ಹೆಮ್ಮೆ ಪಡಲೇ ಬೇಕು.

ಇದನ್ನು ಓದಿ:

1. ಹೂವಿನ ಹಾದಿಯಲ್ಲಿ ಸಾಧನೆಯ ಕಂಪು..!

2. ಮೌನಜೀವಿಗಳಿಗೊಂದು ಹೊಸ ಸ್ಪೂರ್ತಿಯ ನೆಲೆ..

3. ಗೋಧಿ ಬ್ಯಾಂಕ್​ನಿಂದ ಬದಲಾಯಿತು ಜೀವನದ ಕಥೆ...

  • +0
Share on
close
  • +0
Share on
close
Share on
close

Our Partner Events

Hustle across India