ಬೆಂಗಳೂರಿನಲ್ಲಿ ತಮ್ಮ ಕೌಶಲವನ್ನು ಪ್ರದರ್ಶಿಸಿದ ಏಷ್ಯಾದ ಮೊದಲ ಮಹಿಳಾ ಅಗ್ನಿಶಾಮಕ ದಳ

14 ಜನರ ಏಷ್ಯಾದ ಪ್ರಥಮ ಮಹಿಳಾ ವೈಮಾನಿಕ ಅಗ್ನಿಶಾಮಕ ತಂಡವು, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನ ಫೈರ್ ಡ್ರಿಲ್‌ನ ಅಣುಕನ್ನು ಬೆಂಗಳೂರಿನಲ್ಲಿ ಪ್ರದರ್ಶಿಸಿದರು.

ಬೆಂಗಳೂರಿನಲ್ಲಿ ತಮ್ಮ ಕೌಶಲವನ್ನು ಪ್ರದರ್ಶಿಸಿದ ಏಷ್ಯಾದ ಮೊದಲ ಮಹಿಳಾ ಅಗ್ನಿಶಾಮಕ ದಳ

Thursday March 05, 2020,

1 min Read

ಮಂಗಳವಾರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಏಷ್ಯಾದ ಮೊದಲಮಹಿಳಾ ವಿಮಾನ ನಿಲ್ದಾಣದ ಅಗ್ನಿಶಾಮಕ ದಳದ ಅಣುಕು ಪ್ರದರ್ಶನದೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮಾಚರಣೆಯನ್ನು ಪ್ರಾರಂಭಿಸಿತು. ಅಣಕು ಅಗ್ನಿಶಾಮಕ ಡ್ರಿಲ್ ಮೂಲಕ ತುರ್ತು ರಕ್ಷಣಾ ಸೇವೆಗೆ ತಮ್ಮ ಸಿದ್ಧತೆಯನ್ನು ಪ್ರದರ್ಶಿಸಿದರು.


ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು


ಮಾರ್ಚ್ 2019 ರಲ್ಲಿ ಕರ್ನಾಟಕದಾದ್ಯಂತ ನೇಮಕಗೊಂಡ ಅಗ್ನಿಶಾಮಕ ದಳದವರನ್ನು ಶ್ಲಾಘಿಸಿದ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಕಾರ್ಯಾಚರಣಾಧಿಕಾರಿ ಥಾಮಸ್ ಹಾಫ್ ಆಂಡರ್ಸನ್ ಪತ್ರಿಕಾಗೋಷ್ಠಿಯಲ್ಲಿ,


ಬಿಐಎಎಲ್ ಮಹಿಳೆಯರಿಗೆ ಸಾಂಪ್ರದಾಯಿಕವಾಗಿ ಪುರುಷ ಭದ್ರಕೋಟೆಯಂತಿದ್ದ ಗೋಡೆಯನ್ನು ಭೇದಿಸಲು ಒಂದು ಮಾರ್ಗವನ್ನು ರಚಿಸುವ ಮೂಲಕ ಮಾದರಿ ಕಾರ್ಯ ಮಾಡಿದೆ. ಅಗ್ನಿಶಾಮಕ ದಳದವರಾಗಿ ಹೊರಹೊಮ್ಮಲು ಕಠಿಣ ತರಬೇತಿಯ ಸಮಯದಲ್ಲಿ ಮಹಿಳೆಯರು ದೃಢ ಸಂಕಲ್ಪವನ್ನು ಪ್ರದರ್ಶಿಸುತ್ತಿರುವುದು ಹೃದಯಸ್ಪರ್ಶಿಯಾಗಿತ್ತು. ಕೆಲಸ ಮತ್ತು ಉತ್ಕೃಷ್ಟತೆಯ ಬಗೆಗಿನ ಈ ಉತ್ಸಾಹ ಅನೇಕರಿಗೆ ಸ್ಫೂರ್ತಿ ನೀಡುತ್ತದೆ,” ಎಂದರು.


ಕೋಲ್ಕತ್ತಾದ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅಗ್ನಿಶಾಮಕ ತರಬೇತಿ ಕೇಂದ್ರದಲ್ಲಿ ನಾಲ್ಕು ತಿಂಗಳ ಕಠಿಣ ತರಬೇತಿಯನ್ನು ಒಳಗೊಂಡ ಒಂದು ವರ್ಷದ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, 2018 ರ ಫೆಬ್ರವರಿಯಲ್ಲಿ 14 ಮಹಿಳೆಯರ ತಂಡವನ್ನು ಸೇರಿಸಲಾಯಿತು.


ಎಆರ್‌ಎಫ್‌ಎಫ್ ತಂಡವು, ತುರ್ತು ಸಮಯದಲ್ಲಿ ವಿಮಾನದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಪ್ರತಿಕ್ರಿಯೆ, ಅಪಾಯವನ್ನು ತಗ್ಗಿಸುವುದು, ಸ್ಥಳಾಂತರಿಸುವುದು ಮತ್ತು ರಕ್ಷಿಸುವುದನ್ನು ಒಳಗೊಂಡಿದೆ.


ಪ್ರಸ್ತುತ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಿಗಳಲ್ಲಿ ಶೇಕಡಾ 15 ರಷ್ಟು ಮಹಿಳೆಯರಿದ್ದಾರೆ. ಆದರೆ, ಬಿಐಎಎಲ್ ಸಂಸ್ಥೆ ತನ್ನನ್ನು ಹೆಚ್ಚು ವೈವಿಧ್ಯಮಯ ಮತ್ತು ಪ್ರತಿಯೊಬ್ಬರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವತ್ತ ಕೆಲಸ ನಿರ್ವಹಿಸುತ್ತದೆ ಎಂದು ಹೇಳಿಕೊಂಡಿದೆ.


ಅಗ್ನಿಶಾಮಕ ಸೇವೆಯಿಂದ ಹಿಡಿದು ಸಶಸ್ತ್ರ ಪಡೆಗೆ ‘ಅಸಾಂಪ್ರದಾಯಿಕ’ ವೃತ್ತಿಗಳಿಗೆ ಕಾಲಿಡುವ ಮೂಲಕ ಹೆಚ್ಚು ಹೆಚ್ಚು ಭಾರತೀಯ ಮಹಿಳೆಯರು ತಮ್ಮ ಶಕ್ತಿಯನ್ನು ಸಾಬೀತುಪಡಿಸುತ್ತಿದ್ದಾರೆ. ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವು ತನ್ನ ಮೊದಲ ಮಹಿಳಾ ಫೈರ್‌ಫೈಟರ್‌ ದಾನಿಯಾ ಸನ್ಯಾಲ್ ಅವರನ್ನು 2018 ರಲ್ಲಿ ನೇಮಕ ಮಾಡಿತು.


ಅಲ್ಲದೆ, ಕಳೆದ ವರ್ಷ ನವೆಂಬರ್‌ನಲ್ಲಿ 28 ವರ್ಷದ ರೆಮ್ಯಾ ಶ್ರೀಕಾಂತನ್, ಸೇವಾ ಇಲಾಖೆಗೆ ಜೂನಿಯರ್ ಅಸಿಸ್ಟೆಂಟ್ (ಎಎಫ್‌ಎಸ್) ಆಗಿ ಸೇರಿಕೊಂಡು ಚೆನ್ನೈ ವಿಮಾನ ನಿಲ್ದಾಣದ ಮೊದಲ ಮಹಿಳಾ ಫೈರ್‌ಫೈಟರ್‌ ಆದರು.