ಅಭಿಮಾನಿಗಳೇ ನಮ್ಮನೆ ದೇವರು ಎಂದ ಬೆಂಗಳೂರು ಫುಟ್ಬಾಲ್ ಕ್ಲಬ್

ಬೆಂಗಳೂರು ಫುಟ್ಬಾಲ್ ಕ್ಲಬ್ ತನ್ನ ಗರ್ಭಿಣಿ ಅಭಿಮಾನಿಗೆ ಕೇರಳ ಬ್ಲಾಸ್ಟರ್ಸ್ ವಿರುದ್ಧದ ರವಿವಾರದ ಐ ಎಸ್‌ ಎಲ್ ಪಂದ್ಯಕ್ಕೆ ವಿಶೇಷ ಆಸನದ ವ್ಯವಸ್ಥೆ ಮಾಡುವ ಮೂಲಕ ಸ್ವಾಗತಿಸಿದೆ.

ಅಭಿಮಾನಿಗಳೇ ನಮ್ಮನೆ ದೇವರು ಎಂದ ಬೆಂಗಳೂರು ಫುಟ್ಬಾಲ್ ಕ್ಲಬ್

Friday November 22, 2019,

2 min Read

ಮೇಘನಾ (ಚಿತ್ರಕೃಪೆ: ಟ್ವಿಟರ್)

ವೃತ್ತಿಯಿಂದ ಗಣಿತ ಶಿಕ್ಷಕಿಯಾದ ಮೇಘನಾ ನೈರ್ ಈಗ 33 ವಾರಗಳ ಗರ್ಭಿಣಿ. ಆರೋಗ್ಯದ ತೊಂದರೆ ಇರುವುದರಿಂದ ಮತ್ತು ಹಿಂದಿನ ಪಂದ್ಯದಲ್ಲಿ ಆದ ತೊಂದರೆಗಳಿಂದ ಬೆಂಗಳೂರು ಫುಟ್‌ ಬಾಲ್ ಕ್ಲಬ್‌ ಗೆ ಟ್ವೀಟ್ ಮಾಡಿ ಆಹಾರ ಮತ್ತು ನೀರನ್ನು ಮನೆಯಿಂದಲೇ ತರುವುದಕ್ಕಾಗಿ ವಿಚಾರಿಸಿದಾಗ,

#FanFirst (ಅಭಿಮಾನಿಗಳೆ ಮೊದಲು) ಎಂಬ ಬಿ ಎಫ್‌ ಸಿಯ ಘೋಷವಾಕ್ಯದಂತೆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸ್ಪಂದಿಸಿದ ಬೆಂಗಳೂರು ಎಫ್‌ ಸಿ ಸಾಮಾನ್ಯವಾಗಿ ಅವರು ನೋಡುವ ಪಶ್ಚಿಮ ಭಾಗದಲ್ಲಿನ ಆಸನದ ಟಿಕೆಟ್ ಬದಲಾಗಿ ಓವ್ನರ್ಸ್‌ ಬಾಕ್ಸ್ ನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನು ನೀಡಿತು.


ಈ ವರ್ಷದ ಸಾಲಿನ ಎರಡು ಪಂದ್ಯಗಳನ್ನು ಕಂಠೀರವದಲ್ಲಿ ನೋಡಿದ ಮೇಘನಾ ಅವರು ತಾವು ಅನುಭವಿಸಿದ ತೊಂದರೆಗಳ ಬಗ್ಗೆ ಸ್ಪೋರ್ಟ್ಸ್‌ ಸ್ಟಾರ್ ಜೊತೆ ಮಾತನಾಡುತ್ತಾ,


"ಕ್ರೀಡಾಂಗಣದಲ್ಲಿ ಲಿಫ್ಟ್ ಇಲ್ಲದ ಕಾರಣ ಆಸನಗಳಿಗೆ ತಲುಪಲು ಮೆಟ್ಟಿಲುಗಳನ್ನೇ ಬಳಸಬೇಕಾಯಿತು ಮತ್ತು ಪಶ್ಚಿಮ ಭಾಗದಲ್ಲಿ ಅಭಿಮಾನಿಗಳು ಕಿಕ್ಕಿರುದು ತುಂಬಿರುತ್ತಾರೆ ಮತ್ತು ಇದರಂದ ನಮಗೆ ಊಟದ ತೊಂದರೆ ಸಹ ಆಯಿತು,” ಎಂದರು

"ಹತ್ತಿರದಲ್ಲಿ ಯಾವುದೇ ವಿಶ್ರಾಂತಿ ಕೊಠಡಿಗಳಿಲ್ಲ. ನೀವು ಹೋಗಬೇಕಾದರೆ, ನೀವು ಕೆಳಕ್ಕೆ ಬರಬೇಕಾಗುತ್ತದೆ. ಇದು ಪ್ರಯಾಸದಾಯಕವಾಗಿದೆ ಮತ್ತು ವೀಕ್ಷಿಸಲು ಬರುವ ಮಕ್ಕಳಿಗೆ ತೊಂದರೆಯಾಗುತ್ತದೆ. ನಾವು 90 ನಿಮಿಷಗಳ ಕಾಲ ತಡೆದುಕೊಳ್ಳಬಹುದು, ಆದರೆ ಅದು ಮಕ್ಕಳಿಗೆ ಸ್ವಲ್ಪ ಕಷ್ಟವಾಗುತ್ತದೆ."


"ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದೇ ಇದಕ್ಕೆ ಕಾರಣ ಎಂದು ನಾನು ಉಹಿಸಿದ್ದೇನೆ. ಹಾಗಾಗಿ ನಾನು ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಯನ್ನು ತರಬಹುದೇ ಎಂದು ಕೇಳಿ ನಾನು ಅವರಿಗೆ ಟ್ವೀಟ್ ಮಾಡಿದ್ದೇ. ಅಭಿಮಾನಿಗಳು ಸಹ ಜವಾಬ್ದಾರಿಯಿಂದ ವ್ಯವಹರಿಸಬೇಕಾಗುತ್ತದೆ. ಮೊದಲು ನೀರಿನ ಬಾಟಲಿಗಳನ್ನು ಕ್ರೀಡಾಂಗಣದ ಒಳಗೆ ತರಲು ಅನುಮತಿ ಇದ್ದಾಗ, ಅಭಿಮಾನಿಯೊಬ್ಬರು ಪಿಚ್ ಮೇಲೆ ಬಾಟಲಿಯನ್ನು ಎಸೆದಿದ್ದರಿಂದ ತಂಡಕ್ಕೆ ದಂಡ ವಿಧಿಸಲಾಯಿತು ಎಂದು ತಂದಡವರು ವಿವರಿಸಿದವರು. ಈ ರೀತಿಯ ನಿರ್ಬಂಧಗಳು ಅದನ್ನು ತಪ್ಪಿಸಲು ಒಂದು ಮಾರ್ಗವಾಗಿದೆ," ಎಂದರು.


ಟ್ವೀಟ್ ನೋಡಿದ ತಕ್ಷಣ ಆಡಳಿತ ಮಂಡಳಿಗೆ ಅನುಮತಿ ನೀಡಲು ತುಂಬಾ ಸಮಯ ಬೇಕಾಗಲಿಲ್ಲ,

"ಇಂತಹ ಸಣ್ಣ ವಿಷಯಗಳು ಕ್ಲಬ್ ಮತ್ತು ಅದನ್ನು ಬೆಂಬಲಿಸುವ ಜನರ ನಡುವೆ ವಿಶಿಷ್ಟ ಭಾಂಧವ್ಯವನ್ನು ಬೆಸೆಯುತ್ತವೆ," ಎಂದು ಮಾಧ್ಯಮ ವ್ಯವಸ್ಥಾಪಕ ಕುನಲ್ ಮಜ್ಗಾಂವ್ಕರ್ ಸ್ಪೋರ್ಟ್ಸ್‌ ಸ್ಟಾರ್ ಗೆ ತಿಳಿಸಿದರು.


ಬೆಂಗಳೂರು ಫುಟ್ಬಾಲ್ ಕ್ಲಬ್ ಸಾಮಾಜಿಕ ಕಳಕಳಿ ಹೊಂದಿರುವ ಆಭಿಮಾನಿಗಳಿಗೆ ಪಂದ್ಯದ ಅತ್ಯುನ್ನತ ಪ್ರದರ್ಶನ ನೀಡುವದರ ಜೊತೆಗೆ, ಈ ವರ್ಷ ಬೆಂಗಳೂರು ಫುಟ್ಬಾಲ್ ಕ್ಲಬ್ ತನ್ನ ಆಟಗಾರರು ಗಳಿಸುವ ಪ್ರತಿ ಗೋಲಿಗೆ ಆರು ಗಿಡಗಳನ್ನು ನೆಡುವದಾಗಿ ಹೇಳಿ ಒಂದೋಳ್ಳೆ ಕೆಲಸ ಮಾಡಲು ಮುಂದಾಗಿದೆ. ಇದು ನಮ್ಮ ಕ್ಲಬ್ ಎಂದು ಹೇಳಲು ಬೆಂಗಳೂರಿನವರಿಗೆಲ್ಲ ಹೆಮ್ಮೆ ಎನಿಸುತ್ತದೆ.