ಟ್ರಾಫಿಕ್‌ ನಿಯಂತ್ರಿಸಲು ಸಜ್ಜಾದ ಪೋಲಿಸ್‌ ಬೊಂಬೆಗಳು

ಅತಿಯಾದ ವಾಹನದಟ್ಟಣೆ ಮತ್ತು ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಾಗೂ ಸಂಚಾರಿನಿಯಮಗಳ ಉಲ್ಲಂಘನೆ, ಟ್ರಾಫಿಕ್ ಪೊಲೀಸರ ನಿದ್ದೆಗೇಡಿಸಿದೆ. ಎಲ್ಲೆಡೆ ಸಂಚಾರಿ ಪೊಲೀಸರ ನೇಮಕಕ್ಕೆ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿರುವ ಬೆಂಗಳೂರು ಟ್ರಾಫಿಕ್ ಪೋಲಿಸ್‌ ಅಧಿಕಾರಿಗಳು ಇದನ್ನೆಲ್ಲಾ ನಿಯಂತ್ರಿಸಲು ಬೊಂಬೆಗಳ ಮೊರೆ ಹೋಗಿದ್ದಾರೆ.

ಟ್ರಾಫಿಕ್‌ ನಿಯಂತ್ರಿಸಲು ಸಜ್ಜಾದ ಪೋಲಿಸ್‌ ಬೊಂಬೆಗಳು

Thursday November 28, 2019,

3 min Read

ಜನದಟ್ಟಣೆ ಅತಿಯಾಗಿರುವ ಬೆಂಗಳೂರು ಹಲವಾರು ಜನರ ಕರ್ಮಭೂಮಿಯು ಹೌದು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ ಇಲ್ಲಿನ ರಸ್ತೆಗಳಲ್ಲಿ ಉಂಟಾಗುವ ವಾಹನಗಳ ಓಡಾಟ ಮತ್ತು ಅಸಹನೀಯವಾದ ಟ್ರಾಫಿಕ್ ಜಾಮ್‌ಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ.


ಸಿಗ್ನಲ್ ನಲ್ಲಿ ಪೋಲಿಸ್‌ ಇದ್ದರೆ ಮಾತ್ರ ಟ್ರಾಫಿಕ್ ನಿಯಮಗಳನ್ನು ಪಾಲಿಸಿ ವಾಹನಚಲಾಯಿಸುವವರು ಬಹಳಷ್ಟು ಮಂದಿ. ಆದ್ದರಿಂದ ಬೆಂಗಳೂರು ಟ್ರಾಫಿಕ್ ಪೋಲಿಸ್‌ ಅಧಿಕಾರಿಗಳು, ಮನುಷ್ಯ ಆಕೃತಿಯ ಗೊಂಬೆಯನ್ನು ಅಗತ್ಯವಿರುವ ಜಂಕ್ಷನ್ ಗಳಲ್ಲಿ ನಿಲ್ಲಿಸಿದ್ದಾರೆ.


ಟ್ರಾಫಿಕ್ ಪೋಲಿಸ್‌ ಗೊಂಬೆಗಳು, ಥೇಟು ಸಂಚಾರಿ ಪೋಲಿಸ್‌ ರನ್ನೇ ಹೋಲುತ್ತಿದ್ದು, ಟ್ರಾಫಿಕ್ ಪೋಲಿಸ್ ಪುರುಷರ ಸಂಪೂರ್ಣ ಸಮವಸ್ತ್ರವನ್ನು ಮನುಷ್ಯಾಕೃತಿಗಳಿಗೆ ಒದಗಿಸಲಾಗಿದೆ, ಇದರಿಂದಾಗಿ ಇವು ಕರ್ತವ್ಯದಲ್ಲಿರುವ ಟ್ರಾಫಿಕ್ ಪೊಲೀಸರು ಧರಿಸಿರುವ ಪ್ರತಿದೀಪಕ ಕಿತ್ತಳೆ ಬಣ್ಣದ ಜಾಕೆಟ್ಗಳು, ಬಿಳಿ ಬಣ್ಣದ ಟ್ರಾಫಿಕ್ ಪೋಲಿಸ್‌ ಟೋಪಿ, ಕಪ್ಪು ಬೂಟುಗಳು, ಸಾಕ್ಸ್ ಮತ್ತು ಕೈಗವಸುಗಳನ್ನು ಧರಿಸಿ ಜೀವಂತ ಪೋಲಿಸ್‌ ರಂತೆಯೆ ಕಾಣಿಸುತ್ತವೆ.


ಕೆಂಗೇರಿ ಬಳಿ ನಿಯೋಜಿಸಲಾಗಿದ ಟ್ರಾಫಿಕ್ ಪೋಲಿಸ್‌ ಗೊಂಬೆ (ಚಿತ್ರಕೃಪೆ: ಟ್ವಿಟ್ಟರ್)



ಸಮವಸ್ತ್ರಧಾರಿ ಸಿಬ್ಬಂದಿಯ ಉಪಸ್ಥಿತಿಯು ಜನರು ನಿಯಮಗಳನ್ನು ಪಾಲಿಸುವಂತೆ ಮಾಡುತ್ತದೆ ಮತ್ತು ಹೆಚ್ಚು ಶಿಸ್ತುಬದ್ಧವಾಗಿರುತ್ತದೆ ಮತ್ತು ಇದು ನಗರದಲ್ಲಿ ಸಂಚಾರಿ ಶಿಸ್ತು ತರಲು ಈ ಟ್ರಿಕ್ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ರಸ್ತೆಯ ಹೆಚ್ಚಿನ ವಾಹನ ಚಾಲಕರು ಸಮವಸ್ತ್ರವನ್ನು ಮಾತ್ರ ಗಮನಿಸುತ್ತಾರೆ ಹೊರತು ಮುಖಗಳನ್ನಲ್ಲ, ಆದ್ದರಿಂದ ಈ ಟ್ರಿಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯಶಸ್ವಿಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಟ್ರಾಫಿಕ್ ಪೊಲೀಸರು ಕಡಿಮೆ ಸಿಬ್ಬಂದಿಯನ್ನು ಹೊಂದಿರುವುದರಿಂದ, ಖಾಲಿ ಹುದ್ದೆಗಳನ್ನು ಈ ಮನುಷ್ಯಾಕೃತಿಗಳು ತುಂಬುತ್ತಿವೆ.


ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬೆಂಗಳೂರು ನಗರದ ಹೆಚ್ಚುವರಿ ಆಯುಕ್ತ (ಸಂಚಾರ) ಬಿ. ಆರ್. ರವಿಕಾಂತ ಗೌಡ,


ಜನರು ಸಂಚಾರ ಪೋಲಿಸ್‌ ಸಿಬ್ಬಂದಿಯನ್ನು ಗುರುತಿಸಿದ ನಂತರ ನಿಯಮಗಳನ್ನು ಪಾಲಿಸುತ್ತಾರೆ ಎಂದು ನಾನು ಗಮನಿಸಿದ್ದೇನೆ. ಉದಾಹರಣೆಗೆ, ಚಾಲಕರು ಟ್ರಾಫಿಕ್ ಪೊಲೀಸರನ್ನು ಸಿಗ್ನಲ್‌ಗಳ ಬಳಿ ನೋಡಿದಾಗ ಅವರು ಸೀಟ್ ಬೆಲ್ಟ್‌ಗಳನ್ನು ಹಾಕುತ್ತಾರೆ. ರಸ್ತೆ ಬಳಕೆದಾರರ ಈ ನಡವಳಿಕೆಯು ನಗರದಲ್ಲಿ ಮನುಷ್ಯಾಕೃತಿಗಳನ್ನು ಸ್ಥಾಪಿಸುವಂತೆ ಮಾಡಿದೆ,” ಎಂದರು.


ರೈತರು ತಮ್ಮ ಬೆಳೆಗಳನ್ನು ಪಕ್ಷಿಗಳಿಂದ ರಕ್ಷಿಸಲು ಬೆದರು ಗೊಂಬೆಯನ್ನು ತಮ್ಮ ಹೊಲಗಳಲ್ಲಿ ನೆಡುವಂತೆ ಟ್ರಾಫಿಕ್ ಪೊಲೀಸರು ಜನರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸಲು ಈ ಗೊಂಬೆಯ ಮೊರೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವ ಪ್ರಯತ್ನವನ್ನು ಸಹ ಮಾಡಲು ಅಧಿಕಾರಿಗಳು ಚಿಂತಿಸುತ್ತಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಅಗತ್ಯವಿರುವ 200 ಜಂಕ್ಷನ್ ಗಳಲ್ಲಿ ಈ ಗೊಂಬೆಗಳು ಟ್ರಾಫಿಕ್ ಪೊಲೀಸರ ಕಾರ್ಯನಿರ್ವಹಿಸುತ್ತಿವೆ, ವರದಿ ದ ಹಿಂದೂ.


ನಗರ ಆಯುಕ್ತ ಭಾಸ್ಕರ್ ರಾವ್ ಮತ್ತು ಜಂಟಿ ಪೋಲಿಸ್‌ ಆಯುಕ್ತ (ಸಂಚಾರ) ಬಿ. ಆರ್. ರವಿಕಾಂತ ಗೌಡ ಅವರ ಆದೇಶದ ಮೇರೆಗೆ ಒಂದು ವಾರದ ಹಿಂದೆಯೇ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ, ಕೆಲವು ಪೋಲಿಸ್‌ ಠಾಣೆಗಳಿಗೆ ಪ್ರಾಯೋಗಿಕ ಆಧಾರದ ಮೇಲೆ ಈ ಮನುಷ್ಯಾಕೃತಿಗಳನ್ನು ಒದಗಿಸಲಾಗಿದೆ ಮತ್ತು ಹುಳಿಮಾವು ಮತ್ತು ಕೆಂಗೇರಿಯಂತಹ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಸಹ ನಿಯೋಜಿಸಲಾಗುತ್ತಿದೆ. ಶೀಘ್ರದಲ್ಲೇ, ಪ್ರತಿ ಟ್ರಾಫಿಕ್ ಪೋಲಿಸ್‌ ಠಾಣೆಗೆ ಸುಮಾರು ನಾಲ್ಕರಿಂದ ಐದು ಮನುಷ್ಯಾಕೃತಿಗಳನ್ನು ಒದಗಿಸಿ, ಹಗಲಿನಲ್ಲಿ ಬಿಡುವಿಲ್ಲದ ಜಂಕ್ಷನ್‌ಗಳು ಮತ್ತು ಕ್ರಾಸಿಂಗ್‌ಗಳಲ್ಲಿ ಇವುಗಳನ್ನು ನಿಯೋಜಿಸಲು ಅಧಿಕಾರಿಗಳು ಯೋಚಿಸುತ್ತಿದ್ದಾರೆ.


ಪ್ರತಿ ಒಂದು ಗಂಟೆಗೊಮ್ಮೆ 17 ಜನ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ನಾಲ್ಕುಗಂಟೆಗೊಮ್ಮೆ 4 ಜನ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿ ಪ್ರಾಣಕಳೆದುಕ್ಕೊಳ್ಳಿತ್ತಿರುವರು. ವಿಪರೀತ ವೇಗದಿಂದ ಸುಮಾರು 60% ಜನ ಪ್ರಾಣಕಳೆದು ಕೊಳ್ಳುತ್ತಿದ್ದರೆ ಇನ್ನೊಂದೆಡೆ ದಿನದಿಂದ ದಿನಕ್ಕೆ ವಾಹನಗಳ ನೊಂದಾವಣೆ ಹೆಚ್ಚುತ್ತಿರುವ ಸಂಧಿಗ್ಧತೆಯಲ್ಲಿ, ಇವೆಲ್ಲವನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರ ಜೊತೆ ಈ ಟ್ರಾಫಿಕ್ ಗೊಂಬೆಗಳ ಅಗತ್ಯವೂ ಪ್ರಮುಖವಾಗಬಹುದಾಗಿದೆ.


ಬೆಂಗಳೂರು ಮಿರರ್ ನೊಂದಿಗೆ ಮಾತನಾಡಿದ ಕೆಂಗೇರಿ ಸಂಚಾರ ಪೋಲಿಸ್‌ ಇನ್ಸ್‌ಪೆಕ್ಟರ್ ಶಿವಾಸ್ವಾಮಿ,


"ಪ್ರತಿ ಟ್ರಾಫಿಕ್ ಪೋಲಿಸ್‌ ಠಾಣೆ ಈ ಮನುಷ್ಯಾಕೃತಿಗಳನ್ನು ಹೊಂದಿದ್ದು, ಹಗಲಿನ ವೇಳೆಯಲ್ಲಿ, ಕಾರ್ಯನಿರತ ಜಂಕ್ಷನ್‌ಗಳು ಮತ್ತು ಕ್ರಾಸಿಂಗ್‌ಗಳಲ್ಲಿ ನಿಯೋಜಿಸಲಾಗುವುದು. ಟ್ರಾಫಿಕ್ ಪೊಲೀಸರು ಸ್ಥಳದಲ್ಲೇ ಇಲ್ಲದಿದ್ದರೂ ಸಹ ಅಧಿಕಾರಿಗಳ ಉಪಸ್ಥಿತಿಯ ಭಯವನ್ನು ತುಂಬಲು ಈ ಮನುಷ್ಯಾಕೃತಿಗಳು ಆಶಾದಾಯಕವಾಗಿ ಸಹಾಯ ಮಾಡುತ್ತವೆ. ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಮಾಡಲಾಗುತ್ತಿದೆ. ಸೂಚನೆಗಳನ್ನು ಒಂದು ವಾರದ ಹಿಂದೆ ನೀಡಲಾಗಿದೆ ಮತ್ತು ಪ್ರಸ್ತುತವಾಗಿ, ನಾವು ಅವುಗಳನ್ನು ಪರೀಕ್ಷಿಸುತ್ತಿದ್ದೇವೆ. ಶೀಘ್ರದಲ್ಲೇ ಹೆಚ್ಚಿನ ಮನುಷ್ಯಾಕೃತಿಗಳನ್ನು ಸಂಗ್ರಹಿಸಲಾಗುವುದು. ಈ ಮನುಷ್ಯಾಕೃತಿಗಳು ಕರ್ತವ್ಯದಲ್ಲಿರುವ ಟ್ರಾಫಿಕ್ ಪೊಲೀಸರನ್ನು ಬದಲಿಸುವುದಿಲ್ಲ ಆದರೆ ಪೊಲೀಸರೊಂದಿಗೆ ಹಾಜರಾಗುತ್ತವೆ," ಎಂದರು.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.