ಬೆಂಗಳೂರು ಮೂಲದ ವಿಜ್ಞಾನಿ ಅಭಿವೃದ್ಧಿಪಡಿಸಿದ ಕ್ಯಾನ್ಸರ್ ನಿಯಂತ್ರಣ ಕಿಟ್ ಅನ್ನು ಅನುಮೋದಿಸಿದ ಯುಎಸ್ಎಫ್ಡಿಎ
30 ವರ್ಷಗಳ ಸಂಶೋಧನೆಯ ನಂತರ, ಇನ್ನೊವೇಟಿವ್ ಟೆಕ್ನಾಲಜಿ ಕಂಪನಿಯಾದ ಆರ್ಗನೈಸೇಶನ್ ಡಿ ಸ್ಕಲೀನ್‌ನ ಅಧ್ಯಕ್ಷ ರಾಜಾ ವಿಜಯ್ ಕುಮಾರ್ ಅವರು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ತಡೆಯುವ ಸಾಮರ್ಥ್ಯವಿರುವ ಅದ್ಭುತ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.
ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌ನ (ಯುಎಸ್‌ಎಫ್‌ಡಿಎ) ಸಾಧನಗಳು ಮತ್ತು ವಿಕಿರಣಶಾಸ್ತ್ರದ ಆರೋಗ್ಯ ಕೇಂದ್ರವು ಸ್ತನ, ಪಿತ್ತಜನಕಾಂಗ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬೆಂಗಳೂರು ಮೂಲದ ವಿಜ್ಞಾನಿ ವೈದ್ಯಕೀಯ ಆವಿಷ್ಕಾರವನ್ನು “ಅದ್ಭುತ ಸಾಧನ” ಎಂದು ಗುರುತಿಸಿದೆ.
ಈ ಆವಿಷ್ಕಾರದ ಹಿಂದಿನ ವ್ಯಕ್ತಿ ಇನ್ನೊವೇಟಿವ್ ಟೆಕ್ನಾಲಜಿ ಕಂಪನಿಯಾದ ಆರ್ಗನೈಸೇಶನ್ ಡಿ ಸ್ಕಲೀನ್‌ನ ಅಧ್ಯಕ್ಷ ರಾಜಾ ವಿಜಯ್ ಕುಮಾರ್. ಇವರು ಬಯೋಫಿಸಿಕ್ಸ್, ನ್ಯಾನೊತಂತ್ರಜ್ಞಾನ ಮತ್ತು ಸುಸ್ಥಿರ ಇಂಧನ ಕ್ಷೇತ್ರದ ಸಂಶೋಧಕರು ಕೂಡ ಆಗಿದ್ದಾರೆ. ರಾಜ್ ಯೋಚಿಸಿದಂತೆಯೇ ಸೈಟೊಟ್ರಾನ್ ಸಾಧನವು, ಅಂಗಾಂಶಗಳ ಅನಿಯಂತ್ರಿತ ಬೆಳವಣಿಗೆಯನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಈ ಕೋಶಗಳನ್ನು ದ್ವಿಗುಣವಾಗುವುದು ಮತ್ತು ಹರಡುವುದರಿಂದ ತಡೆಯಲು ನಿರ್ದಿಷ್ಟ ಪ್ರೋಟೀನ್‌ಗಳ ನಿಯಂತ್ರಣವನ್ನು ಬದಲಾಯಿಸುವ ಮೂಲಕ ಇದು ಕ್ಯಾನ್ಸರ್ ಕೋಶಗಳ ಅಂಗಾಂಶ ಎಂಜಿನಿಯರಿಂಗ್‌ಗೆ ಸಹಾಯ ಮಾಡುತ್ತದೆ.
ನಿಯೋಪ್ಲಾಸ್ಟಿಕ್ ಕಾಯಿಲೆಯಂತಹ ಪ್ರೋಟೀನ್-ಸಂಬಂಧಿತ ಕಾಯಿಲೆಗಳ ಚಿಕಿತ್ಸೆಯಲ್ಲಿ ಈ ರೀತಿಯ ಯೋಜನೆಯು ಸಹಾಯ ಮಾಡುತ್ತದೆ, ನಿರ್ದಿಷ್ಟವಾಗಿ ನೋವು ನಿವಾರಣೆ ಮತ್ತು ಮುಂತಾದವುಗಳಲ್ಲಿ ಇದು ಮಹತ್ವಕಾರಿಯಾಗಿರುತ್ತದೆ.
ಟೈಮ್ಸ್ ಆಫ್ ಇಂಡಿಯಾ ಪ್ರಕಾರ, “ನಿಮ್ಮ ಸಾಧನ ಮತ್ತು ಬಳಕೆಗೆ ಪ್ರಸ್ತಾವಿತ ಸೂಚನೆಯು ಮಾನದಂಡಗಳನ್ನು ಪೂರೈಸುತ್ತದೆ ಮತ್ತು ಅದ್ಭುತ ಸಾಧನ ಎಂಬುದಾಗಿ ಗುರುತಿಸಲಾಗಿದೆ ಎಂದು ನಿಮಗೆ ತಿಳಿಸಲು ನಾವು ಸಂತೋಷಪಡುತ್ತೇವೆ” ಎಂದು ಎಫ್‌ಡಿಎ ವಕ್ತಾರರು ಸಾಧನವನ್ನು ತಯಾರಿಸಿದ ಕಂಪನಿಯಾದ ಶ್ರೀಸ್ ಸ್ಕಲೀನ್ ಸೈನ್ಸಸ್‌ಗೆ ಹೇಳಿದ್ದಾರೆ ,
ಸೈಟೊಟ್ರಾನ್ ಅಭಿವೃದ್ಧಿಯ ಹಿಂದಿನ ಕಥೆ
ಭೋಪಾಲ್‌ನ ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಸೈಟೊಟ್ರಾನ್ ನಿರ್ಮಿಸಲು ರಾಜಾ ಅವರಿಗೆ ಸುಮಾರು 30 ವರ್ಷಗಳೇ ಬೇಕಾಯಿತು. ಸೆಲ್ಯುಲಾರ್ ಮಾರ್ಗಗಳು ಮತ್ತು ಕೆಲವು ವಿಭಿನ್ನ ಮಾಡ್ಯುಲೇಟೆಡ್ ವೇಗದ ರೇಡಿಯೊ ಸ್ಫೋಟಗಳೊಂದಿಗಿನ ಪರಸ್ಪರ ಕ್ರಿಯೆಗಳ ಕುರಿತಾದ ಅವರ ಸಂಶೋಧನೆಯು ಅವರ ಈ ಪ್ರಯತ್ನವನ್ನು ರೂಪಿಸಿತು.
ನಾರ್ತ್ ಈಸ್ಟ್ ಟುಡೇ ವರದಿಯ ಪ್ರಕಾರ, ರಾಜಾ,
"ಹಲವು ವರ್ಷಗಳ ಕಠಿಣ ಪರಿಶ್ರಮದ ನಂತರ, ಎಲ್ಲಾ ತೊಂದರೆಗಳ ವಿರುದ್ಧ ಹೋರಾಡಿ ಮಾಡಿದ ನಮ್ಮ ಕೆಲಸವನ್ನು, ಯುಎಸ್ಎಫ್ಡಿಎಯಂತಹ ಸಂಸ್ಥೆಯು ಮೂರು ಬಗೆಯ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಒಂದು ಪ್ರಗತಿಯೆಂದು ಹೆಸರಿಸುತ್ತಿದೆ ಎಂಬುದು ಒಂದು ದೊಡ್ಡ ಸಂತೋಷದ ವಿಷಯ ಎನ್ನುತ್ತಾರೆ.”
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಇಂದಿನ ಕಾಲದಲ್ಲಿ ಅಷ್ಟೇನೂ ಕಾರ್ಯರೂಪಕ್ಕೆ ಬರುವುದಿಲ್ಲ. ಆದಾಗ್ಯೂ, ಅದರ ನಡುವೆ ಮೇಲಿನ ಹೇಳಿಕೆಗೆ ಇದು ಒಂದು ಅಪವಾದದಂತಿದೆ. ಯುಎಸ್ಎಫ್ಡಿಎಯ ಶಾಖೆಯಾದ ಸೆಂಟರ್ ಫಾರ್ ಡಿವೈಸಸ್ ಅಂಡ್ ರೇಡಿಯೊಲಾಜಿಕಲ್ ಹೆಲ್ತ್, ಯುಎಸ್ನಲ್ಲಿನ ಎಲ್ಲಾ ವೈದ್ಯಕೀಯ ಸಾಧನಗಳ ಮಾರುಕಟ್ಟೆ ಪೂರ್ವ ಅನುಮೋದನೆ ನೀಡುತ್ತವೆ ಮತ್ತು, ಅವು ಬಳಕೆಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಆಗಿವೆಯೇ ಎಂದು ಖಚಿತಪಡಿಸುತ್ತದೆ.
ಸೈಟೊಟ್ರಾನ್ ಅಂತಹ ಉನ್ನತ ಸ್ಥಾನದ ಸಂಸ್ಥೆಯ ಗಮನ ಸೆಳೆಯಿತು, ಇದು ಸಾಮಾನ್ಯವಾಗಿ ಸುಲಭವಲ್ಲ ಎಂದು ಹೇಳಲಾಗುತ್ತದೆ.
ರೋಟೆಶನಲ್ ಕ್ಕ್ವಾಂಟಮ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಸಾಧನವು ವೇಗದ ರೇಡಿಯೊ ಸ್ಫೋಟಗಳು (ಎಫ್‌ಆರ್‌ಬಿ), ಶಕ್ತಿಯುತವಾದ ಸಣ್ಣ ರೇಡಿಯೊ ಸ್ಫೋಟಗಳನ್ನು ಬಳಸುತ್ತದೆ, ಇದರಲ್ಲಿ ವಿದ್ಯುತ್ಕಾಂತೀಯ ಸಂಕೇತಗಳ ವಿದ್ಯುತ್ ಮತ್ತು ಕಾಂತೀಯ ಘಟಕಗಳು “ವೃತ್ತಾಕಾರವಾಗಿ” ಧ್ರುವೀಕರಿಸಲ್ಪಡುತ್ತವೆ.
ಈ ಕ್ಯಾನ್ಸರ್ ವಿರೋಧಿ ಕಿಟ್ ದೇಶದಲ್ಲಿ ಇದೆ ಯೋಜನೆಯನ್ನು ಬಳಸಿಕೊಂಡು ಉತ್ಪಾದಿಸಲು ಸಿದ್ಧವಾಗಿದೆ ಎಂದು ರಾಜಾ ಹೇಳಿದರು.
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ರಾಜಾ,
"ಯಾವುದೇ ಆಮದು ಘಟಕಗಳು ಇಲ್ಲದಿರುವುದರಿಂದ ಸಾಧನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಮತ್ತು, ನಮ್ಮ ಅಮೇರಿಕನ್ ಪಾಲುದಾರರು ಸಾಧನವನ್ನು ಯುಎಸ್‌ಗೆ ತೆಗೆದುಕೊಂದು ಹೋಗುತ್ತಾರೆ. ಸೈಟೊಟ್ರಾನ್ ಈಗಾಗಲೇ ಅನುಮೋದಿತ ವೈದ್ಯಕೀಯ ಸಾಧನವಾಗಿದೆ ಮತ್ತು ಯುಎಇ, ಮೆಕ್ಸಿಕೊ, ಮಲೇಷ್ಯಾ ಮತ್ತು ಹಾಂಗ್ ಕಾಂಗ್‌ಗಳಲ್ಲಿ ಬಳಕೆಯಲ್ಲಿದೆ,” ಎಂದರು.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.