Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಐಒಟಿ-ಶಕ್ತಗೊಂಡ ಶೌಚಾಲಯಗಳೊಂದಿಗೆ ಭಾರತವನ್ನು ಮಲವಿಸರ್ಜನೆಯಿಂದ ಮುಕ್ತಗೊಳಿಸುವ ಗುರಿ ಹೊಂದಿರುವ ವ್ಯಕ್ತಿ

2015 ರಲ್ಲಿ ಸ್ಥಾಪನೆಯಾದ ಫರಿದಾಬಾದ್ ಮೂಲದ ಸಾಮಾಜಿಕ ಉದ್ಯಮ ಜಿಎಆರ್ ವಿ ಶೌಚಾಲಯಗಳು ಭಾರತದಾದ್ಯಂತ 700 ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳನ್ನು ವಿನ್ಯಾಸಗೊಳಿಸಿ ಸ್ಥಾಪಿಸಿವೆ. ವಿನ್ಯಾಸವನ್ನು ಸೌರ ಫಲಕಗಳು, ಬ್ಯಾಟರಿ ಪ್ಯಾಕ್‌ಗಳು, ಆಟೋ ಫ್ಲಶ್ ಮತ್ತು ನೆಲವನ್ನು ಸ್ವಚ್ಚ ಗೊಳಿಸುವ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿದೆ.

ಐಒಟಿ-ಶಕ್ತಗೊಂಡ ಶೌಚಾಲಯಗಳೊಂದಿಗೆ ಭಾರತವನ್ನು ಮಲವಿಸರ್ಜನೆಯಿಂದ ಮುಕ್ತಗೊಳಿಸುವ ಗುರಿ ಹೊಂದಿರುವ ವ್ಯಕ್ತಿ

Thursday October 31, 2019 , 5 min Read

ದಶಕಗಳಿಂದ, ಹಲವಾರು ವ್ಯಕ್ತಿಗಳು ಮತ್ತು ಸರ್ಕಾರಗಳು ಭಾರತವನ್ನು ಮುಕ್ತ ಪ್ರದೇಶಗಳಲ್ಲಿ ಮಲವಿಸರ್ಜನೆ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಿದ್ದು, ಈ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.


ಮಾಹಿತಿಯ ಪ್ರಕಾರ, ಜಗತ್ತಿನಾದ್ಯಂತ ಸುಮಾರು 2.3 ಶತಕೋಟಿ ಜನರಿಗೆ ಮೂಲ ಶೌಚಾಲಯ ಸೌಲಭ್ಯಗಳಿಲ್ಲ. ಭಾರತದಲ್ಲಿ, ಈ ಸಂಖ್ಯೆ ಸುಮಾರು 600 ಮಿಲಿಯನ್, ಅದರಲ್ಲಿ ಐದು ಮಿಲಿಯನ್ ನಗರ ಕೊಳೆಗೇರಿಗಳು ಸೇರಿವೆ.


ನರೇಂದ್ರ ಮೋದಿ ಸರ್ಕಾರ 2014 ರಲ್ಲಿ ಸ್ವಚ್ಛ ಭಾರತ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ, ಗ್ರಾಮೀಣ ಮತ್ತು ಮಹಾನಗರಗಳಲ್ಲಿ ಶೌಚಾಲಯಗಳಂತಹ ಮೂಲಭೂತ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೂ, ಈ ಶೌಚಾಲಯಗಳು ಹೆಚ್ಚು ಪ್ರಯೋಜನಕಾರಿಯಾಗಿರಲಾರದು, ಏಕೆಂದರೆ ಅವುಗಳು ಸಾಮಾನ್ಯವಾಗಿ ಸರಿಯಾಗಿ ನಿರ್ವಹಿಸಲ್ಪಡುವುದಿಲ್ಲ ಮತ್ತು ಕಿಡಿ ಗೇಡಿಗಳಿಂದ ಧ್ವಂಸವಾಗುತ್ತವೆ.


ಈ ರಾಷ್ಟ್ರವನ್ನು ಪೀಡಿಸುತ್ತಿರುವ ನೈರ್ಮಲ್ಯ ಸಮಸ್ಯೆಯನ್ನು ಪರಿಹರಿಸಲು, ಫರಿದಾಬಾದ್ ಮೂಲದ ಸಾಮಾಜಿಕ ಉದ್ಯಮವಾದ ಜಿ ಎ ಆರ್ ವಿ ಟಾಯ್ಲೆಟ್ ಐಒಟಿ-ಶಕ್ತಗೊಂಡ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುತ್ತಿದೆ.


ಮಾಯಾಂಕ್ ಮಿಧಾ ಅವರ ಐಒಟಿ-ಶಕ್ತಗೊಂಡ ಜಿ ಎ ಆರ್ ವಿ ಶೌಚಾಲಯಗಳು ಭಾರತದ ನೈರ್ಮಲ್ಯ ಪರಿಸ್ಥಿತಿಗಳನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿವೆ.


ಮಾಯಾಂಕ್ ಮಿಧಾ ಮತ್ತು ಮೇಘಾ ಭಟ್ನಾಗರ್ ಮಿಧಾ ದಂಪತಿ 2017 ರಲ್ಲಿ ಸ್ಥಾಪಿಸಿದ ಜಿ ಎ ಆರ್ ವಿ ಶೌಚಾಲಯ ಸಂಸ್ಥೆಯು ಭಾರತದಲ್ಲಿ 721 ಶೌಚಾಲಯಗಳನ್ನು ನಿರ್ಮಿಸಿವೆ. ಘಾನಾ, ನೈಜೀರಿಯಾ, ಭೂತಾನ್ ಮತ್ತು ನೇಪಾಳ ಸೇರಿದಂತೆ ಇತರ ನಾಲ್ಕು ದೇಶಗಳಲ್ಲೂ ಇದು ಪ್ರಭಾವ ಬೀರಿದೆ.


ಈ ಸಾರ್ವಜನಿಕ ಶೌಚಾಲಯಗಳು ಐಒಟಿ-ಶಕ್ತಗೊಂಡಿದ್ದು, ಸೌರ ಫಲಕಗಳು, ಬ್ಯಾಟರಿ ಪ್ಯಾಕ್‌ಗಳು, ಆಟೋ ಫ್ಲಶ್, ನೆಲವನ್ನು ಸ್ವಚ್ಚಗೊಳಿಸುವ ತಂತ್ರಜ್ಞಾನ ಮತ್ತು ಜೈವಿಕ ಡೈಜೆಸ್ಟರ್ ಟ್ಯಾಂಕ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿವೆ. ಈ ಶೌಚಾಲಯಗಳು ಬಳಕೆದಾರ ಮತ್ತು ಅಂಗವಿಕಲ-ಸ್ನೇಹಿಯಾಗಿವೆ ಅಂದರೆ ಅವು ಪಾಶ್ಚಿಮಾತ್ಯ ಮತ್ತು ಭಾರತೀಯ ಶೈಲಿಯಲ್ಲಿ ಬರುತ್ತವೆ, ಆದರೆ ಸಂಪೂರ್ಣ ರಚನೆಯು ಪೋರ್ಟಬಲ್ ಮತ್ತು ವಿಧ್ವಂಸಕ-ನಿರೋಧಕವಾಗಿದೆ.


ಸೋಷಿಯಲ್ ಸ್ಟೋರಿಯೊಂದಿಗೆ ಮಾತನಾಡುತ್ತಾ, ಮಾಯಾಂಕ್ ಹೇಳುತ್ತಾರೆ, “ಎನ್‌ಜಿಒ ಅಥವಾ ಸಿಎಸ್‌ಆರ್ ಗುಂಪಿನಂತಹ ಗ್ರಾಹಕರಿಗೆ ಕೇವಲ ಒಂದು ಅಥವಾ ಎರಡು ಶೌಚಾಲಯಗಳನ್ನು ನಿರ್ಮಿಸಲು ಅಗತ್ಯವಿದ್ದರೆ, ಇಡೀ ಸೆಟಪ್ ಅನ್ನು ಒಂದೆರಡು ಗಂಟೆಗಳಲ್ಲಿ ಮುಗಿಸಬಹುದು. ಇದಲ್ಲದೆ, ಸಾಂಪ್ರದಾಯಿಕ ಶೌಚಾಲಯಗಳಿಗಿಂತ ಇವು ಭಿನ್ನವಾಗಿವೆ, ನಮ್ಮ ಶೌಚಾಲಯವು ಯಾವುದೇ ವಿದ್ಯುತ್ ಬಳಸುವುದಿಲ್ಲ; ಇದು ಸಂಪೂರ್ಣವಾಗಿ ನವೀಕರಿಸಬಹುದಾಗಿದೆ. ವಾಸ್ತವವಾಗಿ, ನಾವು ವಾರ್ಷಿಕವಾಗಿ 102.4 ಟನ್ ಕಾರ್ಬನ್‌ ಡೈ ಆಕ್ಸೈಡ್ ಅನ್ನು ಕಡಿಮೆ ಮಾಡಿದ್ದೇವೆ.”


ಸುರಕ್ಷಿತ ಮತ್ತು ಸ್ವಚ್ಚ ನೈರ್ಮಲ್ಯ

ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರ್ ಆಗಿರುವ ಮಾಯಾಂಕ್ ಅವರು ಗ್ರಾಮೀಣ ನಿರ್ವಹಣೆಯಲ್ಲಿ ಎಂಬಿಎ ಪದವಿಯನ್ನು ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್ ಆನಂದ್ ಕಾಲೇಜಿನಿಂದ ಪಡೆಯುತ್ತಿರುವಾಗ ರಾಷ್ಟ್ರವನ್ನು ಕಾಡುತ್ತಿರುವ ನೈರ್ಮಲ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು.


ಮಾಯಾಂಕ್ ಹೇಳುತ್ತಾರೆ, “ನನ್ನ ವೃತ್ತಿಜೀವನದ ಬಹುಪಾಲು ಭಾಗವು ಉತ್ಪಾದನಾ ಕ್ಷೇತ್ರದಲ್ಲಿದ್ದೆ. ನಾನು ಏರ್‌ಟೆಲ್ ಮತ್ತು ಟೆಲಿನೊರ್‌ನೊಂದಿಗೆ ಕೆಲಸ ಮಾಡುತ್ತಿದ್ದೆ. ಅಲ್ಲಿ ನಾವು ಬಿಟಿಎಸ್ ಕ್ಯಾಬಿನೆಟ್‌ಗಳಂತಹ ಟೆಲಿಕಾಂ ಉಪಕರಣಗಳನ್ನು ತಲುಪಿಸುತ್ತಿದ್ದೇವೆ, ಅದು ಶೌಚಾಲಯ ಕ್ಯಾಬಿನೆಟ್‌ಗಳನ್ನೇ ಹೋಲುತ್ತದೆ.”


ಭಾರತೀಯ ಸಾರ್ವಜನಿಕ ಶೌಚಾಲಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಿಳಿದಿದ್ದ ಮಾಯಾಂಕ್, ಈ ಟೆಲಿಕಾಂ ಉಪಕರಣಗಳನ್ನು ಲೋಹದ ಶೌಚಾಲಯ ಕ್ಯಾಬಿನೆಟ್‌ಗಳಾಗಿ ಮಾಡಬಹುದು ಎಂದು ತಿಳಿದು ಆಶ್ಚರ್ಯಪಟ್ಟರು.


ಆದ್ದರಿಂದ, 2014 ರಲ್ಲಿ, ಮಾಯಾಂಕ್ ಮತ್ತು ಅವರ ಪತ್ನಿ ಲೋಹದಿಂದ ತಯಾರಿಸಿದ ಸುಸ್ಥಿರ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಪ್ರಾರಂಭಿಸಿದರು. 2015 ರಲ್ಲಿ, ಜಿ ಎ ಆರ್ ವಿ ಶೌಚಾಲಯ ಸಂಸ್ಥೆಯನ್ನು ನೋಂದಾಯಿಸಲಾಯಿತು ಮತ್ತು ಅವರು ಮೊದಲೇ ತಯಾರಿಸಿದ ಶೌಚಾಲಯ ರಚನೆಯನ್ನು ಸಿದ್ಧಪಡಿಸಿದರು ಮತ್ತು ಕಂಪನಿಯನ್ನು ಆರಂಭಿಸಲು ಅವರು 10 ಲಕ್ಷ ರೂ. ಬಂಡವಾಳವನ್ನು ಹಾಕಿದ್ದಾರೆ.


ಜಿ ಎ ಆರ್ ವಿ ಶೌಚಾಲಯಗಳು ಐಒಟಿ-ಶಕ್ತಗೊಂಡ ಮತ್ತು ಅಂಗವಿಕಲ-ಸ್ನೇಹಿ ಸಾರ್ವಜನಿಕ ಶೌಚಾಲಯಗಳನ್ನು ಸೌರ ಫಲಕಗಳು, ಆಟೋ ಫ್ಲಶ್ ಮತ್ತು ನೆಲವನ್ನು ಸ್ವಚ್ಚ ಗೊಳಿಸುವ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗಿದೆ.


ಅನೇಕ ಸ್ಟಾರ್ಟ್‌ಅಪ್‌ಗಳಂತೆ, ಇವರಿಬ್ಬರು ಇಡೀ ಯೋಜನೆಯ ಆರಂಭದಿಂದಲೂ ತೊಂದರೆಗಳನ್ನು ಅನುಭವಿಸಿದರು. ವೆಚ್ಚದಿಂದ ಹಿಡಿದು ಅವುಗಳನ್ನು ಖರೀದಿಸಲು ಗ್ರಾಹಕರನ್ನು ಮನವೊಲಿಸುವವರೆಗೆ ಹಲವಾರು ಸವಾಲುಗಳನ್ನು ಎದುರಿಸಿದರು. ಆರಂಭಿಕ ಎರಡು ವರ್ಷಗಳಲ್ಲಿ ಅವರಿಗೆ ಸರ್ಕಾರ ಮತ್ತು ಎನ್‌ಜಿಒಗಳಿಂದ ಯಾವುದೇ ಸಹಾಯ ಸಿಗಲಿಲ್ಲ.


ಮಾಯಾಂಕ್ ಹೇಳುತ್ತಾರೆ, “ನಾವು ಈ ವ್ಯವಹಾರವನ್ನು ವೇಗವಾಗಿ ವೃದ್ಧಿಸಬಹುದೆಂದು ಮನವರಿಕೆ ಮಾಡಲು ಪ್ರಯತ್ನಿಸಿದೆವು. ಈ ಶೌಚಾಲಯಗಳನ್ನು ಗುತ್ತಿಗೆದಾರನನ್ನು ನೇಮಿಸಿಕೊಳ್ಳದೆಯೆ ತಿಂಗಳಿಗೆ ಸುಮಾರು 300 ಘಟಕಗಳನ್ನು ಕಾರ್ಖಾನೆಯಿಂದ ಉತ್ಪಾದಿಸಬಹುದು, ಸಾಂಪ್ರದಾಯಿಕ ಶೌಚಾಲಯವನ್ನು ನಿರ್ಮಿಸಲು ಸುಮಾರು ಆರು ತಿಂಗಳ ಸಮಯ ಬೇಕಾಗುತ್ತದೆ. ದೀರ್ಘಾವಧಿಯಲ್ಲಿ, ಸ್ಮಾರ್ಟ್ ಶೌಚಾಲಯಗಳನ್ನು ಉತ್ಪಾದಿಸುವ ವೆಚ್ಚವು ಕಾರ್ಯಾಚರಣೆಯ ವೆಚ್ಚಕ್ಕೆ ಸರಿಹೊಂದುತ್ತದೆ, ಆದರೆ ಸಾಂಪ್ರದಾಯಿಕ ಶೌಚಾಲಯದ ನಿರ್ವಹಣಾ ವೆಚ್ಚವು ಯಾವುದೇ ಸಮಯದಲ್ಲಿ ಆದರೂ ಹೆಚ್ಚೆ ಇರುತ್ತದೆ.”


ಸರಳ ಮತ್ತು ಬಳಸಲು ಸುಲಭವಾದ ಸೆಟಪ್ ಬಯಸಿದ್ದರಿಂದ ಇವರಿಬ್ಬರು ತಮ್ಮ ಉತ್ಪನ್ನ ಮತ್ತು ವಿನ್ಯಾಸದಲ್ಲಿ ತಂತ್ರಜ್ಞಾನವನ್ನು ಸಂಯೋಜಿಸುವ ಸಮಸ್ಯೆಗಳನ್ನು ಕೂಡ ಎದುರಿಸಿದರು.


2017 ರಲ್ಲಿ, ಇವರಿಬ್ಬರು ನಗರದ ಪುರಸಭೆಯೊಂದಿಗೆ ಪ್ರಾಯೋಗಿಕ ಯೋಜನೆಯನ್ನು ಕೈಗೊಂಡರು ಆದರೆ ನಿಗಮವು ಕಾರ್ಯಾಚರಣೆಯನ್ನು ಅಳೆಯದ ಕಾರಣ ಕಾರ್ಯಗಳು ಕಾರ್ಯರೂಪಕ್ಕೆ ಬರಲಿಲ್ಲ. ಇದು ಸಿಎಸ್‌ಆರ್‌ಗಳೊಂದಿಗೆ ತಮ್ಮ ಪರಿಕಲ್ಪನೆಯನ್ನು ರೂಪಿಸಲು ಕಾರಣವಾಯಿತು.


ಆರೋಗ್ಯ ಮತ್ತು ನೈರ್ಮಲ್ಯವನ್ನು ಉತ್ತೇಜಿಸುವುದು


ಅದೇ ವರ್ಷ, ಸರ್ಕಾರಿ ಶಾಲೆಯಲ್ಲಿ ಸಹಾಯ ಮಾಡಲು ಪ್ರತಿಷ್ಠಾನದಿಂದ ಉದ್ಯಮವನ್ನು ಪಾಟ್ನಾಗೆ ಆಹ್ವಾನಿಸಲಾಯಿತು, ಅಲ್ಲಿ ಐಒಟಿ ಆಧಾರಿತ ಅನ್ವಯಗಳಿಲ್ಲದೆ ಮೂಲ ಸೆಟಪ್ ಅನ್ನು ಸ್ಥಾಪಿಸಲಾಗಿದೆ. ಇಡೀ ಯೋಜನೆಗೆ ಕೋಕಾ-ಕೋಲಾ ಧನಸಹಾಯ ನೀಡಿತು; ಇಂದು ಬಿಹಾರ ಮತ್ತು ದೆಹಲಿಯಲ್ಲಿ 18,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿ ಎ ಆರ್ ವಿ ಶೌಚಾಲಯಗಳನ್ನು ಬಳಸುತ್ತಿದ್ದಾರೆ.


“ಜನರಲ್ಲಿ ನೈರ್ಮಲ್ಯ ಪದ್ಧತಿಗಳನ್ನು ಉತ್ತೇಜಿಸುವುದು ನಮ್ಮ ಧ್ಯೇಯವಾಗಿದೆ. ನಾವು ಶಾಲೆಗಳಿಗೆ ಭೇಟಿ ನೀಡಿದಾಗ, ಸುರಕ್ಷಿತ ನೈರ್ಮಲ್ಯ ಅಳವಡಿಕೆಯಿಂದಾಗಿ ವಿದ್ಯಾರ್ಥಿಗಳು ಈಗ ತರಗತಿಗಳಿಗೆ ಹಾಜರಾಗಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅಧಿಕಾರಿಗಳು ನಮಗೆ ಮಾಹಿತಿ ನೀಡಿದರು. ವಾಸ್ತವವಾಗಿ, ವಿದ್ಯಾರ್ಥಿಗಳಲ್ಲಿ ಶಾಲೆಯನ್ನು ಬಿಡುವ ದರವು ತೀವ್ರವಾಗಿ ಕಡಿಮೆಯಾಗಿದೆ. "


ಶಾಲೆಗಳಲ್ಲಿ ಡ್ರಾಪ್ ಔಟ್ ದರವನ್ನು ಕಡಿಮೆ ಮಾಡಲು ಜಿ ಎ ಆರ್ ವಿ ಶೌಚಾಲಯಗಳು ಸಹಾಯ ಮಾಡಿವೆ.


ಈ ಸಣ್ಣ ಯಶಸ್ಸಿನ ನಂತರ, ಮಾಯಾಂಕ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು ಮತ್ತು ವಿವಿಧ ಸಿಎಸ್‌ಆರ್ ಮತ್ತು ಖಾಸಗಿ ಕಂಪನಿಗಳಿಗೆ ಮೊದಲೇ ತಯಾರಿಸಿದ 100 ಶೌಚಾಲಯಗಳನ್ನು ಸ್ಥಾಪಿಸಿದರು.


2018 ರಲ್ಲಿ ಶೌಚಾಲಯ ಅಳವಡಿಕೆಯ ಸಂಖ್ಯೆ 700 ಕ್ಕಿಂತ ಹೆಚ್ಚಾಗಿದೆ, ಅದರಲ್ಲಿ 358 ಶೌಚಾಲಯಗಳು ಯಾವುದೇ ಸಂಯೋಜಿತ ಎಲೆಕ್ಟ್ರಾನಿಕ್ಸ್ ಇಲ್ಲದೆ ಮೂಲ ವಿನ್ಯಾಸವನ್ನು ಹೊಂದಿವೆ.


ವಿನ್ಯಾಸದ ಬಗ್ಗೆ ಮಾತನಾಡುತ್ತಾ, ಮಾಯಾಂಕ್ ಹೇಳುತ್ತಾರೆ,


"ಶೌಚಾಲಯಗಳ ಎಲ್ಲಾ ವಿನ್ಯಾಸ ಮತ್ತು ಉತ್ಪಾದನೆಯು ಮನೆಯಲ್ಲಿದೆ. ಎಲೆಕ್ಟ್ರಾನಿಕ್ಸ್ ಗೆ ಮಾತ್ರ ಹೊರಗುತ್ತಿಗೆ ನೀಡುತ್ತೇವೆ. ವೆಚ್ಚದ ದೃಷ್ಟಿಯಿಂದ, ಎಲೆಕ್ಟ್ರಾನಿಕ್ಸ್‌ನೊಂದಿಗೆ ಸಂಪೂರ್ಣ ಸಂಯೋಜಿತ ಶೌಚಾಲಯವು 2.7 ರಿಂದ 4 ಲಕ್ಷ ರೂ. ಬೆಲೆಯಾಗುತ್ತದೆ ಮತ್ತು ಎಲೆಕ್ಟ್ರಾನಿಕ್ಸ್ ಹೊರತುಪಡಿಸಿ ಸರಳವಾದ ಟಾಯ್ಲೆಟ್ ಸೆಟಪ್ 1.8 ಲಕ್ಷ ರೂ. ಸಿಗುತ್ತದೆ.


ಐಒಟಿ-ಶಕ್ತಗೊಂಡ ಶೌಚಾಲಯಗಳ ಸಹಾಯದಿಂದ, ಮಾಯಾಂಕ್ ತಂಡವು ಶೌಚಾಲಯಕ್ಕೆ ನೀರು ಹಾಕುವುದು, ಕೈ ತೊಳೆಯುವುದು ಅಥವಾ ಯಾರಾದರೂ ಸೆಟಪ್ ಅನ್ನು ಧ್ವಂಸ ಮಾಡುತ್ತಿದ್ದರೆ ಮತ್ತು ಸೇವೆಗಳನ್ನು ಹೆಚ್ಚಿಸುವಂತಹ ಬಳಕೆದಾರರ ನಡವಳಿಕೆಯನ್ನು ವಿಶ್ಲೇಷಿಸಬಹುದು.


ಮಾಯಾಂಕ್ ಹೇಳುತ್ತಾರೆ, “ಸಿಸ್ಟಮ್ ಸೆಟಪ್ ತಂಡವು ದೋಷಯುಕ್ತ ಪ್ರದೇಶದ ಚಿತ್ರವನ್ನು ಕಳುಹಿಸುವುದರಿಂದ ಸಮಸ್ಯೆಯನ್ನು ಬಗೆಹರಿಸಲು ಸಹ ಸಹಾಯವಾಗುತ್ತದೆ.


ಜಿ ಎ ಆರ್ ವಿ ಶೌಚಾಲಯಗಳು, ಶಾಲೆಗಳು, ಕೊಳೆಗೇರಿಗಳು ಮತ್ತು ಇತರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯವನ್ನು ಉತ್ತೇಜಿಸುತ್ತಿವೆ.


ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ದೃಷ್ಟಿಯಿಂದ, ಶೌಚಾಲಯವು ಕೇವಲ ಎರಡು ಲೀಟರ್ ನೀರನ್ನು ಬಳಸುತ್ತದೆ, ಸಾಂಪ್ರದಾಯಿಕವಾದವುಗಳಿಗೆ ಹೋಲಿಸಿದರೆ ಇದು ಕಮ್ಮಿ ಏಕೆಂದರೆ ಅವು ಐದು ರಿಂದ ಆರು ಲೀಟರ್ ನೀರನ್ನು ಬಳಸುತ್ತದೆ. ಇಡೀ ರಚನೆಯು ಸ್ಟೇನ್ಲೆಸ್ ಸ್ಟೀಲ್ನಿಂದ ಮಾಡಲ್ಪಟ್ಟಿದೆ ಮತ್ತು ಅದನ್ನು ಸ್ವಚ್ಚಗೊಳಿಸಲು ಯಾವುದೇ ರಾಸಾಯನಿಕಗಳ ಅಗತ್ಯವಿಲ್ಲ.


ಪ್ರಸ್ತುತ, ಉದ್ಯಮವು ಫರಿದಾಬಾದ್ ಬಳಿಯ ಕೊಳೆಗೇರಿಯಲ್ಲಿ ಕೆಲಸ ಮಾಡುತ್ತಿದೆ, ಅಲ್ಲಿ ನಾಲ್ವರ ಕುಟುಂಬವು ತಿಂಗಳಿಗೆ 250-300 ರೂಗಳನ್ನು ಪಾವತಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಕೊಳೆಗೇರಿ ನಿವಾಸಿಗಳ ನೈರ್ಮಲ್ಯ ನಡವಳಿಕೆಯನ್ನು ಮಾಯಾಂಕ್ ತಂಡವು ಮೇಲ್ವಿಚಾರಣೆ ಮಾಡುತ್ತದೆ. ಮಾಯಾಂಕ್ ಪ್ರಕಾರ, ಜಿ ಎ ಆರ್ ವಿ ಶೌಚಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎನ್ ಜಿ ಒ ಗಳಿಗೆ ಇದು ಮುಖ್ಯವಾಗಿದೆ, ಏಕೆಂದರೆ ಅವರು ಸುರಕ್ಷಿತ ಮತ್ತು ಆರೋಗ್ಯಕರ ನೈರ್ಮಲ್ಯ ಪರಿಹಾರಗಳನ್ನು ಉತ್ತೇಜಿಸುತ್ತಿದ್ದಾರೆ.


ಘಾನಾದಲ್ಲಿ ಮಾಯಾಂಕ್ ಯೋಜನೆಯನ್ನು ಪ್ರಾಯೋಜಿಸಿದ ನೆದರ್ಲ್ಯಾಂಡ್ಸ್ ಸರ್ಕಾರದೊಂದಿಗೆ ಈ ತಂಡವು ಕೆಲಸ ಮಾಡಿದೆ. ಇಲ್ಲಿ, ಜಿ ಎ ಆರ್ ವಿ ಶೌಚಾಲಯಗಳು ಅದರ ಪರಿಣಾಮ ಮತ್ತು ಸ್ಥಳೀಯರು ಅದನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನೋಡಲು ಪ್ರಾಯೋಗಿಕ ಯೋಜನೆಯ ಭಾಗವಾಗಿ ಎರಡು ಶೌಚಾಲಯಗಳನ್ನು ನಿರ್ಮಿಸಿದರು.


“ನಾವು ನೈಜೀರಿಯನ್ ಮತ್ತು ಭೂತಾನ್ ಸರ್ಕಾರದೊಂದಿಗೆ ಕೆಲಸ ಮಾಡಿದ್ದೇವೆ ಮತ್ತು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಜಿ ಎ ಆರ್ ವಿ ಶೌಚಾಲಯಗಳನ್ನು ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರದಿಂದ ಇತ್ತೀಚೆಗೆ ಆದೇಶ ಬಂದಿದೆ" ಎಂದು ಮಾಯಾಂಕ್ ಹೇಳುತ್ತಾರೆ.


ಬೆಂಬಲ, ತಂಡ ಮತ್ತು ಭವಿಷ್ಯ

ಹೆಚ್ಚಿನ ಬೆಂಬಲವನ್ನು ಪಡೆಯಲು, ಜಿ ಎ ಆರ್ ವಿ ಶೌಚಾಲಯಗಳು ಅದರ ಮೊದಲ ಹೂಡಿಕೆಯನ್ನು ಇನ್ವೆಂಟ್ ನಿಂದ ಪಡೆಯಿತು. ಅದೇ ವರ್ಷದಲ್ಲಿ, ತಂಡವು ತನ್ನ ಕೆಲಸವನ್ನು ಬೆಂಬಲಿಸಲು ಕೆಲವು ಅನುದಾನಗಳನ್ನು ಪಡೆಯಿತು.


ಪ್ರಸ್ತುತ, ಜಿ ಎ ಆರ್ ವಿ ಟಾಯ್ಲೆಟ್ ತನ್ನ ಪ್ರಮುಖ ತಂಡದಲ್ಲಿ ಆರು ಸದಸ್ಯರನ್ನು ಹೊಂದಿದೆ, ಇದರಲ್ಲಿ ಮಾಯಾಂಕ್, ಮೇಘಾ ಮತ್ತು ನೇಹಾ ಸೇರಿದ್ದಾರೆ. ನಾನ್-ಕೋರ್ ತಂಡವು 27 ಸದಸ್ಯರನ್ನು ಹೊಂದಿದೆ. ಕಂಪನಿಯು ಕೆಲವರನ್ನು ಒಪ್ಪಂದದ ಆಧಾರದ ಮೇಲೆ ಮತ್ತು ಕೆಲವರನ್ನು ಜಾಬ್ ಪೋರ್ಟಲ್‌ಗಳ ಮೂಲಕ ನೇಮಿಸಿಕೊಳ್ಳುತ್ತದೆ. ಇದು ದೀರ್ಘಕಾಲೀನ ನಿರ್ವಹಣಾ ಒಪ್ಪಂದಗಳಿಗೆ ಸಹಿ ಹಾಕಿದೆ, ಅಲ್ಲಿಶೌಚಾಲಯಗಳ ಸ್ಥಾಪನೆಯ ಹೊರತಾಗಿ, ಇದು ಶೌಚಾಲಯಗಳನ್ನು ನಿರ್ವಹಿಸುತ್ತದೆ ಮತ್ತು ಆದಾಯವನ್ನು ಗಳಿಸುವತ್ತ ಗಮನಹರಿಸುತ್ತದೆ.


ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಸ್ಮಾರ್ಟ್ ಶೌಚಾಲಯಗಳನ್ನು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ದೆಹಲಿ ಮೆಟ್ರೋ ರೈಲು ನಿಗಮದ ಅಧಿಕಾರಿಯೊಂದಿಗೆ ಮಾಯಾಂಕ್.


“ನಾವು ದೆಹಲಿ ಮೆಟ್ರೋ ರೈಲು ನಿಗಮದೊಂದಿಗೆ ಯೋಜನೆಯನ್ನು ಪ್ರಾರಂಭಿಸಿದ್ದೇವೆ, ಅಲ್ಲಿ ನಾವು ಶೌಚಾಲಯಗಳನ್ನು ಸ್ಥಾಪಿಸುತ್ತೇವೆ, ಅದನ್ನು ನಂತರ ಮೆಟ್ರೋ ಕಾರ್ಡ್‌ಗಳೊಂದಿಗೆ ಸಂಯೋಜಿಸಲಾಗುವುದು ಮತ್ತು ಅದರ ಬಳಕೆದಾರರಿಗೆ ಈ ಶೌಚಾಲಯಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ" ಎಂದು ಮಾಯಾಂಕ್ ಹೇಳುತ್ತಾರೆ.


ಆದಾಯವನ್ನು ಗಳಿಸುವ ದೃಷ್ಟಿಯಿಂದ, ಶೌಚಾಲಯಗಳ ಹೊರಗಿನ ಗೋಡೆಗಳನ್ನು ಜಾಹೀರಾತಿಗಾಗಿ ಬಳಸಬಹುದು.


ಕಂಪನಿಯು ಚಂದಾದಾರಿಕೆ ಆಧಾರಿತ ಮಾದರಿಯನ್ನು ನಿರ್ಮಿಸಲು ಯೋಜಿಸಿದೆ, ಅಲ್ಲಿ ಬಳಕೆದಾರರು ಸೌಲಭ್ಯವನ್ನು ಬಳಸಲು ಯೋಜನೆಯನ್ನು ಖರೀದಿಸಬಹುದು. ಇದಲ್ಲದೆ, ಜಿ ಎ ಆರ್ ವಿ ಶೌಚಾಲಯಗಳು ಅದರ ಶೌಚಾಲಯದ ಹೊರಗೆ ಕುಡಿಯುವ ನೀರಿನ ಎಟಿಎಂ ಅನ್ನು ಸಹ ಸ್ಥಾಪಿಸುವ ಯೋಚನೆಯಲ್ಲಿದೆ.