ಬೆಂಗಳೂರಿನ ರೇವಾ ವಿವಿಯ ವಿದ್ಯಾರ್ಥಿನಿಗೆ ಲಭ್ಯವಾದ 50 ಲಕ್ಷ ರೂ.ಗಳ "ಚೆಂಜ್ ದಿ ವರ್ಲ್ಡ್" ವಿದ್ಯಾರ್ಥಿವೇತನ
ಹೈದರಾಬಾದ್ ಮೂಲದ ಬೆಂಗಳೂರು ರೇವಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಆಸ್ಟ್ರೇಲಿಯಾ ವೊಲೊಂಗೊಂಗ್ ವಿಶ್ವವಿದ್ಯಾಲಯ ಕೊಡ ಮಾಡುವ "ಚೆಂಜ್ ದಿ ವರ್ಲ್ಡ್" ವಿದ್ಯಾರ್ಥಿ ವೇತನಕ್ಕೆ ಭಾಜನಾರಾಗಿದ್ದಾರೆ.
ಹೈದರಾಬಾದ್ ಹುಡುಗಿಯೊಬ್ಬಳು "ಚೆಂಜ್ ದಿ ವರ್ಲ್ಡ್" ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾ ವಿವಿ ನೀಡುವ ಈ ವಿದ್ಯಾರ್ಥಿವೇತನಕ್ಕಾಗಿ ವಿಶ್ವದಾದ್ಯಂತ ಸಾವಿರಾರು ಅರ್ಜಿದಾರರಿಂದ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಲ್ಲಿ ಇವರು ಕೂಡ ಒಬ್ಬಳು.
ಹೈದರಾಬಾದ್ ಮೂಲದ ಪ್ರಸ್ತುತ ಬೆಂಗಳೂರಿನ ರೇವಾ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಅಭ್ಯಸಿಸುತ್ತಿರುವ ಶ್ರಷ್ಟಾ ವಾಣಿ ಕೊಲ್ಲಿ ಅವರು ಚೆಂಜ್ ದಿ ವರ್ಲ್ಡ್ ಸ್ಕಾಲರ್ಶಿಪ್ ಮೂಲಕ ಆಸ್ಟ್ರೇಲಿಯಾದ ವೊಲೊಂಗೊಂಗ್‌ನ ವೊಲೊಂಗೊಂಗ್ ವಿಶ್ವವಿದ್ಯಾಲಯದಲ್ಲಿ ಎರಡು ಸೆಮಿಸ್ಟರ್‌ಗಳನ್ನು ಕಳೆಯಲಿದ್ದಾರೆ.
ಈ 50 ಲಕ್ಷ ರೂ. ಗಳ ವಿದ್ಯಾರ್ಥಿವೇತನವನ್ನು ಪಡೆದ ಹಾಗೂ ಆಸ್ಟ್ರೇಲಿಯಾದ ವೊಲೊಂಗೊಂಗ್ ವಿಶ್ವವಿದ್ಯಾಲಯದಲ್ಲಿ ಕಾನೂನು ಶಿಕ್ಷಣದಲ್ಲಿ ಉನ್ನತ ಶಿಕ್ಷಣ ಮುಂದುವರೆಸುವ ಅವಕಾಶ ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಕಾನೂನು ಪದವಿಯನ್ನು ಅಭ್ಯಸಿಸುತ್ತಿದ್ದಾರೆ ಶ್ರಷ್ಟಾ, ವರದಿ ದಿ ಹಿಂದೂ.
ಇದರ ಕುರಿತಾಗಿ ಎಡೆಕ್ಸ್ ಲೈವ್ ಜೊತೆ ಮಾತನಾಡಿದ ಶ್ರಷ್ಟಾ,
"ಪದವಿಯು ದುಬಾರಿ ಶಿಕ್ಷಣವಾಗಿದ್ದು, ಈ ವಿದ್ಯಾರ್ಥಿವೇತನದ ಮೂಲಕ ನನ್ನ ಪಾಲಕರಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಲ್ಲಿ ಸರಾಗವಾಗಿದೆ. ಇದರಿಂದ ನನಗೆ ಖುಷಿಯಾಗಿದೆ," ಎಂದು ಸಂತಸವನ್ನು ವ್ಯಕ್ತಪಡಿಸುತ್ತಾರೆ.
ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಮೂರನೇ ಸೆಮಿಸ್ಟರ್ ನಲ್ಲಿರುವಾಗಲೇ ನಿರ್ಧರಿಸಿದ್ದರು. ವೃತ್ತಿಪರ ಮಾರ್ಗದರ್ಶನ ಅವರಿಗೆ ಸಹಾಯಕವಾಯಿತು. ಇವರು ಅರ್ಜಿ ಸಲ್ಲಿಸಲು ಮಾಡಿದ ವಿಡಿಯೋದಲ್ಲಿ ಇವರ ವಾಕ್ ಚಾತುರ್ಯ, ಅಭಿವ್ಯಕ್ತಿಯ ಶೈಲಿ ಮೆಚ್ಚುಗೆ ಪಡೆದಿದೆ. ಶ್ರಷ್ಟಾ ಒಬ್ಬ ಕವಯತ್ರಿಯೂ ಹೌದು. ಈಗಾಗಲೇ ಒಂದು "ವೈಲ್ಡ್ ವಿಂಗ್ಸ್" ಎಂಬ ಪುಸ್ತಕವನ್ನು ಪ್ರಕಟಿಸಿದ್ದು, ಮತ್ತೊಂದು ಪುಸ್ತಕ ಪ್ರಕಟಿಸುವ ಉತ್ಸಾಹದಲ್ಲಿದ್ದಾರೆ. ಈ ಪುಸ್ತಕವು ಕೂಡ ತಮ್ಮ ಆಯ್ಕೆಗೆ ದೊಡ್ಡ ಕೊಡುಗೆ ನೀಡಿದೆ ಎಂದೆನ್ನುತ್ತಾರೆ ಶ್ರಷ್ಟಾ, ವರದಿ ದಿ ಹಿಂದೂ.
ಅವರು ತಮ್ಮ ಬರವಣಿಗೆಯ ಪಯಣದ ಕುರಿತಾಗಿ,
"ಕವಿತೆಯು ನನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸಹಾಯ ಮಾಡುತ್ತದೆ. ನನ್ನ ಸಂದರ್ಭಗಳನ್ನು ಉತ್ತಮವಾಗಿ ನಿಭಾಯಿಸಲು ಇದು ಸಹಾಯಕವಾಗಿದೆ. ಪದ್ಯ ನನ್ನ ಜೀವನದ ಬಹುಮುಖ್ಯ ಭಾಗವೆಂದೆನ್ನುತ್ತಾರೆ."
ಶ್ರಷ್ಟಾರವರು ತೆಲಂಗಾಣದ ಖಮ್ಮಮ್ ಜಿಲ್ಲೆಯವರಾಗಿದ್ದು, ಅರವಿಂದ ಕೊಲ್ಲಿ ಹಾಗೂ ಆಶಾ ದಂಪತಿಗಳ ಮಗಳು. ಅವರ ಪಾಲಕರಿಗೂ ಕೂಡ ಇದು ಹೆಮ್ಮೆಯ ವಿಷಯವಾಗಿದೆ.
ವೊಲೊಂಗೊಂಗ್ ವಿಶ್ವವಿದ್ಯಾಲಯದ ಪ್ರತಿನಿಧಿ ಮತ್ತು ವ್ಯವಸ್ಥಾಪಕ, ಅಂತರರಾಷ್ಟ್ರೀಯ ನೇಮಕಾತಿ, ಪೀಟರ್ ಮುರ್ರೆ ಅವರು ಹೈದರಾಬಾದ್‌ನಲ್ಲಿ ಪ್ರವೇಶ ಪತ್ರವನ್ನು ಶ್ರಷ್ಟಾರವರಿಗೆ ವೈಯಕ್ತಿಕವಾಗಿ ಹಸ್ತಾಂತರಿಸಿದರು.
ಈ ವಿದ್ಯಾರ್ಥಿವೇತನವು ಸಾಗರೋತ್ತರ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಆದರೆ ಜಗತ್ತಿನಲ್ಲಿ ಬದಲಾವಣೆಯನ್ನು ತರುವ ಪ್ರತಿಭೆಯನ್ನು ಹೊಂದಿರುವ ವಿದೇಶಿ ವಿದ್ಯಾರ್ಥಿಗಳಿಗೆ ಮಾತ್ರವಾಗಿದೆ. ಇಂತಹ ವಿದ್ಯಾರ್ಥಿ ವೇತನ ಪಡೆದ ಶ್ರಷ್ಟಾರವರು ಇನ್ನಷ್ಟೂ ಹೆಚ್ಚಿನ ಸಾಧನೆಗೈಯಲಿ ಎಂದು ಆಶಿಸೋಣ..!
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.