ಡಿಕಾಕ್ಷನ್ ಕೆಟ್ಟು ಹೋಗುವ ಟೆನ್ಶನ್ ಇಲ್ಲ.. ಫಿಲ್ಟರ್ ಕಾಫಿಯ ಅಸಲಿ ಸ್ವಾದ ಮಿಸ್ ಆಗೋದೇ ಇಲ್ಲ.
ಬಿಆರ್ಪಿ ಉಜಿರೆ
ಕಾಫಿ.. ನಮ್ಮ ನಿಮ್ಮ ದೈನಂದಿನ ಬದುಕಿನ ಭಾಗವಾಗಿರುವ ಪೇಯ. ಬೆಳಗ್ಗೆ ಎದ್ದಾಗ ಒಂದು ಕಪ್ ಕಾಫಿ ಕುಡಿಯದೇ ಹೋದ್ರೆ, ನೆನಪಾದಾಗ ಕಾಫಿ ಕುಡಿಯದಿದ್ರೆ, ಟೆನ್ಶನ್ ಜಾಸ್ತಿಯಾದಾಗ ಕಾಫಿ ಸಿಗದೇ ಇದ್ರೆ ಅದೆಷ್ಟೋ ಜನರಿಗೆ ಏನನ್ನೋ ಕಳೆದುಕೊಂಡ ಅನುಭವ ಆಗುತ್ತದೆ. ಇನ್ನು ಅತಿಯಾಗಿ ದಣಿದಿದ್ದಾಗ, ತಲೆನೋವು ಬಂದಾಗ ಒಂದು ಕಪ್ ಕಾಫಿ ಕುಡಿದ್ರೆ ಸಾಕು ಅದೇನೋ ದೊಡ್ಡ ರಿಲೀಫ್. ಹೀಗಾಗಿ ನಮ್ಮ ನಿಮ್ಮ ನಡುವೆ ಅದ್ರಲ್ಲೂ ಕರ್ನಾಟಕದಲ್ಲಿ ಕಾಫಿಗೆ ಇನ್ನಿಲ್ಲದ ಮಾನ್ಯತೆ ಸಿಕ್ಕಿದೆ. ಆದ್ರೆ ಬೇಕೆನಿಸಿದಾಗ ಬೇಕು ಬೇಕಾದ ಕಾಫಿ ಕುಡಿಯೋ ಅವಕಾಶ ಅದೆಷ್ಟೋ ಜನರಿಗೆ ಸಿಗೋದಿಲ್ಲ. ಅದ್ರಲ್ಲೂ ಫಿಲ್ಟರ್ ಕಾಫಿಯನ್ನ ನೆನೆದು ಬಾಯಿ ಚಪ್ಪರಿಸೋ ಅದೆಷ್ಟೋ ಮಂದಿ ತಾವಿಚ್ಛಿಸೋ ಸ್ವಾದಿಷ್ಟ ಭರಿತ ಕಾಫಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಕಾಫಿ ಪ್ರಿಯರು ಇನ್ಮುಂದೆ ಫಿಲ್ಟರ್ ಕಾಫಿಯನ್ನ ಮಿಸ್ ಮಾಡಿಕೊಳ್ಳಬೇಕಾಗಿಲ್ಲ, ಪಕ್ಕಾ ಟೇಸ್ಟ್ ಗಾಗಿ ಪರದಾಡಬೇಕಾಗಿಲ್ಲ. ಯಾಕಂದ್ರೆ ಮಾರುಕಟ್ಟೆಗೆ ಹೊಸದಾಗಿ ಕಾಲಿಟ್ಟಿರೋ ಟ್ರೂಸೌಥ್ ಕಂಪನಿ ಕಾಫಿ ಪ್ರಿಯರಿಗಾಗೇ ಹೊಸ ಆವಿಷ್ಕಾರ ನಡೆಸಿದೆ.
ಟ್ರೂಸೌಥ್.. ಇದೊಂದು ಮಲೆನಾಡ ಫಿಲ್ಟರ್ ಕಾಫಿಯ ಪರಿಕಲ್ಪನೆ. ಇಲ್ಲಿ ಫಿಲ್ಟರ್ ಕಾಫಿಯ ಸ್ಯಾಷೆಟ್ ಸಿಗುತ್ತದೆ. 1 ಲೀಟರ್ ಪ್ಯಾಕ್‌ನ ಈ ಫಿಲ್ಟರ್ ಕಾಫಿ ಡಿಕಾಕ್ಷನ್‌ನಲ್ಲಿ ಶೇಕಡಾ 80ರಷ್ಟು ಕಾಫಿ ಮತ್ತು ಶೇಡಕಾ 20ರಷ್ಟು ಚಿಕೋರಿ ಹದವಾಗಿ ಮಿಕ್ಸ್ ಆಗಿರುತ್ತದೆ. ವಿಶೇಷ ಅಂದ್ರೆ ಆ ಡಿಕಾಕ್ಷನ್ ಅನ್ನು ನೀವು ಮನೆಗೆ ಕೊಂಡೊಯ್ದು 5 ತಿಂಗಳ ತನಕ ಇಡಬಹುದು. ಜೊತೆಗೆ ಓಪನ್ ಮಾಡಿದ ನಂತ್ರ 15 ದಿವಸಗಳೊಳಗೆ ಬಳಸಬಹುದು.
“ ನಮ್ಮ ಕಂಪನಿ ಹಲವಾರು ವರ್ಷಗಳಿಂದ ಕಾಫಿ ಪ್ಲಾಂಟರ್ಗಳಲ್ಲಿ ತೊಡಗಿಸಿಕೊಂಡಿದೆ. ಚಿಕ್ಕಮಗಳೂರು ಹಾಗೂ ಕೊಡಗಿನ ಹಲವು ಭಾಗಗಳಲ್ಲಿ ಕಾಫಿ ಬೆಳೆಯುತ್ತೇವೆ. ಅದ್ಭುತವಾದ ಕಾಫಿ ಬೆಳೆಯನ್ನ ಕಂಡಿದ್ರೂ, ಅದೆಷ್ಟೋ ಜನ ಫಿಲ್ಟರಿ ಕಾಫಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದಿದ್ದನ್ನ ಗಮನಿಸಿದ್ವು. ಇದಕ್ಕೊಂದು ಪರಿಹಾರ ನೀಡಬೇಕು ಅಂತ ಯೋಚಿಸಿ ಫಿಲ್ಟರ್ ಕಾಫಿ ಬಗ್ಗೆ ಸಂಶೋಧನೆ ನಡೆಸಿದ್ವು. ಸುಮಾರು 8 ವರ್ಷಗಳ ಸತತ ಪರಿಶ್ರಮದ ನಂತ್ರ ನಾವು ಯಶಸ್ಸು ಕಂಡಿದ್ದೇವೆ. 5 ತಿಂಗಳ ಕಾಲ ಕೆಡದಂತೆ ಇಡಬಹುದಾದ ಫಿಲ್ಟರ್ ಕಾಫಿ ಡಿಕಾಕ್ಷನ್ ತಯಾರಿಸುವುದ್ರಲ್ಲಿ ಯಶಸ್ಸು ಕಂಡಿದ್ದೇವೆ. ಇದಕ್ಕೆ ಗ್ರಾಹಕರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿರೋದು ಖುಷಿ ಕೊಟ್ಟಿದೆ ” ಹರೀಶ್ ಮಿತ್ರಾ, ಟ್ರೂಸೌಥ್ ಕಂಪನಿಯ ಸಹಸಂಸ್ಥಾಪಕ
ಕಳೆದ 8 ವರ್ಷಗಳಿಂದ ಕಾಫಿ ಇಂಡಷ್ಟ್ರಿಯಲ್ಲಿ ಕೆಲಸ ಮಾಡುತ್ತಿರುವ ಗೌರವ್ ಫೆರೇರಾ, ಹರೀಶ್, ಹಾರೊಲ್ಡ್ ಫೆರೆರಾ ಎಂಬ ಮೂವರು ಕಳೆದ ಅಕ್ಟೋಬರ್‌ನಲ್ಲಿ ಪ್ರಾರಂಭ ಮಾಡಿರೋ ಅನ್ವೇಷಣೆ ಇದು. ಇಲ್ಲಿ ಕಾಫಿ ಡಿಕಾಕ್ಷನ್‌ನ ಆನ್‌ಲೈನ್ ಸೇವೆ ಕೂಡ ಇದೆ. ಜೊತೆಗೆ ಕಾಫಿ ಮೇಕರ್ ಮೆಶಿನ್‌ಗಳನ್ನೂ ಮಾರಾಟ ಮಾಡಲಾಗುತ್ತದೆ. ಬೆಂಗಳೂರಿನ 50ಕ್ಕೂ ಹೆಚ್ಚು ಹೊಟೇಲ್‌ಗಳಲ್ಲಿ ಇಲ್ಲಿ ತಯಾರಿಸಲಾದ ಕಾಫಿ ಮೇಕರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಇನ್ನು ಇಲ್ಲಿನ ಕಾಫಿ ರುಚಿಯನ್ನ ಒಂದು ಬಾರಿ ಕಂಡುವರು ಅದನ್ನ ಮರೆಯುವ ಮಾತೇ ಇಲ್ಲ. ಈ ಬಾರಿ ಚಿತ್ರಕಲಾ ಪರಿಷತ್ ನ ಚಿತ್ರಸಂತೆಯಲ್ಲಿ ನಡೆದ ಕಾಫಿ ಷೋನಲ್ಲಿ ಟ್ರೂಸೌಥ್ ಸಣ್ಣಮಟ್ಟದಲ್ಲಿ ತನ್ನ ಉತ್ಪನ್ನವನ್ನ ಪರಿಚಯಿಸಿತ್ತು. ಅಲ್ಲಿ ಈ ಫಿಲ್ಟರ್ ಕಾಫಿ ರುಚಿಯ ಸವಿಯನ್ನ ಸವಿದ ಕಾಫಿ ಪ್ರಿಯರು ಇದೀಗ ರಿಚ್‌ಮಂಡ್ ರಸ್ತೆಯ ಕೆಥಡ್ರಲ್ ಚರ್ಚ್ ಎದುರಿನ ಸಿಗ್ನಲ್ ಬಳಿ ಇರುವ "ಟ್ರೂ ಸೌತ್' ಶಾಪ್ ಗೆ ಬರ್ತಾರೆ. ಕೊಡಗು ಮತ್ತು ಚಿಕ್ಕಮಗಳೂರು ಕಡೆಯ ಸ್ಟ್ರಾಂಗ್ ಫಿಲ್ಟರ್ ಕಾಫಿಗಾಗಿ ಬೆಂಗಳೂರಿನ ಮೂಲೆ ಮೂಲೆಯಿಂದಲೂ ಜನ ಟ್ರಾಫಿಕನ್ನೂ ಲೆಕ್ಕಿಸದೆ ಬರುತ್ತಿರುವುದು ವಿಶೇಷ.
“ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದ ಮನೆಯಲ್ಲೇ ಫಿಲ್ಟರ್ ಕಾಫಿ ತಯಾರಿಸಲು ಸಾಧ್ಯವಾಗ್ತಿಲ್ಲ. ಹೀಗಾಗಿ ಫಿಲ್ಟರ್ ಕಾಫಿಯನ್ನ ನಾನು ಬಹಳವಾಗೇ ಮಿಸ್ ಮಾಡಿಕೊಳ್ಳುತ್ತಿದ್ದೆ. ಆದ್ರೆ ಟ್ರೂ ಸೌಥ್ ನಲ್ಲಿ ರುಚಿಕಂಡ ಮೇಲೆ ನಮ್ಮೂರಿನ ಕಾಫಿಯ ಸ್ವಾದ ನೆನಪಾಗ್ತಿದೆ. ಇಲ್ಲಿಂದ ಕೊಂಡೊಯ್ದ ಕಾಫಿ ಡಿಕಾಕ್ಷನ್ ನಿಂದ ಮನೆಯಲ್ಲಿ ಬೇಕು ಬೇಕಾದಾಗ ಫಿಲ್ಟರ್ ಕಾಫಿಯನ್ನ ಕುಡಿಯುತ್ತಿದ್ದೇನೆ ” – ಸ್ವಾತಿ, ಟ್ರೂ ಸೌಥ್ ಗ್ರಾಹಕರು
ಫಿಲ್ಟರ್ ಕಾಫಿಯ ಸ್ವಾದವನ್ನ ಗ್ರಾಹಕರಿಗೆ ತಲುಪಿಸಿರುವ ಖುಷಿ ಟ್ರೂ ಸೌಥ್ ಸಂಸ್ಥಾಪಕರದ್ದು. ತಮ್ಮ ಉತ್ಪನ್ನವನ್ನ ಬಳಸಿದ ಗ್ರಾಹಕರು ಖುಷಿಪಟ್ರೆ ಅದು ನಮಗೆ ಹೆಮ್ಮೆ ಅಂತಾರೆ ಹರೀಶ್. ಹೀಗೆ ನೀವೂ ಏನಾದ್ರೂ ಮಿಸ್ ಮಾಡಿಕೊಂಡಿರುವ ಫಿಲ್ಟರ್ ಕಾಫಿಯ ಸ್ವಾದವನ್ನ ಮತ್ತೆ ಪಡೆಯಬೇಕು ಅಂತ ಅನಿಸಿದ್ರೆ ಅಥವಾ ಕಾಫಿಯ ಹೊಸ ಸ್ವಾದವನ್ನ ಪಡೆಯಬೇಕು ಅಂತ ಅಂದುಕೊಂಡ್ರೆ ಟ್ರೂ ಸೌಥ್ ಶಾಪ್ ಗೆ ಭೇಟಿ ನೀಡಿ.
ವೆಬ್‌ಸೈಟ್: http://truesouth.co.in
ಇಮೇಲ್: [email protected]