20 ಖಾಲಿ ಬಾಟಲಿ ನೀಡಿ ; ಉಚಿತವಾಗಿ ಊಟ ಪಡೆಯಿರಿ ಎನ್ನುತ್ತಿವೆ ಹರಿಯಾಣದ 2 ಧಾಬಾಗಳು

ನಾಗರಿಕ ಅಧಿಕಾರಿಗಳು ಪ್ರಾರಂಭದಲ್ಲೇ ಕಡಿಮೆ ಎಂದರೂ 4 ಧಾಬಾಗಳಿಗೆ ಈ ಉಪಕ್ರಮದಲ್ಲಿ ಭಾಗವಹಿಸಲು ಕೇಳಿಕೊಂಡಿದ್ದರು ಆದರೆ ಬರೀ ಇಬ್ಬರು ಮಾತ್ರ ಇದಕ್ಕೆ ಸಮ್ಮತಿ ನೀಡಿದರು. ಸಂಗ್ರಹಿಸಿದ ಬಾಟಲಿಗಳಲ್ಲಿ ಸಸ್ಯಗಳನ್ನು ನೆಟ್ಟು ಮರು ಉಪಯೋಗಿಸುತ್ತಿದ್ದಾರೆ.

20 ಖಾಲಿ ಬಾಟಲಿ ನೀಡಿ ; ಉಚಿತವಾಗಿ ಊಟ ಪಡೆಯಿರಿ ಎನ್ನುತ್ತಿವೆ ಹರಿಯಾಣದ 2 ಧಾಬಾಗಳು

Wednesday November 27, 2019,

2 min Read

ಹೆದ್ದಾರಿಗಳಲ್ಲಿರುವ ಧಾಬಾಗಳು ತಮ್ಮ ರುಚಿ ಮತ್ತು ಸಾಂಪ್ರದಾಯಿಕ ಬೆಲೆಗಳಿಂದ ತುಂಬಾ ಪ್ರಸಿದ್ಧಿಯಾಗಿವೆ. ಆದರೆ ಇಲ್ಲಿ ಎರಡು ಧಾಬಾಗಳು ತಮ್ಮ ವಿಭಿನ್ನ ಯೋಜನೆಗಳಿಂದ ಸದ್ದು ಮಾಡುತ್ತಿವೆ.


ಜನತಾ ಭೋಜನಾಲಯ ಮತ್ತು ಹುಂಡಾ ರಾಮ್‌ ಜಿ ಕಾ ಶುಧಾ ವೈಷ್ಣೋ ಎಂಬೆರೆಡು ಧಾಬಾಗಳು ಬರೀ ಇಪ್ಪತ್ತು ಖಾಲಿ ಬಾಟಲಿಗಳನ್ನು ನೀಡಿದರೆ ಆರೋಗ್ಯಕರ ಊಟ ನೀಡುತ್ತಿವೆ. ಹಿಸರ ನಗರದ ಪುರಸಭೆ ನಿಗಮವು ಈ ಎರಡು ಧಾಬಾಗಳನ್ನು ತನ್ನ ಉಪಕ್ರಮದಲ್ಲಿ ಭಾಗಿಯಾಗಿಸಿಕೊಂಡಿದೆ.


ನಗರದ ನಾಗರಿಕ ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್‌ ರಾಮ್‌ ಜಿ ಲಾಲ್ ಹಿಂದುಸ್ತಾನ್‌ ಟೈಮ್ಸ್‌ ಜೊತೆ ಮಾತನಾಡುತ್ತಾ,


“ಪಾಲಿಥಿನ್‌ ಮೇಲೆ ಹೇರಿರುವ ನಿಷೇಧದಿಂದ ಗುಜರಿ ಅಂಗಡಿಗಳು ಪ್ಲಾಸ್ಟಿಕ್‌ ಬಾಟಲಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರು, ಇದರಿಂದ ನಗರದ ಪ್ರದೇಶಗಳಲ್ಲಿ ಎಸೆದಿರುವ ಪ್ಲಾಸ್ಟಿಕ್‌ ಬಾಟಲಿಗಳು ಕಾಣಲಾರಂಭಿಸಿದವು. ಆಗ ನಾವು ಕೆಲವು ಧಾಬಾಗಳನ್ನು ಸಂಪರ್ಕಿಸಿದೆವು, ಅವರು ತುರ್ತಾಗಿ ಒಪ್ಪಿ 20 ಪ್ಲಾಸ್ಟಿಕ್‌ ಬಾಟಲಿಗಳನ್ನು ಕೊಟ್ಟವರಿಗೆ ದಾಲ್‌, ಚಪಾತಿ ಮತ್ತು ಸಲಾಡ್‌ ನ ಊಟವನ್ನು ನೀಡಲು ಒಪ್ಪಿದರು,” ಎಂದು ಹೇಳಿದರು.


ಉಚಿತವಾಗಿ ಊಟ ನೀಡಲು ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಗ್ರಹಿಸುತ್ತಿರುವ ಧಾಬಾ ಮಾಲೀಕರು (ಚಿತ್ರಕೃಪೆ: ಹಿಂದುಸ್ತಾನ್‌ ಟೈಮ್ಸ್)




ನಾಗರಿಕ ಅಧಿಕಾರಿಗಳು ಪ್ರಾರಂಭದಲ್ಲೇ ಕಡಿಮೆ ಎಂದರೂ 4 ಧಾಬಾಗಳಿಗೆ ಈ ಉಪಕ್ರಮದಲ್ಲಿ ಭಾಗವಹಿಸಲು ಕೇಳಿಕೊಂಡಿದ್ದರು ಆದರೆ ಬರೀ ಇಬ್ಬರು ಮಾತ್ರ ಇದಕ್ಕೆ ಸಮ್ಮತಿ ನೀಡಿದರು. ಸಂಗ್ರಹಿಸಿದ ಬಾಟಲಿಗಳನ್ನು ಸಸ್ಯಗಳನ್ನು ನೆಡಲು ಬಳಸಲಾಗುತ್ತಿದೆ.


ಹುಂಡಾ ರಾಮ್‌ ಜಿ ಕಾ ಶುಧಾ ವೈಷ್ಣೋ ಧಾಬಾದ ಮಾಲೀಕರಾದ ಕಾಶೀಶ್‌ ಅರೋರಾ, ದಿ ಲಾಜಿಕಲ್‌ ಇಂಡಿಯಾ ಜೊತೆ ಮಾತನಾಡುತ್ತಾ,


“ಪುರಸಭೆ ನಿಗಮವು ನನ್ನನ್ನು ಸೇರಿದಂತೆ ಇತರ 3 ಧಾಬಾ ಮಾಲೀಕರನ್ನು ಸಭೆಗೆ ಕರೆದು 20 ಬಾಟಲಿಗಳನ್ನು ನೀಡಿದವರಿಗೆ ನಾವು ಊಟ ನೀಡಬಹುದೆ ಎಂದು ಕೇಳಿತು. ಅದನ್ನು ಕೇಳಿದೊಡನೆಯೇ ನಾನು ಒಪ್ಪಿಕೊಂಡೆ, ಏಕೆಂದರೆ ಅದರಿಂದ ಪರಿಸರ ಪ್ಲಾಸ್ಟಿಕ್‌ ನಿಂದ ಮುಕ್ತವಾಗುತ್ತದೆ ಮತ್ತು ಅದು ನಮಗೂ ಒಳ್ಳೇಯದನ್ನು ಮಾಡುತ್ತದೆ,” ಎಂದರು.


ಈ ಉಪಕ್ರಮ ಜಾರಿಗೆ ಬಂದು ಈಗ 45 ದಿನಗಳೇ ಕಳೆದಿವೆ, ಈ ನಡುವೆ ಕೇವಲ ಒಬ್ಬನೇ ಒಬ್ಬ ಗ್ರಾಹಕ ಧಾಬಾಗೆ 20 ಬಾಟಲಿಗಳ ಸಮೇತ ಉಚಿತ ಊಟಕ್ಕಾಗಿ ಬಂದಿದ್ದಾನೆ. ಮಾಧ್ಯಮಗಳ ಪ್ರಚಾರದಿಂದ ಇನ್ನು ಹೆಚ್ಚು ಜನರು ಇದರಲ್ಲಿ ಭಾಗವಹಿಸಬಹುದೆಂಬ ನಿರೀಕ್ಷೆಯಲ್ಲಿ ಧಾಬಾ ಮಾಲೀಕರಿದ್ದಾರೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.