ವಿದ್ಯಾದಾನ ಮಾಡುತ್ತಿರುವ ಚಾಯ್‌ವಾಲ

ಕಾನ್ಪುರದಲ್ಲಿ ಸಣ್ಣ ಚಹಾದ ಅಂಗಡಿಯೊಂದನ್ನು ನಡೆಸುತ್ತಿರುವ ಮೊಹಮ್ಮದ್ ಮಹಬೂಬ್ ಮಲಿಕ್ ತಮ್ಮ ನೆರೆಹೊರೆಯಲ್ಲಿರುವ ದೀನದಲಿತ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು ಸುಮಾರು 20,000 ರೂಪಾಯಿಗಳನ್ನು ದಾನಮಾಡುತ್ತಾರೆ.

ವಿದ್ಯಾದಾನ ಮಾಡುತ್ತಿರುವ ಚಾಯ್‌ವಾಲ

Sunday November 10, 2019,

2 min Read

ಶಿಕ್ಷಣವು ಮಾನವನ ಮೂಲಭೂತ ಹಕ್ಕು ಮತ್ತು ಭಾರತದ ಅನೇಕ ಮಕ್ಕಳಿಗೆ ಅದಿನ್ನೂ ಕನಸಾಗೇ ಉಳಿದುಹೋಗಿದೆ. ಸರ್ಕಾರವು ವಿವಿಧ ಕ್ರಮಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳ ಮೂಲಕ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದರೆ, ಹೆಚ್ಚಿನ ಕ್ರಮಗಳ ನಿರಂತರ ಪ್ರಯತ್ನಗಳು ಅವಶ್ಯವಾಗಿವೆ. ನಾಗರಿಕರಿಂದ ಸ್ವಲ್ಪವೇ ಸಹಾಯವಾದರೂ ಸಹ ಬಹಳ ಉಪಕಾರಿಯಾಗಬಲ್ಲದ್ದಾಗಿದೆ.


ಉದಾಹರಣೆಗೆ, ರಾಜೇಶ್ ಕುಮಾರ್ ಶರ್ಮಾ ಅವರು ಪ್ರಸ್ತುತದಲ್ಲಿ ಸುಮಾರು 300 ವಿದ್ಯಾರ್ಥಿಗಳಿಗೆ ಸೇತುವೆಯ ಕೆಳಗೆ ಸ್ಥಾಪಿಸಲಾದ ತಾತ್ಕಾಲಿಕ ಶಾಲೆಯಲ್ಲಿ ಪಾಠಮಾಡುತ್ತಿದ್ದಾರೆ. ರಾಜೇಶ್‌ ರಂತೆ, ಮೊಹಮ್ಮದ್ ಮಹಬೂಬ್ ಮಲಿಕ್ ಸಹ ಶಿಕ್ಷಣದ ಬಗ್ಗೆ ಗಟ್ಟಿಯಾದ ನಿಲುವುಗಳನ್ನು ಹೊಂದಿದ್ದಾರೆ.


ಕಾನ್ಪುರದಲ್ಲಿ ಚಹಾ ಅಂಗಡಿಯೊಂದರ ಮಾಲೀಕರಾಗಿರುವ ಮೊಹಮ್ಮದ್ ತಮ್ಮ ನೆರೆಹೊರೆಯ 40 ಮಕ್ಕಳಿಗೆ ಶಿಶುವಿಹಾರದಿಂದ ಹಿಡಿದು ನಾಲ್ಕನೇ ತರಗತಿಯವರೆಗೆ ಶಿಕ್ಷಣವನ್ನು ಕೊಡಿಸುತ್ತಿದ್ದಾರೆ.


ಮೊಹಮ್ಮದ್ ಮಹಬೂಬ್ ಮಲಿಕ್ (ಚಿತ್ರಕೃಪೆ: ದೈನಿಕ್‌ ಭಾಸ್ಕರ್)




ಮೊಹಮ್ಮದ್ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ತಿಂಗಳು 20,000 ರೂಪಾಯಿಗಳನ್ನು ವ್ಯಯಿಸುತ್ತಿದ್ದಾರೆ.


ದೈನಿಕ್‌ ಭಾಸ್ಕರ್ ಜೊತೆ ಮಾತನಾಡುತ್ತ, ಅವರು,


“2017ರಲ್ಲಿ, ನಾನು ನಿರ್ಗತಿಕ ಮಕ್ಕಳಿಗಾಗಿ ಕಲಿಕಾ ಕೇಂದ್ರವನ್ನು ನನ್ನ ಉಳಿತಾಯದ ಹಣದಿಂದ ಪ್ರಾರಂಭಿಸಿದೆ. ನನ್ನ ಕೆಲಸದ ಬಗ್ಗೆ ನನ್ನ ಸ್ನೇಹಿತ ನೀಲೇಶ್‌ ತಿಳಿದುಕೊಂಡು ನನಗೆ ಒಂದು ಸರಕಾರೇತರ ಸಂಸ್ಥೆಯನ್ನು ಆರಂಭಿಸಿದರೆ, ಕಲಿಕಾ ಕೇಂದ್ರಕ್ಕೆ ಮತ್ತಷ್ಟು ಸಹಾಯವಾಗಬಲ್ಲದು ಎಂದು ತಿಳಿಸಿದರು” ಎಂದರು.


ಇದನ್ನು ಅನುಸರಿಸಿ, ಮೊಹಮ್ಮದ್ ಅವರು ‘ಮಾ ತುಜೇ ಸಲಾಮ್ ಫೌಂಡೇಶನ್’ ಎಂಬ ಹೆಸರಿನ ಸರಕಾರೇತರ ಸಂಸ್ಥೆಯನ್ನು ಪ್ರಾರಂಭಿಸಿದರು, ಈ ಸಂಸ್ಥೆಯಿಂದ ಈಗ ಶಾಲೆಯ ಶಿಕ್ಷಣ ಹಾಗೂ ಸಮವಸ್ತ್ರ, ಚೀಲಗಳು ಮತ್ತು ಲೇಖನ ಸಾಮಗ್ರಿಗಳನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದ. ಈ ಶಾಲೆಯಲ್ಲಿ ಈಗ 3 ಶಿಕ್ಷಕರು ಉಚಿತವಾಗಿ ಬೋಧನೆ ಮಾಡುತ್ತಿದ್ದಾರೆ.


2015ರಲ್ಲಿ ಕೋಚಿಂಗ್ ಕೇಂದ್ರವನ್ನು ಆರಂಭಿಸುವ ಮೊದಲು, 29 ವರ್ಷದ ಮೊಹಮದ್, ಶಾರದಾ ನಗರ ಜಂಕ್ಷನ್ನಿನ ಫುಟ್‌ಪಾತ್‌ನಲ್ಲಿ ಪ್ರತಿದಿನ ಚಹಾವನ್ನು ಮಾರಾಟ ಮಾಡುತ್ತಿದ್ದರು. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ಕುರಿತ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪರೀಕ್ಷೆಗಳ ಸಮಯದಲ್ಲಿ, ಮೊಹಮ್ಮದ್ ತಮ್ಮ ಸ್ಟಾಲ್‌ಗೆ ಭೇಟಿ ನೀಡುವ ಆಕಾಂಕ್ಷಿಗಳಿಗೆ ಉಚಿತ ಚಹಾವನ್ನು ನೀಡುತ್ತಾರೆ.


ಎನ್‌ಡಿಟಿವಿಯ ಪ್ರಕಾರ, ಮೊಹಮದ್‌ರ ಪ್ರಯತ್ನಗಳು ಮಾಜಿ ಬ್ಯಾಟ್ಸ್‌ಮ್ಯಾನ್‌ ವಿವಿಎಸ್‌ ಲಕ್ಷ್ಮಣ್‌ರ ಗಮನಕ್ಕೆ ಬಂದು, ಅವರು ಇದರ ಕುರಿತು ಟ್ವೀಟ್‌ ಮಾಡುತ್ತ,


“ಕಾನ್ಪುರದ ಚಹಾ ಮಾರಾಟಗಾರ ಮೊಹಮ್ಮದ್ ಮಹಬೂಬ್ ಮಲಿಕ್ 40 ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿದ್ದಾರೆ. ಅವರು ಸಣ್ಣ ಚಹಾ ಅಂಗಡಿಯನ್ನು ಹೊಂದಿದ್ದು, ಅವರ ಆದಾಯದ 80% ಈ ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಾರೆ. ಎಂತಹ ಸ್ಫೂರ್ತಿ!” ಎಂದರು.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.