ಪ್ಲಾಸ್ಟಿಕ್‌ ಬಾಟಲಿಗಳ ಮರುಬಳಕೆಗೆ ಸಾಥ್‌ ನೀಡಿದ ರಿಲಯನ್ಸ್‌ ಉದ್ಯೋಗಿಗಳು

ಪ್ಲಾಸ್ಟಿಕ್ ಮಾಲಿನ್ಯಕ್ಕೆ ಸಂಬಂಧಿಸಿದ ಆರೋಗ್ಯ ಮತ್ತು ಪರಿಸರೀಯ ಅಪಾಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಲೋಕೋಪಕಾರಿ ಅಂಗ ಸಂಸ್ಥೆಯಾದ ರಿಲಯನ್ಸ್ ಫೌಂಡೇಶನ್ 78 ಟನ್‌ ಗಳಷ್ಟು ಬಿಸಾಡಿದ ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಗ್ರಹಿಸಿದೆ.

ಪ್ಲಾಸ್ಟಿಕ್‌ ಬಾಟಲಿಗಳ ಮರುಬಳಕೆಗೆ ಸಾಥ್‌ ನೀಡಿದ ರಿಲಯನ್ಸ್‌ ಉದ್ಯೋಗಿಗಳು

Wednesday November 13, 2019,

2 min Read

ಪ್ಲಾಸ್ಟಿಕ್ ಮಾಲಿನ್ಯಕ್ಕೆ ಸಂಬಂಧಿಸಿದ ಆರೋಗ್ಯ ಮತ್ತು ಪರಿಸರೀಯ ಅಪಾಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಲೋಕೋಪಕಾರಿ ಅಂಗ ಸಂಸ್ಥೆಯಾದ ರಿಲಯನ್ಸ್ ಫೌಂಡೇಶನ್ ಇತ್ತೀಚೆಗೆ ಪ್ರಾರಂಭಿಸಿದ ಹೊಸ ಉಪಕ್ರಮವು ಯಶಸ್ಸನ್ನು ಕಂಡಿದೆ.


ಫೌಂಡೇಶನ್‌ ತನ್ನ ರಿಸೈಕಲ್‌4ಲೈಫ್ ಎಂಬ ಅಭಿಯಾನದ ಭಾಗವಾಗಿ, ಮರುಬಳಕೆಗಾಗಿ ಸುಮಾರು 39 ಲಕ್ಷದಷ್ಟು ಬಾಟಲಿಗಳನ್ನು ಒಳಗೊಂಡ ಸುಮಾರು 78 ಟನ್‌ ತ್ಯಜಿಸಲ್ಪಟ್ಟ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ.


ಪಿಇಟಿ ಬಾಟಲಿಗಳ ಸಂಗ್ರಹದಲ್ಲಿ ಪಾಲ್ಗೊಂಡಿದ್ದ ರಿಲಯನ್ಸ್‌ ಸಂಸ್ಥೆಯ ಸ್ಥಾಪಕಿ ಹಾಗೂ ಮುಖ್ಯಸ್ಥೆ ನೀತಾ ಅಂಬಾನಿ.


ಜಿಯೋ ಮತ್ತು ರಿಲಯನ್ಸ್ ರೀಟೇಲ್‌ನಂತಹ ಮಿತ್ರ ವ್ಯವಹಾರಗಳನ್ನು ಒಳಗೊಂಡಂತೆ ಮೂರು ಲಕ್ಷ ಉದ್ಯೋಗಿಗಳು, ಅವರ ಸಹ ಸಂಸ್ಥೆಗಳು ಮತ್ತು ಆರ್‌ಐಎಲ್‌ನ ಪಾಲುದಾರರನ್ನು ಒಟ್ಟುಗೂಡಿಸುವ ಮೂಲಕ ದಾಖಲೆ-ನಿರ್ಮಿಸಿದ ಅಭಿಯಾನ ನಡೆಸಲು ಸಾಧ್ಯವಾಗಿದೆ.


ಸ್ವಚ್ಛ ಹಾಗೂ ಶುಭ್ರ ಪರಿಸರವನ್ನು ನಿರ್ಮಿಸುವ ಸಲುವಾಗಿ ಪ್ಲಾಸ್ಟಿಕ್‌ ಮರುಬಳಕೆಗೆ ಒತ್ತು ನೀಡುವ ಉದ್ದೇಶದಿಂದಾಗಿ ಅಕ್ಟೋಬರ್‌ 2019ರಲ್ಲಿ ರಿಲಯನ್ಸ್‌ ಎಂಬ ದೈತ್ಯ ಸಂಸ್ಥೆ ರೀಸೈಕಲ್‌4ಲೈಫ್‌ ಎಂಬ ಅಭಿಯಾನ ಆರಂಭಿಸಿತು.


“ರಿಲಯನ್ಸ್ ಫೌಂಡೇಶನ್‌ನಲ್ಲಿ ನಾವು ಪರಿಸರ ಸಂರಕ್ಷಣೆಯನ್ನು ಅತ್ಯಂತ ಮಹತ್ವವಾದುದು ಎಂದು ನಂಬುತ್ತೇವೆ. ಆದ್ದರಿಂದ, ಸ್ವಚ್ಛತಾ ಹೈ ಸೇವಾ ಸಂದೇಶವನ್ನು ಉತ್ತೇಜಿಸಲು, ಅಭ್ಯಾಸಿಸಲು ಮತ್ತು ಪಸರಿಸಲು ಫೌಂಡೇಶನ್‌ನ ನಿರಂತರ ಪ್ರಯತ್ನಗಳನ್ನು ಆಧರಿಸಿ, ಮರುಬಳಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ನಾವು ರಿಸೈಕಲ್4ಲೈಫ್ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಭಾರತದ ಉದ್ದಗಲದಲ್ಲಿರುವ ಸಾವಿರಾರು ರಿಲಯನ್ಸ್ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಸ್ವಯಂಪ್ರೇರಿತರಾಗಿ ಇದರ ಭಾಗವಾಗಲು ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲು ಮತ್ತು ಮರುಬಳಕೆ ಮಾಡಲು ನಮಗೆ ಸಹಾಯ ಮಾಡಿವೆ,” ಎಂದು ನೀತಾ ಅಂಬಾನಿ ಹೇಳಿದ್ದಾರೆ.

ಸಂಗ್ರಹಿಸಿದ ಎಲ್ಲಾ ತ್ಯಾಜ್ಯ ಪ್ಲಾಸ್ಟಿಕ್ ಬಾಟಲಿಗಳನ್ನು ಆರ್‌ಐಎಲ್‌ನ ಮರುಬಳಕೆ ಘಟಕವೊಂದರಲ್ಲಿ ಮೌಲ್ಯವರ್ಧಿತ ನಾರುಗಳಾಗಿ ಮರುಬಳಕೆ ಮಾಡಲು ಫೌಂಡೇಶನ್ ಯೋಜನೆ ನಡೆಸುತ್ತಿದೆ.


ತಮ್ಮ ಸುಸ್ಥಿರ ವ್ಯವಹಾರ ಅಭ್ಯಾಸದ ಭಾಗವಾಗಿ ಕಳೆದ ಎರಡು ದಶಕಗಳಿಂದ ಉಪಯೋಗಿಸಲ್ಪಟ್ಟ ಪಿಇಟಿ ಬಾಟಲಿಗಳನ್ನು ರಿಲಯನ್ಸ್‌ ಮರುಬಳಕೆ ಮಾಡುತ್ತಿದೆ.


ಮರುಬಳಕೆಗೆ ಬಾಟಲಿಗಳನ್ನು ಸಂಗ್ರಹಿಸುವ ಯಂತ್ರದ ಮುಂದೆ ನೀತಾ ಅಂಬಾನಿ.


ಬಾಟಲಿಗಳನ್ನು ತಯಾರಿಸಲು ಪಿಇಟಿ ರಾಳವನ್ನು ರಚಿಸುವುದನ್ನು ಪರಿಹರಿಸಲು ಸುಸ್ಥಿರತವಾದ ಅತ್ಯುತ್ಕೃಷ್ಟ ಉದಾಹರಣೆಯಲ್ಲಿ, ಸಂಸ್ಥೆಯು ತಿರಸ್ಕರಿಸಿದ ಪಿಇಟಿ ಬಾಟಲಿಗಳನ್ನು ಸಂಗ್ರಹಿಸಿ ಪರಿಸರ ಸ್ನೇಹಿ ಪಾಲಿಯೆಸ್ಟರ್ ಫೈಬರ್‌ಗಳಾಗಿ ಪರಿವರ್ತಿಸುತ್ತದೆ. (ರೆಕ್ರೋನ್ ® ಗ್ರೀನ್‌ ಗೋಲ್ಡ್)‌ ಇದು ನಂತರದಲ್ಲಿ ತಳಮಟ್ಟದ ಜವಳಿ ಉದ್ಯಮದಲ್ಲಿ ನಿದ್ರಾ ಉತ್ಪನ್ನಗಳು ಮತ್ತು ಫ್ಯಾಷನ್ ಉಡುಪುಗಳನ್ನು (ಆರ್ | ಎಲಾನ್™ಫ್ಯಾಬ್ರಿಕ್) ತಯಾರಿಸಲು ಬಳಸಲಾಗುತ್ತದೆ.


ರಿಲಯನ್ಸ್ ಫೌಂಡೇಶನ್ ಸುಸ್ಥಿರ ಅಭಿವೃದ್ಧಿ ವಲಯವನ್ನು ಪೋಷಿಸಿದ್ದು ಇದೇ ಮೊದಲಲ್ಲ. ಮುಂಬೈನ ಮಿಥಿ ನದಿಯಿಂದ ವರ್ಸೋವಾ ಬೀಚ್ ವರೆಗೆ ಕಳೆದ ಒಂದು ವರ್ಷದಿಂದ ಸ್ಥಳೀಯ ಸಮುದಾಯದಲ್ಲಿ ತನ್ನ ಉದ್ಯೋಗಿಗಳನ್ನು ಒಳಗೊಂಡ ಅನೇಕ ಸ್ವಚ್ಛತಾ ಚಟುವಟಿಕೆಗಳನ್ನು ಇದು ಬೆಂಬಲಿಸುತ್ತಿದೆ.


ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ಅಂಗವಾಗಿ ಸಂಸ್ಥೆಯು 800 ರೈಲ್ವೇ ನಿಲ್ದಾಣಗಳಲ್ಲಿ ಜಿಯೋ ಸಿಬ್ಬಂದಿಯ ಸಾರಥ್ಯದಲ್ಲಿ ಸ್ವಚ್ಛತಾ ಆಂದೋಲನ ನಡೆಸಲಾಗಿದೆ. ರಿಲಯನ್ಸ್‌ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸ್ಥಳೀಯ ವಾಸಸ್ಥಳಗಳಿಗೆ ಹೋಗಿ ಸಾರ್ವಜನಿಕರಿಗೆ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.


ಹಲವು ಹಳ್ಳಿಗಳಲ್ಲಿ ಗ್ರಾಮೀಣ ಸಮುದಾಯಗಳ ಸಹಯೋಗದೊಂದಿಗೆ ಅವರಿಗೆ ಸ್ವಚ್ಛತಾ ಕಾರ್ಯಗಳಲ್ಲಿ ಹಾಗೂ ಮರುಬಳಕೆ ಕಾರ್ಯಗಳಲ್ಲಿ ಸಹಾಯಮಾಡುವುದು ಆರ್‌ಐಎಲ್‌ನ ಲೋಕೋಪಕಾರಿ ವಿಭಾಗದ ಅಂಗವಾಗಿದೆ.