Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಧಾರವಾಡ ಹುಡುಗನ ಡ್ಯಾನ್ಸ್ ಪಯಣ ವಿಯೆಟ್ನಾಂ ನತ್ತ

ಧಾರವಾಡದ ಗಲ್ಲಿಗಳಲ್ಲಿ ಓಡಾಡಿಕೊಂಡಿದ್ದ ಹುಡುಗ ಇಂದು ವಿಯೆಟ್ನಾಂ ನಂತಹ ದೊಡ್ಡ ದೇಶದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಧಾರವಾಡ ಹುಡುಗನ ಡ್ಯಾನ್ಸ್ ಪಯಣ ವಿಯೆಟ್ನಾಂ ನತ್ತ

Monday December 09, 2019 , 2 min Read

ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತೆ, ಆದರೆ ಕೆಲವರನ್ನ ಮಾತ್ರ ಆಯ್ಕೆಮಾಡಿಕೊಳ್ಳತ್ತದೆ ಎಂಬ ಈ ಮಾತಿನಂತೆಯೇ ಕೆಲವರಲ್ಲಿ ಪ್ರಜ್ವಲ್ ಕೂಡ ಒಬ್ಬರು. ಧಾರವಾಡದ ಜೈಭೀಮ ನಗರ ನಿವಾಸಿಯಾದ ಇವರು ಓದಿದ್ದು 10ನೇ ತರಗತಿ. ಡಿಪ್ಲೋಮಾ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ನೆಚ್ಚಿನ ನೃತ್ಯದ ದಾರಿಯನ್ನು ಆಯ್ಕೆಮಾಡಿಕೊಂಡರು. ಚಿಕ್ಕಂದಿನಿಂದಲೇ ಚಿಕ್ಕಪ್ಪ ಸದಾನಂದ ಬಂಗೆಣ್ಣವರ ಅವರ ನೃತ್ಯ ನೋಡುತ್ತ ಬೆಳೆದ ಪ್ತಜ್ವಲ್ ಗೆ ನೃತ್ಯಕಲೆಯು ರಕ್ತಗತವಾಗಿ ಬಂದಿದೆ ಎನ್ನಬಹುದು.


ಸ್ಪರ್ಧೆಯೊಂದರಲ್ಲಿ ನೃತ್ಯ ಮಾಡುತ್ತಿರುವ ಪ್ರಜ್ವಲ್


ಚಿಕ್ಕಪ್ಪ ಸದಾನಂದ ರವರು ವೃತ್ತಿಯಲ್ಲಿ ನೃತ್ಯ ಶಿಕ್ಷಕರಾಗಿದ್ದು, ಹಲವು ವರ್ಷಗಳಿಂದ ಮಾನ್ ಜೂನ್ ಎಂಬ ನೃತ್ಯ ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಹಲವಾರು ನೃತ್ಯ ಪ್ರದರ್ಶನ ನೀಡಿದ್ದಾರೆ. ಚಿಕ್ಕವಯಸ್ಸಿನಿಂದ ಇದನ್ನೇ ನೋಡುತ್ತ ಬೆಳೆದ ಪ್ರಜ್ವಲ್ ಓದನ್ನು ಅರ್ದಕ್ಕೆ ತೊರೆದು ಸಂಪೂರ್ಣವಾಗಿ ತಮ್ಮನ್ನು ತಾವು ನೃತ್ಯದಲ್ಲಿ ತೊಡಗಿಸಿಕೊಂಡರು.


ಕಳೆದ 10 ವರ್ಷಗಳಿಂದ ನೃತ್ಯ ಮಾಡುತ್ತಿರುವ ಇವರು ಈ ಕ್ಷೇತ್ರದಲ್ಲಿಯೇ ಸಾಧನೆ ಮಾಡಲು ಹಟತೊಟ್ಟರು. ಚಿಕ್ಕಪ್ಪನ ನೃತ್ಯ ಶಾಲೆ ಮಾನ್ ಜೂನ್ ಸ್ಕೂಲ್ ಆಫ್ ಡ್ಯಾನ್ಸ್ ನಲ್ಲಿ ತಮ್ಮ ನೃತ್ಯ ಅಭ್ಯಾಸವನ್ನು ಮಾಡಿ. ನೃತ್ಯ ಪ್ರದರ್ಶನ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಲಾರಂಬಿಸಿದರು. ಇಲ್ಲಿಯವರೆಗೆ ಸುಮಾರು 200 ನೃತ್ಯ ಪ್ರದರ್ಶನ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ಅಲ್ಲದೇ ಕನ್ನಡದ ಖ್ಯಾತ ಮಾಸ್ಟರ್ ಡಾನ್ಸರ್ ಹಾಗೂ ತೆಲುಗಿನ ಡಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿ ನೃತ್ಯ ಮಾಡಿದ್ದಾರೆ. ಹೀಗೆ ಏನಾದರೂ ಸಾಧನೆ ಮಾಡಲು ಹಂಬಲಿಸುತ್ತಿದ್ದ ಇವರಿಗೆ ಒಂದು ದೊಡ್ಡ ಅವಕಾಶ ಒದಗಿಬಂದಿತು. ಅದೇನೆಂದರೆ ವಿಯೆಟ್ನಾಂ ದೇಶದಲ್ಲಿ ನೃತ್ಯ ಗುರುವಾಗಿ ಕೆಲಸಮಾಡುವ ಅವಕಾಶ ದೊರೆಯಿತು.


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತಿದ್ದ ಮಾಸ್ಟರ್ ಡ್ಯಾನ್ಸ್ ರ್ ರಿಯಾಲಿಟಿ ಶೋ ನಲ್ಲಿ ಬ್ಯಾಕ್ ಡ್ಯಾನ್ಸ್ ರ್ ಆಗಿ ಭಾಗವಹಿಸಿದ್ದ ಪ್ರಜ್ವಲ್.


ಭಾರತೀಯರಾದ ಡಾ. ಸಂತೋಷ ಅವರ ವಿಯೆಟ್ನಾಂ ದೇಶದ ಹೋ ಚಿ ಮಾಹ ನಗರದಲ್ಲಿರು ಓಂ ಯೋಗಾ ಆ್ಯಂಡ್ ವೆಲ್ ನೆಸ್ಸ್ ಹಬ್ಬ್ ನಲ್ಲಿ ಡ್ಯಾನ್ಸ್ ಮಾಸ್ಟರ್ ಆಗುವ ಅವಕಾಶ ಬಂದಿತು. ಇಂದು ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ತಾವು ಅಂದುಕೊಂಡ ದಾರಿಯಲ್ಲಿಯೇ ಸಾಧನೆ ಮಾಡೋದು ಮತ್ತು ಅದಕ್ಕೆ ಅವಕಾಶ ದೊರಕುವುದು ತುಂಬಾ ಕಡಿಮೆ. ಆದರೆ ಪ್ರಜ್ವಲ್ ಅವರಿಗೆ ಎರೆಡೂ ಸಾಧ್ಯವಾಯಿತು.


ಯುವರ್ ಸ್ಟೋರಿ ಕನ್ನಡದೊಂದಿಗೆ ಮಾತನಾಡಿದ ಪ್ರಜ್ವಲ್,


ನನ್ನ ಬಹುಕಾಲದ ಕನಸಿಗೆ ಈಗ ರೆಕ್ಕೆ ಬಂದಂತಾಗಿದೆ. ನಾನು ಭಾರತದಿಂದ ಹಾರಿ ವಿಯೆಟ್ನಾಂ ಗೆ ಬಂದಿದ್ದೇನೆ ಒಬ್ಬ ನೃತ್ಯ ಗುರುವಾಗಿ. ನನ್ನ ಈ ವೃತ್ತಿಯಲ್ಲಿ ನನಗೆ ತುಂಬ ಖುಷಿ ಇದೆ, ಆತ್ಮತೃಪ್ತಿ ಕಂಡುಕೊಂಡಿದ್ದೇನೆ. ನನ್ನ ಈ ಸಾಧನೆಗೆ ನನ್ನ ಕುಟುಂಬ ಹಾಗೂ ನನ್ನ ಚಿಕ್ಕಪ್ಪ ಸದಾನಂದ ಅವರ ಸಹಕಾರವೇ ಕಾರಣ. ಅವರೆಲ್ಲರಿಗೂ ನಾನು ಧನ್ಯವಾದ ತಿಳಿಸಿತ್ತೇನೆ,” ಎಂದರು.


ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿದ್ದ ಪ್ರಜ್ವಲ್ ಇಂದು ವಿದೇಶದಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ತಾವು ಪಟ್ಟ ಕಷ್ಟಕ್ಜೆ, ಶ್ರಮಕ್ಕೆ ಈಗ ಫಲ ದೊರೆತಿದೆ. ವಿದ್ಯಾದೇವಿ ಒಲಿಯದಿದ್ದರೂ ಕಲಾದೇವಿ ಕೈ ಬಿಡಲಿಲ್ಲ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.