Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

Bengaluru Tech Summit 2020

Bengaluru Tech Summit 2020

View Brand Publisher

ಡಿಜಿಟಲ್‌ನಿಂದ ಜೀವವಿರುವ ಯಂತ್ರಗಳವರೆಗೆ: ತಂತ್ರಜ್ಞಾನದ ಮುಖಾಮುಖಿ

ಡಿಜಿಟಲ್‌ನಿಂದ ಜೀವವಿರುವ ಯಂತ್ರಗಳವರೆಗೆ: ತಂತ್ರಜ್ಞಾನದ ಮುಖಾಮುಖಿ

Tuesday November 17, 2020 , 4 min Read

ಬೆಂಗಳೂರು ಟೆಕ್‌ ಸಮ್ಮಿಟ್‌(ಬಿಟಿಎಸ್‌) 2020 ಈ ವಾರ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಳ್ಳಲಿದೆ. ಜೀವ ವಿಜ್ಞಾನ ಮತ್ತು ತಂತ್ರಜ್ಞಾನದ ಸಮಾಗಮವಾಗಿರುವ ಈ ಸಭೆ ಬೆಂಗಳೂರನ್ನು ಎರಡೂ ಕ್ಷೇತ್ರಗಳಿಗೂ ಮುಖ್ಯ ಕೇಂದ್ರವಾಗಿಸಿದೆ. ಏಕೆ ಈ ತಂತ್ರಜ್ಞಾನಗಳು ಕೂಡಿಕೊಂಡಿರುತ್ತವೆ ಎಂಬ ಇತಿಹಾಸವನ್ನು, ಅವುಗಳ ಸಹಬಾಳ್ವೆಯ ಶಕ್ತಿಯೇನು ಎಂದು ಈ ಲೇಖನ ವಿವರಿಸುತ್ತದೆ. ಬಿಟಿಎಸ್‌2020ಯ ಬಯೋ-ಟ್ರ್ಯಾಕ್‌ನ ಕೀನೋಟ್‌ ಅನ್ನು ಎಂಐಟಿಯ ಅಧ್ಯಕ್ಷ ಎಮೆರಿಟಾ ಸುಸಾನ್ ಹಾಕ್ಫೀಲ್ಡ್ ನೀಡಿಲಿದ್ದಾರೆ.


ಒಂದು ಶತಮಾನದ ಹಿಂದೆ ಭೌತಶಸ್ತ್ರಜ್ಞರು ಮತ್ತು ಇಂಜಿನೀಯರ್‌ಗಳು ಶಕ್ತಿಗಳನ್ನು ಕೂಡಿಸಿ, ಒಂದರ ಜತೆಗೊಂದು ಬೆಸೆದು ಟೆಲಿಗ್ರಾಫ್‌, ದೂರವಾಣಿ, ರೇಡಿಯೋ, ವಿಮಾನ, ರಡಾರ್‌, ವಿದ್ಯುನ್ಮಾನ-ಯಾಂತ್ರಿಕ ಕ್ಯಾಲ್ಕುಲೇಟರ್‌, ಶಕ್ತಿಯ ಘಟಕಗಳನ್ನು ತಯಾರಿಸಿ ಪ್ರಥಮ ಯಾಂತ್ರಿಕ ಯುಗದ ಧ್ಯೇಯವನ್ನು ಪೂರ್ಣಗೊಳಿಸಿದರು. ಎರಡನೇ ವಿಶ್ವ ಯುದ್ಧದ ಯುಗದ ನಂತರ 20ನೇ ಶತಮಾನದಲ್ಲಿ ಆಗಲೇ ಯುದ್ಧ ಮುಗಿದ ಸಮಯದಲ್ಲಿ ಭೌತಶಾಸ್ತ್ರಜ್ಞರು ಮತ್ತು ಗಣಿತ ತಜ್ಞರು ಹೊಸ ಗಡಿಯ ಶೋಧದಲ್ಲಿ ನಿರತರಾಗಿ ಕಂಪ್ಯೂಟರ್‌, ಡಿಜಿಟಲ್‌ ಯಂತ್ರಾಂಶಗಳ ಜನ್ಮಕ್ಕೆ ಸಹಾಯಮಾಡಿ ಅಣು ಜೀವಶಾಸ್ತ್ರದ(ಮಾಲಿಕ್ಯೂಲರ್‌ ಬಯೋಲಾಜಿ) ಪ್ರಾರಂಭಕ್ಕೆ ಸಾಕ್ಷಿಯಾದರು.


ದ್ವಿತೀಯ ಯಾಂತ್ರಿಕ ಯುಗ

2016ರ ಸಭೆಯೊಂದರಲ್ಲಿ ನಂದನ್‌ ನಿಲೇಕನಿ ಸ್ಪಷ್ಟವಾಗಿ ಹೇಳಬೇಕೆಂದರೆ ಅದೆಲ್ಲವೂ ಶುರುವಾಗಿದ್ದು 2007ರಲ್ಲಿ ಎಂದರು. ಈ ಮಾತನ್ನು ತುಸು ಪರಿಶೀಲಿಸಬೇಕಾಗುತ್ತದೆ. ನಾನು ಅದೇ ಸಮಯದಲ್ಲಿ ಎರಿಕ್ ಬ್ರೈನ್ಜಾಲ್ಫ್ಸನ್ ಮತ್ತು ಆಂಡ್ರ್ಯೂ ಮ್ಯಾಕ್ಫೀ ಎಂಬ ಇಬ್ಬರು ಆರ್ಥಶಾಸ್ತ್ರಜ್ಞರು ಬರೆದ ದಿ ಸೆಕೆಂಡ್‌ ಮಷಿನ್‌ ಎಜ್‌ ಪುಸ್ತಕವನ್ನು ಓದುತ್ತಿದ್ದೆ. ಮೂರೆಯ ಅರೆವಾಹಕ ಕಂಪ್ಯೂಟಿಂಗ್‌ ತಂತ್ರಜ್ಞಾನದ ನಿಯಮವೆ ಸ್ಪಷ್ಟವಾಗಿ ದ್ವಿತೀಯ ಯಾಂತ್ರಿಕ ಯುಗಕ್ಕೆ ಕಾರಣವಾಗಿದೆ. ಮೂರೆಯ ನಿಯಮ 1958 ರಲ್ಲಿ ಶುರುವಾಯಿತು. ಈಗ ಪ್ರತಿ 18 ತಿಂಗಳಿಗೊಮ್ಮೆ ಅದು(ಮೂರೆಯ ನಿಯಮ) ದ್ವಿಗುಣಗೊಳ್ಳುತ್ತದೆ ಎಂದುಕೊಂಡರೆ ನಾವು 232 ಅಥವಾ ಚೆಸ್‌ಬೋರ್ಡ್‌ನ ದ್ವಿತೀಯಾರ್ಧವನ್ನು 48 ವರ್ಷಗಳ ನಂತರ ತಲುಪುತ್ತದೆ, ಅಂದರೆ 2006 ರಲ್ಲಿ. ನಂದನ್‌ ಹೇಳಿದ್ದು ಇದನ್ನೆ.


ನಾವೀಗ ನಿಜವಾಗಿ ತ್ವರಿತ ಸಂಪರ್ಕ ಮತ್ತು ಕೃತಕ ಬುದ್ಧಿಮತ್ತೆಯೆಡೆಗೆ ಕಾಲಿಡುತ್ತಿದ್ದೇವೆ. 1970ರಲ್ಲಿ ಡಿಎಆರ್‌ಪಿಎ ತಂತ್ರಾಂಶ ಮತ್ತು ಯಂತ್ರಾಂಶದ ನಡುವಿನ ಕಂದರವನ್ನು ಮುಚ್ಚಲು ಮ್ಯಾಕ್‌ ಯೋಜನೆಯನ್ನು ಘೋಷಿಸಿದಾಗಿನಿಂದಲೂ ತಂತ್ರಾಂಶ ಅದರೊಡನೆ ಸಾಗುತ್ತಿದೆ. ಅಲ್ಫಾ ಗೋ, ವಾಟ್ಸನ್‌ ಮತ್ತು ಸ್ವತಂತ್ರ ವಾಹನಗಳನ್ನು ಕಂಡು ನೀವು ಬೆರಗಾಗಿದ್ದರೆ ನೀವು ಏನನ್ನೂ ಇನ್ನೂ ನೋಡಿಲ್ಲ ಎಂದಂತೆ! ಅದ್ಭುತ ತಂತ್ರಜ್ಞಾನಗಳೊಂದಿಗೆ ಕೆಲಸ, ಪ್ರಗತಿ ಮತ್ತು ಸಮೃದ್ಧಿ ದ್ವಿತೀಯ ಯಾಂತ್ರಿಕ ಯುಗದ ಭರವಸೆಯಾಗಿದೆ.


ಆದರೆ ಈ ಯುಗ ನಮಗೆ ಎಚ್ಚರಿಕೆಯನ್ನೂ ನೀಡುತ್ತಿದೆ. ಅಗಾಧವಾದ, ಮಿತಿಯಿಲ್ಲದ ಡಿಜಿಟಲ್‌ ಯಂತ್ರಗಳ ಶಕ್ತಿ ತಂತ್ರಜ್ಞಾನದ ಬಳಕೆಯಲ್ಲಿ ಅಸಮಾನತೆ, ಸುಳ್ಳು ಸುದ್ದಿಯನ್ನು ಹಬ್ಬಿಸಲು ತಂತ್ರಜ್ಞಾನದ ದುರ್ಬಳಕೆ ಮತ್ತು ಸಾಂಪ್ರದಾಯಿಕ ಪ್ರಜಾಪ್ರಭುತ್ವಗಳ ಮೇಲೆ ಪ್ರಭಾವ ಬೀರುವ ತಂತ್ರಜ್ಞಾನದ ಸಾಮರ್ಥ್ಯ ಮುಂತಾದ ಕಠಿಣ ಸಾಮಾಜಿಕ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಯುವಲ್ ಹರಾರಿ ಬರೆಯುತ್ತಾರೆ, “ಒಮ್ಮೆ ಬಿಗ್‌ ಡೇಟಾ ಘಟಕಗಳು ನನ್ನನ್ನು ನನಗಿಂತಲೂ ಚೆನ್ನಾಗಿ ತಿಳಿದುಕೊಂಡವೆಂದರೆ ಅಧಿಕಾರ ಮಾನವರಿಂದ ಕ್ರಮಾವಳಿಗೆ ಕೈಗೆ ವರ್ಗಾವಣೆಯಾಗುತ್ತದೆ. ಆಗ ಬಿಗ್‌ ಡೇಟಾ ದೊಡ್ಡಣ್ಣನನ್ನು ಸಶಕ್ತಗೊಳಿಸುತ್ತದೆ.” ರೋಬೋಟಿಕ್ಸ್‌ನ ಅಸಿಮೋವ್‌ ನಿಯಮವನ್ನು ಎಲ್ಲ ಡಿಜಿಟಲ್‌ ಯಂತ್ರಗಳಿಗೂ ಅಳವಡಿಸಬೇಕಾಗಿದೆ.


ಕ್ವಾಂಟಿಫೈಡ್‌ ಲೈಫ್‌ ಸೈನ್ಸ್‌ನತ್ತ

ಮೊದಲೆ ಹೇಳಿದಂತೆ ಅಣು ಜೀವಶಾಸ್ತ್ರ ಎರಡನೇ ವಿಶ್ವ ಯುದ್ಧದ ನಂತರದ ಸಮಯದಲ್ಲಿ (1940-1950) ಬೆಳೆಯತೊಡಗಿತು. ಉತ್ತಮ ಸಲಕರಣೆಗಳು ಮತ್ತು ಮಾಪನ ತಂತ್ರಗಳಿಂದ ಭೌತಶಾಸ್ತ್ರಜ್ಞರು ಜೀವಶಾಸ್ತ್ರಜ್ಞರಿಗೆ ಕೋಶದ ಡಿಎನ್‌ಎ, ಆರ್‌ಎನ್‌ಎ ಮತ್ತು ಪ್ರೋಟೀನ್‌ಗಳನ್ನು ಪತ್ತೆಹಚ್ಚಲು ನೆರವಾದರು. ಜೈವಿಕತಂತ್ರಜ್ಞಾನ ಪ್ರಾರಂಭಿಕ ಬೆಳವಣಿಗೆಗಳು ಮತ್ತು ಬಯೋಫಾರ್ಮಾದ ಹುಟ್ಟು ಈ ತಿಳುವಳಿಕೆಯಿಂದಲೆ ಆದದ್ದು.


ನಂತರ ಮತ್ತೊಂದು ಅದ್ಭುತ ತಂತ್ರಜ್ಞಾನ ಹುಟ್ಟಿಕೊಂಡಿತು, ಅದೆ ಜಿನೋಮಿಕ್ಸ್‌. 1977ರ ಪ್ರೆಡ್‌ ಸಂಗರ್‌ನ ಕೆಲಸದ ಮೇಲೆ ಅವಲಂಬಿತವಾದ ಮೊದಲ ವಾಣಿಜ್ಯ ಅನುಕ್ರಮಗಳು ಕಾಣಿಸಿಕೊಂಡ 1984, ಜಿನೋಮಿಕ್ಸ್‌ನ ಪ್ರಾರಂಭ. 1984 ರಿಂದ 2007 ರವರೆಗೆ(24 ವರ್ಷ) ನಮ್ಮ ಅನುಕ್ರಮಕ್ಕೆ ತಗಲುವ ಖರ್ಚು ಮೂರೆನ ನಿಯಮದಂತೆ ಇಳಿಯುತ್ತಿದೆ. ಹಾಗಾಗಿ ಸಂಗರ್‌ ನಮಗೆ 216 ತನಕ ಬರಲು ಸಹಾಯ ಮಾಡಿದ. 2008ರ ನಂತರ ನಮ್ಮ ಬಳಿ ಅಗಾಧ ಸಮಾನಾಂತರೀಕರಣದೊಂದಿಗೆ ಶಂಕರ್‌ ಬಾಲಸುಬ್ರಮನಿಯನ್‌ ಅವರ ಸೋಲೆಕ್ಸಾ ಎನ್‌ಜಿಎಸ್‌ (ನೆಕ್ಸ್ಟ್‌ ಜನರೇಷನ್‌ ಸಿಕ್ವೆನ್ಸಿಂಗ್‌) ತಂತ್ರಜ್ಞಾನವಿದೆ. ಅಂದರೆ 2008 ರಿಂದ 2016 ರವರೆಗೆ ನಾವು 216 to 232 ವರೆಗೆ ಬಂದಿದ್ದೇವೆ, ಇದರರ್ಥ ನಾವು ಚೆಸ್‌ ಬೋರ್ಡ್‌ನ ದ್ವಿತೀಯಾರ್ಧದಲ್ಲಿದ್ದೇವೆ.


ಜಿನೋಮ್‌ಗಳನ್ನು ಬರೆಯುವ ನಮ್ಮ ಸಾಮರ್ಥ್ಯದಿಂದ ಜಿನೋಮಿಕ್ಸ್‌ನ ಕ್ರಾಂತಿಯ ಮುಂದಿನ ಭಾಗ ಪ್ರಾರಂಭವಾಗುತ್ತದೆ, ಅಂದರೆ ಜಿನೋಮ್‌ಗಳನ್ನು ಸಂಪಾದಿಸುವುದು ಮತ್ತು ಮಾರ್ಪಡಿಸುತ್ತ ಸಂಶ್ಲೇಷಿತ ಜೀವಶಾಸ್ತ್ರದೆಡೆಗೆ ನಮ್ಮ ಪಯಣ ಸಾಗಿದೆ. ಆರೋಗ್ಯ, ಆಹಾರ, ಶಕ್ತಿ ಮತ್ತು ಪರಿಸರದ ಸುರಕ್ಷತೆಗಾಗಿ ಇದನ್ನು ಬಳಸಬಹುದಾದರಿಂದ ಇದು ತುಂಬಾ ದೊಡ್ಡ ಪರಿಣಾಮ ಬೀರುತ್ತದೆ. 2018ರ ಮಾರ್ಚ್‌ನಲ್ಲಿ ದಿ ಫೈನಾನ್ಷಿಯಲ್‌ ಟೈಮ್ಸ್‌ ಕ್ರಿಸ್ಪರ್‌ ಅನ್ನು “ಡಾರ್ವಿನ್‌ ನಂತರದ ಬಹುದೊಡ್ಡ ಅನ್ವೇಷಣೆ”ಯೆಂದು ಬರೆದಿದೆ. ಮತ್ತು ನೋಬಲ್‌ ಪ್ರಶಸ್ತಿ ವಿಜೇತ ಮತ್ತು ಜೀನ್‌ ಸಂಪಾದನೆಯ ಪ್ರವರ್ತಕರಾದ ಪ್ರಧ್ಯಾಪಕ ಜೆನಿಫರ್‌ ದೌಡ್ನಾ ಇದನ್ನು “ಸೃಷ್ಠಿಯ ಒಂದು ಬಿರುಕು,” ಎಂದು ಬಣ್ಣಿಸಿದ್ದಾನೆ. ಜಿನೋಮಿಕ್‌ ಔಷಧದ ಮೇಲಿನ ಪಿಇ ವರದಿಯೊಂದು ಅದರ ಮಾರುಕಟ್ಟೆ $4.8 ಟ್ರಿಲಿಯನ್‌ ಎಂದು ಅಂದಾಜು ಮಾಡಿದೆ.


ಜೀವಶಾಸ್ತ್ರದ ತಂತ್ರಾಂಶದಂತಿರುವ ಜಿನೋಮಿಕ್ಸ್‌ ಸುಧಾರಿತ ಅಣು ಜೀವ ವಿಜ್ಞಾನದೊಂದಿಗೆ ಸೇರಿ ಜೀವವಿಜ್ಞಾನವನ್ನು ಪ್ರಗತಿಯ ಕ್ವಾಂಟಿಫೈಡ್‌ ಸೈನ್ಸ್‌ ಆಗಿಸಿದ್ದು, ಅದು ಇಂಜಿನೀಯರಿಂಗ್‌- ವಸ್ತುಗಳ ಸಂಶೋಧನೆ, ಸಣ್ಣ ಮತ್ತು ನ್ಯಾನೋ ತಂತ್ರಜ್ಞಾನಗಳೊಂದಿಗೆ ಸೇರಿದರೆ ಅದ್ಭುತ ಪರಿಣಾಮವನ್ನು ಸೃಷ್ಟಿಸಲಿದ್ದು, ಮಾನವನ ಸ್ಥಿತಿಯನ್ನು ಅಭಿವೃದ್ಧಿಪಡಿಸಲು ಜೈವಿಕತಂತ್ರಜ್ಞಾನದ ಅಳವಡಿಕೆಯನ್ನು ಪ್ರೇರೆಪಿಸುತ್ತದೆ. ದಿ ಎಜ್‌ ಆಪ್‌ ಲಿವಿಂಗ್‌ ಮಷಿನ್ಸ್‌ ನಲ್ಲಿ ಡಾ, ಹಾಕ್‌ಫಿಲ್ಡ್‌ ಮುಂದಿನ ಪೀಳಿಗೆಯ ಮೇಲಿನ ಉತ್ತಮ ಭವಿಷ್ಯದ ಭರವಸೆಯು ತಂತ್ರಜ್ಞಾನದ ಮೇಲೆಯೂ ಅವಲಂಬಿತವಾಗಿದೆ ಎನ್ನುತ್ತಾರೆ.


ಮಿತಿಯಿಲ್ಲದ ತಂತ್ರಜ್ಞಾನವನ್ನು ಡಿಜಿಟಲ್‌ ಯಂತ್ರಗಳ ರೂಪದಲ್ಲಿ ನಾವು ಉಪಯೋಗಿಸುತ್ತಿರುವುದರಿಂದ ಅದು ಜೀವವಿರುವ ಯಂತ್ರದ ಮೇಲೆ ಮಾಡುವ ಪರಿಣಾಮದ ಬಗ್ಗೆ ಜಾಗರೂಕರಾಗಿರಬೇಕಾಗುತ್ತದೆ. ಮಾನವ ಜಿನೋಮ್‌ ಯೋಜನೆ ಯಶಸ್ವಿಯಾದ ಬಳಿಕ ಫ್ರಾನ್ಸಿಸ್‌ ಫುಕುಯಮಾ ಇದರಿಂದ ತೊಂದರೆಗೀಡಾಗಿದ್ದರು. ಜೀನ್ ಸಂಪಾದಿತ ಮತ್ತು ಅಳವಡಿಸಿದ ಭ್ರೂಣಗಳೊಂದಿಗೆ 2018 ರಲ್ಲಿ ಷೆನ್‌ಝೆನ್‌ನಲ್ಲಿ ವಿಜ್ಞಾನಿ ಹಿ ಜಿಯಾಂಕ್ವಿ ರಚಿಸಿದ ಸವಾಲುಗಳು ಈ ಭೀತಿಯನ್ನು ಬಲಪಡಿಸಿವೆ. ಪ್ರಧ್ಯಾಪಕ ದೌಡ್ನಾ ಅವರಿಗೆ ಅಡೊಲ್ಫ್‌ ಹಿಟ್ಲರ್‌ ಪೆನ್‌ ಕಾಗದ ಹಿಡಿದುಕೊಂಡು ಕ್ರಿಸ್ಪರ್‌ನ ಪ್ರತಿಯೊಂದನ್ನು ನೀಡು ಎನ್ನುವಂತೆ ದುಸ್ವಪ್ನಗಳು ಬಿದ್ದಿವೆ.


ಕೆಲಸ, ಪ್ರಗತಿ ಮತ್ತು ಸಮೃದ್ಧಿ

20ನೇ ಶತಮಾನದ ನಂತರದ ಭಾಗದಲ್ಲಿ ಭಾರತೀಯ ಐಟಿ ಉದ್ಯಮಕ್ಕೆ ಸಿಕ್ಕ ಯಶಸ್ಸಿನಲ್ಲಿ 1960 ಮತ್ತು 1970ರ ಸರ್ಕಾರದ ದಾರ್ಶನಿಕರ ಪಾಲು ಇದೆ. ಇಲ್ಲಿ ಅಲ್ಲಗಳೆಯಲಾಗದ ಪ್ರಶ್ನೆಯೆಂದರೆ ಇಷ್ಟೊಂದು ವೇಗವಾಗಿ ಮುನ್ನುಗುತ್ತಿರುವ ತಂತ್ರಜ್ಞಾನದ ನಡುವೆ ಭಾರತಕ್ಕೆ ಬಯೋಇಂಜಿನೀಯರಿಂಗ್‌ ಬಳಸಿಕೊಂಡು ಬಯೋಎಕಾನಮಿಯನ್ನು ನಿರ್ಮಿಸುವ ತಂತ್ರವಿದೆಯೆ ಎಂಬುದು?


21 ನೇ ಶತಮಾನದಲ್ಲಿ ಮುನ್ನಡೆ ಸಾಧಿಸುವ ದೇಶಗಳು ಖಾಸಗಿ ವಲಯದಲ್ಲಿ ಹೊಸ ಆಲೋಚನೆಗಳ ಉತ್ಪಾದನೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬೆಂಬಲಿಸುವ ನಾವೀನ್ಯತೆಯ ಪರಿಸರವನ್ನು ಜಾರಿಗೆ ತರುತ್ತವೆ. ಜನರು ಸಂಪನ್ಮೂಲಗಳನ್ನು ತೆಗೆದುಕೊಂಡು ಅವುಗಳ ಮೌಲ್ಯ ಹೆಚ್ಚಾಗುವ ರೀತಿಯಲ್ಲಿ ಅವುಗಳನ್ನು ಜೋಡಿಸಿಕೊಂಡರೆ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ. ಬರಿ ಅವಕಾಶಗಳು ಸಿಗದೆ ಅವು ಬಹುವಾಗುತ್ತವೆ. ಜೈವಿಕ ಎಂಜಿನಿಯರಿಂಗ್‌ನ ಫ್ರೇಸಿಯೊಲಾಜಿಯನ್ನು ಬಳಸಿಕೊಂಡು, ಪುನರ್‌ಸಂಯೋಜಕ ಬೆಳವಣಿಗೆ ನಮ್ಮ ರಾಷ್ಟ್ರೀಯ ಕಾರ್ಯತಂತ್ರದ ಕೇಂದ್ರಬಿಂದುವಾಗಿರಬೇಕು. ಸಿ-ಕ್ಯಾಂಪ್‌ನಲ್ಲಿ ಇನ್‌ಡಿಎಕ್ಸ್ (ಸ್ಥಳೀಯ ರೋಗನಿರ್ಣಯ)ವನ್ನು ರಚಿಸಲು ಪ್ರಧಾನ ವೈಜ್ಞಾನಿಕ ಸಲಹೆಗಾರರ (ಪಿಎಸ್‌ಎ) ಕಚೇರಿಯ ಇತ್ತೀಚಿನ ಉಪಕ್ರಮವನ್ನು ಪುನರ್‌ಸಂಯೋಜಕ ನಾವೀನ್ಯತೆ ಎಂದು ವಿವರಿಸಬಹುದು. ರಾಕ್‌ಫೆಲ್ಲರ್ ಫೌಂಡೇಶನ್‌ನಿಂದ ಧನಸಹಾಯ ಪಡೆದು, ರೂಪಗೊಂಡಿರುವ ಅದು ಕೋವಿಡ್‌-19 ನಂತಹ ಸಾಂಕ್ರಾಮಿಕ ರೋಗಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾದ ಆವಿಷ್ಕಾರಗಳಿಗೆ ಒಂದು ವಾಸ್ತವ ಮಾರುಕಟ್ಟೆಯಾಗಿದೆ.