ಹೆಲ್ಮೆಟ್ ಧರಿಸದಿದ್ರೆ ಬೈಕ್ ಸ್ಟಾರ್ಟ್​ ಆಗಲ್ಲ..!

ಎನ್​.ಎಸ್​.ರವಿ

ಹೆಲ್ಮೆಟ್ ಧರಿಸದಿದ್ರೆ ಬೈಕ್ ಸ್ಟಾರ್ಟ್​ ಆಗಲ್ಲ..!

Wednesday February 10, 2016,

2 min Read

ರಾಜ್ಯ ಸರ್ಕಾರ ಬೈಕ್ ಸವಾರರಿಗೆ ಮಾತ್ರವಲ್ಲ ಹಿಂಬದಿ ಸವಾರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಪರ ವಿರೋಧದ ಚರ್ಚೆಗಳು ಸಹ ನಡೆದಿವೆ. ಆದರೆ ಇನ್ಮುಂದೆ ಹೆಲ್ಮೆಟ್ ಇಲ್ಲ ಅಂದರೆ ಬೈಕ್ ಸ್ಟಾರ್ಟ್ ಆಗೋದೆ ಇಲ್ಲ. ಅಂತಹವೊಂದು ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಬ್ಬರೂ ಕಂಡುಹಿಡಿದಿದ್ದಾರೆ. ಹೆಲ್ಮೆಟ್ ಧರಿಸದೆ ಬೈಕ್ ಓಡಿಸಲು ಸಾಧ್ಯವಿಲ್ಲ ಎನ್ನುವ ತಂತ್ರಜ್ಞಾನವನ್ನ ರೂಪಿಸಿ ಗಮನ ಸೆಳೆದಿದ್ದಾರೆ. ಈ ಸಂಶೋಧನೆ ಅಳವಡಿಸಿಕೊಂಡಲ್ಲಿ ರಾಜ್ಯ ಸರ್ಕಾರಕ್ಕೆ ಒಂದು ತಲೆನೋವು ತಪ್ಪಿದಂತಾಗುತ್ತದೆ.

image


ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಏಳನೇ ತರಗತಿ ವಿದ್ಯಾರ್ಥಿ ಸ್ತುತಿ ಭಟ್ ಹಾಗೂ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿ ಸುಹಾಸ್ ಹೆಲ್ಮೆಟ್ ಧರಿಸದೆ ಬೈಕ್ ಓಡಿಸಲು ಸಾಧ್ಯವಿಲ್ಲ ಎಂಬ ಆವಿಷ್ಕಾರವೊಂದನ್ನ ಮಾಡಿ ಗಮನ ಸೆಳೆದಿದ್ದಾರೆ. ನೀವು ಹೆಲ್ಮೆಟ್ ಹಾಕದಿದ್ರೆ ಯಾವುದೇ ಕಾರಣಕ್ಕೂ ನಿಮ್ಮ ಬೈಕ್ ಸ್ಟಾರ್ಟ್ ಆಗಲ್ಲ. ಅದು ಕಿಕ್ ಸ್ಟಾರ್ಟ್ ಆಗಿರಲ್ಲಿ ಅಥವಾ ಸೆಲ್ಫ್ ಸ್ಟಾರ್ಟ್ ಆಗಿರಲಿ. ನಿಮ್ಮ ಗಾಡಿ ಶುರುವಾಗಬೇಕೆಂದ್ರೆ ನೀವು ನಿಮ್ಮ ಹೆಲ್ಮೆಟ್ ತಲೆ ಮೇಲೆ ಹಾಕಿದ್ರೆ ಮಾತ್ರ ಅದು ಸಾಧ್ಯವಾಗುವುದು.

ಇದನ್ನು ಓದಿ

ಬೆಂಗಳೂರು ಬೀದಿಯಿಂದ ಫ್ರಾನ್ಸ್​​ವರೆಗೆ-ಇದು ಸಿಲಿಕಾನ್​ಸಿಟಿ ಮಕ್ಕಳ ಫುಟ್ಬಾಲ್​​ ಪ್ರೀತಿ

ಈ ತಂತ್ರಜ್ಞಾನದಲ್ಲಿ ನೀವು ಹೆಲ್ಮೆಟ್ ಧರಿಸೋದನ್ನ ಮರೆತ್ರೆ ಅಥವಾ ಉದ್ದೇಶ ಪೂರ್ವಕವಾಗಿ ಹೆಲ್ಮೆಟ್ ಧರಿಸದಿದ್ರೆ ನಿಮ್ಮ ಬೈಕ್ ಸ್ಟಾರ್ಟ್ ಆಗೋದೆ ಇಲ್ಲವಂತೆ. ರೇಡಿಯೋ ತರಂಗಾಂತರ 27 ಎಂಎಚ್ ಝಡ್ ಬಳಸಿ, ಬೈಕ್​ಗೆ ವಿದ್ಯುತ್ ಪೂರೈಸುವ ತಂತ್ರಜ್ಞಾನದ ಪ್ರಕ್ರಿಯೆ ಇದಾಗಿದೆ. ಈ ಮಧ್ಯೆ ಬೈಕ್​ನ ಕೀಗೆ ಜೋಡಿಸಲಾದ ಇಗ್ನಿಷನ್ ಸರ್ಕ್ಯೂಟ್, ಬೈಕ್ ಸ್ಟಾರ್ಟ್ ಆಗುವಂತೆ ಮಾಡುತ್ತೆ. ಈ ಎಲ್ಲಾ ಪ್ರಕ್ರಿಯೆಗಳು ಹೆಲ್ಮೆಟ್ ಧರಿಸಿದಾಗ ಮಾತ್ರ ಸಾಧ್ಯವಾಗುತ್ತೆ. ಈ ಹೊಸ ತಂತ್ರಜ್ಞಾನ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜಿಜ್ಞಾಸ-2016 ಮೇಳದಲ್ಲಿ ಪ್ರದರ್ಶನಗೊಂಡಿದೆ. ಸ್ತುತಿ ಭಟ್ ಸಂಶೋಧನೆ ಅನೇಕರನ್ನು ಬೆರಗುಗೊಳಿಸುವಂತೆ ಮಾಡಿದೆ..

image


ಇನ್ನೂ ಸುಹಾಸ್​ನದ್ದು ಸೆನ್ಸಾರ್ ಹೆಲ್ಮೆಟ್. ಹೆಲ್ಮೆಟ್ ಧರಿಸುತ್ತಿದ್ದಂತೆ ಅದರಲ್ಲಿರುವ ಸೆನ್ಸಾರ್, ಬೈಕ್​ನ ಕೀಗೆ ಅಳವಡಿಸಿರುವ ಸೆನ್ಸಾರ್​ಗೆ ಮಾಹಿತಿ ರವಾನಿಸುತ್ತೆ. ಆಗ ಬೈಕ್ ಆಟೋಮ್ಯಾಟಿಕ್ ಸ್ಟಾರ್ಟ್ ಆಗುತ್ತಂತೆ. "ಒಂದು ವೇಳೆ ಹೆಲ್ಮೆಟ್ ಧರಿಸದೆ ಬೈಕ್ ಸ್ಟಾರ್ಟ್ ಮಾಡಿದ್ರೆ ಹೆಲ್ಮೆಟ್ ಧರಿಸುವಂತೆ ಬೈಕ್​ಗೆ ಅಳವಡಿಸಿರುವ ಸ್ಪೀಕರ್ ಮೂಲಕ ಸೂಚನೆ ಕೊಡುತ್ತದೆಂದು ಸುಹಾಸ್ ಹೇಳುತ್ತಾರೆ.

ಅಲ್ಪ ವೆಚ್ಚದಲ್ಲಿ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. ಸಾರಿಗೆ ಇಲಾಖೆ ಇವೆರಡರಲ್ಲಿ ಯಾವುದಾದರೊಂದು ಕಡ್ಡಾಯ ಮಾಡಿದ್ದಲ್ಲಿ, ಯಾವ ನಾಗರಿಕನು ಇನ್ಮುಂದೆ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುವಂತಿಲ್ಲ. ಒಟ್ಟಾರೆ ಕಡ್ಡಾಯವಾಗಿ ಎಲ್ಲರು ಹೆಲ್ಮೆಟ್ ಧರಿಸಬೇಕು ಅನ್ನೋದಾದ್ರೆ ಮಕ್ಕಳು ಕಂಡು ಹಿಡಿದಿರುವ ಈ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳೋದು ಸೂಕ್ತ.

ಇದನ್ನು ಓದಿ

ಕ್ಯಾನ್ಸರ್ ಪೀಡಿತರ ಸಹಾಯಕ್ಕಾಗಿ ಮುಂಬೈ ಲೋಕನ್ ಟ್ರೈನ್ ನಲ್ಲಿ ಭಿಕ್ಷೆ

ಮಕ್ಕಳ ನೃತ್ಯದಲ್ಲಿ ಕನಸು ನನಸಾಗಿಸಿಕೊಳ್ತಿರೋ ಮೀರಾ

ಬದುಕಿನ ದಿಕ್ಕು ಬದಲಾಯಿಸಿದ ಡ್ರೈವಿಂಗ್