ಪ್ಲ್ಯಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಉತ್ಪನ್ನಗಳನ್ನು ಪೂರೈಸುತ್ತಿದ್ದಾರೆ ಈ ದಂಪತಿಗಳು
2018 ರಲ್ಲಿ ಶ್ವೇತಾ ಪಾರ್ಸಿ ಮತ್ತು ನವೀನ್ ಗೌಡರವರು ರೂಪಿಸಿದ ಬಯೋಮಿಮಿಕ್ ಥೆರಿ ದೈನಂದಿನ ಬಳಕೆಗಾಗಿ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಉತ್ಪನ್ನಗಳನ್ನು ಒದಗಿಸುತ್ತಿದೆ.
ಯಾವುದೇ ಬಗೆಯಲ್ಲಿ ಪ್ಲ್ಯಾಸ್ಟಿಕ್‌ಗಳನ್ನು ಬಳಸದೇ ದಿನ ಕಳೆಯುವುದು ನಮ್ಮಲ್ಲಿ ಹಲವರಿಗೆ ಅಸಾಧ್ಯ ಕೆಲಸವಾಗಿದೆ. ನಾವು ವಾರ್ಷಿಕ 300 ದಶಲಕ್ಷ ಟನ್ ಪ್ಲ್ಯಾಸ್ಟಿಕ್ ಉತ್ಪಾದಿಸುತ್ತಿದ್ದೇವೆ ಎಂದು ವರದಿಗಳು ಸೂಚಿಸುತ್ತವೆ.
ಶ್ವೇತಾ ಪಾರ್ಸಿಯವರು ಬೆಂಗಳೂರು ದಕ್ಷಿಣ ವಲಯದಲ್ಲಿರುವ ಬನಶಂಕರಿ ಮಾರ್ಗವಾಗಿ ಕೆಲಸದ ನಿಮಿತ್ತ ಪ್ರಯಾಣಿಸುವಾಗ ನಗರ ಎದುರಿಸುತ್ತಿರುವ ತ್ಯಾಜ್ಯ ಬಿಕ್ಕಟ್ಟಿನ ವ್ಯಾಪ್ತಿಯ ಕುರಿತು ತಿಳಿದುಕೊಂಡರು. ಅಲ್ಲಿ ತ್ಯಾಜ್ಯವನ್ನು ದಿನ ನಿತ್ಯ ಸುಡಲಾಗುತ್ತಿತ್ತು, ಅವರು ಆ ಪ್ರದೇಶದಲ್ಲಿ ಹಾದು ಹೋಗುವಾಗ ಉಸಿರುಗಟ್ಟಿದಂತೆ ಭಾಸವಾಗುತ್ತಿತ್ತು, ಆ ಸಮಸ್ಯೆಯನ್ನು ಕೈಗೆತ್ತಿಕೊಳ್ಳಲು ಶ್ವೇತಾರವರು ನಿರ್ಧರಿಸಿದರು.
ಸಮಸ್ಯೆಯನ್ನು ಎದುರಿಸಲು, ಶ್ವೇತಾರವರು ತಮ್ಮ ಪತಿ ನವೀನ್ ಗೌಡ ಅವರೊಂದಿಗೆ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅಧ್ಯಯನ ಮಾಡಲು ಪ್ರಾರಂಭಿಸಿದರು ಮತ್ತು ನಾಗರಿಕ ಅಧಿಕಾರಿಗಳನ್ನು ಸಹ ಸಂಪರ್ಕಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಪ್ಲಾಸ್ಟಿಕ್ ಬಳಕೆಯೇ ಸಮಸ್ಯೆಯ ಮೂಲವೆಂದು ಅವರು ಭಾವಿಸಿದರು ಮತ್ತು ಉತ್ಪತ್ತಿಯಾಗುವ ತ್ಯಾಜ್ಯವನ್ನು ಕಡಿತಗೊಳಿಸುವ ಸಲುವಾಗಿ ಕಡಿಮೆ ತ್ಯಾಜ್ಯ ಜೀವನವನ್ನು ನಡೆಸಲು ನಿರ್ಧರಿಸಿದರು. ಕಡಿಮೆ ತ್ಯಾಜ್ಯ ಮತ್ತು ಸುಸ್ಥಿರ ಜೀವನವನ್ನು ನಡೆಸಲು ಉತ್ಪನ್ನಗಳನ್ನು ಗುರುತಿಸುವಲ್ಲಿ ಇವರಿಬ್ಬರು ಯಶಸ್ವಿಯಾದ ನಂತರ, ಅವರು 2018 ರಲ್ಲಿ ಬಯೋಮಿಮಿಕ್ ಥೆರಿಯನ್ನು ರೂಪಿಸಿದರು.
ಈ ಪರಿಸರ ಸ್ನೇಹಿ ಸ್ಟಾರ್ಟ್‌ಅಪ್ ನಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿತಗೊಳಿಸಲು ಸುಸ್ಥಿರ ಉತ್ಪನ್ನಗಳನ್ನು ಒದಗಿಸುತ್ತದೆ.
ಪ್ಲ್ಯಾಸ್ಟಿಕ್ ಚೀಲಕ್ಕೆ ಪರ್ಯಾಯವಾಗಿ ಬಯೋಮಿಮಿಕ್ ಥೆರಿಯ ಆದ್ರ ಚೀಲವಿದೆ. ಗಾರ್ಮೆಂಟ್ ಉತ್ಪನ್ನಗಳ ತುಂಡು ಬಟ್ಟೆಗಳಿಂದ ಮಾಡಲ್ಪಟ್ಟಿದ್ದು, ನಾವು ಪ್ರಯಾಣಿಸುವಾಗ ಒದ್ದೆ ಬಟ್ಟೆಗಳನ್ನು, ಟವೆಲ್, ಬಳಸಿದ ಕಟ್ಲರಿಗಳನ್ನು ಮತ್ತು ಹಣ್ಣಿಸ ಸಿಪ್ಪೆಗಳನ್ನು ಸಂಗ್ರಹಿಸಲು ಬಳಸಬಹುದಾಗಿದೆ.
ಇದನ್ನು ಬಟ್ಟೆಯಿಂದಲೂ ತಯಾರಿಸಲಾಗಿದೆ, ಇದು ಮರುಬಳಕೆ ಮಾಡಬಹುದಾದ ಕಟ್ಲರಿ ಕಿಟ್ ಆಗಿದ್ದು ಜೈವಿಕ ರಚನೆಯ ಬೇವಿನ ಮರದ ಕಟ್ಲರಿಗಳನ್ನು ಒಳಗೊಂಡಿದೆ.
ಈ ಕುರಿತಾಗಿ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ ಶ್ವೇತಾರವರು ಹೀಗೆ ಹೇಳುತ್ತಾರೆ,
“ಸಾಮಾನ್ಯವಾಗಿ ಎಸೆಯಬಹುದಾದ ಪ್ಲ್ಯಾಸ್ಟಿಕ್ ತ್ಯಾಜ್ಯಗಳೆಂದರೆ ಚಮಚ, ಫೋರ್ಕ್ ಮತ್ತು ಸ್ಟ್ರಾಗಳು ಆದ್ದರಿಂದ ಆ ವಲಯದಿಂದ ಹೊರಬರಲು ನಿರ್ಧರಿಸಿದೆವು. ನಮ್ಮ ಪರಿಸರ ಸ್ನೇಹಿ ಕಟ್ಲರಿಗಳ ಪ್ಯಾಕ್ ಸಣ್ಣ ಚೀಲದಲ್ಲಿ ಬರುತ್ತದೆ ಅದನ್ನು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಸಾಗಿಸಬಹುದಾಗಿದೆ. ನಾವು ಆರ್ಡರ್ ಮಾಡುವ ವೇಳೆ ಪ್ಲ್ಯಾಸ್ಟಿಕ್ ಬಳಕೆಯನ್ನು ನಿರಾಕರಿಸುವ ಮೂಲಕ ಮತ್ತು ಪರ್ಯಾಯವಾಗಿ ಸ್ಟೀಲ್ ಅಥವಾ ಕಟ್ಟಿಗೆಯ ಕಟ್ಲರಿಗಳನ್ನು ಬಳಸುವುದನ್ನು ರೂಢಿಸಿಕೊಂಡರೆ ತುಂಬಾ ಬದಲಾವಣೆಯನ್ನು ನೋಡಬಹುದಾಗಿದೆ.”
ಸ್ಟಾರ್ಟ್ಅಪ್ 450 ರಿಂದ 1,299 ರೂ. ಬೆಲೆಯ ತಮ್ಮ ಉತ್ಪನ್ನಗಳು 95 ಮನೆಗಳನ್ನು ತಲುಪಿದೆ ಎಂದು ಹೇಳುತ್ತದೆ. ಮರುಬಳಕೆ ಮಾಡಬಹುದಾದ ಕಟ್ಲರಿಗಳ ಜೊತೆಗೆ, ಸ್ಟಾರ್ಟ್ಅಪ್ ವಿವಿಧ ಸಾಮಾಜಿಕ ಅಭಿಯಾನಗಳ ಮೂಲಕ ಜಾಗೃತಿ ಮತ್ತು ಶಿಕ್ಷಣದತ್ತ ಗಮನಹರಿಸುತ್ತದೆ.
ಇವರಿಬ್ಬರು ಸುಸ್ಥಿರ ಜೀವನವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ವ್ಯಕ್ತಿಗಳಿಗೆ ಸಲಹೆ ನೀಡುತ್ತಾರೆ ಮತ್ತು ಅವರ ಸುಸ್ಥಿರತೆ ಕಾರ್ಯಕ್ರಮದ ವಿಸ್ತರಣೆಗಾಗಿ ಸಮುದಾಯ ನಿರ್ಮಾಣ ಚಟುವಟಿಕೆಗಳಲ್ಲಿ ಮತ್ತಷ್ಟು ಕೆಲಸ ಮಾಡುತ್ತಿದ್ದಾರೆ.
ಪಿ ಮರ್ಗ್ ಜತೆ ಮಾತನಾಡುತ್ತಾ ಶ್ವೇತಾರವರು ಹೀಗೆ ಹೇಳುತ್ತಾರೆ,
“ಸದ್ಯ ಎರಡು ಸಮುದಾಯಗಳು ಮತ್ತು ಒಂದು ಸ್ವ ಸಹಾಯ ಗುಂಪುಗಳು ನಮ್ಮ ಉತ್ಪನ್ನವನ್ನು ಕರಕುಶಲಗೊಳಿಸುತ್ತದೆ. ಬಾಳಿಕೆ, ಗುಣಮಟ್ಟ, ನ್ಯಾಯಯುತ ವೇತನ, ನೈತಿಕ ವಸ್ತುಗಳು ಮತ್ತು ಜೀವಮಾನದ ಮೌಲ್ಯಗಳಿಗೆ ನಾವು ಒತ್ತು ನೀಡುತ್ತೇವೆ. ದಿನಕ್ಕೆ 10 ಗಂಟೆಗಳಿಗೂ ಹೆಚ್ಚು ಸಮಯ ಕೆಲಸ ಮಾಡುತ್ತೇವೆ ಮತ್ತು ಈ ಕೆಲಸದಲ್ಲಿ ಹೊಸತೇನನ್ನಾದರೂ ಮಾಡಲು ಇನ್ನೂ ಉತ್ಸಾಹದಿಂದ ಎಚ್ಚರಗೊಳ್ಳುತ್ತೇವೆ. ಈ ಕಾರಣಕ್ಕಾಗಿ ಉತ್ಸಾಹವು ಇನ್ನಷ್ಟನ್ನು ಪೂರೈಸಲು ನೆರವಾಗುತ್ತದೆ.”
ಬಯೋಮಿಮಿಕ್ ಥೆರಿಗೆ ಹೊರತಾಗಿ ಈ ದಂಪತಿಗಳು ಗೋ ನೇಟಿವ್ ರೆಸ್ಟೋರಂಟ್ ಸಹಭಾಗಿತ್ವದಲ್ಲಿ ಪ್ಲ್ಯಾಸ್ಟಿಕ್ ಮುಕ್ತ ದೊಡ್ಡ ಅನ್‌ಪ್ಯಾಕೇಜ್ಡ್ ಅಂಗಡಿಯನ್ನು ಪರಿಚಯಿಸಿದರು. ಇಲ್ಲಿ ಆಹಾರ ಧಾನ್ಯಗಳು, ಬೇಳೆಕಾಳುಗಳು, ಮತ್ತು ಇತರ ಬಗೆಯ ವಸ್ತುಗಳನ್ನು ಖರೀದಿಸಬಹುದು ಆದರೆ ಅವುಗಳನ್ನು ಪ್ಯಾಕೇಜಿಂಗ್ ಮಾಡಲಾಗುವುದಿಲ್ಲ.
ಭವಿಷ್ಯದ ಬಗ್ಗೆ ಮಾತನಾಡಿದ ಶ್ವೇತಾರವರು ಹೀಗೆ ಹೇಳುತ್ತಾರೆ.
“ನಾವು ಹೆಚ್ಚು ಸಂಕುಚಿತ ಮತ್ತು ಮಾಡ್ಯುಲರ್ ಉತ್ಪನ್ನಗಳನ್ನು ಹೊಂದಲು ಯೋಜಿಸಿದ್ದೇವೆ, ಅದು ಪ್ರಯಾಣಿಸುವಾಗ ಸಾಗಿಸಲು ಮತ್ತು ಬಳಸಲು ಸುಲಭವಾಗಿದೆ. ಪ್ರಸ್ತುತ, ಒಂದು ತಟ್ಟೆಯನ್ನು ಒಯ್ಯುವುದು ಎಲ್ಲರಿಗೂ ಕಾರ್ಯಸಾಧ್ಯವಲ್ಲ ಅಥವಾ ಕಾರ್ಯಸಾಧ್ಯವಾದ ಆಯ್ಕೆಯಾಗಿಲ್ಲ, ಆದರೆ ಲಂಚ್ ಬಾಕ್ಸ್ ಆಯ್ಕೆಮಾಡಿಕೊಳ್ಳಬಹುದು," ವರದಿಗಾರರು ಎನ್‌ಡಿಟಿವಿ.