ವಾಯುಸೇನೆಯಲ್ಲಿ ಮಹಿಳೆಯರ ಪವರ್- ಯುದ್ಧವಿಮಾನಗಳಲ್ಲಿ ಮಹಿಳಾ ಪೈಲಟ್ಗಳ ದರ್ಬಾರ್
ಟೀಮ್ ವೈ.ಎಸ್. ಕನ್ನಡ
ಮಹಿಳೆಯರು ಇವತ್ತು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಕಳೆದ ವರ್ಷ ಇಂಡಿಯನ್ ಏರ್ ಫೋರ್ಸ್ ತನ್ನ ಸೇನೆಗೆ ಮಹಿಳೆಯರನ್ನು ಸೇರ್ಪಡೆಗೊಳಿಸಿ ಸುದ್ದಿ ಮಾಡಿತ್ತು. ಈಗ ಐಎಎಫ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಲಿಂಗ ಸಮಾನತೆಯನ್ನು ಸಾರುವ ವಿಡಿಯೋದ ಮೂಲಕ ಮಹಿಳೆ ಕೂಡ ರಾಷ್ಟ್ರದ ರಕ್ಷಣೆಗೆ ಸದಾ ಸಿದ್ಧವಿದ್ದಾಳೆ ಅನ್ನುವುದನ್ನು ಹೇಳಲು ಹೊರಟಿದ್ದಾರೆ.
ಕಳೆದ ವರ್ಷ ಐಎಎಫ್ನಲ್ಲಿ ಸೇರಿಕೊಂಡ ಬಳಿಕ ಆರು ಮಹಿಳಾ ಮಣಿಗಳು ಯುದ್ಧ ವಿಮಾನಗಳ ಪೈಲಟ್ ಆಗಲು ಸಿಕ್ಕಾಪಟ್ಟೆ ಶ್ರಮಪಡುತ್ತಿದ್ದಾರೆ. ಆರು ಮಹಿಳೆಯರ ಪೈಕಿ 3 ಮಹಿಳೆಯರು ಕರ್ನಾಟಕದ ಬೀದರ್ನಲ್ಲಿ ತರಬೇತಿ ಕೂಡ ಪಡೆಯುತ್ತಿದ್ದಾರೆ. ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯನ್ ಏರ್ ಫೋರ್ಸ್ ಸೇರುವಂತೆ ಮಾಡುವ ಗುರಿ ಸರಕಾರಕ್ಕಿದೆ. ಐಎಎಫ್ ಕೂಡ ಈ ಬಗ್ಗೆ ಸಾಕಷ್ಟು ಉತ್ಸಾಹ ತೋರಿದೆ. ಹೀಗಾಗಿ "ಏಕ್ ಲಡ್ಕಿ ಹೂ ಮೈ" ಅನ್ನುವ ವಿಡಿಯೋದ ಮೂಲಕ ಇಂಡಿಯನ್ ಏರ್ ಫೋರ್ಸ್ ಮತ್ತಷ್ಟು ಮಹಿಳೆಯರು ಸೇರುವಂತೆ ಮಾಡುವುದು ಈ ವಿಡಿಯೋದ ಉದ್ದೇಶವಾಗಿದೆ.
ಮಹಿಳೆಯರು ಇವತ್ತು ಕೇವಲ ಮನೆಯೊಳಗಿನ ಕೆಲಸ ಮತ್ತು ಮಕ್ಕಳನ್ನು ಹೆರುವ ಕೆಲಸಕ್ಕೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರು ಯಾವುದೇ ಕೆಲಸಕ್ಕೂ ಸಿದ್ಧ ಅನ್ನುವುದನ್ನು ಸಾರುವ ವಿಡಿಯೋ ಇದಾಗಿದೆ. ದೇಶ ಕಾಯುವ ಕೆಲಸಕ್ಕೂ ಮಹಿಳೆ ಸಿದ್ಧವಿದ್ದಾಳೆ ಅನ್ನುವ ಸಂದೇಶ ಸಾರುವ ಮೂಲಕ ಮಹಿಳಾ ಶಕ್ತಿಯನ್ನು ಪ್ರದರ್ಶಿಸಲಾಗುತ್ತಿದೆ.
“ ಕಳೆದ ಒಂದು ಒಂದೂವರೆ ವರ್ಷಗಳಲ್ಲಿ ಲಿಂಗ ಸಮಾನತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಐಎಎಫ್ ಮಹಿಳೆಯರನ್ನು ನೇಮಕ ಮಾಡಿಕೊಂಡು ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ ನೀಡಿದೆ. ಮಹಿಳೆ ಎಲ್ಲದಕ್ಕೂ ಸಿದ್ಧ ಅನ್ನುವುದನ್ನು ಸಾರಲು ವೇದಿಕೆ ಒದಗಿಸಿಕೊಟ್ಟಿದೆ. ”
- ಸಂದೀಪನ್ ಭಟ್ಟಾಚಾರ್ಯ, ಚೀಫ್ ಕ್ರಿಯೇಟಿವ್ ಆಫೀಸರ್, ಗ್ರೇ ಗ್ರೂಪ್
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕೆಲಸಗಳಲ್ಲಿ ಮತ್ತು ಹುದ್ದೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಡೆಲ್ ಆಗಿದ್ದವರು ಪೈಲಟ್ ಆಗಿ ಮಿಂಚುತ್ತಿದ್ದಾರೆ. ಮನೆಯಲ್ಲೇ ಕೂತು ಕಾಲ ಕಳೆಯುವ ಮಹಿಳೆಯರನ್ನು ಇವತ್ತಿನ ದಿನಗಳಲ್ಲಿ ನೋಡುವುದು ಕಷ್ಟವಾಗಿದೆ. ಅಷ್ಟರ ಮಟ್ಟಿಗೆ ಮಹಿಳಾ ಶಕ್ತಿ ದೇಶದಲ್ಲಿ ಬೆಳೆಯುತ್ತಿದೆ.
ಐಎಎಫ್ ಈಗ ತಯಾರಿಸಿರುವ ವಿಡಿಯೋದಲ್ಲಿ ಮಹಿಳೆಯರಿಗೆ ಐಎಎಫ್ನಲ್ಲಿರುವ ಪ್ರಾಮುಖ್ಯತೆ ಬಗ್ಗೆ ಹೇಳಲಾಗಿದೆ. ಈ ವಿಡಿಯೋ ತಯಾರಿಸಲು ಸುಮಾರು ಆರರಿಂದ ಎಂಟು ತಿಂಗಳುಗಳ ಕಾಲ ಪರಿಶ್ರಮ ಪಡಲಾಗಿದೆ. ಅಷ್ಟೇ ಅಲ್ಲ ಲೇಹ್ನ ಅತೀ ಕಠಿಣ ಪ್ರದೇಶದಲ್ಲಿ ಶೂಟಿಂಗ್ ಮಾಡಲಾಗಿದೆ. ಲಿಂಗ ಸಮಾನತೆಯ ಹೋರಾಟದ ನಡುವೆ ಕಷ್ಟಗಳೆಲ್ಲವೂ ಮಾಯವಾಗಿದೆ. ಮಹಿಳೆಯರು ದೇಶದ ಶಕ್ತಿಯಾಗಿ ಬೆಳೆಯುತ್ತಿದ್ದಾರೆ.
1. ಭಾರತದ ಮೊತ್ತಮೊದಲ ಪುಸ್ತಕಗಳ ಗ್ರಾಮ- ವೇಲ್ಸ್ಟೌನ್ ಸಾಧನೆ ಸರಿಗಟ್ಟಿದ ಮಹಾರಾಷ್ಟ್ರದ ಭಿಲಾರ್
2. ಪತ್ರಕರ್ತನ ಸ್ಟಾರ್ಟ್ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ
3. ಆಹಾರ ಪೋಲಾಗುವುದನ್ನು ತಡೆಯುವ ಪ್ಲಾನ್- ಹಸಿದವರ ಹೊಟ್ಟೆ ತುಂಬಿಸ್ತಾರೆ ಶಿವಕುಮಾರ್