ಛತ್ತೀಸ್ಗಢದ ಈ ಕೆಫೆಯಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯವನ್ನ ಪಾವತಿಸಿದರೆ ಊಟ ದೊರೆಯುತ್ತದೆ
ಅಂಬಿಕಪುರದ ಪೌರ ಮಂಡಳಿಯೊಂದು ಗಾರ್ಬೇಜ್ ಕೆಫೆಯೊಂದನ್ನು ನಡೆಸುತ್ತಿದೆ. ಇದು ಪ್ಲ್ಯಾಸ್ಟಿಕ್ ತ್ಯಾಜ್ಯವನ್ನು ಪಾವತಿಸಿಕೊಂಡು, ಚಿಂದಿ ಆಯುವ ಹಾಗು ಆಶ್ರಯರಹಿತ ನಿರ್ಗತಿಕರಿಗೆ ಉಚಿತ ಊಟವನ್ನು ನೀಡುತ್ತದೆ.
ಇಡೀ ವಿಶ್ವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯದಿಂದ ಆವೃತವಾಗಿದೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ತಿಳಿಸುತ್ತದೆ.
ಪ್ಲಾಸ್ಟಿಕ್ ಮಾಲಿನ್ಯವನ್ನು ನಿಭಾಯಿಸುವುದು ವಿಶ್ವಾದ್ಯಂತ ಎಲ್ಲಾ ಸರಕಾರಗಳ, ಸಂಘ ಸಂಸ್ಥೆಗಳ ಬಹುಮುಖ್ಯ ಆದ್ಯತೆಯಾಗಿದೆ. ಅವರೆಲ್ಲರೂ ಸೃಜನಾತ್ಮಕ ಮಾರ್ಗಗಳನ್ನು ಬಳಸಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಪಡುತ್ತಿದ್ದಾರೆ.
ಆದರೆ, ಈಗಾಗಲೆ ಬಳಕೆಯಾಗಿ ತ್ಯಾಜ್ಯವಾಗಿ ರೂಪುಗೊಂಡ ಲೆಕ್ಕವಿಲ್ಲದಷ್ಟು ಪ್ಲಾಸ್ಟಿಕ್ ತ್ಯಾಜ್ಯವಾದ ಅಥವ ನೀರಿನ ಸರಗಳಲ್ಲಿ, ಭೂಮಿಯ ಒಳಗೆ ಸೇರಿಹೋಗಿರುವ ಪ್ಲಾಸ್ಟಿಕ್ ನ ಕತೆಯೇನು?
ಜವಾಬ್ದಾರಿಯುತ ಪ್ಲಾಸ್ಟಿಕ್ ಸಂಗ್ರಹಣೆ ಮತ್ತು ಮರು ಬಳಕೆಯನ್ನು ಪ್ರೋತ್ಸಾಹಿಸುವುದಕ್ಕಾಗಿ, ಛತ್ತೀಸ್ಗಢ ರಾಜ್ಯದ, ಸುರತ್ ಜಿಲ್ಲೆಯ, ಅಂಬಿಕಪುರದ ಈ 'ಗಾರ್ಬೇಜ್ ಕೆಫೆ' ಚಿಂದಿ ಆಯುವವರಿಗೆ ಹಾಗೂ ಆಶ್ರಯ ರಹಿತರಿಗೆ ಉಚಿತ ಊಟವನ್ನು ನೀಡುತ್ತದೆ. ಇಲ್ಲಿ ಅವರು ಪಾವತಿಸಬೇಕಿರುವುದು ಹಣವನ್ನಲ್ಲ ಬದಲಾಗಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನ.
ವೈಸ್ ನ ಪ್ರಕಾರ ಅಂಬಿಕಪುರದ ನಗರ ಪಾಲಿಕೆವತಿಯಿಂದ ನಡೆಯುವ ಈ ಕೆಫೆ ಈ ಪ್ರಕಾರದ ಕೆಫೆಗಳಲ್ಲಿ ಭಾರತದಲ್ಲೇ ಮೊದಲನೆಯದಾಗಿದೆ. ಇದು ಸಂಗ್ರಹಿಸಲ್ಪಟ್ಟ ತ್ಯಾಜ್ಯದ ಪ್ರತಿ ಕೆ.ಜಿ. ಗೆ ಊಟವನ್ನು, ಅರ್ಧ ಕೆ.ಜಿ.ಗೆ ತಿಂಡಿಯನ್ನೂ ನೀಡುತ್ತದೆ. ಮುಂದಿನ ದಿನಗಳಲ್ಲಿ ಬಡಜನರಿಗೆ ಆಶ್ರಯ ಕಲ್ಪಿಸುವ ಗುರಿಯನ್ನು ಹೊಂದಿದೆ.
ಈ ಕೆಫೆ ಅಸ್ತಿತ್ವಕ್ಕೆ ಬಂದದ್ದು, ಮಹಾಪೌರ ಅಜಯ್ ಟಿರ್ಕೆಯವರು ತಮ್ಮ ಪಾಲಿಕೆಯ ಆಯ್ಯಂಗಾರ್ ಮುಂಗಡಪತ್ರವನ್ನು ಮಂಡಿಸಿದ ನಂತರ. ಈ ಕೆಫೆಗೆಂದೇ 5.5 ಲಕ್ಷವನ್ನು ಮೀಸಲಿಡಲಾಗಿದೆ.
ಇದಕ್ಕೆ ಮೀಸಲಿಟ್ಟ ಹಣ ಖಾಲಿಯಾದ ಸಂದರ್ಭಗಳಲ್ಲಿ ಪಾಲಿಕೆಯು ಸಂಸದರ ನಿಧಿಯಿಂದ ಅಥವಾ ಶಾಸಕರ ಮೀಸಲು ಹಣದಿಂದ ಅನುದಾನ ಪಡೆಯಲಿದ್ದಾರೆ, ನ್ಯೂಸ್ 18 ನ ವರದಿ.
ಪಾಲಿಕೆಯು ಸಂಗ್ರಹಿಸಲ್ಪಟ್ಟ ಪ್ಲಾಸ್ಟಿಕ್ ತ್ಯಾಜ್ಯದಿಂದ ನಗರದ ರಸ್ತೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ಬಳಸುತ್ತದೆ. ಈ ರೀತಿ ಪ್ಲಾಸ್ಟಿಕನ್ನು ಮರುರೂಪಿಸಿ ಡಾಂಬರಿನೊಂದಿಗೆ ಬೆರೆಸಿ ರಸ್ತೆ ಮಾಡಿರುವುದು ಇದೇ ಮೊದಲೇನಲ್ಲ. ಹಿಂದೊಮ್ಮೆ ಒಂದಿಡೀ ರಸ್ತೆಯನ್ನು 8ಲಕ್ಷ ಪ್ಲಾಸ್ಟಿಕ್ ಚೀಲಗಳಿಂದ ನಿರ್ಮಿಸಿತ್ತು.
ಭಾರತದಲ್ಲಿ ಇದು ಒಂದು ಅಪೂರ್ವ ಕಾರ್ಯವಾಗಿ ಮೂಡಿಬಂದಿದೆ. ಇದೇ ರೀತಿಯ ಕೆಫೆಗಳು ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಈ ತರಹದ ಕೆಫೆಗಳನ್ನು ಯು.ಎಸ್, ಲಂಡನ್ ಹಾಗು ಕಾಂಬೋಡಿಯಾದಲ್ಲಿ ಕಾಣಬಹುದಾಗಿದೆ. ಕೆಲ ಕೆಫೆಗಳಂತೂ ಸಂಪೂರ್ಣವಾಗಿ ಪ್ಲಾಸ್ಟಿಕಿನಿಂದಲೇ ನಿರ್ಮಿತವಾಗಿವೆ.