ಸೆ. 30 ರ ನಂತರ ಉಚಿತ ಗೂಗಲ್ ಮೀಟ್ ಬಳಕೆದಾರರಿಗೆ 1 ಗಂಟೆಯ ಮಿತಿ
ಗೂಗಲ್ ಮೀಟ್ ಉಚಿತ ಬಳಕೆದಾರರಿಗೆ 60 ನಿಮಿಷಗಳ ಮಿತಿಯನ್ನು ಹೇರಲಿದ್ದು, ಇದು ಸೆಪ್ಟೆಂಬರ್ 30 ರಿಂದ ಅನ್ವಯವಾಗಲಿದೆ.
ಗೂಗಲ್‌ನ ಪ್ರೀಮಿಯಂ ವೀಡಿಯೊ ಕಾನ್ಫರೆನ್ಸಿಂಗ್ ಉತ್ಪನ್ನ ಮೀಟ್‌ನ ಉಚಿತ ಆವೃತ್ತಿಯನ್ನು ಸೆಪ್ಟೆಂಬರ್ 30ರ ನಂತರ 60 ನಿಮಿಷಗಳಿಗೆ ಸೀಮಿತಗೊಳಿಸುತ್ತಿದೆ.
ಕೊರೊನಾವೈರಸ್ನ ಹರಡುವಿಕೆಯಿಂದ ವರ್ಕ್ ಫ್ರಂ ಹೋಮ್ ಈಗ ಎಲ್ಲೆಡೆಯೂ ಸಾಮಾನ್ಯವಾಗಿದ್ದು ವೀಡಿಯೊ ಕಾನ್ಫರೆನ್ಸಿಂಗ್ ಮತ್ತು ವರ್ಚುವಲ್ ಸಹಯೋಗದ ಅಪ್ಲಿಕೇಶನ್‌ಗಳಿಗೆ ಕಳೆದ ಕೆಲವು ತಿಂಗಳುಗಳಲ್ಲಿ ದೊಡ್ಡ ಮಟ್ಟದ ಬೇಡಿಕೆ ಉಂಟಾಗಿದೆ. ಈ ವರ್ಷದ ಆರಂಭದಲ್ಲಿ, ಗೂಗಲ್, ಗೂಗಲ್ ಮೀಟ್‌ನಲ್ಲಿ ಉಚಿತ ವಿಡಿಯೊ ಕರೆ ಸೌಲಭ್ಯವನ್ನು ಸೆಪ್ಟೆಂಬರ್ 30 ರವರೆಗೆ ಎಲ್ಲಾ ಬಳಕೆದಾರರಿಗೆ ಯಾವುದೇ ಸಮಯ ಮಿತಿಯಿಲ್ಲದೆ ನೀಡುವುದಾಗಿ ಘೋಷಿಸಿತ್ತು.
ಸೆಪ್ಟೆಂಬರ್ 30 ರ ನಂತರ, ಜಿ ಸೂಟ್ ಮತ್ತು ಶಿಕ್ಷಣ ಜಿ ಸೂಟ್‌ಗಾಗಿ ಸುಧಾರಿತ ವೈಶಿಷ್ಟ್ಯಗಳ ಮೇಲೆಯೂ ಮಿತಿ ಇರಲಿದ್ದು, ಇದರಲ್ಲಿ 250 ಜನರು ಬಳಸುವುದು, ಒಂದೇ ಡೊಮೇನ್‌ನಲ್ಲಿ 100,000 ಜನರ ಲೈವ್ ಸ್ಟ್ರೀಮ್‌ಗಳು, ಮತ್ತು ಮೀಟಿಂಗ್‌ನ ರೆಕಾರ್ಡಿಂಗ್‌ಗಳನ್ನು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡುವ ಸಾಮರ್ಥ್ಯವು ಇರಲಿದೆ.
ಈ ವೈಶಿಷ್ಟ್ಯಗಳು ಜಿ ಸೂಟ್‌ನ “ಎಂಟರ್‌ಪ್ರೈಸ್” ಶ್ರೇಣಿಯ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಇದಕ್ಕೆ ಪ್ರತಿ ಬಳಕೆದಾರರಿಗೆ ತಿಂಗಳಿಗೆ $25 (ಸರಿಸುಮಾರು 1,800 ರೂ.) ಪಾವತಿಸಬೇಕಾಗುತ್ತದೆ.
ಏಪ್ರಿಲ್‌ನಲ್ಲಿ ಗೂಗಲ್ ಒಂದು ಗಂಟೆಯವರೆಗೆ ಉಚಿತ ವಿಡಿಯೋ ಮೀಟಿಂಗ್‌ಗೆ ಅನುಮತಿಸುವುದಾಗಿ ಘೋಷಿಸಿತ್ತು. ಆದಾಗ್ಯೂ, ಈಗಾಗಲೇ ಹೆಚ್ಚಿನ ಸಂಖ್ಯೆಯ ಜನರು ವೇದಿಕೆಯನ್ನು ಬಳಸುತ್ತಿರುವುದರಿಂದ, ಟೆಕ್ ಲೋಕದ ದೈತ್ಯ ಆಗಸ್ಟ್‌ನಲ್ಲಿ ಒಂದು ಗಂಟೆಯ ಮೀತಿ ಜಾರಿಗೊಳಿಸಲು ನಿರ್ಧರಿಸಿದೆ.
ಗೂಗಲ್ ಮೀಟ್‌ನ ಹೊಸ ಆವೃತ್ತಿಯನ್ನು ಹೆಚ್ಚು ಸುರಕ್ಷಿತ, ಹೆಚ್ಚು ವಿಶ್ವಾಸಾರ್ಹವಾಗಿರಿಸಿರುವುದಲ್ಲದೆ, ಸುಲಭವಾಗಿ ಬಳಸುವಂತೆ ಮಾಡಿದೆ. ಈಗ ಮೀಟ್ ಅನ್ನು ಯಾರೂ ಬೇಕಾದರೂ ತಮ್ಮ ಜಿಮೇಲ್ ಬಳಸಿ ಉಪಯೋಗಿಸಬಹುದು, ಅಲ್ಲದೆ ಜಿಮೇಲ್ ಆ್ಯಪ್ ನಿಂದಲೂ ಮೀಟ್ ಬಳಸಬಹುದಾಗಿದೆ.