Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ ಕಲಿಸಲು ಬ್ರೈಲ್ ಮಾದರಿ ಅಭಿವೃದ್ಧಿಪಡಿಸಿದ ಜೆಎನ್‌ಯು

ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ ರಸಾಯನ ಶಾಸ್ತ್ರ ಕಲಿಸಲು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕರೊಬ್ಬರು ಬ್ರೈಲ್ ಮಾದರಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರ ಕಲಿಸಲು ಬ್ರೈಲ್ ಮಾದರಿ ಅಭಿವೃದ್ಧಿಪಡಿಸಿದ ಜೆಎನ್‌ಯು

Friday December 06, 2019 , 1 min Read

ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರದ ಪರಿಕಲ್ಪನೆಗಳನ್ನು ಕಲಿಸಲು ಸರಳ ಲಾಕ್-ಅಂಡ್-ಕೀ ಮಾದರಿಯನ್ನು ಅಭಿವೃದ್ಧಿಪಡಿಸಿದ್ದೇನೆ ಎಂದು ಪ್ರಾಧ್ಯಾಪಕ ಬಿ. ಎಸ್. ಬಾಲಾಜಿಯವರು ತಮ್ಮ ಅನ್ವೇಷಣೆ ಬಗ್ಗೆ ಮಾತನಾಡುತ್ತ ಹೇಳಿದರು.


ಅಂಧ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಣದಲ್ಲಿ ಪ್ರಸ್ತುತ ಇರುವ ಮಿತಿಗಳಿಂದಾಗಿ, ಈ ನ್ಯೂನತೆಗಳನ್ನು ಪರಿಹರಿಸಲು ಅವರು ಮಾದರಿಯನ್ನು ವಿನ್ಯಾಸಗೊಳಿಸಿದ್ದಾರೆ ಎಂದು ಅವರು ಹೇಳಿದರು.


ಸಾಂಕೇತಿಕ ಚಿತ್ರ




ಮಾದರಿಯಲ್ಲಿ, ಬಾಲಾಜಿ ಬ್ರೈಲ್ ಜೊತೆಗೆ ಸಾಮಾನ್ಯ ಅಕ್ಷರಗಳನ್ನು ಸೇರಿಸಿದ್ದಾರೆ, ಇದರಿಂದಾಗಿ ಸಾಮಾನ್ಯ ದೃಷ್ಟಿ ಹೊಂದಿರುವ ವಿದ್ಯಾರ್ಥಿಗಳು ಸಹ ಅದರಿಂದ ಕಲಿಯಬಹುದು, ಆದರೆ ಇದನ್ನು ಕಲಿಸುವ ಶಿಕ್ಷಕರು ಬ್ರೈಲ್‌ನಲ್ಲಿ ಪರಿಣತರಾಬೇಕಾಗಿಲ್ಲ.


ಜೈವಿಕ ವಿಘಟನೀಯ ಪಾಲಿಮರ್‌ಗಳೊಂದಿಗೆ 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ರಸಾಯನಶಾಸ್ತ್ರವನ್ನು ಕಲಿಸಲು ಲಾಕ್-ಅಂಡ್-ಕೀ ಮಾದರಿಯನ್ನು ರಚಿಸಲಾಗಿದೆ.


"ನಾವು ನಮ್ಮ ಮಾದರಿಯಲ್ಲಿ ಬ್ರೈಲ್ ಮತ್ತು ಅಕ್ಷರಸಂಖ್ಯಾಯುಕ್ತ ಅಕ್ಷರಗಳನ್ನು ಒಟ್ಟುಗೂಡಿಸಿದ್ದೇವೆ. ಮಾದರಿ ಕಾಗದಗಳು ಒಗಟು ಕಾರ್ಡ್‌ಗಳಂತಿವೆ. ವಿವಿಧ ರಾಸಾಯನಿಕ ಸಂಕೇತಗಳನ್ನು ಪ್ರತಿನಿಧಿಸಲು ನಾವು ಆರು ವಿಭಾಗಗಳಾಗಿ ವಿಂಗಡಿಸಿಕೊಂಡಿದ್ದೇವೆ" ಎಂದು ಪ್ರಾಧ್ಯಾಪಕರು ಹೇಳಿದರು.


ಮಾದರಿಗಳು ಅಕ್ಷರಗಳು (ಅಂಶಗಳನ್ನು ಪ್ರತಿನಿಧಿಸುವ), ಸಂಖ್ಯೆಗಳು, ಬಾಣಗಳು, ಚಿಹ್ನೆಗಳು (ಸಂಕಲನ, ವ್ಯವಕಲನ ಇತ್ಯಾದಿ), ಸೂಪರ್‌ಸ್ಕ್ರಿಪ್ಟ್ ಮತ್ತು ಸಬ್‌ಸ್ಕ್ರಿಪ್ಟ್ ಅನ್ನು ಒಳಗೊಂಡಿವೆ.


"ಈ ಆರು ವಿಭಾಗಗಳೊಂದಿಗೆ, ನಾವು ರಾಸಾಯನಿಕ ಪರಿಕಲ್ಪನೆಗಳನ್ನು ವಿವಿಧ ರೀತಿಯಲ್ಲಿ ಪ್ರಸ್ತುತ ಪಡಿಸಬಹುದು. ನಾವು ಅಯಾನುಗಳನ್ನು ಧನಾತ್ಮಕ ಮತ್ತು ಋಣಾತ್ಮಕವಾಗಿ ರಚಿಸಬಹುದು, ನಾವು ರಾಸಾಯನಿಕ ಸಮೀಕರಣಗಳನ್ನು ರಚಿಸಬಹುದು" ಎಂದು ಬಾಲಾಜಿ ಹೇಳಿದರು.


ಈ ಮಾದರಿಯನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸಲು ಬೆಂಬಲಕ್ಕಾಗಿ ಹುಡುಕುತ್ತಿದ್ದೇನೆ ಮತ್ತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ), ಸರಕಾರೇತರ ಮತ್ತು ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ಸಂಪರ್ಕಿಸುವುದಾಗಿ ಅವರು ಹೇಳಿದರು.