ಐಐಟಿ ಮದ್ರಾಸ್ ವಿಶೇಷಚೇತನರಿಗಾಗಿ ಕೈಗೆಟಕುವ ದರದ ಸ್ಟಾಂಡಿಂಗ್ ವ್ಹೀಲ್ ಚೇರ್ ಅಭಿವೃದ್ಧಿಪಡಿಸಿದೆ
ಮದ್ರಾಸ್‌ನ ಐಐಟಿಯು ಸಹಾಯಕ ಸಾಧನಗಳು ಮತ್ತು ಸಲಕರಣೆಗಳ ಪ್ರಮುಖ ತಯಾರಕರಾದ ಫೀನಿಕ್ಸ್ ಮೆಡಿಕಲ್ ಸಿಸ್ಟಮ್ಸ್ ಸಹಯೋಗದೊಂದಿಗೆ ಭಾರತದ ಮೊದಲ ನಿಲ್ಲಬಲ್ಲ ಗಾಲಿಕುರ್ಚಿ 'ಅರೈಸ್' ಅನ್ನು ವಿನ್ಯಾಸಗೊಳಿಸಿ ನಿರ್ಮಿಸಿದೆ.
ವರದಿಗಳ ಪ್ರಕಾರ ಭಾರತ ದೇಶದಲ್ಲಿ 40-80 ಮಿಲಿಯನ್ ವಿಶೇಷಚೇತನ (ಪಿಡಬ್ಲ್ಯುಡಿ) ಜನರಿದ್ದಾರೆ, ಅವರೆಲ್ಲರಿಗೂ ಸಾಮಾಜಿಕ ಸಂವಹನ ಮತ್ತು ಉದ್ಯೋಗವಕಾಶಗಳ ವಿಷಯದಲ್ಲಿ ಹಲವಾರು ಅನಾನೂಕುಲಗಳಿವೆ.
ವಿಶೇಷಚೇತನರನ್ನು ಬೆಂಬಲಿಸಲು ದೇಶದ ದೊಡ್ಡ ಪ್ರಮಾಣದ ಮೂಲಸೌಕರ್ಯಗಳು ಇನ್ನೂ ಇಲ್ಲವಾದರೂ, ಇತ್ತೀಚಿನ ವರ್ಷಗಳಲ್ಲಿ ಕಾಳಜಿಯನ್ನು ತೋರಲು ಕೆಲವು ಉಪಕ್ರಮಗಳು ಮುಂದಾಗಿವೆ.
ಐಐಟಿ - ಮದ್ರಾಸ್ ಹಾಗೂ ಪ್ರಧಾನ ತಾಂತ್ರಿಕ ಸಹಾಯಕ ಸಾಧನಗಳು ಮತ್ತು ಸಲಕರಣೆಗಳ ಪ್ರಮುಖ ತಯಾರಕ ಸಂಸ್ಥೆ ಫೀನಿಕ್ಸ್ ಮೆಡಿಕಲ್ ಸಿಸ್ಟಮ್ಸ್ ಸಹಯೋಗದೊಂದಿಗೆ ಇತ್ತೀಚೆಗೆ ಭಾರತದ ಮೊದಲ ಸ್ಥಳೀಯವಾಗಿ ನಿರ್ಮಿಸಲಾದ ನಿಲ್ಲಬಲ್ಲಂತಹ(ಸ್ಟ್ಯಾಂಡಿಂಗ್) ಗಾಲಿಕುರ್ಚಿಯನ್ನು ತಯಾರಿಸಲಾಗಿದ್ದು ಅದಕ್ಕೆ 'ಅರೈಸ್' ಎಂದು ಹೆಸರಿಸಿದೆ.
ಈ ನಿಂತಿರುವ ಗಾಲಿಕುರ್ಚಿಯು ವಿಭಿನ್ನ ಸಾಮರ್ಥ್ಯದ ವ್ಯಕ್ತಿಯನ್ನು ಸ್ವತಂತ್ರವಾಗಿ ಮತ್ತು ನಿಯಂತ್ರಿತ ರೀತಿಯಲ್ಲಿ ಕುಳಿತುಕೊಳ್ಳುವಿಕೆಯಿಂದ ನಿಲ್ಲುವಂತೆ ಮಾಡಲು ಅನುವು ಮಾಡಿಕೊಡುತ್ತದೆ.
ಐಐಟಿ- ಮದ್ರಾಸ್‌ನಲ್ಲಿ, ಗಾಲಿಕುರ್ಚಿಯ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಟಿಟಿಕೆಯ ಪುನಃಸ್ಥಾಪನ ಸಂಶೋಧನೆ ಮತ್ತು ಸಾಧನ ಅಭಿವೃಧ್ಧಿ ಕೇಂದ್ರ(ಆರ್2ಡಿ2) ಕೈಗೆತ್ತಿಕೊಂಡಿತು. ಇಡೀ ಯೋಜನೆಯ ನೇತೃತ್ವವನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸುಜಾತ ಶ್ರೀನಿವಾಸನ್ ವಹಿಸಿದ್ದರು.
ನಿಂತಿರುವ ಗಾಲಿಕುರ್ಚಿಯನ್ನು ಮೂರು ಹಂತಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಮೊದಲ ಹಂತದಲ್ಲಿ ನಿಂತಿರುವ ಕಾರ್ಯವನ್ನು ಸಾಧಿಸಲು ಕೈ-ಚಾಲಿತ, ಸಂಪರ್ಕ ಆಧಾರಿತ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಗಾಲಿಕುರ್ಚಿಯ ಸ್ಟ್ಯಾಂಡಿಂಗ್ ಕಾರ್ಯವಿಧಾನವನ್ನು ಮೌಲ್ಯೀಕರಿಸಲು ಪ್ರೂಫ್-ಆಫ್-ಕಾನ್ಸೆಪ್ಟ್ ಮೂಲಮಾದರಿಯನ್ನು ಬಳಸಲಾಗಿದೆ.
ಗಾಲಿಕುರ್ಚಿಯನ್ನು ಕುಳಿತುಕೊಳ್ಳುವ ಸ್ಥಾನದಿಂದ ನಿಂತಿರುವ ಸ್ಥಾನಕ್ಕೆ ಅಥವಾ ನಿಂತಿರುವುದರಿಂದ ಕುಳಿತುಕೊಳ್ಳುವುದಕ್ಕೆ ಬದಲಾಯಿಸುವುದು ಬಳಕೆದಾರರು ತೋಳುಗಳ ಶಕ್ತಿಯ ನಿಯಂತ್ರಿಣದ ಮೇಲೆ ಅವಲಂಬಿತವಾಗಿರುತ್ತದೆ. ಒನ್-ಟೈಮ್ ಫಿಟ್ಟಿಂಗ್ ಮೂಲಕ ಗಾಲಿಕುರ್ಚಿಯನ್ನು ಮುಂದೂಡಲು ಅಗತ್ಯದ ಪ್ರಯತ್ನವು ಹೆಚ್ಚಾಗುವುದಿಲ್ಲ ಎಂದು ತಂಡ ಹೇಳಿದೆ. ಬಳಕೆದಾರರು ವ್ಯಯಿಸುವ ಶ್ರಮವನ್ನು ಕಡಿಮೆ ಮಾಡುವಲ್ಲಿ ಗ್ಯಾಸ್ ಸ್ಪ್ರಿಂಗ್ ವಿನ್ಯಾಸ ಪ್ರಮುಖ ಅಂಶವಾಗಿದೆ. ಆರಂಭಿಕ ಮೂಲ ಮಾದರಿಯನ್ನು ಸಮರ್ಥ ದೈಹಿಕ ವ್ಯಕ್ತಿಗಳು ಪರೀಕ್ಷಿಸಿದ್ದಾರೆ ಎಂದು ಸುಜಾತ ಹೇಳುತ್ತಾರೆ.
"ಈ 'ಅರೈಸ್' ಅಭಿವೃದ್ಧಿ ಪ್ರಯಾಣದ ಸಮಯದಲ್ಲಿ ನಾವು ಬಹಳಷ್ಟು ವಿಷಯ ಕಲಿತಿದ್ದೇವೆ. ಪ್ರಭಾವದ ಮೇಲೆ ಕೇಂದ್ರಿಕರಿಸಿದ ಹೊಂದಿಕೊಳ್ಳುವ ಫಂಡಿಂಗ್ ನ ಪ್ರಾಮುಖ್ಯತೆ, ಸಮಾನ ಮನಸ್ಕ ಉದ್ಯಮದ ಅವಶ್ಯಕತೆ ಮತ್ತು ಅಭಿವೃದ್ಧಿಯಲ್ಲಿ ಬಳಕೆದಾರರು ಮತ್ತು ಪುನರ್ವಸತಿ ಸಮುದಾಯವನ್ನು ಒಳಗೊಳ್ಳುವ ಅರ್ಹತೆ ಇತ್ಯಾದಿ. ನಾವು ಈ ಕಲಿಕೆಗಳನ್ನು ನಮ್ಮ ಇತರೆ ಯೋಜನೆಗಳಿಗೆ ಅನ್ವಯಿಸುತ್ತಿದ್ದೇವೆ. ಬಳಕೆದಾರರು ಗರಿಷ್ಟ ಪ್ರಯೋಜನ ಪಡೆಯಲು 'ಅರೈಸ್'ನ ಒನ್ ಟೈಮ್ ಕಸ್ಟಮ್-ಫಿಟ್ಟಿಂಗ್ ಅಗತ್ಯವಾಗಿದೆ. ನಮ್ಮ ಸಾಧನಗಳ ಪ್ರಭಾವವನ್ನು ಹೆಚ್ಚಿಸಲು, ಆರ್2ಡಿ2 ಅವುಗಳ ಲಭ್ಯತೆ, ಸೂಕ್ತತೆ, ಮತ್ತು ಅವಶ್ಯಕವಾದ ಅಳವಡಿಕೆ ಮತ್ತು ತರಬೇತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ".
ಅನೇಕ ಅಭಿವೃದ್ಧಿ ಹಂತಗಳೊಂದಿಗೆ, ನಿಲ್ಲುವಂತಹ ಗಾಲಿಕುರ್ಚಿಯನ್ನು ಬೆನ್ನುಮೂಳೆಯ ತೊಂದರೆಯನ್ನು ಹೊಂದಿದ್ದ 50ಕ್ಕೂ ಹೆಚ್ಚು ಜನರೊಂದಿಗೆ ಪರೀಕ್ಷಿಸಲಾಯಿತು.
ಬಳಕೆದಾರರಲ್ಲಿ ಒಬ್ಬರು,
"ಇದರ ಮೂಲಕ ನಾನು ಎದ್ದು ನಿಂತು ನೇರದೃಷ್ಟಿಯ ಮೂಲಕ ಜನರೊಂದಿಗೆ ಸಂವಹನ ನಡೆಸಲು ಸಾಧ್ಯವಾಯಿತು. ಕ್ಯಾಂಟೀನ್ ಕೌಂಟರ್‌ನಲ್ಲಿ ಸ್ವತಂತ್ರವಾಗಿ ಆಹಾರವನ್ನು ತೆಗೆದುಕೊಳ್ಳಲು ನನಗೆ ಸಾಧ್ಯವಾಗಿದೆ" ಎನ್ನುತ್ತಾರೆ.
ಸಂಸ್ಥೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಟಿಟಿಕೆ ಪ್ರೆಸ್ಟಿಜ್ ನ ಸಿಎಸ್ಆರ್ ಬೆಂಬಲದೊಂದಿಗೆ ಸಾಧನದ ಕೆಲಸವು 2015ರಲ್ಲಿ ಪ್ರಾರಂಭವಾಯಿತು.
ಸ್ವತಂತ್ರ ಜಾಗತಿಕ ದತ್ತಿ ಪ್ರತಿಷ್ಠಾನವಾದ ಯುಕೆಯ ವೆಲ್‌ಕಮ್ ನ ಬೆಂಬಲ ಸಿಕ್ಕಿತು. 'ಭಾರತದ ಕೈಗೆಟುಕುವ ಆರೋಗ್ಯ ರಕ್ಷಣೆ(Affordable Healthcare in India)' ಪ್ರಶಸ್ತಿ ಮೂಲಕ ಈ ಯೋಜನೆಯನ್ನು ಯಶಸ್ವಿಯಾಗಿ ವ್ಯಾಪಾರೀಕರಿಸಲಾಯಿತು. ಇದು ಸಂಶೋಧನೆ ಮತ್ತು ಉತ್ಪಾದನಾ ಪಾಲುದಾರರನ್ನು ಒಟ್ಟುಗೂಡಿಸಿತು.
ಆರ್2ಡಿ2 ಮಾನವ ಚಲನೆಗೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದು, ಮಾನವ ಚಲನೆಯ ಮೇಲೆ ಆರ್ಥೋಟಿಕ್ ಮತ್ತು ಪ್ರಾಸ್ಥೆಟಿಕ್ ಸಾಧನಗಳ ಪ್ರಭಾವ ಮತ್ತು ದೌರ್ಬಲ್ಯ ಹೊಂದಿರುವ ಜನರಿಗೆ ಕಾರ್ಯವಿಧಾನಗಳು, ಉತ್ಪನ್ನಗಳು ಮತ್ತು ಸಹಾಯಕ ಸಾಧನಗಳ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ತೊಡಗಿದೆ.
ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಫಾಲೊ ಮಾಡಿ.