Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಡಿಜಿಟಲೀಕರಣಗೊಂಡ ಜಗತ್ತಿನಲ್ಲಿ ಭಾರತವು ಹೊಸ ಯುಗದ ಉತ್ತುಂಗದಲ್ಲಿದೆ - ರಾಜೀವ್ ಚಂದ್ರಶೇಖರ್ ಹೇಳುತ್ತಾರೆ

ಭಾರತವನ್ನು ಹೇಗೆ ಡಿಜಿಟಲ್ ಜಗತ್ತಿನ ಕೇಂದ್ರಬಿಂದುವನ್ನಾಗಿಸಬಹುದು ಎನ್ನುವ ಬಗೆಗಿನ ಮಾರ್ಗಸೂಚಿಗಳನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ರಾಜೀವ್ ಚಂದ್ರಶೇಕರ್ ಅನಾವರಣಗೊಳಿಸಿದ್ದಾರೆ

ಡಿಜಿಟಲೀಕರಣಗೊಂಡ ಜಗತ್ತಿನಲ್ಲಿ ಭಾರತವು ಹೊಸ ಯುಗದ ಉತ್ತುಂಗದಲ್ಲಿದೆ - ರಾಜೀವ್ ಚಂದ್ರಶೇಖರ್ ಹೇಳುತ್ತಾರೆ

Tuesday May 09, 2023 , 4 min Read

ಭಾರತವು ಇಂದು ವಿಶ್ವದ ಅತ್ಯಂತ ಸಂಪರ್ಕಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಒಂದು ದಶಕದ ಹಿಂದೆ ಅಂದರೆ 2011 ರಲ್ಲಿ, ಭಾರತವು ಸರಿಸುಮಾರು 10 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿತ್ತು. 2023 ರ ವೇಳೆಗೆ, ಆ ಸಂಖ್ಯೆಯಲ್ಲಿ ಅತ್ಯಂತ ವೇಗವಾದ ಏರಿಕೆ ಆಯಿತು. ಇಂದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 80 ಕೋಟಿ ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತವು, ಡಿಜಿಟಲ್ ಕ್ರಾಂತಿಗೆ ಒಳಗಾಗಿದೆ. ಅಂದಾಜಿನ ಪ್ರಕಾರ 2025ರ ವೇಳೆಗೆ ದೇಶದಲ್ಲಿ 90 ಕೋಟಿ ಬಳಕೆದಾರರು ಇರುವ ಸಾಧ್ಯತೆ ಇದೆ.

ಹೆಚ್ಚಿದ ಅಂತರ್ಜಾಲದ ಬಳಕೆಯಿಂದಾಗಿ ದೇಶದ ಜನರ ಜೀವನಶೈಲಿ, ಸಂವಹನ ಮತ್ತು ಕಲಿಕೆಯು ಬದಲಾಗಿದೆ. ಆದರೆ ಅತಿಯಾದ ಬಳಕೆ ಅಪಾಯಕ್ಕೆ ದಾರಿಯೂ ಹೌದು. ಇದನ್ನು ಜವಬ್ದಾರಿಯುತವಾಗಿ ನಿರ್ವಹಿಸದೇ ಇದ್ದಲ್ಲಿ ಮುಂದೆ ಭವಿಷ್ಯದಲ್ಲಿ ದೊಡ್ಡ ತೊಂದರೆಯನ್ನೇ ಎದುರಿಸಬೇಕಾದೀತು. ಇದನ್ನೆಲ್ಲಾ ಮನಗಂಡ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಪರಿಹಾರಕ್ಕೆ ಮುಂದಾಗಿದ್ದಾರೆ. ಮುಂಬರುವ ಡಿಜಿಟಲ್ ಇಂಡಿಯಾ ಶಾಸನದ ಮೂಲಕ ಪ್ರತಿಯೊಬ್ಬ ನಾಗರಿಕರಿಗೆ ಸುರಕ್ಷಿತ ಅಂತರ್ಜಾಲವನ್ನು ಪರಿಚಯಿಸಲು ಉತ್ಸುಕರಾಗಿದ್ದಾರೆ. ಈ ಸಂದರ್ಭದಲ್ಲಿ ಸೈಬರ್ ಅಪರಾಧಿಗಳಿಂದ ರಕ್ಷಿಸುವ ಗುರುತರ ಜವಬ್ದಾರಿಯೂ ಅವರ ಮೇಲಿದೆ.

ಇದರೊಂದಿಗೆ ಅಂತರ್ಜಾಲದ ಬಗೆಗಿನ ಹಳೆಯ ಕಾನೂನುಗಳನ್ನು ಸುಧಾರಿಸಬೇಕಾಗಿದೆ. ಇದು ಸಚಿವರು ಹಾಗೂ ಅವರ ತಂಡಕ್ಕೆ ಪ್ರಮುಖ ಸವಾಲಾಗಿದೆ. ಅಂತರ್ಜಾಲವನ್ನು ನಿಯಂತ್ರಿಸುವ ಕಾನೂನು 22 ವರ್ಷಗಳಷ್ಟು ಹಳೆಯದು, ಅಗತ್ಯವಿದ್ದಲ್ಲಿ ಇದನ್ನು ತಿದ್ದುಪಡಿ ಮಾಡಲಾಗುವುದು ಎನ್ನುವ ಅಭಿಪ್ರಾಯವನ್ನು ಸಚಿವ ರಾಜೀವ್ ಚಂದ್ರಶೇಖರ್ ವ್ಯಕ್ತಪಡಿಸಿದ್ದಾಾರೆ.

ವಾಕ್ ಸ್ವಾತಂತ್ರ್ಯಕ್ಕೆ ಕಾನೂನು ರಕ್ಷೆಯಿಲ್ಲ!

ರಾಜೀವ್ ಚಂದ್ರಶೇಖರ್

ಇತ್ತೀಚೆಗೆ ವಾಕ್ ಸ್ವಾತಂತ್ರ್ಯವು ಸಮಾಜಘಾತುಕ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಹಾಗಂತ ವಾಕ್ ಸ್ವಾತಂತ್ರ್ಯವೆನ್ನುವುದು ತಪ್ಪು ಮಾಹಿತಿಯನ್ನು ಹರಡಲು ಅಥವಾ ಅಂತರ್ಜಾಲದಲ್ಲಿ ದ್ವೇಷ-ಪ್ರಚೋದನೆಯಲ್ಲಿ ತೊಡಗಿಸಿಕೊಳ್ಳಲು ಪರವಾನಗಿ ಅಲ್ಲ ಎಂದು ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ವಾಕ್ ಸ್ವಾತಂತ್ರ್ಯ ವು, ಕೆಲವು ನಿರ್ಬಂಧಗಳು ಮತ್ತು ಎಚ್ಚರಿಕೆಯನ್ನು ಒಳಪಟ್ಟಿರುತ್ತದೆ. ತಮ್ಮ ವಾಕ್ ಸ್ವಾತಂತ್ರ್ಯಕ್ಕೆ ದಕ್ಕೆ ಉಂಟಾಗಿದೆ ಎಂದು ದೂರು ನೀಡುವ ಜನರು ಕಾನೂನುಬಾಹಿರ ಚಟುವಟಿಕೆಗಳನ್ನು ಹೊಂದಿದ್ದಾರೆ ಎಂದು ನಾನು ನಂಬುತ್ತೇನೆ. ಇನ್ನು ಮುಂದೆ ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಜನರು ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಡಿಜಿಟಲ್ ಇಂಡಿಯಾ ಮಸೂದೆಯು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯುವ ನಿಬಂಧನೆಗಳನ್ನು ಹೊಂದಿದೆ. ಅನುಚ್ಛೇದ 14 -ಕಾನೂನಿನ ಮುಂದೆ ಸಮಾನತೆ, ಅನುಚ್ಛೇದ 19- ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು ಅನುಚ್ಛೇದ 21- ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ.

ಡಿಜಿಟಲ್ - ನೈಜ ಜಗತ್ತಿನ ಸಮತೋಲನ

ಪ್ರಸ್ತಾವಿತ ಡಿಜಿಟಲ್ ಇಂಡಿಯಾ ಕಾಯಿದೆಯು ಜಾಗತಿಕ ಮಾನದಂಡಗಳೊಂದಿಗೆ ಇಂಟರ್ನೆಟ್ ಬಳಕೆಗೆ ಕಾನೂನು ಚೌಕಟ್ಟನ್ನು ರೂಪಿಸುತ್ತದೆ. ಕೃತಕ ಬುದ್ಧಿಮತ್ತೆ, ಗೇಮಿಂಗ್ ಮತ್ತು ಮೆಟಾವರ್ಸ್ ಕ್ಷೇತ್ರಗಳಲ್ಲಿ ತಪಾಸಣೆ ಮತ್ತು ಸಮತೋಲನಗಳ ಯಂತ್ರವನ್ನು ಸಹ ಅಳವಡಿಸಲಾಗುವುದು. ನೈಜ ಪ್ರಪಂಚ ಮತ್ತು ಡಿಜಿಟಲ್ ಪ್ರಪಂಚದ ನಡುವೆ ಸಮತೋಲನ ಕಾಪಾಡಲು ಸರ್ಕಾರ ಶ್ರಮಿಸುತ್ತಿದೆ. ಎಐ ಮತ್ತು ಮೆಟಾವರ್ಸ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳು ಬಳಕೆದಾರರನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆಗಳು ಇದೆ. ಈ ಕೃತ್ಯಗಳು ನಿಜ ಜೀವನದಲ್ಲಿ ಅಪರಾಧವಾಗಿದ್ದರೆ, ಡಿಜಿಟಲ್ ಜಗತ್ತಿನಲ್ಲಿಯೂ ಅಪರಾಧವಾಗಬೇಕು, ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಪ್ರಸ್ತುತ ಡಿಜಿಟಲ್ ಇಂಡಿಯಾ ಮಸೂದೆಯನ್ನು ಅಂತಿಮಗೊಳಿಸಲು ಎಲ್ಲಾ

ಮಧ್ಯಸ್ಥಗಾರರೊಂದಿಗೆ ಸಮಾಲೋಚನಾ ಚರ್ಚೆಯಲ್ಲಿ ತೊಡಗಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ತತ್ವಶಾಸ್ತ್ರವು ಶಾಸಕಾಂಗ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಮಾರ್ಗದರ್ಶಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಡಿಜಿಟಲ್ ಇಂಡಿಯಾ ಯೋಜನೆ ಪ್ರಮುಖ ನಡೆ, ಮಹಿಳೆಯರು ಅಂತರ್ಜಾಲವನ್ನು ಹೆಚ್ಚು ಬಳಕೆ ಮಾಡುವಂತೆ ಉತ್ತೇಜಿಸುವುದು. ದೇಶದ ಇಂಟರ್ನೆಟ್ ಬಳಕೆದಾರರಲ್ಲಿ ಸುಮಾರು 45% ಮಹಿಳೆಯರಾಗಿದ್ದಾರೆ. ನಾವು ಅಗ್ಗದ ಸಾಧನಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದರೆ, ಮಹಿಳಾ ಇಂಟರ್ನೆಟ್ ಬಳಕೆದಾರರ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರ್ಯವು ಪ್ರಗತಿಯಲ್ಲಿದೆ.

ಜಾಗತಿಕ ಸ್ಟಾರ್ಟಪ್‌ಗಳ ಸೆಳೆಯಲು ಸಜ್ಜು

ಭಾರತವು 86,000 ಕ್ಕೂ ಹೆಚ್ಚು ಸ್ಟಾರ್ಟಪ್‌ಗಳನ್ನು ಹೊಂದಿದೆ. ಅದರಲ್ಲಿ ಶೇ. 30 ಸಂಸ್ಥೆಗಳು ತಂತ್ರಜ್ಞಾನ ಕ್ಷೇತ್ರಕ್ಕೆ ಸೇರಿವೆ. ಯುವ ಭಾರತೀಯರು ಉದ್ಯೋಗ ಹುಡುಕುವ ಬಗ್ಗೆ ಚಿಂತಿಸುತ್ತಿಲ್ಲ. ಏಕೆಂದರೆ ಅವರು ತಮಗಾಗಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಹಲವು ದಶಕಗಳಿಂದ, ನಾವು ಬಡವರ ದೇಶ ಎಂದು ವರ್ಗೀಕರಿಸಲ್ಪಟ್ಟಿದ್ದೇವೆ. ಆತ್ಮವಿಶ್ವಾಸ ತುಂಬಿರುವ ಇಂದಿನ ಯುವಕರು, ತಮ್ಮ ಉದ್ಯಮಶೀಲತಾ ಮನೋಭಾವದ ಮೂಲಕ ಆ ಗ್ರಹಿಕೆಯನ್ನು ಬದಲಾಯಿಸಿದ್ದಾರೆ. ಡಿಜಿಟಲ್ ಇಂಡಿಯಾ ಈ ಉದ್ಯಮಶೀಲ ಮನಸ್ಥಿತಿಯನ್ನು ಪ್ರೇರೇಪಿಸುತ್ತದೆ. ಭಾರತೀಯ ಸ್ಟಾರ್ಟಪ್‌ಗಳು ಯಶಸ್ವಿಯಾಗಲು ಮಾತ್ರವಲ್ಲದೆ ಜಾಗತಿಕ ಸ್ಟಾರ್ಟಪ್‌ಗಳನ್ನು ಸೆಳೆಯಲು ಡಿಜಿಟಲ್ ಕೇಂದ್ರವಾಗಿ ಭಾರತವನ್ನು ಸಜ್ಜುಗೊಳಿಸಲಾಗುತ್ತದೆ.

ಡಿಜಿಟಲ್ ಕ್ಷೇತ್ರಕ್ಕೆ ಬೃಹತ್ ಅನುದಾನ

ಕಳೆದ ಎಂಟು ವರ್ಷಗಳಲ್ಲಿ ಕೌಶಲ್ಯ ಅಭಿವೃದ್ಧಿಗೆ ಕೈಗೊಂಡ ಪ್ರಯತ್ನಗಳನ್ನು ಸಚಿವ ರಾಜೀವ್ ಚಂದ್ರಶೇಖರ್ ಶ್ಲಾಘಿಸಿದ್ದಾರೆ. ಹಾಗಿದ್ದರೂ ಭಾರತೀಯ ಯುವಕರು ಇನ್ನೂ ಸಂಪೂರ್ಣ ಕೌಶಲ್ಯವನ್ನು ಹೊಂದಿಲ್ಲ ಎಂಬುದನ್ನು ಅವರು ತಿಳಿಸಿದ್ದಾರೆ. ಸಚಿವರ ಅಂದಾಜಿನ ಪ್ರಕಾರ, ಒಟ್ಟು 42 ಕೋಟಿ ಉದ್ಯೋಗಿಗಳಲ್ಲಿ 32 ಕೋಟಿ ಕಾರ್ಮಿಕರು ಕೌಶಲ್ಯರಹಿತರಾಗಿದ್ದಾರೆ. ಆದರೆ 2014ರಲ್ಲಿ ಇದ್ದ ಭಾರತದ ಸ್ಥಿತಿ ಇದೀಗ ಸಂಪೂರ್ಣ ಬದಲಾಗಿದೆ. ಅದಾಗ್ಯೂ, ಎಐ ಮತ್ತು ಸಂಬಂಧಿತ ವಲಯಗಳಲ್ಲಿ 45,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಇನ್ನೂ ನೇಮಕಾತಿ ಆಗಿಲ್ಲ. ಈ ವರ್ಷದ ಬಜೆಟ್‌ನಲ್ಲಿ ಎಐ, ಡ್ರೋನ್‌ಗಳು ಮತ್ತು ರೊಬೊಟಿಕ್ಸ್‌‌ನಂತಹ ಕ್ಷೇತ್ರಗಳಲ್ಲಿ ಯುವಕರನ್ನು ಕೌಶಲ್ಯಗೊಳಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ 8,000 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗುವುದು. ಪ್ರತಿ ಜಿಲ್ಲೆಗೂ ವಿಶಿಷ್ಟವಾದ ಕೌಶಲ ಅಭಿವೃದ್ಧಿ ಯೋಜನೆಯನ್ನು ಹೊಂದಿದ್ದು, ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ನಕ್ಷೆ ರೂಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಯುಪಿ, ಅತಿದೊಡ್ಡ ಡೇಟಾ ಕೇಂದ್ರ

ದೇಶದಲ್ಲಿ ಸಮರ್ಥ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸದೆ ಇದ್ದಲ್ಲಿ ಡಿಜಿಟಲ್ ಇಂಡಿಯಾದ ಭರವಸೆ ಅಪೂರ್ಣ. ಸಚಿವರು ಉತ್ತರ ಪ್ರದೇಶ ಮತ್ತು ಕರ್ನಾಟಕವನ್ನು ಸಾಮರ್ಥ್ಯ ವೃದ್ಧಿಗೆ ಗಮನಾರ್ಹ ಉದಾಹರಣೆಗಳೆಂದು ಪಟ್ಟಿ ಮಾಡಿದ್ದಾರೆ. ಆರು ವರ್ಷಗಳ ಹಿಂದೆ, ಉತ್ತರ ಪ್ರದೇಶ ರಾಜ್ಯವನ್ನು ತಂತ್ರಜ್ಞಾನದ ಕೇಂದ್ರವಾಗಿ ರೂಪಿಸುವುದು ಕಷ್ಟಕರವಾಗಿತ್ತು. 2023ರಲ್ಲಿ ರಾಜ್ಯವು ಉತ್ತರ ಭಾರತದಲ್ಲಿ ಅತಿದೊಡ್ಡ ಡೇಟಾ ಕೇಂದ್ರವಾಗಿ ಬದಲಾಗಿದೆ. ಅಷ್ಟೇ ಅಲ್ಲದೆ ಭಾರತದಲ್ಲಿ (ಆಪಲ್ ಹೊರತುಪಡಿಸಿ) ಮೊಬೈಲ್ ಫೋನ್‌ಗಳ ಅತಿದೊಡ್ಡ ರಫ್ತುದಾರ ಕೂಡ ಆಗಿದೆ. ನಾವು ಯುಪಿಯಲ್ಲಿ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸಿದಾಗಿನಿಂದ ಆಮೂಲಾಗ್ರ ಬದಲಾವಣೆಯಾಗಿದೆ. ಈ ಪ್ರದೇಶದಲ್ಲಿ ತಾಂತ್ರಿಕ ಸಾಮರ್ಥ್ಯಗಳನ್ನು ನಿರ್ಮಿಸುವ ಪ್ರಯತ್ನಗಳಿಂದ ಸ್ಥಳೀಯ ಯುವಕರು ಪುನಶ್ಚೇತನಗೊಂಡಿದ್ದಾರೆ, ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾಾರೆ.

ಆಪಲ್‌ನಂತಹ ಜಾಗತಿಕ ತಯಾರಕರು ತಮ್ಮ ಉತ್ಪಾದನೆಯನ್ನು ಭಾರತಕ್ಕೆ ಬದಲಾಯಿಸುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದಕ್ಕೆ ಉದಾಹರಣೆ ಆಪಲ್ ಪಾಲುದಾರ ಫಾಕ್ಸ್ಕಾನ್ ಬೆಂಗಳೂರು ಬಳಿ ಉತ್ಪಾದನಾ ಸೌಲಭ್ಯದಲ್ಲಿ 700 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ. ಒಂದು ಕಾಲದಲ್ಲಿ ಐಟಿ/ಐಟಿಇಎಸ್ ಹಬ್ ಎಂದು ಗುರುತಿಸಲಾಗಿದ್ದ ಕರ್ನಾಟಕದ ಸ್ಟಾರ್ಟಪ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ವಿನ್ಯಾಸಕ್ಕಾಗಿ ನಾವೀನ್ಯತೆ ಕೇಂದ್ರವಾಗಿ ಬದಲಾಗಿವೆ. ಭಾರತದಲ್ಲಿ ಆಪಲ್ ಸಂಸ್ಥೆಯ ಯೋಜನೆಯಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ತಾಣವಾಗಿ ಕರ್ನಾಟಕ ಬದಲಾಗಲಿದೆ. ಇದರ ಹೊಸ ಸ್ಥಾವರವು ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಆಪಲ್ ಸಂಸ್ಥೆ ಶೇ. 80ರಷ್ಟು ಮಹಿಳೆಯರಿಗೆ ಉದ್ಯೋಗ ಕಲ್ಪಿಸಲಿದೆ ಎನ್ನುವ ಮೂಲಕ ಸಚಿವ ರಾಜೀವ್ ಚಂದ್ರಶೇಖರ್ ಹೊಸ ಭರವಸೆ ಮೂಡಿಸಿದ್ದಾರೆ.

ಇದು ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ತಾಂತ್ರಿಕ ಕ್ರಾಂತಿಯ ಪ್ರಾರಂಭವಾಗಿದೆ. 2025-26ರ ವೇಳೆಗೆ 1 ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯನ್ನು ಸೃಷ್ಟಿಸುವ ಆತ್ಮನಿರ್ಭರ ಭಾರತದ ನಿಯಮಾವಳಿಗಳು, ನುರಿತ ಕಾರ್ಯಪಡೆ ಮತ್ತು ಅಂತರ್ಗತ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲಿದೆ.