ಚಂಡಮಾರುತ ಪೀಡಿತ ಮಡಗಾಸ್ಕರ್‌ಗೆ ಸಹಾಯ ಮಾಡಲು ನೌಕಾ ಹಡಗು ಐಎನ್‌ಎಸ್ ಐರಾವತ್‌ ಕಳಿಸಿದ ಭಾರತ

ಚಂಡಮಾರುತದ ಪ್ರಭಾವದಿಂದ ತತ್ತರಿಸಿರುವ ಮಡಗಾಸ್ಕರ್‌ಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸುವದಕ್ಕಾಗಿ ಭಾರತ ತನ್ನ ನೌಕಾ ಹಡಗು ಐಎನ್‌ಎಸ್ ಐರಾವತ್ ಅನ್ನು ಕಳುಹಿಸಿದೆ.

ಚಂಡಮಾರುತ ಪೀಡಿತ ಮಡಗಾಸ್ಕರ್‌ಗೆ ಸಹಾಯ ಮಾಡಲು ನೌಕಾ ಹಡಗು ಐಎನ್‌ಎಸ್ ಐರಾವತ್‌ ಕಳಿಸಿದ ಭಾರತ

Wednesday January 29, 2020,

1 min Read

ಚಂಡಮಾರುತ ಪೀಡಿತ ರಾಷ್ಟ್ರಕ್ಕೆ ಸಹಾಯ ಮಾಡಲು ಭಾರತೀಯ ನೌಕಾಪಡೆ ಈಗಾಗಲೇ "ಆಪರೇಷನ್ ವೆನಿಲ್ಲಾ" ಅನ್ನು ಪ್ರಾರಂಭಿಸಿದ್ದು ಮತ್ತು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ತನ್ನ ನೌಕಾ ಹಡಗನ್ನು ಕಳುಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.


ಮಡಗಾಸ್ಕರ್‌ (ಚಿತ್ರಕೃಪೆ: ಟ್ವಿಟರ್)



"ನೈಸರ್ಗಿಕ ವಿಪತ್ತಿನ ಸಮಯದಲ್ಲಿ, ನಾವು ಮಡಗಾಸ್ಕರ್‌ ರಾಷ್ಟ್ರದ ಜೊತೆ ನಿಲ್ಲುತ್ತೇವೆ. @Indiannavy ಈಗಾಗಲೇ "ಆಪರೇಷನ್ ವೆನಿಲ್ಲಾ"ಅನ್ನು ಪ್ರಾರಂಭಿಸಿದೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಬೆಂಬಲ ನೀಡಲು ಐಎನ್‌ಎಸ್ ಐರಾವತ್ ಅನ್ನು ತುರ್ತಾಗಿ ಕಳುಹಿಸಿದೆ. ಮಡಗಾಸ್ಕರ್‌ ಜನರ ಒಳತಿಗಾಗಿ ನಾವು ಪ್ರಾರ್ಥಿಸುತ್ತೇವೆ," ಸಿಂಗ್ ಟ್ವೀಟ್ ಮಾಡಿದ್ದಾರೆ.


ಮಡಗಾಸ್ಕರ್ ಚಂಡಮಾರುತದಿಂದ ನಲುಗಿದೆ ಮತ್ತು ಕಳೆದ ವಾರದಿಂದ ಭಾರೀ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಹಲವಾರು ಜನರ ಸ್ಥಳಾಂತರಕ್ಕೆ ಕಾರಣವಾಗಿದೆ ಮತ್ತು ಪ್ರಾಣಹಾನಿ ಸಂಭವಿಸಿದೆ ಎಂದು ಎಂಇಎ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, 92,000 ಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದಾರೆ ಎಂದು ಅವರು ಹೇಳಿದರು.


ಜನವರಿ 25 ರಂದು ಮಾಡಿದ ಟ್ವೀಟ್‌ನಲ್ಲಿ, ಮಡಗಾಸ್ಕರ್ ಅಧ್ಯಕ್ಷರು ದೇಶಕ್ಕೆ ಅಪ್ಪಳಿಸಿದ ರಾಷ್ಟ್ರೀಯ ದುರಂತಕ್ಕಾಗಿ ಅಂತಾರಾಷ್ಟ್ರೀಯ ಸೌಹಾರ್ದತೆಯನ್ನು ಕೋರಿದ್ದರು.


ಮೊದಲಾಗಿ ಸೀಶೆಲ್ಸ್‌ಗೆ ತೆರಳುವ ಭಾರತೀಯ ನೌಕಾಪಡೆಯ ಹಡಗು ಐರಾವತ್ ಅನ್ನು ಮಡಗಾಸ್ಕರ್‌ಗೆ ತಕ್ಷಣ ತಿರುಗಿಸಲು ಭಾರತ ನಿರ್ಧರಿಸಿದೆ ಎಂದು ಎಂಇಎ ಮೂಲಗಳು ತಿಳಿಸಿವೆ.


ನೌಕೆಯಲ್ಲಿ ತಲಾ ಐದು ಪ್ಯಾಲೆಟ್‌ಗಳ ಬಟ್ಟೆಗಳನ್ನೂ ಸಾಗಿಸಲಾಗುತ್ತಿದೆ ಮತ್ತು ಮೂರು ಪ್ಯಾಲೆಟ್ ಔಷಧಿಗಳನ್ನು ಸಾಗಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದ್ದರಿಂದ ಇದು ಬಟ್ಟೆ, ತುರ್ತು ಆಹಾರ, ತಾತ್ಕಾಲಿಕ ಆಶ್ರಯ, ವೈದ್ಯಕೀಯ ನೆರವನ್ನು ನಾಲ್ಕು ದೊಡ್ಡ ಮತ್ತು ಎರಡು ಮಧ್ಯಮ ಗಾತ್ರದ ದೋಣಿಗಳನ್ನೂ ಬಳಸಿಕೊಂಡು, ಡೈವಿಂಗ್ ಮತ್ತು ಸಂವಹನ ಸಹಾಯದಿಂದ ಸಿಬ್ಬಂದಿಯನ್ನು ಸಾಗಿಸುವುದು ಮತ್ತು ಸ್ಥಳಾಂತರಿಸುವ ಮೂಲಕ ನೀಡಲಾಗುವುದು ಎಂದು ಅವರು ಹೇಳಿದರು.


ಹಡಗು 2020 ರ ಜನವರಿ 29 ರಂದು ಮಡಗಾಸ್ಕರ್ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.


"ಮಡಗಾಸ್ಕರ್‌ಗೆ ನಮ್ಮ ನೆರವು ‘ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ (ಸಾಗರ್)' ಎಂಬ ಪ್ರಧಾನ ಮಂತ್ರಿಯ ಅವರ ದುರದೃಷ್ಠಿಯ ಮೂಲಕ ಸಾಕಾರವಾಗಿದೆ," ಎಂದು ಎಂಇಎ ಮೂಲವೊಂದು ತಿಳಿಸಿದೆ.