ಹ್ಯಾಕಿಂಗ್ ತಡೆಗಟ್ಟಲು ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿದ ಜಿಯೋಮೀಟ್

24 ಗಂಟೆಗಳ ಉಚಿತ ವಿಡಿಯೋ ಕಾನ್ಫೆರೆನ್ಸ್‌ಗೆ ಅವಕಾಶ ನೀಡುವ ಜಿಯೋಮೀಟ್ ಆ್ಯಪ್, ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಸೇರಿಸಿದ್ದು, ಅದು ಸೈನ್ ಇನ್ ಮಾಡದೆ, ಅವರ ಗುರುತನ್ನು ಬಹಿರಂಗಪಡಿಸದೆ ಸಭೆಗೆ ಸೇರ ಬಯಸುವವರನ್ನು ತಿರಸ್ಕರಿಸಲು ಕಾನ್ಫರೆನ್ಸ್ ಹೋಸ್ಟ್‌ಗೆ ಅವಕಾಶ ನೀಡುತ್ತದೆ.

ಹ್ಯಾಕಿಂಗ್ ತಡೆಗಟ್ಟಲು ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿದ ಜಿಯೋಮೀಟ್

Thursday July 09, 2020,

1 min Read

ರಿಲಿಯನ್ಸ್‌ನ ವಿಡಿಯೋ ಕಾನ್ಫರೆನ್ಸಿಂಗ್‌ ಆ್ಯಪ್ ಜಿಯೋ ಮೀಟ್‌ ಮಂಗಳವಾರ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯವನ್ನು ಸೇರಿಸಿದೆ. ಇದು ಝೂಮ್‌ ನಂತಹ ಆ್ಯಪ್ನ ಪರದೆಯ ಮೇಲೆ ಹ್ಯಾಕರ್‌ಗಳು ಆಸಭ್ಯ ಚಿತ್ರಗಳನ್ನು ಪೊಸ್ಟ್‌ ಮಾಡುವಂತಹ ಕೃತ್ಯವನ್ನು ತಡೆಯುತ್ತದೆ.


24 ಗಂಟೆಗಳ ಉಚಿತ ವಿಡಿಯೋ ಸಂವಾದಕ್ಕೆ ಅವಕಾಶ ನೀಡುವ ಜಿಯೋಮೀಟ್ ಆ್ಯಪ್, ಹೊಸ ಸುರಕ್ಷತಾ ವೈಶಿಷ್ಟ್ಯವನ್ನು ಸೇರಿಸಿದ್ದು, ಅದು ಸೈನ್ ಇನ್ ಮಾಡದೆ, ಅವರ ಗುರುತನ್ನು ಬಹಿರಂಗಪಡಿಸದೆ ಸಭೆಗೆ ಸೇರ ಬಯಸುವವರನ್ನು ತಿರಸ್ಕರಿಸಲು ಕಾನ್ಫರೆನ್ಸ್ ಹೋಸ್ಟ್‌ಗೆ ಅವಕಾಶ ನೀಡುತ್ತದೆ.




ಝೂಮ್‌ನಂತಹ ಆ್ಯಪ್ನಲ್ಲಿ ಆನ್‌ಲೈನ್‌ ತರಗತಿ ನಡೆಸುವಾಗ ಅಸಭ್ಯ ಚಿತ್ರಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ ಎಂಬ ವರದಿಗಳ ಹಿನ್ನಲೆಯಲ್ಲಿ ಈ ವೈಶಿಷ್ಟ್ಯವನ್ನು ಸೇರಿಸಲಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.


ಜಿಯೋಮೀಟ್, ಶುರುವಾದ ಮೊದಲ ವಾರದಲ್ಲಿಯೆ, ಸಂಸ್ಥೆಯ ಗ್ರಾಹಕರಿಗೆ ಹೊಸ ಕಾರ್ಯಚಟುವಟಿಕೆಗಳನ್ನು ಒಳಗೊಂಡಂತೆ ಆರು ವೈಶಿಷ್ಟ್ಯಗಳು ಮತ್ತು ಬದಲಾವಣೆಗಳನ್ನು ಅನಾವರಣಗೊಳಿಸಿದೆ, ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದರಿಂದ ಹ್ಯಾಕರ್‌ಗಳು ಅತಿಕ್ರಮಣದಿಂದ ಕಾನ್ಫೆರೆನ್ಸ್‌ ಪ್ರವೇಶಿಸುವುದನ್ನು ತಡೆಯಬಹುದಾಗಿದೆ.


ಹೊಸ ವೈಶಿಷ್ಟ್ಯಗಳಿರುವ ಆ್ಯಪ್ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲಿ ಐಒಎಸ್‌ ನಲ್ಲೂ ಲಭ್ಯವಾಗಲಿದೆ.


ಹೊಸ ವೈಶಿಷ್ಟ್ಯಗಳು ವೈಯಕ್ತಿಕ ತರಗತಿ ಕೊಠಡಿಗಳನ್ನು ಒಳಗೊಂಡಿದ್ದು, ಶಾಲಾ ತರಗತಿಗಳು ಮತ್ತು ದೈನಂದಿನ ಸಭೆಗಳಂತಹ ಮರುಕಳಿಸುವ ಸಭೆಗಳಿಗೆ ಅನುಕೂಲವಾಗುವಂತೆ ಸಭೆಗಾಗಿ ಒಬ್ಬರು ಸ್ವಂತ ಪಾಸ್‌ವರ್ಡ್ ಅನ್ನು ಸೆಟ್‌ ಮಾಡುವ ಸಾಮರ್ಥ್ಯವನ್ನು ಹೊಂದಿದೆ.


ಅಲ್ಲದೆ, ಈ ಆವೃತ್ತಿಯಲ್ಲಿ, ಜಿಯೋಮೀಟ್ ಯೂಸರ್‌ ಇಂಟರ್ಫೇಸ್ಗೆ ಹೊಸ ಸ್ಪರ್ಷವನ್ನು ನೀಡಿದೆ.


ಜುಲೈ 2 ರಂದು ಪ್ರಾರಂಭವಾದ ಜಿಯೋಮೀಟ್‌, 100 ಜನರು ಪಾಲ್ಗೊಳ್ಳಬಹುದಾದ ಎಚ್‌ಡಿ ಆಡಿಯೋ ಮತ್ತು ವಿಡಿಯೋ ಕಾಲಿಂಗ್‌ಗೆ ಅವಕಾಶ ನೀಡುತ್ತದೆ. ಇದರಲ್ಲಿ ಸ್ಕ್ರೀನ್‌ ಶೇರಿಂಗ್‌, ಮೀಟಿಂಗ್‌ ನಿಗದಿಪಡಿಸುವಿಕೆ ಮತ್ತು ಇತರ ವೈಶಿಷ್ಟ್ಯಗಳಿವೆ.


ಆದರೆ ಝೂಮ್‌ನಂತೆ ಈ ಆ್ಯಪ್ ಸಭೆಯನ್ನು 40 ನಿಮಿಷಕ್ಕೆ ಸೀಮಿತಗೊಳಿಸದೆ, ಸಭೆ ನಡೆಸಲು 24 ಗಂಟೆಗಳ ನಿರಂತರ ಕಾಲಾವಕಾಶ ನೀಡುತ್ತದೆ.


ಹೊಸ್ಟ್‌ನ ಸಂಸ್ಥೆಯವರಿಗೆ ಮಾತ್ರ ಸಂವಾದ ಸೇರಲು ಆ್ಯಪ್ ಅವಕಾಶ ನೀಡುತ್ತದೆ.