ಲಾಕ್‌ಡೌನ್‌ ಕೊನೆಯಾಗಿದೆ, ಆದರೆ ವೈರಸ್‌ ಇನ್ನೂ ಬದುಕಿದೆ; ಹಬ್ಬದ ನಡುವೆ ಎಲ್ಲರೂ ಹುಷಾರಾಗಿರಬೇಕು – ಪ್ರಧಾನಿ ಮೋದಿ

ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರ ಲಸಿಕೆ ಅಭಿವ್ರದ್ಧಿಪಡಿಸುವತ್ತ ಕಾರ್ಯನಿರ್ವಹಿಸುತ್ತಿದ್ದು, ಅದು ಸಿದ್ಧಗೊಂಡ ಬಳಿಕೆ ಪ್ರತಿ ಭಾರತೀಯನಿಗೂ ಸಿಗಲಿದೆ ಎಂದರು.

ಲಾಕ್‌ಡೌನ್‌ ಕೊನೆಯಾಗಿದೆ, ಆದರೆ ವೈರಸ್‌ ಇನ್ನೂ ಬದುಕಿದೆ; ಹಬ್ಬದ ನಡುವೆ ಎಲ್ಲರೂ ಹುಷಾರಾಗಿರಬೇಕು – ಪ್ರಧಾನಿ ಮೋದಿ

Tuesday October 20, 2020,

1 min Read

ಒಂದರ ಹಿಂದೆ ಒಂದು ಹಬ್ಬಗಳು ಬರುವ ಈ ಸಮಯದಲ್ಲಿ ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್‌ ಇನ್ನೂ ನಮ್ಮ ನಡುವಿದೆ, ಸಣ್ಣ ನಿರ್ಲಕ್ಷ್ಯವು ಹಬ್ಬದ ಸಡಗರವನ್ನು ಮರೆಮಾಚುವಂತೆ ಮಾಡುತ್ತದೆ ಎಂದರು.


ಕೋವಿಡ್‌ ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ ಏಳನೇ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಹಲವರು ಮೈ ಮರೆತು ಯಾವುದೆ ರೀತಿಯ ಮುನ್ನೆಚ್ಚರಿಕೆಗಳನ್ನು ಪಾಲಿಸದೆ ಓಡಾಡುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ. “ಇದು ಸರಿ ಅಲ್ಲ,” ಎಂದಿದ್ದಾರೆ.


“ನೀವು ಅಲಕ್ಷ್ಯ ತೋರಿಸಿ ಮಾಸ್ಕ್‌ ಧರಿಸದೆ ಹಾಗೆ ಓಡಾಡುತ್ತಿದ್ದರೆ ನೀವು ನಿಮ್ಮನ್ನು, ಮಕ್ಕಳನ್ನು, ವಯಸ್ಸಾದವರನ್ನು ಅಪಾಯಕ್ಕೆ ದೂಡಿದಂತೆ. ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಕೇವಲ ಲಾಕ್‌ಡೌನ್‌ ಮುಗಿದಿದೆ, ವೈರಸ್‌ ಇನ್ನೂ ಹಾಗೆ ಇದೆ ಎನ್ನುವುದು,” ಎಂದರು.


ಯುರೋಪ್‌, ಅಮೇರಿಕಾ ಮತ್ತು ಇತರೆ ದೇಶಗಳಲ್ಲಿ ಹಿಂದೆ ಸೋಂಕು ಕಡಿಮೆಯಾಗಿ ಮತ್ತೆ ಹೆಚ್ಚಿದ್ದನ್ನು ಕಾಣಬಹುದು.


ಲಸಿಕೆ ಸಿಗುವವರೆಗೂ ನಾವೆಲ್ಲರೂ ಹುಷಾರಾಗಿರುವುದನ್ನು ಮುಂದುವರೆಸಬೇಕು ಎಂದರು ಮೋದಿ.


ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರ ಲಸಿಕೆ ಅಭಿವ್ರದ್ಧಿಪಡಿಸುವತ್ತ ಕಾರ್ಯನಿರ್ವಹಿಸುತ್ತಿದ್ದು, ಅದು ಸಿದ್ಧಗೊಂಡ ಬಳಿಕ ಪ್ರತಿ ಭಾರತೀಯನಿಗೂ ಸಿಗಲಿದೆ ಎಂದರು.

ಔಷಧಿ ಸಿಗುವವರೆಗೂ ಯಾರೂ ಅಜಾಗರೂಕತೆ ತೋರಬಾರದು ಎಂದು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು ಅವರು.


ಪ್ರಧಾನಿಯವರು ಹಲವು ಬಾರಿ ದೊಡ್ಡ ನಿರ್ಧಾರಗಳನ್ನು, ಬೆಳವಣಿಗೆಗಳನ್ನು ಹೀಗೆ ವಿಡಿಯೋ ಮುಖಾಂತರ ತಿಳಿಸಿದ್ದಾರೆ.


ಜೂನ್‌ 30ರ ಅವರ ಕೊನೆಯ ಭಾಷಣದಲ್ಲಿ ದೇಶದ 80 ಕೋಟಿ ಜನರಿಗೆ ಉಚಿತವಾಗಿ ರೇಷನ್‌ ವಿತರಿಸುವ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನಾ ಯೋಜನೆಯನ್ನು 5 ತಿಂಗಳವರೆಗೆ ವಿಸ್ತರಿಸುವುದಾಗಿ ಹೇಳಿದ್ದರು.


ಇನ್ನೊಂದೆಡೆ ಗ್ರ್ಯಾಂಡ್‌ ಚಾಲೆಂಜ್ಸ್‌ ಅನುಅಲ್‌ ಮೀಟಿಂಗ್‌ನಲ್ಲಿ ಮಾತನಾಡಿದ ಮೋದಿ ಕೋವಿಡ್‌-19 ಗೆ ಲಸಿಕೆ ಕಂಡುಹಿಡಿಯುವಲ್ಲಿ ಭಾರತ ಮುಂದಿದೆ, ನಮ್ಮ ಕೆಲವು ಲಸಿಕೆಗಳು ಪರೀಕ್ಷೆಯ ಅಂತಿಮ ಘಟ್ಟದಲ್ಲಿವೆ ಎಂದರು.


(ವಿಶೇಷ ಸೂಚನೆ: ಪಿಟಿಐ ಲೇಖನಕ್ಕೆ ಅಗತ್ಯವಾದ ವಿವರಗಳನ್ನು ಸೇರಿಸಲಾಗಿದೆ)