ಗೂಗಲ್ ನ ಈ ಮಾಜಿ ನೌಕರ ಭಾರತದಾದ್ಯಂತ ಕೆರೆಗಳಿಗೆ ಮರುಜೀವ ನೀಡುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ
ಚೆನ್ನೈನ ನಿವಾಸಿಯಾಗಿರುವ ಅರುಣ್ ಕೃಷ್ಣಮೂರ್ತಿ 2007 ರಲ್ಲಿ ಎನ್ವಿರೊನಮೆಂಟಲ್ ಫೌಂಡೇಶನ್ ಸ್ಥಾಪಿಸಿ ಕಳೆದ ಒಂದು ದಶಕದಲ್ಲಿ ಅದರ ಮೂಲಕ 39 ಕೆರೆ ಮತ್ತು 48 ಹಳ್ಳಗಳಿಗೆ ಭಾರತದಾದ್ಯಂತ ಜೀವ ತುಂಬಿಸಿದ್ದಾರೆ.
ತಮಿಳುನಾಡು ಮತ್ತು ಅದರ ರಾಜಧಾನಿ ಚೆನ್ನೈ ಪ್ರಸ್ತುತ ಸಮಯದಲ್ಲಿ ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯ ತೀವ್ರತೆಯನ್ನು ತಿಳಿದು ಸಂಸ್ಥೆಗಳು ನೀರಿನ ಕೊರತೆಯನ್ನು ನೀಗಿಸಲು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಹೇಳುತ್ತಿವೆ.
ಒಣಹವೆ ಮತ್ತು ಸಮಯಕ್ಕೆ ಸರಿಯಾಗಿ ಬಾರದ ಮಾನ್ಸೂನ್ ಒಂದು ಪ್ರಮುಖ ಕಾರಣವಾದರೆ, ಅಷ್ಟೇ ಪ್ರಮುಖವಾದ ಮತ್ತೊಂದು ಕಾರಣ ಹಳ್ಳ ಕೊಳ್ಳಗಳ ಕಣ್ಮರೆಯಾಗುವುದು. ತಮಿಳುನಾಡಿನ ಪ್ರಸ್ತುತ ಸ್ಥಿತಿಯೂ ಗಂಭೀರವಾಗಿದ್ದರು ನಾವು ಭಾರತದಾದ್ಯಂತ ಇಂತಹ ಪರಿಸ್ಥಿತಿಯನ್ನು ಎದುರಿಸುವುದು ದೂರವಿಲ್ಲ.
ಆದಾಗ್ಯೂ ಒಬ್ಬ ವ್ಯಕ್ತಿಯು ಭಾರತದಾದ್ಯಂತ ಈ ಸನ್ನಿವೇಶವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.
ಅರುಣ್ ಕೃಷ್ಣಮೂರ್ತಿ ಅವರು 2007ರಲ್ಲಿ ಎನ್ವಿರೊನಮೆಂಟಲಿಸ್ಟ್ ಫೌಂಡೇಷನ್ ಆಫ್ ಇಂಡಿಯಾ (EFI) ವನ್ನು ಹುಟ್ಟು ಹಾಕಿದರು ಅದರಿಂದ ಇಲ್ಲಿವರಿಗೂ 39 ಹಳ್ಳ ಮತ್ತು 48 ಕೊಳ್ಳಗಳಿಗೆ ಜೀವ ತುಂಬಿದ್ದಾರೆ. ಚೆನ್ನೈನ ನಿವಾಸಿ ಮತ್ತು ಮಾಜಿ ಗೂಗಲ್ ನ ನೌಕರರಾಗಿರುವ 32 ವರ್ಷದ ಪರಿಸರ ಕಾರ್ಯಕರ್ತ, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಕ್ಷೇತ್ರದಲ್ಲಿ ಚಿರ ಪರಿಚಿತ ಹೆಸರನ್ನು ಹೊಂದಿದ್ದಾರೆ.
ಈ ಸಂಸ್ಥೆಯು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಮತ್ತು ಗುಜುರಾತನಲ್ಲಿ ಕೆರೆಗಳಿಗೆ ಜೀವ ತುಂಬುವ ಕಾರ್ಯಕ್ರಮಗಳನ್ನು ನಡೆಸಿದೆ.
ಸ್ವಚ್ಛತಾ ಪ್ರಕ್ರಿಯೆಯೂ ಕಸ ಮತ್ತು ಕೆರೆಗಳನ್ನು ಆವರಿಸುವ ಜಾತೀಯ ಸಸ್ಯಗಳನ್ನು ತೆಗೆಯುವುದನ್ನು ಒಳಗೊಂಡಿರುತ್ತದೆ, ಅವುಗಳಲ್ಲಿ ಮುಳ್ಳಿನ ಪೊದೆಗಳು ಮತ್ತು ನೀರಿನ ಹೈಸಿಂಥಗಳು ಸಹ ಸೇರಿವೆ.
ವೈಜ್ಞಾನಿಕ ವಿಧಾನವನ್ನು ವಿವರಿಸುತ್ತಾ ದ ಹಿಂದು ಗೆ ಹೀಗೆ ಹೇಳಿದರು.
“ವೈಜ್ಞಾನಿಕ ವಾಗಿ ಕೆರೆಗಳ ಜೀರ್ಣೋದ್ಧಾರದ ಉದ್ದೇಶ ಭವಿಷ್ಯದಲ್ಲಿ ಪ್ರವಾಹವನ್ನು ತಡೆಯುವುದು ಅಂತರ್ಜಲ ಮಟ್ಟ ವನ್ನು ಹೆಚ್ಚಿಸುವುದು. ನೀರು ಸಂಗ್ರಹವಾಗುವ ಜಾಗದ ಅತಿಕ್ರಮಣ ವಾಗುವದನ್ನು ತಡೆಯಲು ಮತ್ತು ಚರಂಡಿ ಕವಾಟಗಳನ್ನು ಸ್ವಚ್ಚಗೊಳಿಸುವ ಕ್ರಮಗಳನ್ನು ಸಹ ಕೈಗೊಳ್ಳಲಾಗುವುದು”
ಇಂತಹ ಜೀರ್ಣೋದ್ಧಾರ ಕಾರ್ಯಕ್ರಮಗಳಿಗೆ ಸಾಮಾನ್ಯ ನಾಗರೀಕರ ಸಹಾಯವೂ ಅಗತ್ಯವೆಂದು ಅರುಣ್ ಹೇಳುತ್ತಾರೆ.ಈ ಉಪಕ್ರಮದ ಬಗ್ಗೆ ಎಡೆಕ್ಸ ಲೈವ ಜೊತೆ ಮಾತಾಡುತ್ತ ಹೀಗೆ ಹೇಳಿದರು,
“ಇಂತಹ ಯೋಜನೆಗಳಲ್ಲಿ ಹಲವಾರು ಪಾಲುದಾರರಿದ್ದಾರೆ. ಸರಕಾರ ಜಲಮೂಲಗಳ ಹತ್ತಿರ ವಾಸಿಸುತ್ತಿರುವಿರುವ ಜನರು, ಹತ್ತಿರದ ಸಂಘ ಸಂಸ್ಥೆಗಳು ಇದರಲ್ಲಿ ಸೇರುತ್ತಾರೆ. ಇದು ಒಬ್ಬ ವ್ಯಕಿಯಿಂದ ಸಾಧ್ಯವಿಲ್ಲದ ಕಾರಣ ನಾವೆಲ್ಲರೂ ಸೇರಿ ಜಲಮೂಲಗಳಿಗೆ ಪುನರ್ ಜೀವ ನೀಡುವತ್ತ ಮುನ್ನಡೆಯಬೇಕು, ಇಲ್ಲದಿದ್ದರೆ ಮುಂದೆ ತುಂಬಾ ಕಠಿಣವಾಗಲಿದೆ”
ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಲು ಅರುಣ್ ಅವರು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಗುಜರಾತ್, ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳ ಜೊತೆ ಜೊತೆಯಾಗಿ ಕೆಲಸ ಮಾಡುತ್ತಾರೆ.
ಸರಕಾರದ ಸಹಕರಾದ ಬಗ್ಗೆ ಮಾತನಾಡುತ್ತಾ ಹೀಗೆ ಹೇಳಿದರು,
“ಭಾರತವು ಅಖಂಡ. ಸರಕಾರಗಳ ನಡುವೆ ಯಾವುದೇ ಅಂತರಗಳಿಲ್ಲ. ಅವು ಎಲ್ಲ ಒಳ್ಳೆಯ ಅಧಿಕಾರಿಗಳನ್ನು ಹೊಂದಿವೆ. ನಮ್ಮ ಪ್ರಜಾಪ್ರಭುತ್ವದ ಸಾಮರ್ಥ್ಯವೆಂದರೆ ಸಾರ್ವಜನಿಕ ವ್ಯವಹಾರಗಳಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳುವುದು. ಇದೆ ಇ ಎಫ್ ಐ ಅನ್ನು ನಮಗೆ ತುಂಬಾ ಅತ್ಯಾಕರ್ಷಕವಾಗಿಸುತ್ತದೆ - ಸಿಹಿನೀರಿನ ಮೂಲಗಳ ಸಂರಕ್ಷಣೆಗಳ ಪ್ರಯತ್ನದಲ್ಲಿ ನೇರವಾಗಿ ಭಾಗವಹಿಸಬಹುದು. ಇದು ವಿಶ್ವದ ಇತರ ಭಾಗಗಳಲ್ಲಿ ಸರ್ಕಾರ ಮಾತ್ರ ಮಾಡಬಹುದಾದ ಕೆಲಸ” ಎಂದು ಎಡೆಕ್ಸ್ ಲೈವ್ ವರದಿ ಮಾಡಿದೆ.
ಅವರ ಪ್ರಾಥಮಿಕ ಕೆಲಸ ಮತ್ತು ಜನರನ್ನು ಈ ಕೆಲಸಕ್ಕೆ ಕೈ ಜೋಡಿಸಲು ಪ್ರೋತ್ಸಾಹಿಸುವುದರ ಜೊತೆಗೆ, ಅರುಣ್ ಭಾರತದಾದ್ಯಂತ ಇರುವ ಜಲಮೂಲಗಳ ಬಗ್ಗೆ ಯೂಟ್ಯೂಬ್ ಸರಣಿಯನ್ನು ಸಹ ಮಾಡಿದ್ದಾರೆ. ಹೈಡ್ರೋಸ್ತಾನ್ ಎಂದು ಕರೆಯಲ್ಪಡುವ ಈ ಸರಣಿಯನ್ನು ಈ ವರ್ಷ ಮೇ 22 ರಂದು ಬಿಡುಗಡೆ ಮಾಡಿದರು.
ಸರಣಿಯ ಹಿಂದಿನ ಉದ್ದೇಶದ ಕುರಿತು ಮಾತನಾಡಿದ ಅವರು,
“ನಾನು ಹಲವಾರು ಹಳ್ಳ ಮತ್ತು ಕೊಳಗಳ ಪಕ್ಕದಲ್ಲಿ ಬೆಳೆದಿದ್ದೇನೆ. ನಾನು ಅವುಗಳನ್ನು ಅತ್ಯುತ್ತಮ ಸ್ಥಿತಿಯಲ್ಲಿ ನೋಡಿದ್ದೇನೆ. ಅವುಗಳ ಶೋಷಣೆ ಕಣ್ಣಾರೆ ಕಾಣಲು ತುಂಬಾ ನೋವುಂಟಾಗುತ್ತದೆ ಮತ್ತು ನನ್ನ ಕೈಲಾದಷ್ಟು ಮಾಡಲು ನಾನು ಬಯಸುತ್ತೇನೆ. ಈ ವರ್ಷ ಮಾನವರು ಮಾತ್ರವಲ್ಲ, ಅನೇಕ ಜೀವಿಗಳು ನೀರಿನಿ ಅಭಾವದಿಂದ ಬಳಲುತ್ತಿರುವುದು ದುರದೃಷ್ಟಕರ, ಎಂದು ದಿ ಹಿಂದೂ ವರದಿ ಮಾಡಿದೆ.
“ಹೈಡ್ರೋಸ್ತಾನ್ ಸಂಪೂರ್ಣವಾಗಿ ಸಕಾರಾತ್ಮಕ ಮತ್ತು ಸ್ಪೂರ್ತಿದಾಯಕ ಕಥೆಗಳ ಮೇಲೆ ಕೇಂದ್ರೀಕರಿಸುತ್ತದೆ,” ಎಂದು ಅವರು ಹೇಳುತ್ತಾರೆ.