ಸಾಗರವನ್ನು ಸ್ವಚ್ಛಗೊಳಿಸಲು ಸಿದ್ದವಾದ ನೂತನ ಯಂತ್ರ

ನದಿಗಳಿಂದ ಸಾಗರಕ್ಕೆ ಹರಿದು ಬರುವ ಕಸವನ್ನು ಹೊರತೆಗೆಯುವ ಯಂತ್ರವನ್ನು ದಿ ಓಷಿಯನ್ ಕ್ಲೀನರ್ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಸಾಗರವನ್ನು ಸ್ವಚ್ಛಗೊಳಿಸಲು ಸಿದ್ದವಾದ ನೂತನ ಯಂತ್ರ

Wednesday November 27, 2019,

2 min Read

ಪ್ಲಾಸ್ಟಿಕ್ ನ ಅತಿಯಾದ ಬಳಕೆಯಿಂದ ಇಂದು ಮಾನವ ಕುಲಕ್ಕಷ್ಟೇ ಅಲ್ಲ ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಹಾನಿಯುಂಟಾಗತೊಡಗಿದೆ. ಮಣ್ಣಿನಲ್ಲಿ ಹುದುಗಿಕೊಂಡಿರುವ ಪ್ಲಾಸ್ಟಿಕ್ ಇಂದು ನೀರಮೇಲೆಯು ತೇಲತೊಡಗಿದೆ. ಇಂತಹ ಪ್ಲಾಸ್ಟಿಕ್ ನ್ನು ಹೊರ ತೆಗೆಯುವ ಯಂತ್ರವನ್ನು ಈಗಿನ ಡಚ್ ಇನ್ವೆಂಟರ್ ಬೋಯಾನ್ ಸ್ಲಾಟ್ ತಮ್ಮ 18ನೇ ವಯಸ್ಸಿನಲ್ಲಿ ಕಂಡುಹಿಡಿದಿದ್ದರು.


ನಂತರ ದಿ ಓಷಿಯನ್ ಕ್ಲೀನರ್ ಸಂಸ್ಥೆಯನ್ನು ಬೋಯಾನ್ ಸ್ಲಾಟ್ ಸ್ಥಾಪಿಸಿ ತಾವು ತಮ್ಮ 18 ನೇ ವಯಸ್ಸಿನಲ್ಲಿ ಕಂಡುಹಿಡಿದ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಪ್ಲಾಸ್ಟಿಕ್ ನಿಂದ ಸಾಗರವನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ಸಂಸ್ಥೆಯು ಮೊದಲು ಪೆಸಿಫಿಕ್ ಮಹಾಸಾಗರದ ಕಸ ತುಂಬಿದ ಸುಳಿಯಲ್ಲಿರುವ ಗ್ರೇಟ್ ಪೆಸಿಫಿಕ್ ಗಾರ್ಬೇಜ್ ಪ್ಯಾಚ್ ನಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಸಾಧನವನ್ನು ರಚಿಸಿತು. ಆದರೆ ಈ ಸಾಧನವು ಪ್ಲಾಸ್ಟಿಕ್ ಸಾಗರಕ್ಕೆ ಬರುವುದನ್ನು ತಡೆಯಲಾಗಲಿಲ್ಲ.


ಓಷಿಯನ್‌ ಕ್ಲೀನ್‌ ಅಪ್ (ಚಿತ್ರಕೃಪೆ: ಬ್ಯುಸಿನೆಸ್‌ ಇನ್ಸೈಡರ್)


ಆದ್ದರಿಂದ ನದಿಗಳಿಂದ ಪ್ಲಾಸ್ಟಿಕ್ ಸಂಗ್ರಹಿಸುವ ಹಡಗನ್ನು ವಿನ್ಯಾಸಗೊಳಿಸಲಾಯಿತು. ಇದು ತ್ಯಾಜ್ಯಗಳನ್ನು ತೇಲುವ ಡಂಫ್ ಸ್ಟರ್ ಗಳ ಮೂಲಕ ಸಂಗ್ರಹಿಸುತ್ತದೆ. ಸಾಧನವನ್ನು ಒಂದು ತಿಂಗಳು ನೀರಿನಲ್ಲಿರಿಸಿ ಪರೀಕ್ಷೆ ಮಾಡಲಾಗಿದೆ. ಅದು ಉತ್ತಮವಾಗಿ ತನ್ನ ಕಾರ್ಯ ನಿರ್ವಹಿಸಿತು. ಈ ಮೂಲಕ ಸಂಸ್ಥೆಯು ಸಾವಿರ ನದಿಗಳನ್ನು ಸ್ವಚ್ಛಗೊಳಿಸಲು ಸಿದ್ಧವಾಗಿದ್ದು 2025 ರ ವೇಳೆಗೆ ನದಿಗಳನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿಸಲಿವೆ.


ಪ್ರತಿವರ್ಷ ಸುಮಾರು 8.8 ಮಿಲಿಯನ್ ಟನ್ ಪ್ಲಾಸ್ಟಿಕ್ ವಿಶ್ವದ ಸಾಗರವನ್ನು ಪ್ರವೇಶಿಸುತ್ತಿದೆ. ಆದರೆ ಈ ಆವಿಷ್ಕಾರವು ಪ್ರತಿ ನಿಮಿಷಕ್ಕೆ ಒಂದು ಟ್ರಕ್ ನಷ್ಟು ಕಸವನ್ನು ಸಂಗ್ರಹ ಮಾಡಲಿದೆ. ಈ ತೇಲುವ ಯು (U) ಆಕಾರದ ಸಾಧನವು ಪ್ಲಾಸ್ಟಿಕ್ ಅನ್ನು ತನ್ನ ತೋಳಿನಾಕಾರದ ಬಲೆಗೆ ಬೀಳಿಸಿಕೊಳ್ಳುತ್ತದೆ. ಈ ತೇಲುವ ಸೌರಶಕ್ತಿ ಚಾಲಿತ ಸಾಧನವನ್ನು ಇಂಟರ್ ಸೆಪ್ಟರ್ ಎಂದು ಕರೆಯಲಾಗುತ್ತದೆ, ವರದಿ ಬಿಜಿನೆಸ್ಸ್ ಇನ್ಸೈಡರ್


ಓಷಿಯನ್‌ ಕ್ಲೀನ್‌ ಅಪ್ (ಚಿತ್ರಕೃಪೆ: ಬ್ಯುಸಿನೆಸ್‌ ಇನ್ಸೈಡರ್)




ಈಗಾಗಲೇ ಮೂರು ಯಂತ್ರಗಳನ್ನು ಇಂಡೋನೇಷ್ಯಾ, ಮಲೇಷಿಯಾ ಹಾಗೂ ವಿಯಟ್ನಾಂ ದೇಶಗಳಿಗೆ ತಲುಪಿಸಲಾಗಿದೆ. ರೋಟರ್ ಡ್ಯಾಮ್ ಬಂದರಿನಲ್ಲಿ ನಡೆದ ಸಮಾರಂಭದಲ್ಲಿ ನೂರಾರು ಹಳದಿ ರಬ್ಬರ್ ಬಾತುಕೋಳಿಗಳನ್ನು ನೀರಿಗೆ ಹಾಕಿ ಇಂಟರ್ಸೆಪ್ಟರ್ ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಸ್ಲಾಟ್ ತೋರಿಸಿದ್ದಾರೆ. ಅದು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು.


ಈ ಇಂಟರ್ಸೆಪ್ಟರ್ ಯಂತ್ರಗಳನ್ನು ತಯಾತಿಸಲು ಸುಮಾರು 700.000 ಯುರೋ ಗಳಷ್ಟು ವೆಚ್ಚವಾಗಿದೆ. ಆದರೆ ಉತ್ಪಾದನೆ ಹೆಚ್ಚಾದಂತೆ ಅದರ ವೆಚ್ಚವು ಕಡಿಮೆಯಾಗಬಹುದು. ನಾನು ತಯಾರಿಸಿದ ಯಂತ್ರವನ್ನು ದಿ ಓಷಿಯನ್ ಕ್ಲೀನರ್ ಅಭಿವೃದ್ಧಿ ಪಡಿಸಿದ್ದು ತುಂಬಾ ಖುಷಿ ತಂದಿದೆ ಎಂದು ಬೋಯಾನ್ ಸ್ಲಾಟ್ ಹೇಳಿದ್ದಾರೆ, ವರದಿ ಟೈಮ್.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.